NEW
Font size
Worksheetsಬೆಳಕು - ಪ್ರತಿಫಲನ ಮತ್ತು ವಕ್ರೀಭವನ - ರಚನೆ :ಖಲೀಲ್
Total questions: 35
Worksheet time: 18mins
2F2 ಬಿಂದುವಿನಲ್ಲಿ ಪ್ರತಿಬಿಂಬ ಪಡೆಯ ಬೇಕಾದರೆ ವಸ್ತುವನ್ನು ಪೀನ ಮಸೂರದ..... ನಲ್ಲಿ ಇಡಬೇಕು.
F1
2F1
2F1 ಮತ್ತು F1 ಬಿಂದುಗಳ ನಡುವೆ
F1 ಮತ್ತು O ಗಳ ನಡುವೆ
ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಪ್ರವೇಶಿಸುವಾಗ ಬೆಳಕು ತನ್ನ ಚಲಿಸುವ ದಿಕ್ಕನ್ನು ಬದಲಿಸಿ ಬಾಗುತ್ತದೆ. ಇದನ್ನು....... ಎನ್ನುವರು.
ಬೆಳಕಿನ ಪ್ರತಿಫಲನ
ಬೆಳಕಿನ ಚದುರುವಿಕೆ
ಬೆಳಕಿನ ವಕ್ರೀಭವನ
ಬೆಳಕಿನ ವ್ಯತಿಕರಣ
.......... ಬೆಳಕು ಲಂಬದಿಂದ ದೂರಕ್ಕೆ ಬಾಗುತ್ತದೆ
ಬೆಳಕು ಸಾಂದ್ರ ಮಾಧ್ಯಮದಿಂದ ವಿರಳ ಮಾಧ್ಯಮದ ಕಡೆಗೆ ಚಲಿಸುವಾಗ
ಬೆಳಕು ವಿರಳ ಮಾಧ್ಯಮದಿಂದ ಸಾಂದ್ರ ಮಾಧ್ಯಮದ ಕಡೆಗೆ ಚಲಿಸುವಾಗ
ಬೆಳಕು ಸಾಂದ್ರ ಮಾಧ್ಯಮದಿಂದ ಸಾಂದ್ರ ಮಾಧ್ಯಮದ ಕಡೆಗೆ ಚಲಿಸುವಾಗ
ಬೆಳಕು ವಿರಳ ಮಾಧ್ಯಮದಿಂದ ವಿರಳ ಮಾಧ್ಯಮದ ಕಡೆಗೆ ಚಲಿಸುವಾಗ
ಒಂದು ಮಸೂರದ ಸಂಗಮ ದೂರ =+20 ಸೆಂ. ಮೀ..ಹಾಗಾದರೆ ಮಸೂರದ ಸಾಮರ್ಥ್ಯ ಮತ್ತು ವಿಧ...
ಮಸೂರದ ಸಾಮರ್ಥ್ಯ=+5D :, ಮಸೂರದ ವಿಧ=ಪೀನ ಮಸೂರ
ಮಸೂರದ ಸಾಮರ್ಥ್ಯ=-5D :, ಮಸೂರದ ವಿಧ=ಪೀನ ಮಸೂರ
ಮಸೂರದ ಸಾಮರ್ಥ್ಯ=+0.05D :, ಮಸೂರದ ವಿಧ= ಪೀನ ಮಸೂರ
ಮಸೂರದ ಸಾಮರ್ಥ್ಯ=0.05D :, ಮಸೂರದ ವಿಧ=ನಿಮ್ನ ಮಸೂರ
ಈ ಚಿತ್ರದಲ್ಲಿ ಒಬ್ಬನು ಮೀನು ಹಿಡಿಯಲು ಮೀನನ್ನು ನೋಡುತ್ತಾ ಶೂಟ್ ಮಾಡಲು ಪ್ರಯತ್ನಿಸುತ್ತಿದ್ದಾನೆ. ಆದರೆ ನೈಜ ಮೀನಿನ ಸ್ಥಾನ ಗುರುತಿಸಲು ಸಾಧ್ಯ ಆಗುವುದಿಲ್ಲ ಇದಕ್ಕೆ ಕಾರಣ..
