Worksheetsವ್ಯಾಕರಣ - 3
Total questions: 35
Worksheet time: 34mins
ಧಾತು ಎಂದರೇನು?
ಕಾವ್ಯದ ಒಂದು ವಿಧಾನ
ಕ್ರಿಯಾ ಪದದ ಮೂಲ ರೂಪವೇ ಧಾತು
ಕ್ರಿಯೆಯನ್ನು ಸೂಚಿಸುವ ಪದ
ಸಮಾಸದ ಒಂದು ವಿಧವೇ ಧಾತು
ಧಾತುಗಳಲ್ಲಿ ಎಷ್ಟು ವಿಧಗಳಿವೆ?
4
3
2
6
ಈ ಕೆಳಗಿನವುಗಳಲ್ಲಿ ಸಕರ್ಮಕ ಧಾತುಗಳಿಗೆ ಉದಾಹರಣೆ ತಿಳಿಸಿ.
ಮಾಡಲಿ , ತಿನ್ನಲಿ, ಹೋಗಲಿ
ಕೊಡು, ಬಿಡು , ಮುಚ್ಚು
ಮಲಗು , ಬದುಕು, ನಾಚು
ತಿಂದರು ,. ಮಲಗಿದರು , ಹೋದರು
ಓಡು , ಬದುಕು, ಹೋಗು - ಇವು______ ಗಳಾಗಿವೆ.
ಕ್ರಿಯಾಪದಗಳು
ಅವ್ಯಯಗಳು
ಸಕರ್ಮಕ ಧಾತು
ಅಕರ್ಮಕ ಧಾತು
ಆಶೀರ್ವಾದ, ಅಪ್ಪಣೆ, ಹಾರೈಕೆ - ಇವುಗಳು ತೋರುವಾಗ ಧಾತುಗಳಿಗೆ ಆಖ್ಯಾತ ಪ್ರತ್ಯಯಗಳು ಸೇರಿ ಯಾವ ಕ್ರಿಯಾಪದಗಳ ಆಗುತ್ತದೆ?
ಸಂಭವನಾರ್ಥಕ
ವಿದ್ಯರ್ಥಕ
ಕ್ರಿಯಾಪದ
ನಿಷೇಧಾರ್ಥಕ
ಕ್ರಿಯೆಯು ನಡೆಯಲಿಲ್ಲ ಎಂಬ ಅರ್ಥವನ್ನು ತೋರುವಾಗ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು ಸೇರಿ ಯಾವ ಕ್ರಿಯಾಪದಗಳ ಆಗುತ್ತದೆ?
ಅವ್ಯಯಗಳು
ಸಂಭವನಾರ್ಥಕ
ವಿದ್ಯರ್ಥಕ
ನಿಷೇಧಾರ್ಥಕ
ಕ್ರಿಯೆಯು ನಡೆಯುವಿಕೆಯಲ್ಲಿ ಸಂಶಯ ಅಥವಾ ಊಹೆ ತೋರುವಲ್ಲಿ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು ಸೇರಿ ಯಾವ ಕ್ರಿಯಾಪದಗಳ ಆಗುತ್ತದೆ?
ವಿಶೇಷ ಕ್ರಿಯಾಪದ
ನಿಷೇದಾರ್ಥಕ ಕ್ರಿಯಾಪದ
ಸಂಭಾವನಾರ್ಥಕ ಕ್ರಿಯಾ ಪದ
ವಿದ್ಯರ್ಥಕ ಕ್ರಿಯಾಪದ
ವಿದ್ಯರ್ಥಕ ಕ್ರಿಯಾಪದ ಕ್ಕೆ ಉದಾಹರಣೆ ಗುರುತಿಸಿ
ಕೇಳು, ಓಡು, ಕಟ್ಟು
ಕೇಳಲಿ , ಓಡಲಿ, ಕಟ್ಟಲಿ
ಕೇಳಲು , ಕಟ್ಟನು,. ಓಡನು
ನೋಡಿಯಾನು., ಕೇಳಿಯಾರು
ಸಪ್ತಮಿ ವಿಭಕ್ತಿಯ ಕಾರಕಾರ್ಥ ತಿಳಿಸಿ.
ಕರ್ಮ
ಕರಣ
ಸಂಬಂಧ
ಅಧಿಕರಣ
ಹಳಗನ್ನಡದ ಪಂಚಮಿ ವಿಭಕ್ತಿಯ ಪ್ರತ್ಯಯವನ್ನು ಗುರುತಿಸಿ.
ಒಳ್
ಮ್
ಅತ್ತಣಿಂ, ಅತ್ತಣಿಂದಂ
ಅ
ಬಿರುಗಾಳಿಗೆ, ರಾಯಂಗೆ - ಈ ಪದದಲ್ಲಿರುವ ವಿಭಕ್ತಿಯನ್ನು ಗುರುತಿಸಿ.
