Worksheetsಶಕ್ತಿಯ ಆಕರಗಳು-ರಚನೆ:ಖಲೀಲ್
Total questions: 21
Worksheet time: 11mins
ಬಿಸಿ ನೀರನ್ನು ಪಡೆಯಲು ಸೌರ ಜಲ ತಾಪಕವನ್ನು (Solar Water Heater) ಯಾವಾಗ ಬಳಸುವುದಿಲ್ಲ?
ಮೋಡ ಕವಿದ ವಾತಾವರಣ
ಬಿಸಿಲಿನ ವಾತಾವರಣ
ಸೆಖೆಯ ವಾತಾವರಣ
ಮೇಲಿನ ಎಲ್ಲವೂ
ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ನೀರನ್ನು ಬಿಸಿ ಮಾಡಿ ಆವಿಯನ್ನು ಮಾಡಿ ಟರ್ಬೈನ್ ತಿರುಗಿಸಿ ವಿದ್ಯುತ್ ಶಕ್ತಿ ಯನ್ನು ಉತ್ಪಾದನೆ ಮಾಡುತ್ತಾರೆ. ಇಲ್ಲಿ ನೀರನ್ನು ಬಿಸಿ ಮಾಡಲು ಬಳಸುವ ಇಂಧನ...
LPG
ಜೈವಿಕ ಅನಿಲ (Bio gas)
ಕಲ್ಲಿದ್ದಲು
ಕಟ್ಟಿಗೆ
ಕಲ್ಲಿದ್ದಲು ನಿಕ್ಷೇಪ ಇರುವ ಪಕ್ಕದಲ್ಲಿಯೇ ಉಷ್ಣ ವಿದ್ಯುತ್ ಸ್ಥಾವರಗಳನ್ನು ಸ್ಥಾಪನೆ ಮಾಡುವರು. ಇದಕ್ಕೆ ಕಾರಣವೇನೆಂದರೆ..
ಕಲ್ಲಿದ್ದಲು ಸಾಗಾಣಿಕೆ ಮಾಡುವಾಗ ಸೋರಿಕೆ ಆಗುತ್ತದೆ
ಕಲ್ಲಿದ್ದಲು ಬೇಗನೆ ಆವಿಯಾಗುತ್ತದೆ
ವಿದ್ಯುತ್ಕ ಸಾಗಾಣಿಕೆಗಿಂತ ಕಲ್ಲಿದ್ದಲು ಸಾಗಾಣಿಕೆ ಮಾಡುವಾಗ ಹೆಚ್ಚು ವೆಚ್ಚ ತಗಲುತ್ತದೆ
ಯಾವುದೂ ಅಲ್ಲ
ಜೈವಿಕ ಅನಿಲ (ಬಯೋ ಗ್ಯಾಸ್) ದ ಮುಖ್ಯ ಘಟಕ......
ಮೀಥೇನ್
ಬ್ಯೂಟೇನ್
ಈಥೈನ್
ಪ್ರೋಪೇನ್
ಕೆಳಗಿನವುಗಳಲ್ಲಿ ಯಾವುದು ಉತ್ತಮ ಇಂಧನದ ಪ್ರಮುಖ ಲಕ್ಷಣ ಅಲ್ಲ?
ಸಂಗ್ರಹ ಮತ್ತು ಸಾಗಾಣಿಕೆ ಸುಲಭ
ಅತೀ ಕಡಿಮೆ ಹೊಗೆ ಬಿಡುಗಡೆ ಮಾಡುವುದು
ಪ್ರತಿ ಘಟಕ ದ್ರವ್ಯರಾಶಿಗೆ ಹೆಚ್ಚು ಉಷ್ಣವನ್ನು ಕೊಡುವುದು
ದುಬಾರಿ
ಎರಡು ಹಗುರವಾದ ಪರಮಾಣುಗಳ ಬೀಜಕೇಂದ್ರಗಳು ಒಟ್ಟಿಗೆ ಸೇರಿ ಒಂದು ಭಾರವಾದ ಪರಮಾಣುವಿನ ಬೀಜಕೇಂದ್ರವನ್ನು ಉಂಟು ಮಾಡುತ್ತದೆ ಹಾಗೂ ಅಗಾಧ ಪ್ರಮಾಣದ ಶಕ್ತಿಯನ್ನು ಬಿಡುಗಡೆ ಗೊಳಿಸುತ್ತದೆ. ಈ ಕ್ರಿಯೆ..
