NEW
Font size
Worksheetsಯುದ್ಧ
Total questions: 35
Worksheet time: 20mins
೧. ಇತಿಹಾಸದ ಉದ್ದಕ್ಕೂ ಯುದ್ಧ ನಡೆಯಲು ಇರುವ ಕಾರಣಗಳು:
ಎ) ಸಾಮ್ರಾಜ್ಯ ವಿಸ್ತರಣೆ ಬಿ) ಶಕ್ತಿಯ ಪ್ರದರ್ಶನ ಸಿ) ದ್ವೇಷ ಡಿ) ಮೇಲಿನ ಎಲ್ಲವೂ
ಎ) ಸಾಮ್ರಾಜ್ಯ ವಿಸ್ತರಣೆ
ಬಿ) ಶಕ್ತಿಯ ಪ್ರದರ್ಶನ
ಸಿ) ದ್ವೇಷ
ಡಿ) ಮೇಲಿನ ಎಲ್ಲವೂ
೨. ʼಯುದ್ಧʼ ಪಾಠದಲ್ಲಿ ನಾವು ಈ ಮೌಲ್ಯವನ್ನು ಕಾಣಬಹುದು:
ಎ) ಸತ್ಯ
ಬಿ) ಮಾನವೀಯತೆ
ಸಿ) ಕರುಣೆ
ಡಿ) ಅಹಿಂಸೆ
೩. ವೈರಿಗಳ ವೈಮಾನಿಕ ದಾಳಿಯಿಂದಾಗಿ ವಿಮಾನವು ನುಚ್ಚುನೂರಾಗಿ ಇದರ ಮೇಲೆ ಬಿದ್ದಿತು:
ಎ) ಸಮುದ್ರ
ಬಿ) ನದಿ
ಸಿ) ಹೊಲ
ಡಿ) ಬಯಲು
೪. ತುರ್ತು ಚಿಕಿತ್ಸಾ ನಿರ್ವಹಣೆಗಾಗಿ ರಾಹಿಲ ಇದನ್ನು ಹಿಡಿದುಕೊಂಡಿದ್ದನು.
ಎ) ಔಷಧ ಮತ್ತು ಶಸ್ತ್ರ ಚಿಕಿತ್ಸಾಪಟ್ಟಿಗೆ
ಬಿ ) ಮದ್ದು ಗುಂಡುಗಳು
ಸಿ) ಬಂದೂಕುಗಳು
ಡಿ) ಗುರಾಣಿ
೫. ವೈದ್ಯ ಸೈನಿಕನಿಗೆ ತೀವ್ರವಾಗಿ ಪೆಟ್ಟಾಗಿದ್ದು ದೇಹದ ಈ ಭಾಗಕ್ಕೆ:
ಎ) ಕೈಗೆ
ಬಿ) ತಲೆಗೆ
ಸಿ) ಕಾಲಿಗೆ
ಡಿ) ಎದೆಗೆ
೬. ನೀರಿನಾಳದಲ್ಲಿ ಬಿದ್ದಿದ್ದ ರಾಹಿಲ ಈ ಉಡುಪಿನಲ್ಲಿದ್ದನು.
ಎ) ವೈದ್ಯ ಉಡುಪು
ಬಿ) ಪೋಲಿಸ್ ಉಡುಪು
ಸಿ) ಬಿಳಿ ಉಡುಪು
ಡಿ) ಸೈನಿಕ ಉಡುಪು
೭. ನೀರಿನಲ್ಲಿ ಈಜ ತೊಡಗಿದಾಗ ರಾಹಿಲನಿಗೆ ಸಮೀಪದಲ್ಲಿಯೇ ತೀರವಿರುವುದನ್ನು ಪರಿಚಯಿಸಿದ್ದು.
ಎ) ಗುಡುಗು
ಬಿ) ಮಿಂಚು
ಸಿ) ಚಂದ್ರ
ಡಿ) ನಕ್ಷತ್ರ
೮. ತೀರ ಕಣ್ಣಿಗೆ ಬಿದ್ದೊಡನೆ ರಾಹಿಲನ ದೇಹದಲ್ಲಿ ಸಂಚಾರವಾದದ್ದು:
ಎ) ಹೊಸ ಶಕ್ತಿ
ಬಿ) ಹೊಸ ಹುರುಪು
ಸಿ) ಹೊಸ ಚೈತನ್ಯ
ಡಿ) ಹೊಸ ರಕ್ತ
೯. ಗಡಿ ಪುದೇಶದಲ್ಲಿ ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು ಈ ನಿಯಮವನ್ನು ಪಾಲಿಸಲಾಗುತ್ತಿತ್ತು.