ಪ್ರಥಮ
ತೃತಿಯ
ಚತುರ್ಥಿ
ಸಪ್ತಮಿ
ತಪ್ಪಾಗಿರುವುದನ್ನು ಗುರುತಿಸಿ.
ಪ್ರಥಮ -- ಕರ್ತೃ
ದ್ವಿತಿಯ -- ಕರ್ಮ
ಚತುರ್ಥಿ -- ಸಂಪ್ರದಾನ
ಸಪ್ತಮಿ --ಸಂಬಂಧ
ತಪ್ಪಾಗಿರುವುದನ್ನು ಗುರುತಿಸಿ.
ತೃತೀಯ ವಿಭಕ್ತಿ - ಇಂ ,ಇಂದಂ
ಪಂಚಮೀವಿಭಕ್ತಿ - ಅತ್ತಣಿಂ
ಷಷ್ಠೀವಿಭಕ್ತಿ - ಅ
ಸಪ್ತಮೀವಿಭಕ್ತಿ - ಮ್
ನಾಮಪದ ,ಕ್ರಿಯಾಪದಗಳಂತೆ ಲಿಂಗ , ವಚನ, ವಿಭಕ್ತಿಗಳಿಂದ ರೂಪ ಭೇದವನ್ನು ಹೊಂದದೆ ಏಕರೂಪ ವಾಗಿರುವ ಪದಗಳನ್ನು ಏನೆನ್ನುವರು?
ವಿಭಕ್ತಿ ಪ್ರತ್ಯಯ
ಸಮಾಸ
ಕ್ರಿಯಾಪದ
ಅವ್ಯಯ
ಯಾವುದಾದರೂ ಒಂದು ಕ್ರಿಯೆ ನಡೆದ ರೀತಿಯನ್ನು ಹೇಳುವಂತಹ ಅವ್ಯಗಳು
ಅನುಕರಣಾವ್ಯಯ
ಭಾವಸೂಚಕಾವ್ಯ
ಸಾಮಾನ್ಯಾವ್ಯಯ
ಸಂಬಂಧಾರ್ಥಕಾವ್ಯಯ
ನಿರ್ದಿಷ್ಟ ಅರ್ಥವಿಲ್ಲದ ಧ್ವನಿ ವಿಶೇಷಣಗಳನ್ನು ತಾನು ಕಿವಿಯಿಂದ ಕೇಳಿದಂತೆ ಅನುಕರಣೆ ಮಾಡಿ ಹೇಳುವ ಪದಗಳೆ____.
ಸಾಮಾನ್ಯಾವ್ಯಯ
ಅನುಕರಣಾವ್ಯಯ
ಕ್ರಿಯಾರ್ಥಕಾವ್ಯಯ
ಅವಧಾರಣಾರ್ಥಕ ಅವ್ಯಯ
ಕ್ರಿಯಾಪದದ ಸ್ಥಾನದಲ್ಲಿದ್ದು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಅವ್ಯಯಗಳೆ_____.
ಭಾವಸೂಚಕಾವ್ಯಯ
ಸಂಬಂಧಾರ್ಥಕಾವ್ಯಯ
ಕ್ರಿಯಾರ್ಥಕಾವ್ಯಯ
ಸಾಮಾನ್ಯ ಅವ್ಯಯ
ಒಂದು ನಿಶ್ಚಯಾರ್ಥದಲ್ಲಿರುವ ಅವ್ಯಯಗಳನ್ನು ಏನೆನ್ನುವರು?
ಸಂಬಂಧಾರ್ಥಕಾವ್ಯಯ
ಅವಧಾರಣಾರ್ಥಕಾವ್ಯಯ
ಭಾವಸೂಚಕಾವ್ಯ
ಕ್ರಿಯಾರ್ಥಕಾವ್ಯಯ
ತಪ್ಪಾಗಿರುವುದನ್ನು ಗುರುತಿಸಿ.
ಸಾಮಾನ್ಯ ಅವ್ಯಯ - ಬೇಗನೆ, ಮೆಲ್ಲನೆ, ಸೊಗಸಾಗಿ
ಅವಧಾರಣಾರ್ಥಕ - ನೀನೇ, ಅದುವೇ,
ಸಂಬಂಧಾರ್ಥಕ ಅವ್ಯಯ - ಮತ್ತು, ಅಲ್ಲದೆ, ಆದ್ದರಿಂದ , ಅಥವಾ
ಭಾವಸೂಚಕಾವ್ಯಯ - ರೊಯ್ಯನೆ, ಕರಕರ, ಸುಯ್ಯನೆ
ತಪ್ಪಾಗಿರುವುದನ್ನು ಗುರುತಿಸಿ
ಆದೇಶ ಸಂಧಿ - ಕಂಬನಿ, ಹೊಸಗಾಲ, ಹೊಗೆದೋರು
ಲೋಪ ಸಂಧಿ - ತಿಂಗಳಿನೂರು, ತೆರೆದಿಕ್ಕುವ,
ಅನುನಾಸಿಕ ಸಂಧಿ- ದಿಗ್ಮಂಡಲ,. ತನ್ಮಯ, ಷಣ್ಮುಖ.
