wayground logo

Free Printable Worksheets

Font size

S
M
L
XL
Worksheets

ವಿದ್ಯಾಶಾರದೆ KARTET ONLINE TESTS ಸಮಾಜ ವಿಜ್ಞಾನ ಬೋಧನಾಶಾಸ್ತ್ರ

Total questions: 25

Worksheet time: 13mins

Name
Class
Date
1.

ಸಮಾಜ ವಿಜ್ಞಾನದಲ್ಲಿ ಮೌಲ್ಯಮಾಪನದ ಪ್ರಾಥಮಿಕ ಉದ್ದೇಶವೆಂದರೆ

a)

ಪಠ್ಯಪುಸ್ತಕ ಜ್ಞಾನವನ್ನು ಮರುಪಡೆಯಲು ಮತ್ತು ಕಲಿಯುವರಿಗೆ ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡಲು

b)

ಕಲಿಯುವವರನ್ನು ಸಾಮರ್ಥ್ಯ ಆಧಾರಿತವಾಗಿ ವರ್ಗೀಕರಿಸಲು

c)

ಕಲಿಯುವವರಲ್ಲಿ ಸಾಮಾಜಿಕ ವ್ಯತ್ಯಾಸಗಳನ್ನು ಎತ್ತಿತೋರಿಸಲು

d)

ಕಲಿಯುವವರಿಗೆ ಪ್ರತಿಕ್ರಿಯೆ ನೀಡಲು ಮತ್ತು ಅವರಿಗೆ ಮಾನದಂಡಗಳನ್ನು ಹೊಂದಿಸಲು

2.

ಚಲನಚಿತ್ರವನ್ನು ಸಮಾಜ-ವಿಜ್ಞಾನ ತರಗತಿಯಲ್ಲಿ ಪರಿಣಾಮಕಾರಿ ಶಿಕ್ಷಣ ಸಾಧನವಾಗಿ ಬಳಸಬಹುದು ಎಂಬುದಕ್ಕೆ ನಾಲ್ಕು ವಾಕ್ಯ ನೀಡಲಾಗಿದೆ ಅವುಗಳಲ್ಲಿ ಯಾವುದು ತಪ್ಪಾಗಿದೆ

a)

ಚಲನಚಿತ್ರಗಳು ಜಗತ್ತನ್ನು ತರಗತಿಯಲ್ಲಿ ತೆರೆದಿಡುತ್ತವೆ

b)

ಚಲನಚಿತ್ರಗಳು ನಮಗೆ ಕಾಣದ ಮತ್ತು ಕೇಳದ ಸನ್ನಿವೇಶವನ್ನು ಕಂಡುಕೊಳ್ಳುವ ಶಕ್ತಿಯನ್ನು ಪ್ರೇರೇಪಿಸುತ್ತವೆ

c)

ಚಲನಚಿತ್ರಗಳು ಕಥೆಗಳನ್ನು ಧ್ವನಿಗಳನ್ನು ಮತ್ತು ಚಿತ್ರಗಳನ್ನು ಕಣ್ಮುಂದೆ ತರುತ್ತವೆ

d)

ಚಲನಚಿತ್ರಗಳು ವಸ್ತುನಿಷ್ಠ ಮಾಧ್ಯಮವಾಗಿದ್ದು ಕಲಿಯುವರಿಗೆ ತಮ್ಮ ಅಭಿಪ್ರಾಯಗಳನ್ನು ಏಕವಚನದಲ್ಲಿ ರೂಪಿಸಲು ಪ್ರೋತ್ಸಾಹಿಸುತ್ತವೆ

3.

ತರಗತಿಯಲ್ಲಿ ನಕ್ಷೆಯನ್ನು ಬಳಸುವ ಸಂದರ್ಭಕ್ಕೆ- ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ

a)

ನಕ್ಷೆಯು ಒಂದು ಸಾಮಾಜಿಕ-ರಾಜಕೀಯ ರಚನೆಯಾಗಿದೆ

b)

ಅನಾದಿಕಾಲದಿಂದಲೂ ಉತ್ತರ ದಿಕ್ಕು ಯಾವಾಗಲೂ ಎಲ್ಲ ಸಾಮಾಜಿಕ-ರಾಜಕೀಯ ಸನ್ನಿವೇಶಗಳಲ್ಲಿ ನಕ್ಷೆಯ ಮೇಲ್ಭಾಗದಲ್ಲಿ ತೋರಿಸಲ್ಪಡುತ್ತದೆ

c)

ನಕ್ಷೆಯು ಮೂರು-ಆಯಾಮದ ಸಾಧನವಾಗಿದೆ

d)

ನಕ್ಷೆಯು ಕಲಿಯುವ ರಲ್ಲಿ ಸಮಯ ಪ್ರಜ್ಞೆಯನ್ನು ಬೆಳೆಸಲು ಸಹಾಯಕವಾಗಿದೆ

4.

