wayground logo

Free Printable Worksheets

NEW

Font size

S
M
L
XL
Worksheets

ಸರಕಾರಿ ಪ್ರೌಢಶಾಲೆ ಮುನವಳ್ಳಿ ತಾಲೂಕ್ ಸವದತ್ತಿ ಜಿಲ್ಲೆಬೆಳಗಾವಿ ರಸಪ್ರ

Total questions: 25

Worksheet time: 25mins

Name
Class
Date
1.

ಜನಪದ ಸಾಹಿತ್ಯ ಯಾವ ಸಾಹಿತ್ಯಕ್ಕೆ ಮೂಲ ಪ್ರೇರಣೆ.

a)

ಗದ್ಯ ಸಾಹಿತ್ಯ

b)

ಶಿಷ್ಟ ಸಾಹಿತ್ಯ

c)

ಪದ್ಯ ಸಾಹಿತ್ಯ

d)

ಕಥಾಸಾಹಿತ್ಯ

2.

ಜನಪದ ಸಾಹಿತ್ಯ ರಚನೆಯಾದದ್ದು ಇವರಿಂದ.

a)

ಅಕ್ಷರಸ್ಥರಿಂದ

b)

ಕವಿಗಳಿಂದ

c)

ಲೇಖಕರಿಂದ

d)

ಅನಕ್ಷರಸ್ಥರಿಂದ

3.

ಮತ್ತೆ ಹೊತ್ತು ಬಂದಿರುವುದು ಯಾರಿಗೆಂದು ಲಾವಣಿಯಲ್ಲಿ ಹೇಳಲಾಗಿದೆ

a)

ಕತ್ತಿ ಹಿಡಿಯುವ ಜನರಿಗೆ

b)

ಜನಪದ ಕಾರರಿಗೆ

c)

ಊರಿನ ಜನರಿಗೆ

d)

ಬ್ರಿಟಿಷರಿಗೆ

4.

ವಿಲಾತಿಯಿಂದ ಹುಕುಮ ಕಳಿಸಿದ ಸರಕಾರ ಯಾವುದು?

a)

ದೇಸಿ ಸರಕಾರ

b)

ಕುಂಪಣಿ ಸರಕಾರ

c)

ರಾಜ್ಯ ಸರಕಾರ

d)

ಭಾರತ ಸರಕಾರ

5.

ಹಲಗಲಿ ಬೇಡರಿಂದ ಆಯುಧಗಳನ್ನು ಹೇಗೆ ಪಡೆಯಲು ಆದೇಶಿಸಲಾಯಿತು.

a)

ಕಾನೂನಿನ ಮೂಲಕ ಕಸಿದುಕೊಳ್ಳುವುದು

b)

ಜೋರ ಮಾಡಿ ಕಸಿದುಕೊಳ್ಳುವುದು

c)

ಒಪ್ಪಿಗೆ ಮೂಲಕ ಕಸಿದುಕೊಳ್ಳುವುದು

d)

ತಿಳುವಳಿಕೆಯ ಮೂಲಕ ಕಸಿದುಕೊಳ್ಳುವುದು

6.

'ಹತಾರ' ಪದದ ಸಮಾನಾರ್ಥಕ ಪದ

a)

ಬರಹ

b)

ಹೋರಾಟ

c)

ಕದನ

d)

ಆಯುಧ

7.

'ಜತ್ತ'ಪದದ ಗ್ರಾಂಥಿಕ ರೂಪ

a)

ಜೊತೆ

b)

ಜಾತಿ

c)

ಜನುಮ

d)

ಜನ

8.

ಬ್ರಿಟಿಷರಿಗೆ ಹತಾರ ಕೊಟ್ಟರೆ ಏನಾಗುವುದೆಂದು ಹಲಗಲಿಯ ಬೇಡರ ಅಭಿಪ್ರಾಯವಾಗಿತು.

a)

ಜೀವ ಬರುವುದು

b)

ಜೀವ ಸತ್ತು ಹೋಗುವುದು

c)

ಕೀರ್ತಿ ಬರುವುದು

d)

ಮೋಸ ವಾಗುವುದು

9.