ಬೆಳಕಿನ ಪ್ರತಿಫಲನ
ಬೆಳಕಿನ ವಕ್ರೀಭವನ
ಬೆಳಕಿನ ಚದುರುವಿಕೆ
ಯಾವುದೂ ಅಲ್ಲ
ಕೆಳಗಿನವುಗಳಲ್ಲಿ ಬೆಳಕಿನ ವಕ್ರೀಭವನಕ್ಕೆ ಉದಾಹರಣೆ
ಪೀನ ಮಸೂರದ F1 ನ ಮೂಲಕ ಹಾದು ಹೋಗುವ ಕಿರಣಗಳು ವಕ್ರೀಭವನ ಆದ ಅನಂತರ.....
F2 ಬಿಂದುವಿನ ಮೂಲಕ ಹಾದು ಹೋಗುತ್ತದೆ
ಪ್ರಧಾನಾಕ್ಷಕ್ಕೆ ಸಮಾನಾಂತರವಾಗಿ ಮುಂದೆ ಚಲಿಸುತ್ತದೆ
ದೃಕ್ ಕೇಂದ್ರ O ವಿನ ಮೂಲಕ ಹಾದು ಹೋಗುತ್ತದೆ
2F2 ಬಿಂದುವಿನ ಮೂಲಕ ಹಾದು ಹೋಗುತ್ತದೆ
10ಸೆಂ.ಮೀ ಸಂಗಮದೂರ ಇರುವ ಪೀನ ಮಸೂರದ ದೃಕ್ ಕೇಂದ್ರದಿಂದ 15 ಸೆಂ. ಮೀ ದೂರದಲ್ಲಿ ವಸ್ತವನ್ನು ಇಡಲಾಗಿದೆ. ಪ್ರತಿಬಿಂಬ ಉಂಟಾಗಬಹುದಾದ ಅಂದಾಜು ದೂರ....
20ಸೆಂ.ಮೀ ನಿಂದ 25 ಸೆಂ. ಮೀ
15ಸೆಂ.ಮೀ ನಿಂದ 20ಸೆಂ. ಮೀ
10ಸೆಂ.ಮೀ ನಿಂದ 15 ಸೆಂ. ಮೀ
0ಸೆಂ.ಮೀ ನಿಂದ 10 ಸೆಂ. ಮೀ
ನೀರಿನ ದೃಕ್ ಸಾಂದ್ರತೆ =1.33 , ಸೀಮೆಎಣ್ಣೆಯ ದೃಕ್ ಸಾಂದ್ರತೆ =1.44
ನೀರಿನ ಮೂಲಕ ಬಂದ ಬೆಳಕು ಸೀಮೆಎಣ್ಣೆಯನ್ನು ಪ್ರವೇಶಿಸಿದಾಗ ಬೆಳಕು
..
ಕಡಿಮೆ ವೇಗ(ಜವ) ದಿಂದ ಚಲಿಸುತ್ತದೆ ಮತ್ತು ಲಂಬದಿಂದ ದೂರಕ್ಕೆ ಬಾಗುತ್ತದೆ
ಹೆಚ್ಚು ವೇಗ(ಜವ) ದಿಂದ ಚಲಿಸುತ್ತದೆ ಮತ್ತು ಲಂಬದಿಂದ ದೂರಕ್ಕೆ ಬಾಗುತ್ತದೆ
ಕಡಿಮೆ ವೇಗ(ಜವ) ದಿಂದ ಚಲಿಸುತ್ತದೆ ಮತ್ತು ಲಂಬದ ಕಡೆಗೆ ಬಾಗುತ್ತದೆ
ಹೆಚ್ಚು ವೇಗ(ಜವ) ದಿಂದ ಚಲಿಸುತ್ತದೆ ಮತ್ತು ಲಂಬದಿಂದ ಕಡೆಗೆ ಬಾಗುತ್ತದೆ
ವಸ್ತುವಿನ ನೇರ ಮಿಥ್ಯ ಪ್ರತಿಬಿಂಬ ಸಿಗಬೇಕಾದರೆ(ಪಡೆಯ ಬೇಕಾದರೆ) ವಸ್ತುವನ್ನು ಪೀನ ಮಸೂರದ..... ನಲ್ಲಿ ಇಡಬೇಕು.
