wayground logo

Free Printable Worksheets

NEW

Font size

S
M
L
XL
Worksheets

ಮಾದರಿ ಪೂರ್ವಸಿದ್ಧತಾ ಪರೀಕ್ಷೆ - 01

Total questions: 40

Worksheet time: 20mins

Name
Class
Date
1.

ಹಂಬಲ ಪದದ ಅರ್ಥ.

a)

ತೀವ್ರ ನಿರಾಶೆ

b)

ತೀವ್ರ ಆಸೆ

c)

ಆಶಾಭಂಗ

d)

ನಿರಾಶೆ

2.

ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ವ್ಯಂಜನಗಳ ಸಂಖ್ಯೆ?

a)

34

b)

13

c)

25

d)

09

3.

ಪ್ರಬಂಧ ರಚನೆಯು ಬರವಣಿಗೆ ಈ ವಿಭಾಗದಲ್ಲಿ ಸಾಗಬೇಕು?

a)

ಪೀಠಿಕೆ

b)

ವಿಷಯ ನಿರೂಪಣೆ

c)

ಉಪಸಂಹಾರ

d)

ಎಲ್ಲವೂ

4.

ʼ ಚೀರ ʼ ಪದದ ತದ್ಭವ ರೂಪ.

a)

ಚೀರು

b)

ಸೀರೆ

c)

ಬಟ್ಟೆ

d)

ಸೇರು

5.

ʼಮರವನ್ನುʼ ಪದ ಈ ಸಂಧಿಗೆ ಉದಾಹರಣೆ.

a)

ಆದೇಶ

b)

ಲೋಪ

c)

ಆಗಮ

d)

ಅನುನಾಸಿಕ

6.

ಮೊಟ್ಟಮೊದಲು : ದ್ವಿರುಕ್ತಿ : : ಸತಿಪತಿ : ___________

a)

ಜೋಡುನುಡಿ

b)

ಅವ್ಯಯ

c)

ಸಂಧಿಪದ

d)

ದ್ವಿರುಕ್ತಿ

7.

ಕ್ರಿಯಾಪದದ ಮೂಲ ರೂಪ.

a)

ಪ್ರಕೃತಿ

b)

ವಿಭಕ್ತಿ ಪ್ರತ್ಯಯ

c)

ಧಾತು

d)

ಅಖ್ಯಾತ ಪ್ರತ್ಯಯ

8.

ʼಓದಲಿʼ ಇದು ಯಾವ ಕ್ರಿಯಾರೂಪಕ್ಕೆ ಉದಾಹರಣೆ.

a)

ವಿಧ್ಯರ್ಥಕ

b)

ಸಂಭವನಾರ್ಥಕ

c)

ನಾನಾರ್ಥಕ

d)

ನಿಷೇಧಾರ್ಥಕ

9.

ಸಾಮಾನ್ಯವಾಗಿ ವ್ಯವಹಾರಿಕ ಪತ್ರಗಳಲ್ಲಿ ಬಳಸುವ ಸಂಭೋದನಾ ಪದ?

a)

ಧನ್ಯವಾದಗಳು

b)

ಇತಿ ತಮ್ಮ ವಿಶ್ವಾಸಿ

c)

ಮಾನ್ಯರೇ

d)

ತೀರ್ಥರೂಪನವರಿಗೆ

10.

ಆಳಾಗಬಲ್ಲವನು; ________________. ಈ ಗಾದೆ ಪೂರ್ಣಗೊಳಿಸಿ.

a)

ಹಣವಂತನಾಗಬಲ್ಲನು

b)

ಸಿರಿವಂತನಾಗಬಲ್ಲನು

c)

ಎಲ್ಲವೂ

d)

ಅರಸಾಗಬಲ್ಲನು

11.

ಸಾರಾ ಅಬೂಬಕ್ಕರ್‌ ಅವರ ಕಾಲ.

a)

1926

b)

1936

c)

1905

d)

1947

12.

