wayground logo

Free Printable Worksheets

NEW

Font size

S
M
L
XL
Worksheets

ಜೀವ ಕ್ರಿಯೆಗಳು-ರಚನೆ:ಖಲೀಲ್

Total questions: 36

Worksheet time: 18mins

Name
Class
Date
1.

ಜೀವಕೋಶಗಳಲ್ಲಿ ಶಕ್ತಿಯ ಬಿಡುಗಡೆ ಮಾಡಲು ಅಗತ್ಯವಿರುವ ಆಕ್ಸಿಜನ್ (ಆಮ್ಲಜನಕ) ವನ್ನು ಶ್ವಾಸಕೋಶಗಳಿಂದ ಜೀವಕೋಶಗಳಿಗೆ ತಲುಪಿಸುವ ರಕ್ತ ಕಣ...

a)

ಬಿಳಿ ರಕ್ತ ಕಣ (White Blood Cells-WBC)

b)

ಕೆಂಪು ರಕ್ತ ಕಣ (Red Blood Cells-RBC)

c)

ಕಿರುತಟ್ಟೆ(Platelates)

d)

ಯಾವುದೂ ಅಲ್ಲ

2.

ಜೀವಕೋಶಗಳಲ್ಲಿ ಉತ್ಪಾದನೆ ಆದ ತ್ಯಾಜ್ಯ ಕಾರ್ಬನ್ ಡೈ ಆಕ್ಸೈಡ್ ಅನಿಲವನ್ನು ಶ್ವಾಸಕೋಶಗಳಿಗೆ ತಲುಪಿಸುವುದು...

a)

ಬಿಳಿ ರಕ್ತ ಕಣ

b)

ಕಿರು ತಟ್ಟೆ

c)

ಕೆಂಪು ರಕ್ತ ಕಣ

d)

ಪ್ಲಾಸ್ಮ

3.

ರಕ್ತವನ್ನು ಹೃದಯದಿಂದ ಹೊರಗೆ ಕೊಂಡು ಹೋಗುವ ನಾಳವನ್ನು...... ಎನ್ನುವರು

a)

ಅಪಧಮನಿ

b)

ಅಭಿಧಮನಿ

c)

ರಕ್ತ ಲೋಮನಾಳ

d)

ದುಗ್ಧನಾಳ

4.

ರಕ್ತವನ್ನು ಹೃದಯದ ಒಳಗೆ ತರುವ ನಾಳವನ್ನು... ಎನ್ನುವರು

a)

ಅಪಧಮನಿ

b)

ಅಭಿಧಮನಿ

c)

ದುಗ್ಧನಾಳ

d)

ರಕ್ತ ಲೋಮನಾಳಗಳು

5.

ಅಭಿಧಮನಿ ಹಾಗೂ ಅಪಧಮನಿಗಳನ್ನು ಪರಸ್ಪರ ಸಂಪರ್ಕಿಸುವ ಅತೀ ಸೂಕ್ಷ್ಮ ನಾಳ ಗಳನ್ನು... ಎನ್ನುವರು

a)

ದುಗ್ಧನಾಳ

b)

ರಕ್ತ ಲೋಮನಾಳಗಳು

c)

ಮೂತ್ರನಾಳ

d)

ರೀನಲ್ ಅಭಿಧಮನಿ

6.

ಮಾನವನ(ಸ್ತನಿ) ಹೃದಯದಲ್ಲಿ ಇರುವ ಕೋಣೆಗಳ ಒಟ್ಟು ಸಂಖ್ಯೆ....

a)

1

b)

3

c)

4

d)

2

7.

ಮಾನವ (ವರ್ಗ : ಸ್ತನಿ ಪ್ರಾಣಿ) ನು....

a)

ಶೀತ ರಕ್ತ ಪ್ರಾಣಿ

b)

ಬಿಸಿ ರಕ್ತ ಪ್ರಾಣಿ

c)

ಅಂಡಜ

d)

ಉಭಯವಾಸಿ

8.