ನ್ಯೂಕ್ಲಿಯರ್ ವಿದಳನ (ಬೈಜಿಕ ವಿದಳನ)
ನ್ಯೂಕ್ಲಿಯರ್ ಸಮ್ಮಿಲನ (ಬೈಜಿಕ ಸಮ್ಮಿಲನ)
ಜೈವಿಕ ಸಮ್ಮಿಲನ
ಜೈವಿಕ ವಿದಳನ
ಕೆಳಗಿನವುಗಳಲ್ಲಿ ಜೈವಿಕ ರಾಶಿಗೆ ಉದಾಹರಣೆ..
ಕಲ್ಲಿದ್ದಲು
ಸೆಗಣಿ
ಗಾಳಿ
ಸೌರಶಕ್ತಿ
ಜಲ ವಿದ್ಯುತ್ ನ ಒಂದು ಪ್ರಯೋಜನ...
ವರ್ಷದ ಎಲ್ಲಾ ಕಾಲದಲ್ಲೂ ಒಂದೇ ರೀತಿ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ
ಜಲ ವಿದ್ಯುತ್ ಒಂದು ನವೀಕರಣ ಗೊಳ್ಳುವ ಸಂಪನ್ಮೂಲ
ಜಲ ವಿದ್ಯುತ್ ಸ್ಥಾವರಗಳ ಸ್ಥಾಪನೆಗೆ ಕಡಿಮೆ ಬಂಡವಾಳ ಸಾಕಾಗುತ್ತದೆ
ಜಲ ವಿದ್ಯುತ್ ಸ್ಥಾವರಗಳ ಸ್ಥಾಪನೆ ಮಾಡುವಾಗ ಪರಿಸರ ನಾಶ ಆಗುವುದಿಲ್ಲ
ಜೈವಿಕ ಅನಿಲದಲ್ಲಿ ಇರುವ ಮೀಥೇನ್ ನ ಶೇಕಡಾ ಪ್ರಮಾಣ...
80%
50%
75%
45%
ಜೈವಿಕ ಅನಿಲದ ಮುಖ್ಯ ಪ್ರಯೋಜನ ಎಂದರೆ...
ಹೆಚ್ಚಿನ ಶಾಖ ಬಿಡುಗಡೆ ಮಾಡುತ್ತದೆ ಮತ್ತು ಹೊಗೆ ರಹಿತವಾಗಿ ದಹಿಸುತ್ತದೆ
ಜೈವಿಕ ಅನಿಲ ಉತ್ಪಾದನೆ ಸಂದರ್ಭದಲ್ಲಿ ಉಂಟಾದ ಗೊಬ್ಬರವನ್ನು ಸಸ್ಯಗಳಿಗೆ ಹಾಕಬಹುದು
ಸೌದೆ(ಕಟ್ಟಿಗೆ), ಕಲ್ಲಿದ್ದಲು, ಸೆಗಣಿ - ಇತ್ಯಾದಿಗಳು ಬೂದಿಯನ್ನು ಉಳಿಸುವಂತೆ ಜೈವಿಕ ಅನಿಲವು ಬೂದಿಯನ್ನು ಉಳಿಸುವುದಿಲ್ಲ
ಮೇಲಿನ ಎಲ್ಲವೂ
ಜೈವಿಕ ಅನಿಲದ ಘಟಕಗಳು...
ಮೀಥೇನ್
ಹೈಡ್ರೋಜನ್ ಮತ್ತು ಹೈಡ್ರೋಜನ್ ಡೈ ಸಲ್ಫೈಡ್
ಕಾರ್ಬನ್ ಡೈ ಆಕ್ಸೈಡ್
ಮೇಲಿನ ಎಲ್ಲವೂ
ಜೈವಿಕ ಅನಿಲ ಸ್ಥಾವರದ ಮುಖ್ಯ ಇಂಧನ....