ಸವರ್ಣದೀರ್ಘ ಸಂಧಿ- ಏಕೈಕ, ಜನೈಕ್ಯ
ತಪ್ಪಾಗಿರುವುದನ್ನು ಗುರುತಿಸಿ.
ತಿಂಗಳೂರು= ಚಂದ್ರಲೋಕ
ಕೆನ್ನೆ= ಕೆಂಪು
ಬ್ರಹ್ಮಾಂಡ = ಜಗತ್ತು
ಹೊನ್ನ= ಬಿಳಿ
ತಪ್ಪಾಗಿರುವುದನ್ನು ಗುರುತಿಸಿ.
ಅಗಸಿ = ಹೆಬ್ಬಾಗಿಲು
ಕಾರಕೂನ = ಜವಾನ
ಘಾತಕ= ದ್ರೋಹಿ
ಚರಿಗೆ = ತಂಬಿಗೆ
ತಪ್ಪಾಗಿರುವುದನ್ನು ಗುರುತಿಸಿ.
ಫಾರ್ಸಿ -ಅಬಕಾರಿ, ರಸ್ತೆ, ದವಾಖಾನೆ, ಚೌಕಾಶಿ, ಜಮೀನು
ಅರಬ್ಬಿ - ಅಮಾನತು, ಅಸಲು, ಇನಾಮು, ಕಾಯಿದೆ, ಗಲೀಜು
ಪೋರ್ಚುಗೀಸ್ - ತಂಬಾಕು, ಅನಾನಸು, ಸಾಬೂನು, ಆಸ್ಪತ್ರೆ
ಗ್ರೀಕ್ - ಬಸ್, ಕಾಲೇಜು, ಲೈಟು, ಪೆನ್ನು
ತಪ್ಪಾಗಿರುವುದನ್ನು ಗುರುತಿಸಿ.
ದ್ಯೂತ> ಜೂಜು
ವಿದ್ಯಾಧರ > ಬಿಜ್ಜೋದರ
ವೈಶಾಖ > ಬೇಸಗೆ
ಪಾದುಕಾ > ಚಪ್ಪಲಿ
ತಪ್ಪಾಗಿರುವುದನ್ನು ಗುರುತಿಸಿ.
ಅಂಶಿಸಮಾಸ - ಮುಂಗೈ, ನಡುರಾತ್ರಿ
ದ್ವಂದ್ವ ಸಮಾಸ - ಹನುಮಭೀಮರಾಮ , ಗಿಡಮರಬಳ್ಳಿಗಳು
ಕ್ರಿಯಾ ಸಮಾಸ - ಮೋಸಮಾಡು, ಕಂಗೆಡು
ಬಹುರ್ವೀಹಿ ಸಮಾಸ - ಅಂತಕಾತ್ಮಜ, ದಿನಪಸುತ
ದ್ವಿಗು ಸಮಾಸ - ನಲ್ಗುದುರೆ, ಬಿಲ್ಗೊಂಡು
ತಪ್ಪಾಗಿರುವುದನ್ನು ಗುರುತಿಸಿ.
ಅಂಕುಶ > ಅಂಕುಸ
ಪಾದುಕಾ > ಹಾವುಗೆ
ಯುದ್ಧ > ಜುದ್ಧ
ಪ್ರಸಾದ > ತೀರ್ಥ
'' ಒಳಗಿನ ಮಂದಿ ಗುಂಡು ಹೊಡಿದರೊ ಮುಂಗಾರಿ ಸಿಡಿಲ ಸಿಡಿದಾಂಗ '' - ಈ ಅಲಂಕಾರದ ಬಗ್ಗೆ ಇರುವ ತಪ್ಪಾಗಿರುವ ಹೇಳಿಕೆಯನ್ನು ಗುರುತಿಸಿ.
ಉಪಮೇಯ - ಒಳಗಿನ ಮಂದಿ ಗುಂಡು ಹೊಡೆಯುವುದು
ಉಪಮಾನ - ಮುಂಗಾರಿನ ಸಿಡಿಲು
ವಾಚಕ ಪದ- ಅಂತೆ
ಸಮಾನ ಧರ್ಮ- ಸಿಡಿಯುವುದು
ಎಲ್ಲವೂ ಸರಿಯಾಗಿದೆ
ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ.