F1 ಬಿಂದುವಿನಲ್ಲಿ
F1 ಮತ್ತು O ಗಳ ನಡುವೆ
F1 ಮತ್ತು 2F1 ಗಳ ನಡುವೆ
2F1 ನಿಂದ ದೂರದಲ್ಲಿ (ಆಚೆಗೆ
ಮಸೂರದ ದೃಕ್ ಕೇಂದ್ರದಿಂದ ಪ್ರಧಾನ ಸಂಗಗಳ ನಡುವಿನ ದೂರವನ್ನು... ಎನ್ನುವರು
ವಕ್ರತಾ ತ್ರಿಜ್ಯ
ವಸ್ತು ದೂರ
ಬಿಂಬ ದೂರ
ಸಂಗಮ ದೂರ
ವರ್ಧನೆಯ ಬೆಲೆ 1 ಕ್ಕಿಂತ ಹೆಚ್ಚು(m>1) ಮತ್ತು ಧನಾತ್ಮಕ (+) ಬಂದರೆ ಪ್ರತಿಬಿಂಬದ ಲಕ್ಷಣ...
ನೇರ, ಮಿಥ್ಯ ಮತ್ತು ದೊಡ್ಡದಾದ
ತಲೆಕೆಳಗಾಗಿ, ಸತ್ಯ ಮತ್ತು ದೊಡ್ಡದಾದ
ಸತ್ಯ ತಲೆಕೆಳಗೆ ಮತ್ತು ಸಮಾನ ಗಾತ್ರ
ನೇರ ಮಿಥ್ಯ, ಅತ್ಯಂತ ಚಿಕ್ಕದು
ವಸ್ತು ದೂರ u=-20cm , ಪ್ರತಿಬಿಂಬದ ದೂರ v=+20cm
ಹಾಗಾದರೆ ಪ್ರತಿಬಿಂಬದ ಲಕ್ಷಣ...
ಸತ್ಯ ತಲೆಕೆಳಗೆ ಮತ್ತು ಸಮಾನ ಗಾತ್ರ
ಸತ್ಯ ತಲೆಕೆಳಗೆ ಮತ್ತು ದೊಡ್ಡದಾದ
ಸತ್ಯ ತಲೆಕೆಳಗೆ ಮತ್ತು ಚಿಕ್ಕದಾದ
ನೇರ ಮಿಥ್ಯ ಮತ್ತು ದೊಡ್ಡದಾದ
ವಸ್ತು ದೂರ =-20cm, ಸಂಗಮದೂರ =+15cm ಹಾಗಾದರೆ ಪ್ರತಿಬಿಂಬದ ದೂರ =....