ಇಮ್ಮಡಿ ಪರಿಚಲನೆ ಕಂಡುಬರದ ಪ್ರಾಣಿಯನ್ನು ಗುರುತಿಸಿ...

a)
b)
c)
d)
9.

ಮಾನವನ ಹೃದಯದಲ್ಲಿ ಅಕ್ಸಿಜನ್ ಸಹಿತ ರಕ್ತ (ಆಕ್ಸಿಜನ್ ಇರುವ ರಕ್ತ) ಹೊಂದಿರುವ ಕೋಣೆಗಳು...

a)

ಬಲ ಹೃತ್ಕರ್ಣ ಮತ್ತು ಎಡ ಹೃತ್ಕರ್ಣ

b)

ಬಲ ಹೃತ್ಕುಕ್ಷಿ ಮತ್ತು ಎಡ ಹೃತ್ಕುಕ್ಷಿ

c)

ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿ

d)

ಎಡ ಹೃತ್ಕರ್ಣ ಮತ್ತು ಎಡ ಹೃತ್ಕುಕ್ಷಿ

10.

ಮಾನವನ ಹೃದಯದಲ್ಲಿ ಅಕ್ಸಿಜನ್ ರಹಿತ ರಕ್ತ(ಆಕ್ಸಿಜನ್ ಇಲ್ಲದ ರಕ್ತ) ವನ್ನು ಹೊಂದಿರುವ ಕೋಣೆಗಳು...

a)

ಎಡ ಹೃತ್ಕರ್ಣ ಮತ್ತು ಎಡ ಹೃತ್ಕುಕ್ಷಿ

b)

ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿ

c)

ಎಡ ಹೃತ್ಕರ್ಣ ಮತ್ತು ಬಲ ಹೃತ್ಕರ್ಣ

d)

ಎಡ ಹೃತ್ಕುಕ್ಷಿ ಮತ್ತು ಬಲ ಹೃತ್ಕುಕ್ಷಿ

11.

ಮಾನವನ ಹೃದಯದಲ್ಲಿ ಆಕ್ಸಿಜನ್ ಇರುವ ರಕ್ತ ಮತ್ತು ಆಕ್ಸಿಜನ್ ಇಲ್ಲದ ರಕ್ತವನ್ನು ಪ್ರತ್ಯೇಕಿಸುವ ರಚನೆ.....

a)

ತ್ರಿದಳ ಕವಾಟ

b)

ದ್ವಿದಳ ಕವಾಟ

c)

ಸೆಪ್ಟಮ್

d)

ಪೆರಿಕಾರ್ಡಿಯಮ್

12.

ಆಕ್ಸಿಜನ್ ರಿಕ್ತ (=ಇಲ್ಲದ) (ರಹಿತ) ರಕ್ತವನ್ನು ಶ್ವಾಸಕೋಶಗಳಿಗೆ ತಲುಪಿಸುವ ನಾಳ......

a)

ಪುಪ್ಪುಸಕ ಅಪಧಮನಿ

b)

ಪುಪ್ಪುಸಕ ಅಭಿಧಮನಿ

c)

ಮಹಾ ಅಪಧಮನಿ

d)

ಕೆಳಗಿನ (=ನೀಚ) (ಅಧೋ) ಅಭಿಧಮನಿ

13.

ಮಹಾ ಅಪಧಮನಿಯು....

a)

ಆಕ್ಸಿಜನ್ ಸಮೃದ್ಧ ರಕ್ತ ವನ್ನು ಹೃದಯದಿಂದ ದೇಹದ ಎಲ್ಲಾ ಜೀವಕೋಶಗಳಿಗೆ ಸಾಗಿಸುತ್ತದೆ

b)

ಆಕ್ಸಿಜನ್ ಪೂರಿತ(ಇರುವ) ರಕ್ತವನ್ನು ದೇಹದ ವಿವಿಧ ಭಾಗಗಳಿಂದ ಹೃದಯಕ್ಕೆ ತಲುಪಿಸುತ್ತದೆ

c)

ಆಕ್ಸಿಜನ್ ರಹಿತ ಹೃದಯದಿಂದ ಶ್ವಾಸಕೋಶಗಳಿಗೆ ತಲುಪಿಸುತ್ತದೆ

d)

ಆಕ್ಸಿಜನ್ ಪೂರಿತ ರಕ್ತವನ್ನು ಶ್ವಾಸಕೋಶಗಳಿಂದ ಹೃದಯಕ್ಕೆ ತಲುಪಿಸುತ್ತದೆ

14.

