wayground logo

Free Printable Worksheets

NEW

Font size

S
M
L
XL
Worksheets

7. ಜೀವಿಗಳಲ್ಲಿ ವೈವಿಧ್ಯತೆ

Total questions: 20

Worksheet time: 7mins

Name
Class
Date
1.

'ಜೀವಿಗಳ ಉಗಮ' (The Origin of Species) ಪುಸ್ತಕವನ್ನು ಬರೆದ ವಿಜ್ಞಾನಿ

a)

ಲಾಮಾರ್ಕ್

b)

ಚಾರ್ಲ್ಸ್ ಡಾರ್ವಿನ್

c)

ಚಾರ್ಲ್ಸ್ ಬ್ಯಾಬೇಜ್

d)

ಪರಾಶರ

2.

ಮೊನೆರಾ ಸಾಮ್ರಾಜ್ಯ ಕ್ಕೆ ಉದಾಹರಣೆ

a)

ಡಯಾಟಮ್ ಗಳು

b)

ಪ್ರೋಟೋಜೋವಾ ಗಳು

c)

ಬ್ಯಾಕ್ಟೀರಿಯಾ

d)

ಶಿಲಿಂದ್ರಗಳು

3.

ಕೊಳೆಯುತ್ತಿರುವ ಸಾವಯವ ವಸ್ತುಗಳನ್ನು ತಮ್ಮ ಆಹಾರವಾಗಿ ಬಳಸುವ ಜೀವಿಗಳಿಗೆ ಹೀಗೆಂದು ಹೆಸರಿದೆ

a)

ಮಾಂಸಹಾರಿಗಳು

b)

ಸಸ್ಯಹಾರಿಗಳು

c)

ಕೊಳೆತಿನಿಗಳು

d)

ಮೇಲಿನ ಎಲ್ಲವೂ

4.

ಮರದ ತೊಗಟೆಯ ಮೇಲೆ ವರ್ಣ ಭರಿತವಾದ ಕಲ್ಲುಹೂವುಗಳ ಬೆಳವಣಿಗೆಯು ಈ ವಿಧದ ಜೀವನಕ್ಕೆ ಉದಾಹರಣೆಯಾಗಿದೆ

a)

ಪರಾವಲಂಬಿ ಜೀವನ

b)

ಸ್ವಾವಲಂಬಿ ಜೀವನ

c)

ಸಹಜೀವನ/ ಕೂಡು ಜೀವನ

d)

ಮೇಲಿನ ಯಾವುದೂ ಅಲ್ಲ

5.

ಈ ವರ್ಗದ ಸಸ್ಯಗಳು ನೆಲ ಮತ್ತು ನೀರು ಎರಡು ಕಡೆ ಕಂಡುಬರುತ್ತವೆ

a)

ಹಾವಸೆ ಸಸ್ಯಗಳು

b)

ಪುಚ್ಚ ಸಸ್ಯಗಳು

c)

ಜರಿ ಸಸ್ಯಗಳು

d)

ಅನಾವೃತ ಬೀಜ ಸಸ್ಯಗಳು

6.

ಈ ವರ್ಗದ ಸಸ್ಯಗಳ ಬೀಜಗಳು ಹೆಣ್ಣಿನ ಕವಚದಿಂದ ಆವೃತವಾಗಿರುವುದಿಲ್ಲ

a)

ಹಾವಸೆ ಸಸ್ಯಗಳು

b)

ಪುಚ್ಚ ಸಸ್ಯಗಳು

c)

ಜರಿ ಸಸ್ಯಗಳು

d)

ಅನಾವೃತ ಬೀಜ ಸಸ್ಯಗಳು

7.

ಅನಾವೃತ ಬೀಜ ಸಸ್ಯಗಳಿಗೆ ಉದಾಹರಣೆ ಎಂದರೆ

a)

ಸಾಸಿವೆ

b)

ಜೋಳ

c)

ಸೈಕಾಸ್ ಮತ್ತು ಫೈನಸ್

d)

ಬಾದಾಮಿ

8.

ಪ್ರಾಣಿಗಳ ಜೀವಕೋಶದಲ್ಲಿ ಈ ಭಾಗವು ಕಂಡುಬರುವುದಿಲ್ಲ

a)

ಮೈಟೋಕಾಂಡ್ರಿಯಾ

b)

ಕೋಶಭಿತ್ತಿ

c)

ಕೋಶಕೇಂದ್ರ

d)

ಲೈಸೋಸೋಮ್

9.

ಈ ವರ್ಗದ ಜೀವಿಗಳ ದೇಹವು ಅವುಗಳ ಹೆಸರಿಗೆ ಅನುಗುಣವಾಗಿ ಹಲವಾರು ರಂಧ್ರಗಳಿಂದ ಕೂಡಿದೆ

a)

ಸ್ಪಂಜು ಪ್ರಾಣಿಗಳು

b)

ಕುಟುಕು ಕಣವಂತಗಳು

c)

ದುಂಡು ಹುಳುಗಳು

d)

ಮೃದ್ವಂಗಿಗಳು

10.