ಸಾರಾ ಅಬೂಬಕ್ಕರ್‌ ಅವರಿಗೆ ದೊರೆತ ಪ್ರಶಸ್ತಿ.

a)

ಪಂಪ ಪ್ರಶಸ್ತಿ

b)

ನೃಪತುಂಗ ಪ್ರಶಸ್ತಿ

c)

ಜ್ಞಾನಪೀಠ ಪ್ರಶಸ್ತಿ

d)

ಭಾರತರತ್ನ ಪ್ರಶಸ್ತಿ

13.

ರಾಹಿಲನು ಯಾರು?

a)

ಪೈಲಟ್

b)

ಡಾಕ್ಟರ್

c)

ಸೈನಿಕ

d)

ಲೇಖಕ

14.

ರಾಹಿಲನು ಮುದುಕಿಯ ಎದುರು ನುಡಿದ ಗಂಭೀರವಾದ ಮಾತು ಯಾವುದು?

a)

ದಯವಿಟ್ಟು ಬಾಗಿಲು ತೆಗೆಯಿರಿ

b)

ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವದೇ ಯುದ್ಧದ ಪರಿ ತಾನೆ?

c)

ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ; ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು.

d)

ಅಮ್ಮಾ ನಾನೊಬ್ಬ ಡಾಕ್ಟರ್‌ ನಾನಾಕೆಯನ್ನು ಪರೀಕ್ಷಿಸಲೇ?

15.

ಮಹಿಳೆಯ ಆರ್ತನಾದ ಕೇಳಿದ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆಗಳಾವವು ?

a)

ಆ ಮಹಿಳೆ ಯಾವ ರೀತಿಯ ಅಪಾಯದಲ್ಲಿ ಸಿಲುಕಿದ್ದಾಳೆ?

b)

ಕದವನ್ನು ತಟ್ಟಿದರೆ ಪರಿಣಾಮವೇನಾಗಬಹುದು?

c)

ಆ ಮನೆಯೊಳಗೆ ಏನು ಸಂಭವಿಸುತ್ತಿದೆ?

d)

ಎಲ್ಲವೂ

16.

ನಿರ್ಜೀವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದ್ದೇನು?

a)

ಇಷ್ಟು ವರ್ಷಗಳಿಂದಲೂ ಹಂಬಲಿಸಿ ಹುಟ್ಟಿದ ಮಗು ಕೊನೆಗೂ ದಕ್ಕಲಿಲ್ಲವಲ್ಲ?

b)

ಈ ಯುದ್ಧವಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳುತ್ತಿದ್ದೆವಲ್ಲ ದೇವರೇ?

c)

ಈ ಮನುಷ್ಯರಿಗೆ ಎಂತಹ ಬುದ್ಧಿ

ಕೊಡುತ್ತೀಯಾ?

d)

ಮೇಲಿನ ಎಲ್ಲವೂ

17.

ರಾಹೀಲನು ಮುದುಕಿಯ ಕುಟುಂಬಕ್ಕೆ ಮಾಡಿದ ಸಹಾಯವೇನು?

a)

ಮುದುಕಿಯ ಸೊಸೆಯ ಜೀವ ಉಳಿಸಿ

b)

ಮುದುಕಿಯನ್ನು ಸೈನಿಕರಿಂದ ರಕ್ಷಿಸಿ

c)

ಶತ್ರು ಸೈನಿಕರನ್ನು ಕೊಂದು

d)

ಮೊಮ್ಮಗುವಿನ ಜೀವ ಉಳಿಸದೆ

18.

“ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ; ಅದನ್ನೂ ನೋಡಿ!” ಈ ಮಾತನ್ನು ಇವರು ಇವರಿಗೆ ಹೇಳಿದರು?

a)

ಮುದುಕಿ ರಾಹಿಲನಿಗೆ

b)

ಮುದುಕಿ ತನ್ನ ಸೊಸೆಗೆ

c)

ಮುದುಕಿ ಸೈನಿಕರಿಗೆ

d)

ಮುದುಕಿ ತನ್ನ ಮಗನಿಗೆ

19.

"ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ" ಈ ಮಾತಿನ ಸಂದರ್ಭ.

a)

ರಾಹಿಲನು ಬಾಗಿಲು ಬಡಿದಾಗ

b)

ಮುದುಕಿ ಬಾಗಿಲು ತೆಗೆದಾಗ

c)

ಸೈನಿಕರು ಮುದುಕಿಯ ಮನೆಗೆ ಬಂದಾಗ

d)

ಸೈನಿಕರು ಮನೆ ಪರೀಕ್ಷಿಸುವಾಗ

20.

ಯುದ್ಧದಿಂದಾಗುವ ಅನಾಹುತಗಳಾವವು?

a)

ಎಲ್ಲರ ದೇಹಕ್ಕೂ ಮನಸ್ಸಿಗೂ ಗಾಯ ಮಾಡುತ್ತದೆ

b)

ಸೈನಿಕರಿಗೂ ಸೈನಿಕರ ಕುಟುಂಬಕ್ಕೂ ನೋವುಂಟು ಮಾಡುತ್ತದೆ

c)

ಯುದ್ಧದಿಂದ ದೇಶದ ಆರ್ಥಿಕ ಬೆಳವಣಿಗೆ ಕುಂಠಿತವಾಗುವದು.

d)

ಮೇಲಿನ ಎಲ್ಲವೂ

21.

ಪು.ತಿ.ನ. ಅವರ ಪೂರ್ಣ ಹೆಸರು?

a)

ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಮೂರ್ತಿ

b)

ಪುರೋಹಿತ ತಿರುನಾರಾಯಣಯ್ಯಂಗಾರ ನರಸಿಂಹಾಚಾರ್ಯ

c)

ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್

d)

ಪುರೋಹಿತ ತಿರುನಾರಾಯಣ ನರಸಿಂಹಚಾರ್ಯ

22.

ಪು.ತಿ.ನ. ಅವರಿಗೆ ಪಂಪ ಪ್ರಶಸ್ತಿ ಕೃತಿ ತಂದು ಕೊಟ್ಟ ಕೃತಿ.

a)

ಹಣತೆ

b)

ಶ್ರೀಹರಿಚರಿತೆ

c)

ಶಬರಿ

d)

ಹಂಸದಮಯಂತಿ

23.

ರಾಮನಿಗೆ ಅರ್ಪಿಸಲು ಶಬರಿ ಇವುಗಳನ್ನು ಸಂಗ್ರಹಿಸಿದ್ದಳು.

a)

ಹೂ, ಹಣ್ಣುಹಂಪಲು, ಮಧುಪರ್ಕ

b)

ಹೂ, ಹಾಲುಮೊಸರು, ಮಧುಪರ್ಕ

c)

ಹೂ, ಮಧುಪರ್ಕ, ಜೇನು

d)

ಹೂ, ಜೇನು, ಹಾಲುತುಪ್ಪ

24.

ರಾಮನು ಗಿರಿವನ ಗಳನ್ನು ಕುರಿತು “ಗಿರಿವನಗಳಲ್ಲಿ ಏನೆಂದು ಪ್ರಾರ್ಥಿಸಿದನು.

a)

ಪ್ರೀತಿಯ ರಾಣಿ ಸೀತೆಯು ನನಗೆ ದೊರೆಯುವಳೇ?

b)

ಅವಳು ಇರುವ ಸ್ಥಳವನ್ನು ನೀವು ತಿಳಿದಿರುವಿರೇ?

c)

ನನ್ನ ಹೃದಯದ ಈ ದುಃಖವು ನಾಶವಾಗುತ್ತಿಲ್ಲವಲ್ಲ

d)

ಈ ಎಲ್ಲವೂ

25.