ಪುಪ್ಪುಸಕ ಅಪಧಮನಿಯು...

a)

ಆಕ್ಸಿಜನ್ ಸಮೃದ್ಧ ರಕ್ತವನ್ನು ಶ್ವಾಸಕೋಶಗಳಿಂದ ಹೃದಯಕ್ಕೆ ತಲುಪಿಸುತ್ತದೆ

b)

ಆಕ್ಸಿಜನ್ ರಿಕ್ತ (ಇಲ್ಲದ) ರಕ್ತವನ್ನು ಸಾಗಿಸುತ್ತದೆ ಹೃದಯದಿಂದ ಶ್ವಾಸಕೋಶಗಳಿಗೆ ತಲುಪಿಸುತ್ತದೆ

c)

ಆಕ್ಸಿಜನ್ ರಿಕ್ತ(ಇಲ್ಲದ) ರಕ್ತವನ್ನು ದೇಹದ ವಿವಿಧ ಭಾಗಗಳಿಂದ ಹೃದಯಕ್ಕೆ ತಲುಪಿಸುತ್ತದೆ

d)

ಆಕ್ಸಿಜನ್ ಸಮೃದ್ಧ ರಕ್ತವನ್ನು ಹೃದಯದಿಂದ ದೇಹದ ವಿವಿಧ ಜೀವಕೋಶಗಳಿಗೆ ತಲುಪಿಸುತ್ತದೆ

15.

ಪುಪ್ಪುಸಕ ಅಭಿಧಮನಿಯು...

a)

ಆಕ್ಸಿಜನ್ ಸಮೃದ್ಧ ರಕ್ತವನ್ನು ಹೃದಯದಿಂದ ದೇಹದ ವಿವಿಧ ಜೀವಕೋಶಗಳಿಗೆ ತಲುಪಿಸುತ್ತದೆ

b)

ಆಕ್ಸಿಜನ್ ಸಮೃದ್ಧ ರಕ್ತವನ್ನು ಶ್ವಾಸಕೋಶಗಳಿಂದ ಹೃದಯಕ್ಕೆ ತಲುಪಿಸುತ್ತದೆ

c)

ಆಕ್ಸಿಜನ್ ರಿಕ್ತ(ಇಲ್ಲದ) ರಕ್ತವನ್ನು ದೇಹದ ವಿವಿಧ ಭಾಗಗಳಿಂದ ಹೃದಯಕ್ಕೆ ತಲುಪಿಸುತ್ತದೆ

d)

ಆಕ್ಸಿಜನ್ ರಿಕ್ತ (ಇಲ್ಲದ) ರಕ್ತವನ್ನು ಹೃದಯದಿಂದ ಶ್ವಾಸಕೋಶಗಳಿಗೆ ತಲುಪಿಸುತ್ತದೆ

16.

ನೀಚ ಅಭಿಧಮನಿಯ ಕಾರ್ಯ..

a)

ಆಕ್ಸಿಜನ್ ರಿಕ್ತ (ಇಲ್ಲದ) ರಕ್ತವನ್ನು ಕೈ ಕಾಲು ಮತ್ತು ಉದರ ಭಾಗಗಳಿಂದ ಹೃದಯಕ್ಕೆ ತಲುಪಿಸುತ್ತದೆ

b)

ಆಕ್ಸಿಜನ್ ರಿಕ್ತ (ಇಲ್ಲದ) ರಕ್ತವನ್ನು ಭುಜ ಮತ್ತು ತಲೆಯ ಭಾಗಗಳಿಂದ ಹೃದಯಕ್ಕೆ ತಲುಪಿಸುತ್ತದೆ

c)

ಆಕ್ಸಿಜನ್ ರಿಕ್ತ (ಇಲ್ಲದ) ರಕ್ತವನ್ನು ಹೃದಯದಿಂದ ಶ್ವಾಸಕೋಶಗಳಿಗೆ ತಲುಪಿಸುತ್ತದೆ

d)

ಆಕ್ಸಿಜನ್ ಸಮೃದ್ಧ ರಕ್ತವನ್ನು ಹೃದಯದಿಂದ ದೇಹದ ವಿವಿಧ ಜೀವಕೋಶಗಳಿಗೆ ತಲುಪಿಸುತ್ತದೆ

17.

