NEW
Font size
Worksheetsವಿಜ್ಞಾನ: 1)ಆಮ್ಲ,ಪ್ರತ್ಯಾಮ್ಲಗಳು 2)ಲೋಹಗಳು,ಅಲೋಹಗಳು. V.B.H
Total questions: 40
Worksheet time: 20mins
ಈ ಸಂಯುಕ್ತಗಳು ಹೆಚ್ಚಿನ ಕರಗುವ ಬಿಂದುವನ್ನು ಹೊಂದಿರುವುದು.
A. ಅಯಾನಿಕ್ ಸಂಯುಕ್ತಗಳು.
B. ಕೋವೆಲೆಂಟ್ ಸಂಯುಕ್ತಗಳು
C. ಕಾರ್ಬನ್ ಸಯು೦ಕ್ತಗಳು
D. ಮೇಲಿನ ಎಲ್ಲವೂ
ಸೀಸ ಮತ್ತು ತವರದ ಘಟಕವನ್ನು ಹೊಂದಿರುವ ಮಿಶ್ರಲೋಹ.
A. ಕಂಚು
B, ಹಿತ್ತಾಳೆ
C. ಬೆಸುಗೆಲೋಹ
D. ಕಲೆರಹಿತ ಉಕ್ಕು
ಬೆಸುಗೆ ಲೋಹದ ಈ ಗುಣದಿಂದ ಇದನ್ನು ವಿದ್ಯುತ್ ತಂತಿಗಳನ್ನು ಬೆಸೆಯಲು ಬಳಸುತ್ತಾರೆ.
A. ಉತ್ತಮ ಅವಾಹಕ
B. ಉತ್ತಮ ಉಷ್ಣವಾಹಕ
C. ಹೆಚ್ಚಿನ ಕರಗುವ ಬಿಂದು
D. ಕಡಿಮೆ ಕರಗುವ ಬಿಂದು
ಉಭಯದರ್ಮಿ ಆಕ್ಸೈಡ್‌ಗಳು ಈ ಪ್ರತಿಕಾರಕದೊಂದಿಗೆ ವರ್ತಿಸಿ ಲವಣ ಮತ್ತು ನೀರನ್ನು ಕೊಡುತ್ತದೆ.
A. ಲೋಹ ಮತ್ತು ಅಲೋಹ
B. ಆಮ್ಲ ಮತ್ತು ಪ್ರತ್ಯಾಮ್ಲ
C. ಜಲಜನಕ ಮತ್ತು ಆಮ್ಲಜನಕ
D. ಲೋಹ ಮತ್ತು ಪ್ರತ್ಯಾಮ್ಲ
ಲೋಹದ ಅದಿರಿನಿಂದ ಲೋಹವನ್ನು ಉದ್ಧರಿಸುವ ಈ ಹಂತಗಳನ್ನು ಗಮನಿಸಿ.
ಸಲ್ಫೈಡ್ ಅದಿರು --->............----> ಅಪಕರ್ಷಣೆ---> ಶುದ್ದೀಕರಣ.
ಖಾಲಿಬಿಟ್ಟ ಜಾಗದಲ್ಲಿ ಮಾಡಬೇಕಾದ ಪ್ರಕ್ರಿಯೆ
A. ವಿದ್ಯುದ್ವಿಭಜನೆ
B. ಕಾಸುವಿಕೆ
C. ಹುರಿಯುವಿಕೆ
D. ಉತ್ಕರ್ಷಿಸುವಿಕೆ
ತಾಮ್ರದ ಆಕ್ಸೈಡ್ ಸಾರರಿಕ್ತ ಹೈಡೋಕ್ಲೋರಿಕ್ ಆಮ್ಲದೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನವು ಲವಣ ಮತ್ತು ನೀರು ಹಾಗದರೆ
ತಾಮ್ರದ ಆಕ್ಸಿಡ್‌ನ್ನು ಹೀಗೆ ಕರೆಯಬಹುದು.