“ತಾಳಿಕೋ ಅಣ್ಣ ತಾಳಿಕೋ, ಸೂರ್ಯನೇ

ತೇಜಗೆಡಲು ಕಾಂತಿಯನ್ನು ನೀಡುವವರು ಯಾರು? ರಾಮನೇ ಧೈರ್ಯಗೆಡಲು ಲೋಕಕ್ಕೆ ಸ್ಥೈರ್ಯ ನೀಡುವವರು

ಯಾರು?” ಎಂದು ಹೇಳಿ ‌ ಲಕ್ಷ್ಮಣನು ರಾಮನನ್ನು ಏಕೆ ಸಂತೈಸಿದನು.

a)

ಅಣ್ಣನಾದ ರಾಮನು ಶಬರಿಯ ದರುಶನಕ್ಕಾಗಿ ಪರಿತಪಿಸುವದನ್ನು ಕಂಡು

b)

ಅಣ್ಣನಾದ ರಾಮನು ರಾಜಪದವಿಗಾಗಿ ಪರಿತಪಿಸುವದನ್ನು ಕಂಡು

c)

ಅಣ್ಣನಾದ ರಾಮನು ಸೀತೆಗಾಗಿ ಪರಿತಪಿಸುವದನ್ನು ಕಂಡು

d)

ಅಣ್ಣನಾದ ರಾಮನು ತಂದೆಯ ಸಾವಿಗಾಗಿ ಪರಿತಪಿಸುವದನ್ನು ಕಂಡು

26.

ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು?

a)

ಮತಂಗ ಮಹರ್ಷಿ

b)

ದನು

c)

ವಾಲಿ

d)

ಸೀತೆ

27.

6. ಶಬರಿಯು ರಾಮನನ್ನು ಹೀಗೆ ವರ್ಣಿಸಿದ್ದಾಳೆ?

ಇವನ ಸಾಮಾನ್ಯವಾಗಿ ಕಾಣುವ ಇವನನ್ನು ಗುರುಸಿದ್ದರು ಮೆಚ್ಚಿದ್ದಾರೆ.

a)

ರಾಮನು ಸಾಧುಜನರ ಸ್ನೆಹಿತನಾಗಿದ್ದಾನೆ.

b)

ಧೀರ, ಶೂರ, ಗಂಭೀರ ಸ್ವಭಾವವನ್ನು ಕಂಡು ಹೆದರಿಸುವ ರಾಕ್ಷಸರು ಕೂಡಾ ಹೆದರುತ್ತಾರೆ.

c)

ಕ್ಷತ್ರಿಯನಾಗಿ ಬಿಲ್ಲು ಹಿಡಿದಿದ್ದರೂ, ರಾಜನಾಗಿದ್ದರೂ ಮಗುವಿನಂತೆ ಸೌಮ್ಯ ಸ್ವಭಾವದವನು.

d)

ಈ ಎಲ್ಲವೂ

28.

ಶಬರಿಯು ರಾಮನನ್ನು ಉಪಚರಿಸಿದ ನಂತರ ಅವಳ ಮನದಲ್ಲಿ ಮೂಡಿ ಬಂದ ಸಂತಸದ ಮಾತುಗಳಾವವು?

a)

ದಶರಥನ ಮಗನಾದರಾಮನು ಸಾಧುಜನರ ಸ್ನೆಹಿತನಾಗಿದ್ದಾನೆ. ಇವನ ಧೀರ, ಶೂರ, ಗಂಭೀರ ಸ್ವಭಾವವನ್ನು ಕಂಡು ಹೆದರಿಸುವ ರಾಕ್ಷಸರುಕೂಡಾ ಹೆದರುತ್ತಾರೆ. ಕ್ಷತ್ರಿಯನಾಗಿ ಬಿಲ್ಲು ಹಿಡಿದಿದ್ದರು ಮಗುವಿನಂತೆ ಸೌಮ್ಯ ಸ್ವಭಾವದವನು. ರಾಜನಾಗಿದ್ದರೂ ಸಾಮಾನ್ಯವಾಗಿ ಕಾಣುವ ಇವನನ್ನು ಗುರುಸಿದ್ದರು ಮೆಚ್ಚಿದ್ದಾರೆ.

b)