'ನಮ್ಮದ್ಯಾವತ್ತ' ಪದದ ಗ್ರಂಥಸ್ಥ ರೂಪ

a)

ನಮಗಾಗಿ

b)

ನಮ್ಮಲ್ಲಿಯೇ

c)

ನಮ್ಮದೇ ಇವತ್ತು

d)

ನಮ್ಮದು ಯಾವಾಗಲು

10.

ಒಳಗಿಂದೊಳಗ............. ಕೊಟ್ಟರೊ ಬ್ಯಾಡರೆಲ್ಲ ಕಲ್ತ.(ಬಿಟ್ಟು ಹೋದ ಪದ ಯಾವುದು)

a)

ವಿಶ್ವಾಸ

b)

ನಂಬಿಕೆ

c)

ವಚನ

d)

ವಂಚನೆ

11.

ಬ್ರಿಟಿಷ್ ಸಾಹೇಬನಿಗೆ ತಲುಪಿದ ದುಃಖದ ಸುದ್ದಿ ಯಾವುದು.

a)

ಕಾರಕೂನನನ್ನು ಬಡಿದು ಸಿಪಾಯಿಯನ್ನು ಕೆಡವಿದ್ದು.

b)

ಹಲಗಲಿಗೆ ದಂಡು ಬಂದಿತ್ತು.

c)

ಹಲಗಲಿ ಬೇಡರು ವಚನ ಕೊಟ್ಟಿದ್ದು.

d)

ಕಾರಕೂನನ ನೆಲಕ್ಕೆ ಬಿದ್ದಿದ್ದು.

12.

'ಕಲ್ತ'ಮತ್ತು 'ಮ್ಯಾಗ' ಪದಗಳ ಗ್ರಂಥಸ್ಥ ರೂಪ.

a)

ಕಲಿ ಮತ್ತು ಮೇಲೆ

b)

ಮೇಲೆ ಮತ್ತು ಕೆಳಗೆ

c)

ಕಲೆತು ಮತ್ತು ಮೇಲೆ

d)

ಕರೆದು ಮತ್ತು ಮೇಲೆ

13.

ಒಳಗಿನ ಮಂದಿ ಗುಂಡು ಹೊಡಿದರೊ ಮುಂಗಾರಿ ಸಿಡಿಲ ಸಿಡಿದಾಂಗ ಈ ವಾಕ್ಯವು

a)

ರೂಪಕಾಲಂಕಾರ

b)

ಉಪಮಾಲಂಕಾರ

c)

ಉತ್ಪ್ರೇಕ್ಷೆ ಅಲಂಕಾರ

d)

ದೃಷ್ಟಾಂತ ಅಲಂಕಾರ

14.

'ಸಿಡಿದಾಂಗ' ಪದದ ಗ್ರಂಥಸ್ಥ ರೂಪ

a)

ಹಿಡಿದಿರುವುದು

b)

ಹಿಡಿಯುತ್ತದೆ

c)

ಸಿಡಿದಿದೆ

d)

ಸಿಡಿದ ಹಾಗೆ

15.

ಕಳುವ್ಯಾರೆ ಪದದ ಗ್ರಾಂಥಿಕ ರೂಪ

a)

ಕಳುಹಿಸಿದರು

b)

ಕೇಳಿದರು

c)

ಕಳೆದರು

d)

ಕಳೆದಾರು

16.

ಜಲದ ಮಾಡಿ ಹಲಗಲಿಗೆ ಬಂದ ದಂಡು ಯಾವುದು?

a)

ಹಲಗಲಿಯ ವೀರರ ದಂಡು

b)

ಬ್ರಿಟಿಷರ ಸೈನ್ಯದ ದಂಡು

c)

ಕಾರಕೂನರ ದಂಡು

d)

ಸಿಪಾಯಿ ದಂಡು

17.

'ಬೆನ್ನು- ಬೆನ್ನು' ಮತ್ತು 'ತಿರುವಿ-ತಿರುವಿ' ಈ ಪದಗಳು ಯಾವ ವ್ಯಾಕರಣಂಶಕ್ಕೆ ಉದಾಹರಣೆಯಾಗಿವೆ.

a)

ಅನುಕರಣಾವ್ಯಯ

b)

ದ್ವಿರುಕ್ತಿ

c)

ಜೋಡುನುಡಿ

d)

ನುಡಿಗಟ್ಟು

18.