ದುಗ್ಧ ರಸ ಅಥವಾ ಅಂಗಾಂಶ ದ್ರವಕ್ಕೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ

a)

ದುಗ್ಧ ರಸವು ಕಡಿಮೆ ಪ್ರೋಟೀನ್ ಹೊಂದಿದೆ ಹಾಗೂ ಕೆಂಪು ಬಣ್ಣವಿಲ್ಲದ ದ್ರವ

b)

ದುಗ್ಧ ರಸವು ಹೆಚ್ಚು ಪ್ರೋಟೀನ್ ಹೊಂದಿದೆ ಹಾಗೂ ಕೆಂಪು ರಕ್ತ ಕಣಗಳು ಇಲ್ಲ

c)

ದುಗ್ಧ ರಸವು ಕಡಿಮೆ ಪ್ರೋಟೀನ್ ಹೊಂದಿದೆ ಹಾಗೂ ಕೆಂಪು ರಕ್ತ ಕಣಗಳು ಇಲ್ಲ

d)

ದುಗ್ಧ ರಸವು ದುಗ್ಧ ರಸ ನಾಳ ಗಳಲ್ಲಿ ಹರಿಯುತ್ತದೆ

18.

ದೇಹಕ್ಕೆ ಪ್ರವೇಶಿಸುವ ರೋಗಕಾರಕ ಜೀವಿಗಳ ವಿರುದ್ಧ ಹೋರಾಟ ಮಾಡುವ ರಕ್ತ ಕಣ..

a)

ಕೆಂಪು ರಕ್ತ ಕಣ (RBC)

b)

ಬಿಳಿ ರಕ್ತ ಕಣ (WBC)

c)

ಕಿರು ತಟ್ಟೆ (Platelates)

d)

ಮೇಲಿನ ಎಲ್ಲವೂ

19.

ಗಾಯಗೊಂಡಾಗ ರಕ್ತದ ಸೋರಿಕೆಯಾಗಿ ರಕ್ತದ ಒತ್ತಡ ಕಡಿಮೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು .... ಮಾಡುತ್ತದೆ

a)

ಕೆಂಪು ರಕ್ತ ಕಣ

b)

ಬಿಳಿ ರಕ್ತ ಕಣ

c)

ಕಿರು ತಟ್ಟೆ

d)

ಮೇಲಿನ ಎಲ್ಲವೂ

20.

ಸಸ್ಯಗಳಲ್ಲಿ ಗಾಳಿಗೆ ತೆರೆದ ಭಾಗಗಳಿಂದ ಆವಿಯ ರೂಪದಲ್ಲಿ ನೀರು ನಷ್ಟ ಆಗುವುದನ್ನು..... ಎನ್ನುವರು

a)

ಭಾಷ್ಪ ವಿಸರ್ಜನೆ

b)

ವಸ್ತು ಸ್ಥಾನಾಂತರಣ

c)

ವಿಸರಣೆ

d)

ಅಭಿಸರಣೆ

21.