ನಾನು ಇನ್ನು ಸುಖವಾಗಿದ್ದೇನೆ. ಹೇಗೆಂದರೆ ಹೊಳೆಯು ಕಡಲಿಗೆ ಸೇರುವಂತೆ, ದೋಣಿಯುದಡಕ್ಕೆ ಬರುವಂತೆ ನನಗೆ ತುಂಬಾ ಸಂತೋಷವಾಗಿದೆ. ಈ ದಿನವು ನನ್ನಜೀವನದ ಪವಿತ್ರವಾದ ದಿನವಾಗಿದೆ. ಈ ಸಂತೋಷವೇ ಶಾಶ್ವತವಾಗಿದ್ದು ಮನಸ್ಸು ಹಗುರವಾಗಿದೆ ಎಂದು ತನ್ನ ಮನಸ್ಸಿನಲ್ಲಿ ಮೂಡಿ ಬಂದ ಸಂತಸದ ಮಾತುಗಳಾಗಿವೆ.

c)

ಶಬರಿಯು ರಾಮಲಕ್ಷ್ಮಣರನ್ನು ಕಂಡು ಬೆರಗಾಗಿ, ಹತ್ತಿರಕ್ಕೆ ಬಂದು, ಮೈಯನ್ನು ಮುಟ್ಟಿ, ಕಾಲಿಗೆ ಬಿದ್ದು ನಮಸ್ಕರಿಸಿ,

ಕೈಕಣ್ಣಿಗೊತ್ತಿಕೊಂಡಳು. ಬಗೆಬಗೆಯ ಸುವಾಸನೆಯುಳ್ಳ ಹೂಮಾಲೆಯನ್ನು ಕೊರಳಿಗೆ ಹಾಕಿ ಸಂತಸಪಟ್ಟಳು. “ಜಗದಲ್ಲಿಇಷ್ಟು ರುಚಿಯಾದ ಹಣ್ಣೇ ಇಲ್ಲ. ನಿಮಗೆಂದೆ ತಂದೆನು” ಎಂದು ಹೇಳುತ ಸವಿಯಾದ ಹಣ್ಣುಗಳನ್ನು ನೀಡಿ ಉಪಚರಿಸಿದಳು.

d)

ರಾಮನ ಸ್ವಾಗತಕ್ಕಾಗಿ ಶಬರಿಯು ಸವಿಯಾದ ಬಗೆಬಗೆಯ ಹಣ್ಣುಗಳನ್ನು, ಜೇನುತುಪ್ಪ ಅಧಿಕವಾಗಿರುವ ಮಧುಪರ್ಕವೆಂಬ

ಪಾನೀಯವನ್ನು, ಸುವಾಸನೆಯಿಂದ ಕೂಡಿದ ಬಾಡದ ಹೂವುಗಳನ್ನು ಸಂಗ್ರಹಿಸಿ ಸಿದ್ಧಮಾಡಿಕೊಂಡಿದ್ದಳು.

29.

“ಆವುದೀ ಮರುಳು? ನಮ್ಮೆಡೆಗೆ ಬರುತಿಹುದು.” ಈ ಮಾತಿನ ಸ್ವಾರಸ್ಯವೇನು?

a)

ಶ್ರೀರಾಮನ ಬರುವಿಕೆಗಾಗಿ ಕಾದು, ಕಾತರಿಸಿ,ಮರುಳಳಂತೆ ಆಗಿದ್ದ ವೃದ್ಧೆ ಶಬರಿಯನ್ನು ಕಂಡು ರಾಮಲಕ್ಷ್ಮಣರು ಸಂತಸಗೊಂಡದ್ದನ್ನು ಈ ಮಾತಿನಲ್ಲಿ ಸ್ವಾರಸ್ಯ ಪೂರ್ಣವಾಗಿ ವರ್ಣಿಸಲಾಗಿದೆ.

b)

ರಾಮಲಕ್ಷ್ಣರನ್ನು ಉಪಚರಿಸಿದ ಶಬರಿ ಸಂತಸ ಪಡುವದನ್ನು ಇಲ್ಲಿ ಸ್ವಾರಸ್ಯವಾಗಿ ವರ್ಣಿಸಿದ್ದಾರೆ.

c)

