Worksheetsಪ್ರ.ಭಾಷೆ ಕನ್ನಡ, 8 ಮತ್ತು 9ನೇ ತರಗತಿಯ ವ್ಯಾಕರಣ: ಸಂಧಿಗಳು
Total questions: 10
Worksheet time: 5mins
1. ಪದ ರಚನೆಯಾಗುವಾಗ ಎರಡು ಅಕ್ಷರಗಳು ಕಾಲ ವಿಳಂಬವಿಲ್ಲದೆ ಒಟ್ಟು ಸೇರುವುದೇ --------
1. ಸಮಾಸ
2. ಸಂಧಿ
3. ನಾಮಪದ
4. ಪ್ರಕೃತಿ ಭಾವ
2. ಗುರು+ ಅನ್ನು = ಗುರುವನ್ನು
ಪ್ರಕೃತಿ ಮತ್ತು ಪ್ರತ್ಯಯಗಳ ಮಧ್ಯೆ ನಡೆಯುವ ಈ ಸಂಧಿಯನ್ನು ----------- ಸಂಧಿ ಎನ್ನುವರು.
1. ಪದಮಧ್ಯ ಸಂಧಿ
2. ವಿಸರ್ಗ ಸಂಧಿ
3. ಪದಾಂತ್ಯ ಸಂಧಿ
4. ಸ್ವರ ಸಂಧಿ
3. 'ಪದಾಂತ್ಯ ಸಂಧಿ' ಎಂದರೆ;
1. ವ್ಯಂಜನ ಸ್ವರಗಳು ಸೇರಿ ಆಗುವ ಸಂಧಿ.
2. ವ್ಯಂಜನ ವ್ಯಂಜನಗಳು ಸೇರಿ ಆಗುವ ಸಂಧಿ.
3. ವಾಕ್ಯ ವಾಕ್ಯಗಳ ನಡುವೆ ನಡೆಯುವ ಸಂಧಿ.
4. ಪದ ಪದಗಳ ನಡುವೆ ನಡೆಯುವ ಸಂಧಿ.
4. ------- ಸಂಧಿಯು 'ವಿಕಲ್ಪ ಸಂಧಿ' (ಬೇಕಾದರೆ ಸಂಧಿ ಮಾಡಬಹುದು, ಇಲ್ಲವೇ ಹಾಗೆ ಬಿಡಿಸಿ ಬರೆಯಬಹುದು. ಉದಾ: ಶಿಖರವನ್ನು + ಏರಿದನು= ಶಿಖರವನ್ನೇರಿದನು)ಗೆ ಉದಾಹರಣೆಯಾಗಿದೆ.
1. ಪದಮಧ್ಯ ಸಂಧಿ
2. ಅನುನಾಸಿಕ ಸಂಧಿ
3. ವ್ಯಂಜನ ಸಂಧಿ
4. ಪದಾಂತ್ಯ ಸಂಧಿ
5. ಸಂಧಿಯ ಎರಡು ಪ್ರಕಾರಗಳು ----------
1. ಕನ್ನಡ ಸಂಧಿಗಳು, ಸಂಸ್ಕೃತ ಸಂಧಿಗಳು
2. ಸ್ವರ ಸಂಧಿಗಳು, ವ್ಯಂಜನ ಸಂಧಿಗಳು
3. ಕನ್ನಡ ಸ್ವರ ಸಂಧಿ ಮತ್ತು ಕನ್ನಡ ವ್ಯಂಜನ ಸಂಧಿಗಳು.
4. ಕನ್ನಡ ಸಂಧಿಗಳು ಮತ್ತು ಸಂಸ್ಕೃತ ಸ್ವರ ಸಂಧಿಗಳು.
6. ಎರಡು ಕನ್ನಡ ಪದಗಳು ಅಥವಾ ಒಂದು ಕನ್ನಡ ಪದ ಇನ್ನೊಂದು ಸಂಸ್ಕೃತ ಪದ ಸೇರಿ ಆಗುವ ಸಂಧಿಯನ್ನು ------------ ಎನ್ನುವರು.
1. ಸಂಸ್ಕೃತ ಸಂಧಿ
2. ಸಂಸ್ಕೃತ ಸ್ವರ ಸಂಧಿ
3. ಕನ್ನಡ ಸಂಧಿ
4. ಸಂಸ್ಕೃತ ವ್ಯಂಜನ ಸಂಧಿ
7. ಸ್ವರ ಸಂಧಿ ಮತ್ತು ವ್ಯಂಜನ ಸಂಧಿಗಳು --------- ಯ 2 ಪ್ರಕಾರಗಳು.
1. ಕನ್ನಡ ವ್ಯಂಜನ ಸಂಧಿ
2. ಕನ್ನಡ ಸ್ವರ ಸಂಧಿ
3. ಕನ್ನಡ ಸಂಧಿ
4. ಪದಮಧ್ಯ ಸಂಧಿ
8. ಸ್ವರ + ಸ್ವರ = --------- ಸಂಧಿ.
(ಉದಾ: ಮಾತು + ಅನ್ನು = ಮಾತನ್ನು)
1. ವ್ಯಂಜನ
2. ಜಶ್ತ್ವ
3. ಸ್ವರ
4. ಆದೇಶ
9. ಲೋಪ ಮತ್ತು ಆಗಮ ಇವು ----------- ಗಳು.
1. ವ್ಯಂಜನ ಸಂಧಿಗಳು
2. ಕನ್ನಡ ಸ್ವರ ಸಂಧಿಗಳು
3. ಕನ್ನಡ ವ್ಯಂಜನ ಸಂಧಿಗಳು
4. ಸಂಸ್ಕೃತ ಸ್ವರ ಸಂಧಿಗಳು
10. "ಸ್ವರದ ಮುಂದೆ ಸ್ವರ ಬಂದು ಸಂಧಿಯಾಗುವಾಗ ಪೂರ್ವ ಪದದ ಕೊನೆಯ ಸ್ವರ ಲೋಪವಾಗುವುದು. ಹೀಗೆ ಸಂಧಿಯಾಗುವಾಗ ಪದದ ಅರ್ಥವು ಕೆಡಬಾರದು." ಇದು ------ ಸಂಧಿಯ ನಿಯಮ;
1. ಲೋಪ
2. ಆಗಮ
3. ಆದೇಶ
4. ಸ್ವರ