A.ಆಮ್ಲೀಯ ಆಕ್ಸೈಡ್
B. ಪ್ರತ್ಯಾಮ್ಲೀಯ ಆಕ್ಸೈಡ್
C. ತಟಸ್ಥ ಆಕ್ಸೈಡ್
D. ಅಲೋಹದ ಅಕ್ಸೈಡ್
ಅಲ್ಯುಮಿನಿಯಂ ಲೋಹವು ಹಬೆಯೊಂದಿಗೆ ಪ್ರತಿವರ್ತಿಸುವ ರಸಾಯನಿಕ ಕ್ರಿಯೆಯ ಸರಿದೂಗಿಸಿದ ರಾಸಾಯನಿಕ ಸಮೀಕರಣ.
A. 3AI + 2H2O ------> Al2O3+ 2H2
B, Al+3H2O----->2 AI2O3+H2
C. 2Al+H2O ------> 3AI2O3 + H2
D. 2AI + 3H2O -----> AI2O3 + 3H2
ಲೋಹದ ಕಾರ್ಬೊನೇಟ್ ಅದುರುಗಳನ್ನು ಅವುಗಳ ಆಕ್ಸೈ ಡ್‌ಗಳಾಗಿ ಪರಿವರ್ತಿಸುವ ಪ್ರಕ್ರಿಯೆ.
A. ಹುರಿಯುವಿಕೆ
B. ಅಪಕರ್ಷಣೆ
C. ಕಾಸುವಿಕೆ
D. ವಿದ್ಯುದ್ವಿಭಜನೆ
X ಧಾತುವಿನ ಪರಮಾಣು ಸಂಖ್ಯೆ 11 ಮತ್ತು ಧಾತುವಿನ ಪರಮಾಣು ಸಂಖ್ಯೆ 17 ಆಗಿದೆ ಹಾಗಾದರೆ ಈ ಧಾತುಗಳ ನಡುವೆ
ಉಂಟಾಗುವ ಬಂಧದ ವಿಧ.
A. ಅಯಾನಿಕ ಬಂಧ
B. ಕೋವೆಲೆಂಟ್ ಬಂಧ
C. ಹೈಡೋಜನ್ ಬಂಧ
D. ಲೋಹಿಯ ಬಂಧ
ಈ ಕೆಳಗಿನ ರಾಸಾಯನಿಕ ಕ್ರಿಯೆಗಳನ್ನು ಗಮನಿಸಿ **
Fe + CuSO4 → FeSO4+ Cu
Zn + FeSO4 → ZnSO4 +Fe
ಈ ಮೇಲಿನ ಕ್ರಿಯೆಗಳಲ್ಲಿರುವ ಲೋಹಗಳ ಕ್ರಿಯಾಶೀಲತೆಯ ಇಳಿಕೆ.
A. Zn > Fe > Cu
B. Fe > Cu > Zn
C. Zn > Cu > Fe
D. Cu > Fe > Zn
ಸೀತಾ ತಾನು ಹೊಸದಾಗಿ ಖರೀದಿಸಿದ ಬೆಳ್ಳಿ ಕಾಲುಗೆಜ್ಜೆ ಕೆಲವು ದಿನಗಳ ನಂತರ ಕಪ್ಪು ಪದರ ಕಂಡು ಬಂದಿರುತ್ತದೆ, ಕ್ರಿಯೆಗೆ ಕಾರಣವಾದ ವಾತಾವರಣದ ಅನಿಲ.
A. ಇಂಗಾಲದ ಡೈ ಆಕ್ಸೈಡ್
B. ಸಲ್ಪರ್
C. ಅಮ್ಲಜನಕ
D. ನೈಟ್ರೋಜನ್ ಡೈ ಆಕ್ಸೈಡ್
ಈ ಲೋಹವು ನಶಿಸುವಿಕೆ ಕ್ರಿಯೆ ಯಿಂದ ತನ್ನ ಬಾಳಿಕೆಯನ್ನು ಹೆಚ್ಚಿಸಿಕೊಂಡಿದೆ.