ಶ್ರೀರಾಮನ ಬರುವಿಕೆಗಾಗಿ ಕಾದು, ಕಾತರಿಸಿ,ಮರುಳಳಂತೆ ಆಗಿದ್ದ ವೃದ್ಧೆ ಶಬರಿಯನ್ನು ಕಂಡು ರಾಮಲಕ್ಷ್ಮಣರು ಭಯಗೊಂಡದ್ದನ್ನು ಈ ಮಾತಿನಲ್ಲಿ ಸ್ವಾರಸ್ಯ ಪೂರ್ಣವಾಗಿ ವರ್ಣಿಸಲಾಗಿದೆ.

d)

ರಾಮಲಕ್ಷ್ಮಣರು ಶಬರಿಯ ಉಪಚಾರದಿಂದ ಸಂತುಷ್ಟರಾದದನ್ನು ಇಲ್ಲಿ ಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ

30.

"ರೂಪಿನಂತೆ ಮಾತು ಕೂಡ ಎನಿತು ಉದಾರವಾಗಿದೆ" ಈ ಮಾತು ಯಾರು ಯಾರಿಗೆ ಹೇಳಿದರು?

a)

ಶಬರಿ ರಾಮನಿಗೆ

b)

ಲಕ್ಷ್ಮಣ ರಾಮನಿಗೆ

c)

ಶಬರಿಗೆ ರಾಮ

d)

ಶಬರಿಗೆ ಲಕ್ಷ್ಮಣ

31.

ಇದು ಜಿ.ಎಸ್.‌ ಶಿವರುದ್ರಪ್ಪನವರ ಕೃತಿಯಲ್ಲ.

a)

ಸಾಮಗಾನ

b)

ಎದೆತುಂಬಿ ಹಾಡಿದೆನು

c)

ಪಯಣ

d)

ಚಲುವು ಒಲವು

32.

ಶಿವರುದ್ರಪ್ಪನವರು ಜನಿಸಿದ ಸ್ಥಳ?

a)

ಶಿವಮೊಗ್ಗ ಜಿಲ್ಲೆಯ ಮೇಲುಕೋಟೆ

b)

ಮಂಡ್ಯ ಜಿಲ್ಲೆಯ ಶಿಕಾರಿಪುರ

c)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

d)

ಮಂಡ್ಯ ಜಿಲ್ಲೆಯ ಮೇಲುಕೋಟೆ

33.

ಮನುಷ್ಯರು ಈ ಎಚ್ಚರದೊಳು ಬದುಕಬೇಕಾಗಿದೆ?

a)

ಭಯ - ಸಂಶಯದೊಳು

b)

ಬಿರುಗಾಳಿಗೆ ಹಯ್ದಾಡುವ

c)

ವಸಂತವಾಗುವ

d)

ಮತಗಳು ಪಥಗಳೆಂದು

34.

ನಮ್ಮ ಸುತ್ತಲು ಏನು ಕವಿದಿರುವದು?

a)

ಸುಜ್ಞಾನದ ಕತ್ತಲೆ

b)

ಅಜ್ಞಾನದ ಕತ್ತಲೆ

c)

ಕಪ್ಪಾದ ಕತ್ತಲೆ

d)

ಪ್ರೀತಿಯ ಕತ್ತಲೆ

35.

ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕಿದೆ?

a)

ನಮ್ಮ ಬದುಕಿನ ಸುತ್ತಮುತ್ತಲು ಕವಿದಿರುವ ಕತ್ತಲೆಯನ್ನು ಕಳೆಯಲು ಪ್ರೀತಿಯೆಂಬ ಹಣತೆಯನ್ನು ಹಚ್ಚಬೇಕು.

b)

ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚ್ಚರದಲ್ಲಿ ಮುನ್ನಡೆಸಬೇಕು.

c)

ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಜ್ಞಾನದೀವಿಗೆಯ ಮೂಲಕ ಎಚ್ಚರಿಕೆಯಿಂದ

ಮುನ್ನಡೆಸಬೇಕಿದೆ.

d)

ಮುಂಗಾರಿನ ಮಳೆಯಲ್ಲಿ ನಿಧಾನವಾಗಿ ಮುನ್ನಡೆಸಬೇಕು.