+0.10cm
+8.57cm
+8cm
+10cm
ಮಸೂರದ ಎರಡು ವಕ್ರ ಪಾರ್ಶ್ವಗಳು ಕಲ್ಪಿತ ಗೋಳಗಳ ಭಾಗವಾಗಿದೆ. ಈ ಗೋಳಗಳ ಕೇಂದ್ರವನ್ನು... ಎನ್ನುವರು
ದೃಕ್ ಕೇಂದ್ರ
ವಕ್ರತಾ ತ್ರಿಜ್ಯ
ವಕ್ರತಾ ಕೇಂದ್ರ
ಸಂಗಮ ಬಿಂದು
ಎರಡು ವಕ್ರತಾ ಕೇಂದ್ರಗಳ ಮೂಲಕ ಹಾದು ಹೋಗುವ ಕಾಲ್ಪನಿಕ ಸರಳ ರೇಖೆಯನ್ನು... ಎನ್ನುವರು
ಸಮಾಂತರ ಬೆಳಕಿನ ಕಿರಣಗಳು
ಪ್ರಧಾನ ಅಕ್ಷ (ಪ್ರಧಾನಾಕ್ಷ)
ಲಂಬ ಕಿರಣ
ಸಂಗಮ ಬಿಂದು
ಸಂಗಮ ದೂರ =+20 cm ಆದರೆ
ವಕ್ರತಾ ತ್ರಿಜ್ಯ =....
-20cm
-10cm
+40cm
+10cm
ವಕ್ರತಾ ತ್ರಿಜ್ಯ =+50cm ಆದರೆ
ಸಂಗಮ ದೂರ =....
+100cm
+25cm
-50cm
+50cm
ನಿಮ್ನ ಮಸೂರದ F2 ಬಿಂದುವಿನ ಮೂಲಕ ಅದರ ನೇರದಲ್ಲಿ ಬರುವ ಕಿರಣಗಳು ವಕ್ರೀಭವನ ಆದ ಅನಂತರ.....
F1 ಬಿಂದುವಿನ ಮೂಲಕ ಹಾದು ಹೋಗುತ್ತದೆ
ಸಮಾನಾಂತರ ಕಿರಣವಾಗಿ ಮುಂದುವರಿಯುತ್ತದೆ
O ಬಿಂದುವಿನ ಮೂಲಕ ಹಾದು ಹೋಗುತ್ತದೆ
2F2 ಬಿಂದುವಿನ ಮೂಲಕ ಹಾದು ಹೋಗುತ್ತದೆ
...... ನ ಮೂಲಕ ಹಾದು ಹೋಗುವ ಕಿರಣಗಳು ವಕ್ರೀಭವನ ಆಗುವುದಿಲ್ಲ (ಯಾವುದೇ ರೀತಿಯ ವಿಚಲನೆ ಅಥವಾ ಬಾಗುವಿಕೆಗೆ ಒಳ ಗಾಗುವುದಿಲ್ಲ)
2F1 (ವಕ್ರತಾ ಕೇಂದ್ರ)
F1(ಸಂಗಮ ಬಿಂದು) (ಪ್ರಧಾನ ಸಂಗಮ)
O (ದೃಕ್ ಕೇಂದ್ರ)
F2 (ಸಂಗಮ ಬಿಂದು) (ಪ್ರಧಾನ ಸಂಗಮ)
ಕೋಷ್ಟಕದಲ್ಲಿ ಮಾಧ್ಯಮಗಳ ವಕ್ರೀಭವನ ಸೂಚ್ಯಂಕ ಗಳನ್ನು ನೀಡಲಾಗಿದೆ. ಅತೀ ಕಡಿಮೆ ಬೆಳಕಿನ ವೇಗವನ್ನು ಹೊಂದಿರುವ ಮಾಧ್ಯಮ...
ನೀರು
ಸೀಮೆಎಣ್ಣೆ
ಕ್ರೌನ್ ಗಾಜು
ಸೀಮೆಎಣ್ಣೆ ಮತ್ತು ಕ್ರೌನ್ ಗಾಜು
1/f =
1/u-1/v
1/v-1/u
1/v+1/u
1/u+1/v
m=
v/u
u/v
-v/u
-u/v
m=
u/v = h'/h
v/u= - h'/h
v/u= h'/h
u/v= - h'/h
ವಸ್ತುವಿನ ಅತ್ಯಂತ ಚಿಕ್ಕದಾದ ಚುಕ್ಕೆ ಗಾತ್ರದ ಪ್ರತಿಬಿಂಬ ವನ್ನು ಪಡೆಯಲು ವಸ್ತುವನ್ನು ಪೀನ ಮಸೂರದ... ನಲ್ಲಿ ಇಡಬೇಕು
2F1 ನಿಂದ ದೂರದಲ್ಲಿ
2F1 ಮತ್ತು F1 ಬಿಂದುಗಳ ನಡುವೆ
ಅನಂತ ದಲ್ಲಿ
F1 ಮತ್ತು ದೃಕ್ ಕೇಂದ್ರ O ಗಳ ನಡುವೆ
P ಎಂಬ ಮಸೂರದ ಸಾಮರ್ಥ್ಯ =
-2. 0D.