ಶೈವಲಗಳು, ಹಾವಸೆ ಸಸ್ಯಗಳಲ್ಲಿ ಕ್ಸೈಲಂ ಅಂಗಾಂಶ ಕಂಡು ಬರುವುದಿಲ್ಲ. ಯಾಕೆಂದರೆ..

a)

ಇವುಗಳಲ್ಲಿ ಬೇರು ಮತ್ತು ಎಲೆಗಳ ನಡುವಿನ ಅಂತರ ಕಡಿಮೆ ಇರುವುದರಿಂದ ವಿಸರಣೆಯ ಮೂಲಕ ನೀರು ಮತ್ತು ಲವಣಗಳ ಹೀರಿಕೆ ನಡೆಯುತ್ತದೆ

b)

ಇವುಗಳು ನೀರಿನಲ್ಲಿ ಇರುವ ಕಾರಣ ಕ್ಸೈಲಂ ಅಂಗಾಂಶದ ಅಗತ್ಯ ಇರುವುದಿಲ್ಲ

c)

ಇವುಗಳು ಮಳೆಗಾಲದಲ್ಲಿ ಹೆಚ್ಚಾಗಿ ಬೆಳೆಯುವ ಕಾರಣ ವಾತಾವರಣದಿಂದ ನೀರನ್ನು ಎಲೆಯ ಮೂಲಕ ಹೀರಿ ಕೊಳ್ಳುವ ಕಾರಣ ಕ್ಸೈಲಂ ಅಂಗಾಂಶದ ಅಗತ್ಯ ಇರುವುದಿಲ್ಲ

d)

ಮೇಲಿನ ಎಲ್ಲವೂ

22.

ರಾತ್ರಿಯ ವೇಳೆ ಸಸ್ಯಗಳಲ್ಲಿ ನೀರು ಹಾಗೂ ಲವಣಗಳ ಹೀರುವಿಕೆಗೆ ನೆರವಾಗುವುದು..

a)

ಭಾಷ್ಪ ವಿಸರ್ಜನೆ

b)

ಬೇರಿನಲ್ಲಿನ ವಿಸರಣೆಯ ಒತ್ತಡ

c)

ಪತ್ರರಂಧ್ರಗಳ ತೆರೆಯುವಿಕೆ ಮತ್ತು ಮುಚ್ಚುವಿಕೆ

d)

ಯಾವುದೂ ಅಲ್ಲ

23.

ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆ ಹಾಗೂ ಅಮೈನೋ ಆಮ್ಲಗಳ ಸಾಗಾಣಿಕೆಯು...... ವಿಧಾನದ ಮೂಲಕ ನಡೆಯುತ್ತದೆ.

a)

ಭಾಷ್ಪ ವಿಸರ್ಜನೆ

b)

ವಸ್ತು ಸ್ಥಾನಾಂತರಣ

c)

ವಿಸರಣೆ

d)

ಮೇಲಿನ ಎಲ್ಲವೂ

24.

ಸಸ್ಯಗಳಲ್ಲಿ ಆಹಾರ ಸಾಗಾಣಿಕೆ ಮಾಡುವ ಅಂಗಾಂಶ....

a)

ಕ್ಸೈಲಂ

b)

ಫ್ಲೋಯಂ

c)

ಹೊರದರ್ಮ ಅಂಗಾಂಶ

d)

ವರ್ಧನ ಅಂಗಾಂಶ

25.

ಫ್ಲೋಯಂ ಗಳಲ್ಲಿ ಆಹಾರ (ದ್ಯುತಿ ಸಂಶ್ಲೇಷಣೆಯ ಉತ್ಪನ್ನ=ಕಾರ್ಬೋಹೈಡ್ರೇಟ್ =ಪಿಷ್ಟ) ದ ಸಾಗಾಣಿಕೆಯು...

a)

ಬೇರಿನಿಂದ ಎಲೆಗಳ ಕಡೆಗೆ ಮೇಲ್ಮುಖ ಚಲನೆಯನ್ನು ಹೊಂದಿದೆ

b)

ಎಲೆಗಳಿಂದ ಇತರ ಕೊಂಬೆಗಳಿಗೆ ಮೇಲ್ಮುಖ ಚಲನೆಯನ್ನು ಹೊಂದಿದೆ

c)

ಎಲೆಗಳಿಂದ ಸಸ್ಯದ ಎಲ್ಲಾ ಭಾಗಗಳಿಗೆ ಮೇಲ್ಮುಖ ಹಾಗೂ ಕೆಳಮುಖ ಚಲನೆಯನ್ನು ಹೊಂದಿದೆ

d)

ಎಲೆಗಳಿಂದ ಸಸ್ಯದ ಬೇರುಗಳಿಗೆ ಕೆಳಮುಖ ಚಲನೆಯನ್ನು ಹೊಂದಿದೆ

26.