36.

ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕಿದೆ?

a)

ಭಾಷೆ, ಜಾತಿ, ಮತಧರ್ಮಗಳ ಭೇದಭಾವ ಅಳಿಸಿ ಹೊಸ ಭರವಸೆ ಮೂಡಿಸಿ ಸೇತುವೆಯಾಗಬೇಕು

b)

ಬದುಕಿನಲ್ಲಿ ಹೊಸ ಭರವಸೆಗಳನ್ನು ಮೂಡಿಸಿ ಮನುಜ ಮನುಜರ ನಡುವೆ ಸೇತುವೆಯಾಗಬೇಕಿದೆ.

c)

ಸ್ನೇಹ, ಪ್ರೀತಿ, ನಂಬಿಕೆಯ ಮೂಲಕ ಮನುಜರ ನಡುವಿನ ಈ ಅಡ್ಡಗೋಡೆಗಳನ್ನು ಕೆಡವಬೇಕು.

d)

ಈ ಎಲ್ಲವೂ

37.

“ಪ್ರೀತಿಯ ಹಣತೆಯ ಹಚ್ಚೋಣ” ಈ ಸಂದರ್ಭದ ಆಯ್ಕೆಯಾವುದು?

a)

ವಾಕ್ಯವನ್ನು ಕವಿ ಶ್ರೀ ಪು.ತಿ.ನರಸಿಂಹಚಾರ್ ಅವರು ರಚಿಸಿರುವ ‘ಎದೆತುಂಬಿ ಹಾಡಿದೆನು’ ಕವನ ಸಂಕಲನದಿಂದ ಆಯ್ದ ‘ಸಂಕಲ್ಪಗೀತೆ’ ಎಂಬ ಕವಿತೆಯಿಂದ ಆರಿಸಲಾಗಿದೆ.

b)

ವಾಕ್ಯವನ್ನು ಕವಿ ಶ್ರೀ ಜಿ. ಎಸ್. ಶಿವರುದ್ರಪ್ಪ ಅವರು ರಚಿಸಿರುವ ‘ಎದೆತುಂಬಿ ಹಾಡಿದೆನು’ ಕವನ ಸಂಕಲನದಿಂದ ಆಯ್ದ ‘ಸಂಕಲ್ಪಗೀತೆ’ ಎಂಬ ಕವಿತೆಯಿಂದ ಆರಿಸಲಾಗಿದೆ.

c)

ವಾಕ್ಯವನ್ನು ಕವಿ ಶ್ರೀ ಜಿ. ಎಸ್. ಶಿವರುದ್ರಪ್ಪ ಅವರು ರಚಿಸಿರುವ ‘ಸಾಮಗಾನ’ ಕವನ ಸಂಕಲನದಿಂದ ಆಯ್ದ ‘ಸಂಕಲ್ಪಗೀತೆ’ ಎಂಬ ಕವಿತೆಯಿಂದ ಆರಿಸಲಾಗಿದೆ.

d)

ವಾಕ್ಯವನ್ನು ಕವಿ ಶ್ರೀ ಜಿ. ಎಸ್. ಶಿವರುದ್ರಪ್ಪ ಅವರು ರಚಿಸಿರುವ ‘ಶಬರಿ’ ಕವನ ಸಂಕಲನದಿಂದ ಆಯ್ದ ‘ಸಂಕಲ್ಪಗೀತೆ’ ಎಂಬ ಕವಿತೆಯಿಂದ ಆರಿಸಲಾಗಿದೆ.

38.

ಈ ಕೆಳಗಿನವುಗಳಲ್ಲಿ ವ್ಯವಸ್ಥಿತವಾಗಿ ಜೋಡಿಸಿರುವ ಪದ್ಯಭಾಗ ಗುರುತಿಸಿ.

a)

ಮತಗಳೆಲ್ಲವೂ ಪಥಗಳು ಎನ್ನುವ

ಹೊಸ ಎಚ್ಚರದೊಳು ಬದುಕೋಣ

ಭಯ ಸಂಶಯದೊಳು ಕಂದಿದ ಕಣ್ಣೊಳು

ನಾಳಿನ ಕನಸನು ಬಿತ್ತೋಣ.

b)

ಮತಗಳೆಲ್ಲವೂ ಪಥಗಳು ಎನ್ನುವ

ನಾಳಿನ ಕನಸನು ಬಿತ್ತೋಣ.