A. ಕಬ್ಬಿಣ
B. ತಾಮ್ರ
C. ಮೆಗ್ನೇಶಿಯಂ
D. ಅಲ್ಯುಮಿನಿಯಂ
ಲೋಹದ ಕಾರ್ಬೋನೇಟ್ ಆಮ್ಲಗಳೊಂದಿಗೆ ವರ್ತಿಸಿ ಬಿಡುಗಡೆಯಾಗುವ ಈ ಅನಿಲವು ಉರಿಯುವ ಮೇಣದ ಬತ್ತಿಯನ್ನು ಆರಿಸುತ್ತದೆ.
A. ಜಲಜನಕ
B. ಇಂಗಾಲದ ಡೈಆಕ್ಸೆಡ್
C. ಆಮ್ಲಜನಕ
D. ನೈಟ್ರೋಜನ್
ಅಲ್ಯೂಮಿನಿಯಂ ತಾಮ್ರ, ಕ್ಯಾಲ್ಸಿಯಂ ಮತ್ತು ಸೀಸ ಲೋಹಗಳನ್ನು ಅವುಗಳ ಕ್ರಿಯಾಕಾರತ್ವ ದ ಇಳಿಕೆ ಕ್ರಮ.
A. Zn > Fe > Cu
B. Fe > Cu > Zn
C. Zn > Cu > Fe
D. Cu > Fe > Zn
'X' ಮತ್ತು 'Y' ವರ್ತಿಸಿ Z ಎಂಬ ಸಂಯುಕ್ತವನ್ನು ಕೊಡುತ್ತದೆ. ಇದರಲ್ಲಿ X ಎಲೆಕ್ಟ್ರಾನ್‌ನ್ನು ಬಿಟ್ಟುಕೊಡುತ್ತದೆ ʼY 'ಎಲೆಕ್ಟ್ರಾನ್‌ನ್ನು ಪಡೆದುಕೊಳ್ಳುತ್ತದೆ. ಈ ಕೆಳಗಿನ ಯಾವ ಲಕ್ಷಣವು Z ಗೆ ಸಂಬಂಧಿಸಿದ್ದಲ್ಲ.
A. ಅದು ಹೆಚ್ಚಿನ ಕರಗುವ ಬಿಂದುವನ್ನು ಹೊಂದಿದೆ
B. ಅದು ಕಡಿಮೆ ಕರಗುವ ಬಿಂದುವನ್ನು ಹೊಂದಿದೆ
C. ದ್ರಾವಣ ಸ್ಥಿತಿಯಲ್ಲಿ ವಿದ್ಯುತ್‌ನ್ನು ಹರಿಸುತ್ತದೆ
D. ಘನಸ್ಥಿತಿ ಯಲ್ಲಿ ದೊರಕುತ್ತದೆ
ಈ ಕೆಳಗಿನ ಯಾವ ಜೋಡಿಯು ಸ್ಥಾನಪಲ್ಲಟ ಕ್ರಿಯೆಯನ್ನು ಉಂಟುಮಾಡುತ್ತದೆ?
A. NaCl ದ್ರಾವಣ ಮತ್ತು ತಾಮ್ರದ ಲೋಹ
B, MgCl2 ದ್ರಾವಣ ಮತ್ತು ಅಲ್ಯುಮಿನಿಯಂ ಲೋಹ
C. FeSO4 ದ್ರಾವಣ ಮತ್ತು ಬೆಳ್ಳಿಯ ಲೋಹ
D. AgNO3 ದ್ರಾವಣ ಮತ್ತು ತಾಮ್ರದ ಲೋಹ
ಕಬ್ಬಿಣದ ಕಾವಲಿ ತುಕ್ಕು ಹಿಡಿಯದಂತೆ ತಡೆಗಟ್ಟಲು ಈ ಕೆಳಗಿನ ಯಾವ ವಿಧಾನ ಸೂಕ್ತವಾಗಿದೆ ?