ದೇಹಕ್ಕೆ ಹಾನಿಕರವಾದ ಚಯಾಪಚಯ ಕ್ರಿಯೆಯ ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ದೇಹದಿಂದ ಹೊರ ಹಾಕುವ ಪ್ರಕ್ರಿಯೆಯನ್ನು........ ಎನ್ನುವರು

a)

ವಿಸರ್ಜನೆ

b)

ಸಾಗಾಣಿಕೆ

c)

ಉಸಿರಾಟ

d)

ಪೋಷಣೆ

27.

ಮಾನವನ ವಿಸರ್ಜನಾಂಗ ವ್ಯೂಹದ ರಚನಾತ್ಮಕ ಮತ್ತು ಕಾರ್ಯಾತ್ಮಕ ಮೂಲ ಘಟಕ (ಮೂತ್ರ ಜನಕಾಂಗದ ಸೋಸುವ ಘಟಕ).........

a)

ನರಕೋಶ(ನ್ಯೂರಾನ್)

b)

ನೆಫ್ರಾನ್

c)

ಹಾವರ್ಷಿಯನ್ ವ್ಯವಸ್ಥೆ

d)

ಆಲ್ವಿಯೋಲೈ

28.

ರೀನಲ್ ಅಪಧಮನಿಯು....... ವನ್ನು ತನ್ನ ಮೂಲಕ ಹರಿಸುತ್ತದೆ

a)

ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಹೊಂದಿರುವ (ಅಶುದ್ಧ) ಆಕ್ಸಿಜನ್ ಇರುವ ರಕ್ತ

b)

ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಹೊಂದಿಲ್ಲದ (ಶುದ್ಧ) ಆಕ್ಸಿಜನ್ ಇರುವ ರಕ್ತ

c)

ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಹೊಂದಿರುವ (ಅಶುದ್ಧ) ಆಕ್ಸಿಜನ್ ಇಲ್ಲದ ರಕ್ತ

d)

ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಹೊಂದಿಲ್ಲದ ಆಕ್ಸಿಜನ್ ಇಲ್ಲದ ರಕ್ತ

29.

ರೀನಲ್ ಅಭಿಧಮನಿಯು...... ವನ್ನು ತನ್ನ ಮೂಲಕ ಹರಿಸುತ್ತದೆ

a)

ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಹೊಂದಿರುವ (ಅಶುದ್ಧ) ಆಕ್ಸಿಜನ್ ಇರುವ ರಕ್ತ

b)

ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಹೊಂದಿರುವ (ಅಶುದ್ಧ) ಆಕ್ಸಿಜನ್ ಇಲ್ಲದ ರಕ್ತ

c)

ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಹೊಂದಿಲ್ಲದ (ಶುದ್ಧ) ಆಕ್ಸಿಜನ್ ಇರುವ ರಕ್ತ

d)

ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಹೊಂದಿಲ್ಲದ (ಶುದ್ಧ) ಆಕ್ಸಿಜನ್ ಇಲ್ಲದ ರಕ್ತ

30.

ಮೂತ್ರ ಉತ್ಪಾದನೆಯ ಮುಖ್ಯ ಉದ್ದೇಶ...

a)

ಕಾರ್ಬೋಹೈಡ್ರೇಟ್ ಯಕ್ತ ತ್ಯಾಜ್ಯ ವಸ್ತುಗಳನ್ನು ವಿಸರ್ಜನೆಯ ಮೂಲಕ ದೇಹದಿಂದ ಹೊರಗೆ ಹಾಕುವ ಉದ್ದೇಶ

b)

ಲಿಪಿಡ್(ಕೊಬ್ಬು) ಯಕ್ತ ತ್ಯಾಜ್ಯ ವಸ್ತುಗಳನ್ನು ವಿಸರ್ಜನೆಯ ಮೂಲಕ ದೇಹದಿಂದ ಹೊರಗೆ ಹಾಕುವ ಉದ್ದೇಶ

c)

ಪ್ರೋಟಿನ್ ನ ಚಯಾಪಚಯ ಕ್ರಿಯೆಯಿಂದ ಉಂಟಾದ ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ವಿಸರ್ಜನೆಯ ಮೂಲಕ ದೇಹದಿಂದ ಹೊರಗೆ ಹಾಕುವ

d)

ಯಾವುದೂ ಅಲ್ಲ

31.