ಹೈಡ್ರಾ ಈ ವರ್ಗದ ಜೀವಿಗಳ ಗುಂಪಿಗೆ ಸೇರಿದೆ

a)

ಸ್ಪಂಜು ಪ್ರಾಣಿಗಳು

b)

ಕುಟುಕು ಕಣವಂತಗಳು

c)

ದುಂಡು ಹುಳುಗಳು

d)

ಮೃದ್ವಂಗಿಗಳು

11.

ಇವುಗಳಲ್ಲಿ ಯಾವುದು ಪರಾವಲಂಬಿ ಜೀವಿಗೆ ಉದಾಹರಣೆ ಆಗಿದೆ

a)

ನೀರಿಸ್

b)

ಎರೆಹುಳು

c)

ಲಾಡಿಹುಳು

d)

ಸಿಗಡಿ

12.

ಇವುಗಳಲ್ಲಿ ಈ ವರ್ಗದ ಜೀವಿಗಳು ಪ್ರಾಣಿಗಳಲ್ಲಿ ಅತ್ಯಂತ ದೊಡ್ಡ ವಂಶವನ್ನು ಹೊಂದಿರುವ ಜೀವಿಗಳಾಗಿವೆ

a)

ಸ್ಪಂಜು ಪ್ರಾಣಿಗಳು

b)

ಕುಟುಕು ಕಣವಂತಗಳು

c)

ಸಂಧಿಪದಿಗಳು

d)

ಮೃದ್ವಂಗಿಗಳು

13.

ಮೃದುವಾದ ದೇಹವನ್ನು (ಉದಾ: ಬಸವನ ಹುಳು) ಹೊಂದಿರುವ ಜೀವಿಗಳ ವರ್ಗ

a)

ಸ್ಪಂಜು ಪ್ರಾಣಿಗಳು

b)

ಕುಟುಕು ಕಣವಂತಗಳು

c)

ಸಂಧಿಪದಿಗಳು

d)

ಮೃದ್ವಂಗಿಗಳು

14.

ಮುಳ್ಳಿನ ಚರ್ಮವನ್ನು (ಉದಾ: ನಕ್ಷತ್ರ ಮೀನು) ಹೊಂದಿರುವ ಜೀವಿಗಳ ವರ್ಗ

a)

ಕಂಟಕಚರ್ಮಿಗಳು

b)

ಕುಟುಕು ಕಣವಂತಗಳು

c)

ಸಂಧಿಪದಿಗಳು

d)

ಮೃದ್ವಂಗಿಗಳು

15.

ಸಮುದ್ರ ಕುದುರೆಯು ಈ ವರ್ಗದ ಜೀವಿಗಳ ಗುಂಪಿಗೆ ಸೇರುತ್ತದೆ

a)

ಮೀನುಗಳು

b)

ಉಭಯವಾಸಿಗಳು

c)

ಸರಿಸೃಪಗಳು

d)

ಸ್ತನಿಗಳು

16.

ರೂಪ ಪರಿವರ್ತನೆ ಈ ವರ್ಗದ ಜೀವಿಗಳಲ್ಲಿ ಕಂಡುಬರುವ ಒಂದು ವಿಶೇಷ ಗುಣಲಕ್ಷಣವಾಗಿದೆ

a)

ಮೀನುಗಳು

b)

ಉಭಯವಾಸಿಗಳು

c)

ಸರಿಸೃಪಗಳು

d)

ಸ್ತನಿಗಳು

17.

ಈ ವರ್ಗದ ಜೀವಿಗಳ ಚರ್ಮದಲ್ಲಿ ಹುರುಪೆಗಳು ಕಂಡುಬರುತ್ತವೆ

a)

ಮೀನುಗಳು

b)

ಉಭಯವಾಸಿಗಳು

c)

ಸರಿಸೃಪಗಳು

d)

ಸ್ತನಿಗಳು

18.

ಇವುಗಳಲ್ಲಿ ಯಾವ ವರ್ಗದ ಜೀವಿಯು 4 ಕೋಣೆಯ ಹೃದಯ ಹಾಗೂ ಬಿಸಿರಕ್ತ ಪ್ರಾಣಿಗಳನ್ನು ಹೊಂದಿರುವ ಜೀವಿಗಳ ವರ್ಗವಾಗಿದೆ

a)

ಮೀನುಗಳು

b)

ಉಭಯವಾಸಿಗಳು

c)

ಸರಿಸೃಪಗಳು

d)

ಪಕ್ಷಿಗಳು

19.

ಮೊಟ್ಟೆ ಇಡುವ ಸ್ತನಿ

a)

ಕಿಂಗ್ ಫಿಶರ್

b)

ಹಮ್ಮಿಂಗ್ ಬರ್ಡ್

c)

ಪ್ಲಾಟಿಪಸ್

d)

ಆಸ್ಟ್ರಿಚ್

20.

ತನ್ನ ದೇಹದ ಬಣ್ಣವನ್ನು ಬದಲಿಸಬಲ್ಲ ಹಾಗೂ ಎಲ್ಲಾ ದಿಕ್ಕುಗಳಲ್ಲಿಯೂ ನೋಡಬಲ್ಲ ಸಾಮರ್ಥ್ಯವನ್ನು ಹೊಂದಿರುವ ಜೀವಿ

a)

ಗೋಡೆ ಹಲ್ಲಿ

b)

ಮಿಡತೆ

c)

ಹಾವು

d)

ಗೋಸುಂಬೆ