ಎ) ನಾಕ್ ಔಟ್
ಬಿ) ಬ್ಲಾಕ್ ಔಟ್
ಸಿ) ಹಿಟ್ ಔಟ್
ಡಿ) ಕಿಕ್ ಔಟ್
೧೦ ಬ್ಲಾಕ್‌ಔಟ್ ನಿಯಮವನ್ನು ಪಾಲಿಸುವುದು ಈ ಕಾರಣಕ್ಕಾಗಿ.
ಎ) ಪ್ರಾಣಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು
ಬಿ) ಜೇನಿನ ದಾಳಿಯಿಂದ ರಕ್ಷಿಸಿಕೊಳ್ಳಲು
ಸಿ) ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು
ಡಿ) ಕುದುರೆಯ ದಾಳಿಯಿಂದ ರಕ್ಷಿಸಿಕೊಳ್ಳಲು
೧೧. ರಾಹಿಲನು ನೀರಿನಲ್ಲಿ ಬಿದ್ದು ಮುದುಕಿಯ ಮನೆಗೆ ಬರುವಷ್ಟರಲ್ಲಿ ಇಷ್ಟುಬಾರಿ ಮಿಂಚು ಕಾಣಿಸಿಕೊಂಡಿತು.
ಎ ) ಒಂದು ಬಾರಿ
ಬಿ) ಮೂರು ಬಾರಿ
ಸಿ) ಎರಡು ಬಾರಿ
ಡಿ) ನಾಲ್ಕು ಬಾರಿ
೧೨. ರಾಹಿಲನು ಹೀಗೆ ಮೆಟ್ಟಿಲು ಹತ್ತಿ ಬಾಗಿಲು ಬಡಿದನು.
ಎ) ನೆಗೆಯುತ್ತ
ಬಿ) ಹಾರುತ್ತ
ಸಿ) ತೆವಳುತ್ತ
ಡಿ) ನಡೆಯುತ್ತ
೧೩. “ದಯವಿಟ್ಟು ಬಾಗಿಲು ತೆಗೆಯಿರಿ. ನಾನು ಗಾಯಗೊಂಡಿದ್ದೇನೆ. ಪ್ಲೀಸ್ ಎಂದು ರಾಹಿಲನು ಹೀಗೆ ಅಂಗಲಾಚಿದನು.
ಎ) ದುಃಖದಿಂದ
ಬಿ) ದಯನೀಯವಾಗಿ
ಸಿ) ಕಣ್ಣೀರು ಸುರಿಸುತ್ತ
ಡಿ) ಸಂತೋಷದಿಂದ
೧೪. “ಯಾರಪ್ಪ ನೀನು? ನಮ್ಮ ಕಡೆಯವನು ತಾನೇ?” ಎಂದು ಕೇಳಿದ ಮುದುಕಿಯ ಮಾತುಗಳಲ್ಲಿ ಈ ಛಾಯೆಯಿತ್ತು”
ಎ) ಭಯ ಮತ್ತು ಸಂದೇಹ
ಬಿ) ಸಂತೋಷ ಮತ್ತು ನಂಬಿಕೆ
ಸಿ) ಕರುಣೆ ಮತ್ತು ಮಾನವೀಯತೆ
ಡಿ) ಮೇಲಿನ ಎಲ್ಲವೂ
೧೫. “ಯಾಕೆ ? ಎದ್ದು ನಿಲ್ಲಲಾಗುತ್ತಿಲ್ಲವೇ?" - ಈ ಮಾತನ್ನು ಯಾರು ಯಾರಿಗೆ ಹೇಳಿದರು?
ಎ) ರಾಹಿಲನು - ಮುದುಕಿಗೆ
ಬಿ) ಮುದುಕಿಯ ಸೊಸೆ - ರಾಹಿಲ್‌ನಿಗೆ
ಸಿ) ಮುದುಕಿಯು - ರಾಹಿಲನಿಗೆ
ಡಿ) ರಾಹಿಲನು - ಸೊಸೆಗೆ
೧೬. “ನನ್ನನ್ನು ರಕ್ಷಿಸಿ, ನಾನಿನ್ನೂ ತಾಳಲಾರೆ..”- ಎಂದವರು
ಎ) ರಾಹಿಲ
ಬಿ) ಮುದುಕಿಯ ಸೊಸೆ
ಸಿ) ಮುದುಕಿ
ಡಿ) ಹೊರಗಿನ ಸೈನಿಕರು
೧೭. ರಾಹಿಲನು ಮುದುಕಿಯ ಸೊಸೆಗೆ ಪರೀಕ್ಷಿಸುವಾಗ ಈ ಶಬ್ದ ಕೇಳಿಸಿತು.