A. ಗ್ರೀಸ್ ಹಚ್ಚುವುದು
B. ಬಣ್ಣ ಹಚ್ಚುವುದು
C. ಸತುವಿನ ಲೇಪನ ಮಾಡುವುದು
D. ಮೇಲಿನ ಎಲ್ಲವೂ
ಒಂದು ಧಾತುವು ಆಕ್ಸಿಜನ್ ಜೊತೆ ಪ್ರತಿ ವರ್ತಿಸಿ ಕರಗುವಬಿಂದುವನ್ನು ಹೊಂದಿರುವ ಸಂಯುಕ್ತವನ್ನು ಉಂಟುಮಾಡುತ್ತದೆ ಈ
ಸಂಯುಕ್ತವು ನೀರಿನಲ್ಲಿ ಸುಲಭವಾಗಿ ಕರಗುತ್ತದೆ ಸಾಮಾನ್ಯವಾಗಿ ಆ ಧಾತು ಯಾವುದಾಗಿರಬಹುದೆಂದರೆ,
A. ಕ್ಯಾಲ್ಸಿಯಂ
B, ಕಾರ್ಬನ್
C. ಸಿಲಿಕಾನ್
D. ಕಬ್ಬಿಣ
ಆಹಾರ ಪದಾರ್ಥಗಳ ಡಬ್ಬಿಗಳನ್ನು ತವರದಿಂದ ಲೇಪನ ಮಾಡಲಾಗಿರಿತ್ತದೆಯೇ ಹೊರತು ಸತುವಿನಿಂದಲ್ಲ ಕಾರಣ.
A. ಸತು ತವರಕ್ಕಿಂತ ದುಬಾರಿ
B. ಸತುವಿನ ಕರಗುವ ಬಿಂದು ತವರಕ್ಕಿಂತ ಹೆಚ್ಚು
C. ಸತುವು ತವರಕ್ಕಿಂತ ಹೆಚ್ಚು ಕ್ರಿಯಾಶೀಲವಾಗಿದೆ.
D. ಸತುವು ತವರಕ್ಕಿಂತ ಕಡಿಮೆ ಕ್ರಿಯಾಶೀಲವಾಗಿದೆ.
ಮೆಗ್ನಿಶಿಯಂ ಲೋಹವನ್ನು ಗಾಳಿಗೆ ತೆರೆದಿಟ್ಟಾಗ, ಅದರ ಮೇಲೆ ಉಂಟಾಗುವ ರಾಸಾಯನಿಕ ಪದರ.
A. ಮೆಗ್ನೇಶಿಯಂ ಆಕ್ಸೈಡ್
B, ಮೆಗ್ನೇಶಿಯಂ ಕಾರ್ಬೋನೇಟ್
C. ಮೆಗ್ನೇಶಿಯಂ ಸಲ್ಡ್ಫೈಡ್
D. ಮೆಗ್ನೇಶಿಯಂ ನೈಟ್ರೈಟ್
ಸಲ್ಫೈಡ್ ಅದಿರುಗಳನ್ನು ಹುರಿಯುವಿಕೆಯ ವಿಧಾನದಿಂದ ಸಾರವರ್ಧಿಸುವ ಉದ್ದೇಶ.
A. ಅದಿರಿನಲ್ಲಿರುವ ಮಡ್ಡಿಯನ್ನು ಬೇರ್ಪಡಿಸಲು
B. ಅದಿರಿನಲ್ಲಿರುವ ನೀರಿನಂಶವನ್ನು ಹೊರತೆಗೆಯಲು
C ಅದಿರನ್ನು ಲೋಹದ ಆಕ್ಸೆಡ್ ರೂಪಕ್ಕೆ ಪರಿವರ್ತಿಸಲು
D. ಮೇಲಿನ ಎಲ್ಲವೂ
ಥರ್ಮೈಟ್ ಕ್ರಿಯೆಯನ್ನು ಈ ಉದ್ದೇಶಕ್ಕೆ ಉಪಯೋಗಿಸುತ್ತಾರೆ
A. ಮೂಳೆ ಮುರಿತದ ಜೋಡಣೆಗೆ
B. ಮುರಿದ ಯಂತ್ರದ ಭಾಗಗಳ ಜೋಡಣೆಗೆ
C ದಂತ ಚಿಕಿತ್ಸೆಯಲ್ಲಿ
D. ಲೋಹದ ಸಾರವರ್ದನೆಯಲ್ಲಿ
1 ಗ್ರಾಂ ಚಿನ್ನ ದಿಂದ 2 ಕಿಲೋ ಮೀಟರ್ ತಂತಿಯನ್ನಾಗಿ ಮಾಡಬಹುದು. ಇಲ್ಲಿ ಪ್ರದರ್ಶಿಸಲ್ಪಡುವ ಲೋಹದ ಗುಣ.