ಹಿಂದುಸ್ತಾನಿ - ಕುರ್ಚಿ, ಕಾಗದ, ದರ್ಬಾರು , ಹುಕುಂ
ಉರ್ದು - ಇಲಾಖೆ, ಬಂದೂಕು, ರುಜು, ಶುರು, ,ಶಾಮೀಲು
ಪೋರ್ಚುಗೀಸ್ - ಚೊಂಬು, ಇಸ್ತ್ರಿ, ರಸೀದಿ, ಅನಾನಸು
ಅರಬ್ಬಿ - ಗಲೀಜು, ತಕರಾರು, ತರಬೇತು, ನಕಲಿ
ಎಲ್ಲವೂ ಸರಿಯಾಗಿದೆ
''ಸಿಡಿಲ ಸಿಡಿದಾಂಗ ಗುಂಡು ಸುರಿದಾವ'' - ಈ ಅಲಂಕಾರದ ಹೇಳಿಕೆಯ ಬಗ್ಗೆ ಕೆಳಗಿನವುಗಳಲ್ಲಿ ಸರಿಯಾಗಿರುವುದನ್ನು ಆರಿಸಿ ಬರೆಯಿರಿ.
ಉಪಮೇಯ - ಗುಂಡು
ಉಪಮಾನ - ಸಿಡಿಲು
ವಾಚಕ ಪದ - ಅಂತೆ
ಸಮಾನ ಧರ್ಮ - ಸುರಿಯುವುದು
ಎಲ್ಲವೂ ಸರಿಯಾಗಿದೆ
ಈ ಕೆಳಗಿನವುಗಳಲ್ಲಿ ಯಾವ ಪದಕ್ಕೆ ಅರ್ಥವು ಸರಿಹೊಂದುವುದಿಲ್ಲ?
ಕೈವಾರ = ಹೊಗಳಿಕೆ
ದನುಜ = ರಾಕ್ಷಸ
ಅನ್ವಯ = ವಂಶ
ರಿಪು = ಮಿತ್ರ
ತಪ್ಪಾಗಿರುವುದನ್ನು ಗುರುತಿಸಿ.
ತನುಜ = ಮಗ
ಗ್ಲಾನಿ = ತಲ್ಲಣ
ಮೇದಿನಿ = ಭೂಮಿ
ಚಿತ್ತ = ಮನಸ್ಸು
ಕಿಂಕರ ಯಜಮಾನ
ಈ ಕೆಳಗಿನ ಸಮಾಸದ ಆಯ್ಕೆಗಳಲ್ಲಿ ಯಾವುದು ತಪ್ಪಾಗಿದೆ?
ಬಹುರ್ವೀಹಿ ಸಮಾಸ ಇನತನೂಜನ ದನುಜರಿಪು ರಾಜೀವಸಖ
ಕ್ರಿಯಾಸಮಾಸ - ಕೈಯಾನು, ಹೊಗೆದೋರು
ದ್ವಂದ್ವ ಸಮಾಸ - ಮಾದ್ರಮಾಗಧಯಾದವರು, ಪಾರ್ಥಭೀಮರು
ಗಮಕ ಸಮಾಸ - ಆ ಬೆಕ್ಕು, ನೆಯ್ದವಸ್ತ್ರ
ದ್ವಿಗು ಸಮಾಸ - ಧನಹರಣ, ಸ್ವಾಮಿದ್ರೋಹ
ಗುರು ಲಘು ಮೊದಲಲ್ಲಿ ಬರಲು ______ಗಣ.
ಮ ನ
ಭ ಯ
ಜ ರ
ಸ ತ
ಮತ್ತೇಭವಿಕ್ರೀಡಿತ ವೃತ್ತ ದ ಗಣ ವಿನ್ಯಾಸ ಯಾವುದು?
ನ ಜ ಭ ಜ ಜ ಜ ರ
ಭ ರ ನ ಭ ಭ ರ ಗು
ಸ ಭ ರ ನ ಮ ಯ ಲಗು
ಮ ರ ಭ ನ ಯ ಯ ಯ
ಸ ತ ತ ನ ಸ ರ ರ ಗು - ಈ ಗಣ ವಿನ್ಯಾಸ ಬರುವ ವೃತ್ತ ಯಾವುದು?
ಸ್ರಗ್ದರಾ ವೃತ್ತ
ಮಹಾಸ್ರಗ್ಧರಾ ವೃತ್ತ
ಚಂಪಕಮಾಲಾ ವೃತ್ತ
ಮತ್ತೇಭವಿಕ್ರೀಡಿತ ವೃತ್ತ