ಭಯ ಸಂಶಯದೊಳು ಕಂದಿದ ಕಣ್ಣೊಳು

ಹೊಸ ಎಚ್ಚರದೊಳು ಬದುಕೋಣ

c)

ಭಯ ಸಂಶಯದೊಳು ಕಂದಿದ ಕಣ್ಣೊಳು

ನಾಳಿನ ಕನಸನು ಬಿತ್ತೋಣ.

ಮತಗಳೆಲ್ಲವೂ ಪಥಗಳು ಎನ್ನುವ

ಹೊಸ ಎಚ್ಚರದೊಳು ಬದುಕೋಣ

d)

ಭಯ ಸಂಶಯದೊಳು ಕಂದಿದ ಕಣ್ಣೊಳು

ಹೊಸ ಎಚ್ಚರದೊಳು ಬದುಕೋಣ

ಮತಗಳೆಲ್ಲವೂ ಪಥಗಳು ಎನ್ನುವ

ನಾಳಿನ ಕನಸನು ಬಿತ್ತೋಣ.

39.

ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ

ಹೊಸ ಭರವಸೆಗಳ ಕಟ್ಟೋಣ.

ಮನುಜರ ನಡುವಣ ಅಡ್ಡಗೋಡೆಗಳ

ಕೆಡವುತ ಸೇತುವೆಯಾಗೋಣ.

ಈ ಪದ್ಯಭಾಗದಲ್ಲಿನ ಮೌಲ್ಯವನ್ನುಗುರುತಿಸಿ.

a)

ಮನೆಯ ನಡುವಿನ ಗೋಡೆಗಳನ್ನು ಕೆಡವಿ ಸೇತುವೆಯನ್ನು

ನಿರ್ಮಿಸೋಣವೆಂದು ಕವಿ ಜಿ.ಎಸ್.ಶಿವರುದ್ರಪ್ಪನವರು ಸಮಾನತೆಯ ಮೌಲ್ಯವನ್ನು ಹೇಳಿದ್ದಾರೆ

b)

ವಿಶ್ವದ ಜನರೆಲ್ಲರನ್ನು ಒಂದಾಗಿಸುವ ಪ್ರೀತಿ, ಸ್ನೇಹದ ಸೇತುವೆಯನ್ನು

ನಿರ್ಮಿಸೋಣವೆಂದು ಕವಿ ಜಿ.ಎಸ್.ಶಿವರುದ್ರಪ್ಪನವರು ಸಮಾನತೆಯ ಮೌಲ್ಯವನ್ನು ಹೇಳಿದ್ದಾರೆ

c)

ಎಲ್ಲ ಮತಧರ್ಮಗಳು ಒಂದು ಎಂಬ ಮೌಲ್ಯವನ್ನು ಕವಿ ಜಿ.ಎಸ್.ಶಿವರುದ್ರಪ್ಪನವರು ತಿಳಿಸಿದ್ದಾರೆ.

d)

ಸಮಾಜದ ಅಜ್ಞಾನವನ್ನು ತೊಲಗಿಸಲು ಜ್ಞಾನದ ದೀಪದ ಅವಶ್ಯಕತೆಯನ್ನು ಇಲ್ಲಿ ವರ್ಣಿಸಲಾಗಿದೆ.

40.

ಮನುಷ್ಯರ ಕಣ್ಣುಗಳು ಏಕೆ ಕಂದಿವೆ?

a)

ಅಜ್ಞಾನದಿಂದ

b)

ಕತ್ತಲೆಯಿಂದ

c)

ಭಯಸಂಶಯದಿಂದ

d)

ಜಾತಿ ಮತಗಳಿಂದ