ಹಲಗಲಿಯ ಬೇಡರಿಗೆ ಗುಂಡು ಹೊಡೆದಿರುವುದು ಹೇಗೆ ಎಂಬುವುದು ಲಾವಣಿಕಾರನ ವ್ಯಥೆಯಾಗಿದೆ.

a)

ಕರುಣೆಯಿಲ್ಲದೆ ಗುಂಡು ಹೊಡೆದಿರುವುದು

b)

ಕರುಣೆಯಿಂದ ಗುಂಡು ಹೊಡೆದಿರುವುದು

c)

ಬೇಡರಿಗೆ ಗುಂಡು ನೀಡಿರುವುದು

d)

ವೀರಯೋಧರನ್ನು ಕಟ್ಟಿಹಾಕಿರುವುದು

19.

ಚಟೆಕಾರರು ಚೌಕಿ ಮಾಡುತ್ತಾ ನಡೆದದ್ದು ಎಲ್ಲಿಗೆ.

a)

ಗುಡ್ಡದ ಕಡೆಗೆ

b)

ಹಲಗಲಿಯ ಊರಿನೆಡೆಗೆ

c)

ನದಿಯ ಕಡೆಗೆ

d)

ಬೆಟ್ಟದ ಕಡೆಗೆ

20.

ಸತ್ತ ಹೋಗಬೇಡಿ ಎಂದು ಬುದ್ಧಿಮಾತು ಹೇಳಿದವರಾರು?

a)

ಹಲಗಲಿಯ ವೀರರು

b)

ಬ್ರಿಟಿಷ್ ಸೈನ್ಯ

c)

ಹಲಗಲಿಯ ಜನ

d)

ಹೆಬಲಕ ಸಾಹೇಬ

21.

ಬ್ರಿಟಿಷರ ಮೇಲೆ ನಂಬಿಗಿಲ್ಲ ಎಂದು ಹೇಳಿದ ವೀರನು ಯಾರು?

a)

ಜಡಗ

b)

ರಾಮ

c)

ಹನುಮ

d)

ಭೀಮ

22.

ಬ್ರಿಟಿಷರು ಯಾವ ರೀತಿ ನಮ್ಮ ದೇಶ ಗೆದಿಯುತ್ತಾರೆ ಎಂಬುವುದು ಹಲಗಲಿ ವೀರರ ಅಭಿಪ್ರಾಯವಾಗಿತ್ತು.

a)

ಯುದ್ಧ ಮಾಡಿ

b)

ವ್ಯಾಪಾರ ಮಾಡಿ

c)

ಮೋಸ ಮಾಡಿ

d)

ನ್ಯಾಯ ಮಾಡಿ

23.

ಹನುಮ ಹೇಳತಾನ...........ಹೊಡೆದು ಕೆಲವು ನಷ್ಟ ಬಾರ.(ಇಲ್ಲಿ ಬಿಟ್ಟುಹೋದ ಪದ ಯಾವುದು)

a)

ಯುದ್ಧ

b)

ಪದ

c)

ಗುಂಡು

d)

ಸಿಡಿಲು

24.

'ಬಾಲನು'ಮಾಡಿದ ಕಸರತ್ತು ಯಾವುದು.

a)

ಗುಂಡು ಹೊಡೆದಿದ್ದು

b)

ಸಿಪಾಯಿಯನ್ನು ಕೊಂದದ್ದು

c)

ಸೈನ್ಯವನ್ನು ತಡೆದದ್ದು

d)

ಹತ್ತಿಪ್ಪತ್ತು ಕುದುರೆಗಳನು ಕಡಿದದ್ದು

25.

ಹಲಗಲಿಯ ಬಂಟರ ಶೌರ್ಯ ಯುದ್ಧದಲ್ಲಿ ಹೇಗೆ ಕೊನೆಗೊಂಡಿತು.

a)

ಬ್ರಿಟಿಷರನ್ನು ಕಡಿದು ಕೊಂದರು

b)

ನಾಲ್ಕು ಜನ ಬಂಟರು ಯುದ್ಧದಲ್ಲಿ ಹೋರಾಡಿ ಸತ್ತರು

c)

ಯುದ್ಧದಲ್ಲಿ ಜಯ ಸಾಧಿಸಿದರು

d)

ಯುದ್ಧದಲ್ಲಿ ಓಡಿಹೋದ