Q ಎಂಬ ಮಸೂರದ ಸಾಮರ್ಥ್ಯ =
-2.5D
P ಮತ್ತು Q ಗಳಲ್ಲಿ
P ಯು ಹೆಚ್ಚು ವಿಕೇಂದ್ರೀಕರಿಸುವ ಮಸೂರವಾಗಿದೆ
Q ಹೆಚ್ಚು ವಿಕೇಂದ್ರೀಕರಿಸುವ ಮಸೂರವಾಗಿದೆ
ಮಸೂರದ ಸಾಮರ್ಥ್ಯ ಹಾಗೂ ವಿಕೇಂದ್ರೀಕರಿಸುವ ಗುಣಕ್ಕೆ ಯಾವುದೇ ಸಂಬಂಧವಿಲ್ಲ :ಆದ್ದರಿಂದ ಸಮ ಪ್ರಮಾಣದಲ್ಲಿ ವಿಕೇಂದ್ರೀಕರಿಸುವ ಗುಣ ಇದೆ
ಯಾವುದೂ ಅಲ್ಲ
m (ವರ್ಧನೆ) ಯ ಬೆಲೆಯು 1 ಕ್ಕಿಂತ ಕಡಿಮೆ ಹಾಗೂ ಧನಾತ್ಮಕ (+) ಚಿಹ್ನೆ ಇದ್ದರೆ ಪ್ರತಿಬಿಂಬವು..
ನೇರ, ಮಿಥ್ಯ, ಚಿಕ್ಕದು
ನೇರ, ಮಿಥ್ಯ ಮತ್ತು ದೊಡ್ಡದಾದ
ತಲೆ ಕೆಳಗೆ, ಸತ್ಯ ಮತ್ತು ದೊಡ್ಡದಾದ
ತಲೆಕೆಳಗೆ, ಸತ್ಯ ಮತ್ತು ಚಿಕ್ಕದಾದ
ವಸ್ತು ದೂರ u=-ಚಿಹ್ನೆ
ಪ್ರತಿಬಿಂಬದ ದೂರ v=-ಚಿಹ್ನೆ
ಸಂಗಮ ದೂರ f=-ಚಿಹ್ನೆ
ಹೀಗೆ ಚಿಹ್ನೆಗಳು ಆದರೆ ಅದು...
ನಿಮ್ನ ಮಸೂರ
ಪೀನ ಮಸೂರ
ಆಯಾತಾಕಾರದ ಗಾಜಿನ ಚಪ್ಪಡಿ
ನಿಮ್ನ ದರ್ಪಣ
ನೀರಿನ ವಕ್ರೀಭವನ ಸೂಚ್ಯಂಕ =1.33
ಕ್ರೌನ್ ಗಾಜು ವಕ್ರೀಭವನ ಸೂಚ್ಯಂಕ =1.42
ಆದರೆ
ನೀರಿನಲ್ಲಿ ಹಾಗೂ ಕ್ರೌನ್ ಗಾಜಿನಲ್ಲಿ ಬೆಳಕಿನ ವೇಗ ಕ್ರಮವಾಗಿ..