A. ವಿದ್ಯುತ್ ವಾಹಕತೆ
B. ಕುಟ್ಯತೆ
C. ತನ್ಯತೆ
D. ಕಾಂತವತೆ
ತುಂಬಾ ಕ್ರಿಯಾಪಟು ಧಾತುಗಳಾದ ಈ ಲೋಹಗಳನ್ನು ಸೀಮೆ ಎಣ್ಣೆಯಲ್ಲಿ ಸಂಗ್ರಹಿಸಿಡಲಾಗುತ್ತದೆ.
A. Na & K
B, K & C
C. Na & Ca
D. K & AI
ಮಿಶ್ರಲೋಹಗಳಿಗೆ ಸಂಬಂದಿಸಿದ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ.
A. ವಿದ್ಯುತ್ ವಾಹಕತೆ ಕಡಿಮೆ
B. ಕರಗುವ ಬಿಂದು ಕಡಿಮೆ
C ಘಟಕ ಲೋಹಗಳಿಗಿಂತ ಭಿನ್ನವಾದ ಲಕ್ಷಣವನ್ನು ಹೊಂದಿದೆ
D. ವಿದ್ಯುತ್ ವಾಹಕತೆ ಹೆಚ್ಚು
pH ಮಾನವನ್ನು ಬಳಸಿಕೊಂಡು ನಾವು ಒಂದು ದ್ರಾವಣದಲ್ಲಿ ಅಳೆಯುವುದು.
A. ಸಾಂದ್ರತೆಯನ್ನು
B. H+ ಸಾರತೆಯನ್ನು
C. OH- ಸಾರತೆಯನ್ನು
D. ವಾಹಕತೆಯನ್ನು
ತುರಿಕೆ ಗಿಡದ ಎಲೆಗಳ ಚುಚ್ಚುವ ಕೂದಲುಗಳು ಚುಚ್ಚಿದಾಗ ಉರಿ ನೋವಿಗೆ ಕಾರಣವಾದ ಆಮ್ಲ.
A. ಸಿಟ್ರಿಕ್ ಆಮ್ಲ
B. ಮೆಥನೋಯಿಕ್ ಆಮ್ಲ
C. ಟಾರ್ಟಾರಿಕ್ ಆಮ್ಲ
D. ಅಸಿಟಿಕ್ ಆಮ್ಲ
ಈ ಕೆಳಗಿನವುಗಳಲ್ಲಿ ಅಜೀರ್ಣದ ಚಿಕಿತ್ಸೆಯಲ್ಲಿ ಬಳಸುವುದು.
A. ಜೀವ ನಿರೋಧಕ
B. ನೋವು ನಿವಾರಕ
C. ಆಮ್ಗಶಾಮಕ
D. ನಂಜು ನಿವಾರಕ
2NaOH +Zn --------->+ H2
A. Na2ZnO2
B. NaZnO2
C. Na2ZnO
D. NaZnO
ಆಮ್ಲಗಳು ಲೋಹದ ಕಾರ್ಬೋನೇಟ್‌ನೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ.
A. ಕಾರ್ಬನ್ ಡೈಆಕ್ಸೆಡ್
B. ಹೈಡೋಜನ್
C. ಆಕ್ಸಿಜನ್
D. ನೈಟ್ರೋಜನ್
CH3COOH ಉಂಟುಮಾಡುವ ಎರಡು ಅಯಾನ್‌ಗಳು
A. CH3COO- ಮತ್ತು H +
B. CH3COO+ ಮತ್ತು H -
C. CH3CO ಮತ್ತು OH-
D. CH3+ ಮತ್ತು COOH -
ಹೈಡೋಜನಿಯಂ ಅಯಾನಿನ ಸೂತ್ರ.
A. H2O-
B. H3O+
C. H2O+
D. H3O-
ಇವುಗಳಲ್ಲಿ ಕ್ಷಾರೀಯ ಲೋಹದ ಗುಂಪಗಳು.