ಎ ) ಸೊಸೆಯ ನೋವಿನ ಕೂಗು
ಬಿ) ವಿಮಾನದ ಶಬ್ದ
ಸಿ) ಬಾಂಬಿನ ಸ್ಪೋಟ
ಡಿ) ಮೇಲಿನ ಎಲ್ಲವೂ
೧೮. ಮಹಿಳೆಯ ಆರ್ತನಾದ ಇದನ್ನು ಬೇಧಿಸಿ ರಾಹಲನ ಕಿವಿಯೊಳಗೆ ನುಗ್ಗಿತು.
ಎ) ಮಳೆಯ ಶಬ್ದ
ಬಿ) ವಿಮಾನದ ಶಬ್ದ
ಸಿ) ಗುಡುಗಿನ ಶಬ್ದ
ಡಿ) ಬಾಂಬಿನ ಶಬ್ದ
೧೯.ಅಮ್ಮ, 'ನಾನೋರ್ವ ಡಾಕ್ಟರ್ ಆಕೆಯನ್ನು ಪರೀಕ್ಷಿಸಲೇ ' ಎಂದು ಹೇಳಿದವರು.
ಎ) ಸೈನಿಕ
ಬಿ) ರಾಹಿಲ
ಸಿ) ಲೇಖಕರು
ಡಿ) ಪೈಲಟ್
೨೦. ಈ ಮೊದಲು ನಡೆದ ಯುದ್ಧಕ್ಕೆ ಮುದುಕಿಯು ಈ ಕಾರಣ ತಿಳಿಸಿದಳು.
ಎ) ಬೇರೆಬೇರೆ ಧರ್ಮ
ಬಿ) ಬೇರೆಬೇರ ದೇಶ
ಸಿ) ಬೇರೆಬೇರೆ ಜಾತಿ
ಡಿ) ಬೇರೆಬೇರೆ ಸೀಮೆ
೨೧. ಮುದುಕಿಯು ತನ್ನ ಎದೆಯಲ್ಲಿ ಇಂದಿಗೂ ಆರದೆ ಉಳಿದಗಾಯ ಎಂದು ಇದನ್ನು ಹೇಳಿಕೊಳ್ಳುತ್ತಾಳೆ.
ಎ) ಮಗನ ಸಾವು
ಬಿ) ಮೊಮ್ಮಗುವಿನ ಸಾವು
ಸಿ) ಗಂಡನ ಸಾವು
ಡಿ) ಮಗಳ ಸಾವು
೨೨. ಮುದುಕಿಯು ಹೇಳಿದ ಕೊನೆಯ ಮಾತು ಇದು.
ಎ) ಅವನೆಷ್ಟು ಸಂಕಟಪಡುತ್ತಾನೋ.
ಬಿ) ಮಗನನ್ನು ಸಾಕಿ ಸಲಹಿದೆ.
ಸಿ) ಯುದ್ಧಕ್ಕೆ ಹೋಗಿದ್ದಾನೆ
ಡಿ) ಅಷ್ಟರಲ್ಲಿ ಬಂತು ಯುದ್ಧ
೨೩. ಮುದುಕಿಯ ಮಗನು ಏನನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದನು ಎಂದು ಮುದುಕಿ ಹೇಳಿಕೊಳ್ಳುತ್ತಾಳೆ.
ಎ) ದೇಶದ ಸ್ವಾತಂತ್ರ್ಯ
ಬಿ) ಹಂಡತಿಯ ನಗು
ಸಿ) ಮಗುವಿನ ಅಳು
ಡಿ) ತಾಯಿಯ ಮಾತು
೨೪. ಯುದ್ಧ ಪಾಠದ ಲೇಖಕರು
ಎ) ಜಿ.ಎಸ್. ಶಿವರುದ್ರಪ್ಪ
ಬಿ) ದೇವನೂರು ಮಹಾದೇವ
ಸಿ) ವಿ.ಕೃ.ಗೋಕಾಕ
ಡಿ) ಸಾರಾ ಅಬೂಬಕ್ಕರ್
೨೫. ಸಾರಾ ಅಬೂಬಕ್ಕರ್ ಅವರು ಈ ವರ್ಷದಲ್ಲಿ ಜನಿಸಿದರು.
ಎ) ೧೯೩೬
ಬಿ) ೧೯೨೬
ಸಿ) ೧೯೦೦
ಡಿ) ೧೮೯೬
೨೬. ಸಾರಾ ಅಬೂಬಕ್ಕರ್ ಅವರು ಈ ಊರಿನಲ್ಲಿ ಜನಿಸಿದರು.