2.25 ಲಕ್ಷ ಕಿಲೋಮೀಟರ್ ಮತ್ತು 2.11ಲಕ್ಷ ಕಿಲೋಮೀಟರ್
2.69 ಲಕ್ಷ ಕಿಲೋಮೀಟರ್ ಮತ್ತು 3.21 ಲಕ್ಷ ಕಿಲೋಮೀಟರ್
2.96 ಲಕ್ಷ ಕಿಲೋಮೀಟರ್ ಮತ್ತು 2.70 ಲಕ್ಷ ಕಿಲೋಮೀಟರ್
1.33 ಲಕ್ಷ ಕಿಲೋಮೀಟರ್ ಮತ್ತು 1.42 ಲಕ್ಷ ಕಿಲೋಮೀಟರ್
ನಿರಪೇಕ್ಷ ವಕ್ರೀಭವನ ಸೂಚ್ಯಂಕ =
ನಿರ್ವಾತದಲ್ಲಿ ಬೆಳಕಿನ ವೇಗ*ಮಾಧ್ಯಮದಲ್ಲಿ ಬೆಳಕಿನ ವೇಗ
ನಿರ್ವಾತದಲ್ಲಿ ಬೆಳಕಿನ ವೇಗ /ಮಾಧ್ಯಮದಲ್ಲಿ ಬೆಳಕಿನ ವೇಗ
ಮಾಧ್ಯಮ 1ರಲ್ಲಿ ಬೆಳಕಿನ ವೇಗ/ಮಾಧ್ಯಮ 2 ರಲ್ಲಿ ಬೆಳಕಿನ ವೇಗ
ಮಾಧ್ಯಮ 2ರಲ್ಲಿ ಬೆಳಕಿನ ವೇಗ/ಮಾಧ್ಯಮ 1 ರಲ್ಲಿ ಬೆಳಕಿನ ವೇಗ
ನಿರ್ವಾತದಲ್ಲಿ ಬೆಳಕಿನ ವೇಗ....... m/s
ವಜ್ರ(Diamond) ದಲ್ಲಿ ಬೆಳಕಿನ ವೇಗ ಕೊಡಲಾಗಿದೆ. ಹಾಗಾದರೆ ವಜ್ರದ ವಕ್ರೀಭವನ ಸೂಚ್ಯಂಕ....
2.25
1.44
1.96
2.42
ವಸ್ತು ದೂರ =-25cm
ಪ್ರತಿಬಿಂಬದ ದೂರ =+50/3
ಪ್ರತಿಬಿಂಬದ ಲಕ್ಷಣ
ಸತ್ಯ ತಲೆಕೆಳಗೆ ಚಿಕ್ಕದು
ನೇರ ಮಿಥ್ಯ ಚಿಕ್ಕದು
ಸತ್ಯ ತಲೆಕೆಳಗೆ ದೊಡ್ದದಾದ
ನೇರ ಮಿಥ್ಯ ದೊಡ್ಡದಾದ
ವಸ್ತುವನ್ನು ನಿಮ್ನ ಮಸೂರದ ಅನಂತ ಮತ್ತು ದೃಕ್ ಕೇಂದ್ರಗಳ ನಡುವೆ ಇಟ್ಟಾಗ..
ಪ್ರತಿಬಿಂಬದ ಲಕ್ಷಣ
F1ಮತ್ತು O ಗಳ ನಡುವೆ
F1 ಮತ್ತು 2F1 ನಡುವೆ
2F1 ದೂರದಲ್ಲಿ
ಅನಂತದಲ್ಲಿ
ವಸ್ತುವನ್ನು ಪೀನ ಮಸೂರದ 2F1 ಮತ್ತು F1 ನಡುವೆ ಇಟ್ಟರೆ...
ಪ್ರತಿಬಿಂಬದ ಸ್ಥಾನ
2F2 ದೂರದಲ್ಲಿ
F2 ವಿನಲ್ಲಿ
F2 ಮತ್ತು 2F2 ನಡುವೆ
O ಮತ್ತು F2 ಗಳ ನಡುವೆ