A. Na ಮತ್ತು K
B. Fe ಮತ್ತು K
C. Fe ಮತ್ತು Na
D. Cu ಮತ್ತು Fe
ಕೆಳಗಿನವುಗಳಲ್ಲಿ ಆಮ್ಲಗಳನ್ನು ಸಾರರಿಕ್ತಗೊಳಿಸುವ ಸರಿಯಾದ ಕ್ರಮ.
A. ನೀರಿಗೆ ಆಮ್ಲವನ್ನು ಸೇರಿಸುವುದು.
B. ಆಮ್ಲಕ್ಕೆ ನೀರನ್ನು ಸೇರಿಸುವುದು
C. ಆಮ್ಲಕ್ಕೆ ನೀರನ್ನು ಸೇರಿಸಿ ನಿಧಾನವಾಗಿ ಕಲಕುವುದು
D. ನೀರಿಗೆ ಆಮ್ಲ ಸೇರಿಸಿ ನಿಧಾನವಾಗಿ ಕಲಕುವುದು
ಜಲಚರಗಳ ಉಳಿವನ್ನು ದುಸ್ಥರವಾಗಿಸುವ ಮಳೆ ನೀರಿನ pH ಮೌಲ್ಯ.
A. 5.6 ಕ್ಕಿಂತ ಕಡಿಮೆ
B. 5.8 ಕ್ಕಿಂತ ಕಡಿಮೆ
C. 6.1 ಕ್ಕಿಂತ ಕಡಿಮೆ
D. 5.9 ಕ್ಕಿಂತ ಕಡಿಮೆ
ಸಿಟ್ರಿಕ್ ಆಮ್ಲ ಪ್ರಧಾನವಾಗಿ ಇರುವ ಎರಡು ಹಣ್ಣುಗಳು.
A. ಲಿಂಬೆ ಮತ್ತು ಹುಣಸೆ
B. ಲಿಂಬೆ ಮತ್ತು ಕಿತ್ತಳೆ
C. ಕಿತ್ತಳೆ ಮತ್ತು ಹುಣಸೆ
D. ಟೊಮ್ಯಾಟೋ ಮತ್ತು ಹುಣಸೆ
ಹಲ್ಲಿನ ಆರೋಗ್ಯದ ದೃಷ್ಟಿಯಿಂದ ಇರಬೇಕಾದ ನಾವು ಬಳಸುವ ಟೂತ್ ಪೇಸ್ಟ್‌ನ pH ಮೌಲ್ಯ.
4 ಕ್ಕಿಂತ ಕಡಿಮೆ
6 ಕ್ಕಿಂತ ಕಡಿಮೆ
7 ಕ್ಕಿಂತ ಹೆಚ್ಚು
5ಕ್ಕಿಂತ ಕಡಿಮೆ
ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ನೀರಿಗೆ ಸೇರಿಸಿದಾಗ ಏಕಮಾನ ಗಾತ್ರದಲ್ಲಿರುವ ಅಯಾನ್‌ಗಳು.
A. ಹೆಚ್ಚಾಗುವುದು
B. ಕಡಿಮೆಯಾಗುವುವು
C. ಬದಲಾಗುವುದಿಲ್ಲ
D. ತಟಸ್ಥವಾಗುವುವು
ತಟಸ್ಥಿಕರಣ ಕ್ರಿಯೆಯಲ್ಲಿ ಉತ್ಪತ್ತಿಯಾಗುವ ಎರಡು ಸಂಯುಕ್ತಗಳು
A. ನೀರು ಮತ್ತು ಲವಣ
B. ಲವಣ ಮತ್ತು ಹೈಡೋಜನ್
C. ನೀರು ಮತ್ತು ಹೈಡೋಜನ್
D. ನೀರು ಮತ್ತು ಕಾರ್ಬನ್ ಡೈ ಆಕ್ಸೆಡ್
ನಮ್ಮ ದೇಹದ pH ವ್ಯಾಪ್ತಿ.
A. 6.0 ರಿಂದ 7.8
B. 7.0 ರಿಂದ 7.6
C. 7.0 ರಿಂದ 7.7
D. 7.0 ರಿಂದ 7.8