ಮಾನವನ ಮೂತ್ರಜನಕಾಂಗ (ವಿಸರ್ಜನಾಂಗ) ವು ಹೊಂದಿರುವ ಮೂತ್ರಪಿಂಡ(kidney) ಗಳ ಸಂಖ್ಯೆ........

a)

1

b)

2

c)

3

d)

4

32.

ಮೂತ್ರಪಿಂಡ (ಕಿಡ್ನಿ) ವೈಫಲ್ಯ ಆದವರು..... ಚಿಕಿತ್ಸೆಯನ್ನು ಪಡೆಯ ಬೇಕಾಗುತ್ತದೆ.

a)

ಡಯಾಲಿಸಿಸ್

b)

ಬಯೋಪ್ಸಿ

c)

ಸಿಟಿ ಸ್ಕ್ಯಾನ್

d)

ಯಾವುದೂ ಅಲ್ಲ

33.

ಸಸ್ಯಗಳಲ್ಲಿ ವಿಸರ್ಜನೆಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ

a)

ಕೆಲವು ತ್ಯಾಜ್ಯಗಳನ್ನು ಬೇರುಗಳಿಗೆ ಸಾಗಿಸಿ ಮಣ್ಣಿಗೆ ವಿಸರ್ಜನೆ ಮಾಡುತ್ತದೆ

b)

ಹಳೆಯದಾದ ಕ್ಸೈಲಂ ಗಳಲ್ಲಿ ಅಂಟು ಮತ್ತು ರಾಳಗಳ ರೂಪದಲ್ಲಿ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ವಿಸರ್ಜನೆ ಮಾಡುತ್ತದೆ

c)

ಮೃತ ಜೀವಕೋಶಗಳಲ್ಲಿ, ರಸದಾನಿಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಎಲೆಗಳನ್ನು ಉದುರಿಸುವ ಮೂಲಕ ವಿಸರ್ಜಿಸುತ್ತದೆ

d)

ಹೊಸ ಚಿಗುರುಗಳಿಗೆ ತ್ಯಾಜ್ಯಗಳನ್ನು ಸಾಗಿಸಿ ವಿಸರ್ಜನೆ ಮಾಡುತ್ತದೆ

34.

ಚಿತ್ರದಲ್ಲಿ K ಭಾಗದ ಹೆಸರು...

a)

ಪುಪ್ಪುಸಕ ಅಪಧಮನಿ

b)

ಮಹಾ ಅಪಧಮನಿ

c)

ಪುಪ್ಪುಸಕ ಅಭಿಧಮನಿ

d)

ಕೆಳಗಿನ ಅಭಿದಮನಿ(ನೀಚ) (ಅಧೋ)

35.

ಚಿತ್ರದಲ್ಲಿ C ಎಂಬುದು......

a)

ಎಡ ರೀನಲ್ ಅಪಧಮನಿ

b)

ಎಡ ರೀನಲ್ ಅಭಿಧಮನಿ

c)

ಬಲ ರೀನಲ್ ಅಭಿಧಮನಿ

d)

ಬಲ ರೀನಲ್ ಅಪಧಮನಿ

36.

ಚಿತ್ರದಲ್ಲಿ D ಎಂಬುದು.....

a)

ಬೌಮನ್ನನ ಕೋಶ

b)

ಗ್ಲಾಮೆರೂಲಸ್

c)

ಮೂತ್ರ ಸಂಗ್ರಾಹಕ ನಾಳ

d)

ನುಲಿಕೆ ನಾಳ