ಎ) ಕೇರಳ
ಬಿ) ಕಾಸರಗೋಡು
ಸಿ) ಬೆಂಗಳೂರು
ಡಿ) ಮಂಗಳೂರು
೨೭. ಸಾರಾ ಅಬೂಬಕ್ಕರ್ ಅವರಿಗೆ ಬಂದಿರುವ ಪ್ರಶಸ್ತಿ
ಎ) ಕೇಂದ್ರ ಸಾಹಿತ್ಯ ಅಕಾಡೆಮಿ
ಬಿ) ರಾಜ್ಯ ಸಾಹಿತ್ಯ ಅಕಾಡೆಮಿ
ಸಿ) ನೃಪತುಂಗ ಪ್ರಶಸ್ತಿ
ಡಿ) ಪಂಪ ಪ್ರಶಸ್ತಿ
೨೮.ಯುದ್ಧ ಪಾಠದ ಆಕರ ಗ್ರಂಥ ಇದು.
ಎ) ಪಯಣ
ಬಿ) ಚಪ್ಪಲಿಗಳು
ಸಿ) ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
ಡಿ) ಖೆಡ್ಡಾ
೨೯. ವಿಮಾನದಿಂದ ಬಿದ್ದ ಡಾಕ್ಟರ್ ಇಲ್ಲಿ ಎಚ್ಚರಗೊಂಡನು.
ಎ) ಸಮುದ್ರದ ದಡದಲ್ಲಿ
ಬಿ) ನೀರಿನಾಳದಲ್ಲಿ
ಸಿ) ಸಮುದ್ರದ ತೀರದಲ್ಲಿ
ಡಿ) ಮುದುಕಿನ ಮನೆಯಲ್ಲಿ
೩೦. ರಾಹಿಲನು ಮೊದಲು ಇದರಿಂದ ರಕ್ಷಣೆ ಪಡೆಯಲು ಇಚ್ಚಿಸಿದನು.
ಎ) ಸೆೈನಿಕರಿಂದ
ಬಿ)ವಿಮಾನ ದಾಳಿಯಿಂದ
ಸಿ)ಮಳೆಯಿಂದ
ಡಿ) ಶತ್ರುಗಳಿಂದ
೩೧. ಮುದುಕಿ ರಾಹಿಲನಿಗೆ ಇವರ ಬಟ್ಟೆಯನ್ನು ತಂದುಕೊಟ್ಟಳು
ಎ) ಗಂಡ
ಬಿ) ಸೆೈನಿಕ
ಸಿ) ಮಗ
ಡಿ) ಬೇರೆಯವರ
೩೨. ಮುದುಕಿಯು ಊರಿಗೆ ಬಂದು ಇಷ್ಟು ವರ್ಷಗಳಾದವು ಎಂದು ರಾಹಿಲನಿಗೆಹೇಳಿದಳು.
ಎ) ೨೫ವರ್ಷ
ಬಿ) ೬೦ ವರ್ಷ
ಸಿ) ೫೦ ವರ್ಷ
ಡಿ) ೭೫ ವರ್ಷ
೩೩. ಮುದುಕಿಯ ಕೈಯಲ್ಲಿದ್ದ ದೀಪದ ಬೆಳಕು ಹೊರಬರದಂತೆ ದೀಪಕ್ಕೆ ಇದನ್ನುಅಂಟಿಸಲಾಗಿತ್ತು
ಎ) ಎಲೆ
ಬಿ) ಬಟ್ಟೆ
ಸಿ) ಹಲಗೆ
ಡಿ) ಕಾಗದ
೩೪. ಮುದುಕಿಯ ಕಣ್ಣುಗಳು ರೋಷದಿಂದ ಕೆರಳಲು ಕಾರಣ
ಎ) ರಾಹಿಲ ಸೆೈನಿಕನೆಂದು ತಿಳಿದು
ಬಿ) ರಾಹಿಲ ವೆೈದ್ಯನೆಂದು ತಿಳಿದು
ಸಿ) ರಾಹಿಲ ಮಿತ್ರ ದೆೇಶದವನೆಂದು ತಿಳಿದು
ಡಿ) ತಮ್ಮ ದೇಶಕ್ಕೆ ದ್ರೋಹ ಬಗೆಯುವವನೆಂದು ತಿಳಿದು
೩೫. ಬಟ್ಟೆ ಸುತ್ತಿದ ನಿರ್ಜೀವ ಶಿಶುವನ್ನು ಮುದುಕಿ ಇಲ್ಲಿ ಮಲಗಿಸಿದ್ದಳು
ಎ) ಮಂಚದ ಅಡಿ
ಬಿ) ಮಂಚದ ಮೇಲೆ
ಸಿ) ಸೊಸೆಯ ಬಳಿ
ಡಿ) ಬಾಗಿಲ ಬಳಿ