ಕಲ್ಲಿದ್ದಲು
ಸೆಗಣಿ
ಕೋಳಿ ತ್ಯಾಜ್ಯ
ಒಣಗಿದ ಎಲೆಗಳು
ಜೈವಿಕ ಅನಿಲ ಸ್ಥಾವರದಲ್ಲಿ ಜೈವಿಕ ರಾಶಿಯು ವಿಘಟನೆಗೆ ಒಳಪಡುವ ಜಾಗವನ್ನು.... ಎನ್ನುವರು
ಬಗ್ಗಡ
ಅನಿಲ ತೊಟ್ಟಿ
ಪಾಚಕ
ಕವಾಟ
.......... ಹೊಗೆ ರಹಿತವಾಗಿ ದಹಿಸುತ್ತದೆ
ಇದ್ದಿಲು
ಬೆರಣಿ
ಒಣಗಿದ ಎಲೆಗಳು
ಸೀಮೆಎಣ್ಣೆ ದೀಪ
ಗಾಳಿಯಂತ್ರಗಳ ಟರ್ಬೈನ್ ಗಳು ತಿರುಗಬೇಕಾದರೆ ಗಾಳಿಯ ವೇಗ(ಜವ) ವು......... ಇರಬೇಕು
10 ಕಿಲೋಮೀಟರ್ /ಗಂಟೆ
8 ಕಿಲೋಮೀಟರ್ /ಗಂಟೆ
5 ಕಿಲೋಮೀಟರ್ /ಗಂಟೆ
15 ಕಿಲೋಮೀಟರ್ /ಗಂಟೆ
ಕೆಳಗಿನವುಗಳಲ್ಲಿ ಹೆಚ್ಚು ಹಸಿರು ಮನೆ ಪರಿಣಾಮಕ್ಕೆ ಕಾರಣ ಆಗುವ ಅನಿಲ...
ಮೀಥೇನ್
ಕಾರ್ಬನ್ ಡೈ ಆಕ್ಸೈಡ್
ನೈಟ್ರಸ್ ಆಕ್ಸೈಡ್
ಹೈಡ್ರೋಜನ್
ಗಾಳಿಯಂತ್ರಗಳನ್ನು ಸ್ಥಾಪಿಸಿರುವ ಪ್ರದೇಶವನ್ನು......... ಎನ್ನುವರು
ಸೌರ ಫಲಕ
ಪವನ ಕ್ಷೇತ್ರ
ಜೈವಿಕ ಸ್ಥಾವರ
ಯಾವುದೂ ಅಲ್ಲ
ಒಂದು ಸೌರಕೋಶವು ಉತ್ಪತ್ತಿ ಮಾಡುವ ವಿಭವಾಂತರ (voltage)..........
0.5V ನಿಂದ 1V
1.5V ನಿಂದ 2V
2V ನಿಂದ 3V
1 V ನಿಂದ 1.5V
ಒಂದು ಸೌರಕೋಶವು....... ನಷ್ಟು ವಿದ್ಯುತ್ ಶಕ್ತಿಯನ್ನು ಉತ್ಪಾದನೆ ಮಾಡುತ್ತದೆ.
0.2ವ್ಯಾಟ್
2 ವ್ಯಾಟ್
0.7ವ್ಯಾಟ್
7 ವ್ಯಾಟ್
ಸೂರ್ಯ ನು ಆಕರ ಆಗಿ ಇಲ್ಲದ ಶಕ್ತಿಯ ರೂಪ......
ಗಾಳಿ ಶಕ್ತಿ
ಜಲ ಶಕ್ತಿ
ಪಳೆಯುಳಿಕೆ ಇಂಧನ ಶಕ್ತಿ
ಭೂಗರ್ಭ ಉಷ್ಣ ಶಕ್ತಿ
ಚಿತ್ರದಲ್ಲಿ A, D, Eಗಳ ಹೆಸರುಗಳು..
A=ಅನಿಲ ಹೊರ ಕವಾಟ, D =ಅನಿಲ ಸಂಗ್ರಾಹಕ, E=ಪಾಚಕ
A=ಪಾಚಕ, D=ಅನಿಲ ಹೊರ ಕವಾಟ, E=ಗೊಬ್ಬರ
A=ಮಣ್ಣು, D=ಪಾಚಕ, E=ಅನಿಲ ಹೊರ ಕವಾಟ
A=ಅನಿಲ ಸಂಗ್ರಾಹಕ, D=ಪಾಚಕ, E=ಅನಿಲ ಸಂಗ್ರಾಹಕ