ಇತಿಹಾಸವನ್ನು ಬೋಧಿಸುವಾಗ ವಂಶಾವಳಿ ಚಾರ್ಟನ್ನು ಬಳಸಲಾಗುತ್ತದೆ ಅದಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ತಪ್ಪಾಗಿದೆ

a)

ನಿರ್ದಿಷ್ಟ ವಂಶದ, ಸಾಮ್ರಾಜ್ಯದ ಬೆಳವಣಿಗೆಯನ್ನು ತಿಳಿಸುತ್ತದೆ

b)

ಅನುಕ್ರಮ ಮತ್ತು ಕ್ರಿಯಾತ್ಮಕ ಸಂಬಂಧಗಳನ್ನು ತೋರಿಸುತ್ತದೆ

c)

ಕಾಲಾನುಕ್ರಮದ ಚೌಕಟ್ಟನ್ನು ಒದಗಿಸುತ್ತದೆ

d)

ಕಲಿಯುವವರಲ್ಲಿ ಸ್ಥಳ ಪ್ರಜ್ಞೆಯನ್ನು ಬೆಳೆಸಲು ಸಹಾಯಕವಾಗಿದೆ

5.

ಸಮಾಜ ವಿಜ್ಞಾನ ಬೋಧನೆಯಲ್ಲಿ ಯೋಜನಾ ವಿಧಾನವನ್ನು ಕುರಿತ ಯಾವ ಹೇಳಿಕೆ ತಪ್ಪಾಗಿದೆ

a)

ಇದು ಸ್ವಯಂ ನಿರ್ದೇಶನದ ಚಟುವಟಿಕೆಯ ಮೂಲಕ ಕಲಿಕೆಗೆ ಅನುಮತಿಸುತ್ತದೆ

b)

ಮಾಡಿ ಕಲಿ ತತ್ವವನ್ನು ಆಧರಿಸಿದೆ

c)

ಇದು ಒಂದು ಸಂಪೂರ್ಣ ಶಿಕ್ಷಕ ಕೇಂದ್ರಿತ ವಿಧಾನವಾಗಿದೆ

d)

ಈ ವಿಧಾನ ಪ್ರಾಯೋಗಿಕ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸುತ್ತದೆ

6.

ತರಗತಿಯಲ್ಲಿ ವಿದ್ಯಾರ್ಥಿಗಳು ವಿಮರ್ಶಾತ್ಮಕ ಚಿಂತಕರಾಗಿರಬೇಕು ಏಕೆಂದರೆ______

a)

ತನ್ನ ನ್ಯೂನ್ಯತೆಗಳನ್ನು ಎತ್ತಿ ತೋರಿಸಲು

b)

ಸಮಾಜದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು

c)

ಜೀವನದ ವಿವಿಧ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು

d)

ಏಕರೂಪದ ದೃಷ್ಟಿಕೋನವನ್ನು ಪ್ರಶಂಸಿಸಲು

7.

ಕೆಳಗಿನವುಗಳಲ್ಲಿ ವಿವಿಧತೆಯಲ್ಲಿ ವೈವಿಧ್ಯತೆಯನ್ನು ಪ್ರತಿನಿಧಿಸುವ ಉದಾಹರಣೆಯನ್ನು ಆಯ್ಕೆ ಮಾಡಿ

a)

ಸರೋಜಳಿಗೆ ಶಾಲೆಗೆ ಹೋಗುವ ಅವಕಾಶ ಸಿಕ್ಕಿತು ಆದರೆ ನಿರ್ಮಲಾಳಿಗೆ ಶಾಲೆಗೆ ಹೋಗುವ ಅವಕಾಶ ಸಿಗಲಿಲ್ಲ

b)

ರಾಮು ಬಡ ಕುಟುಂಬಕ್ಕೆ ಸೇರಿದವನು. ರಾಜುವಿನ ಕುಟುಂಬ ತುಂಬಾ ಶ್ರೀಮಂತವಾಗಿದೆ

c)

ರಘು ಸುರೇಶನನ್ನು ಫುಟ್ಬಾಲ್ ತಂಡಕ್ಕೆ ಸೇರಿಸಲು ಬಯಸುವುದಿಲ್ಲ ಏಕೆಂದರೆ ಅವನು ಹಿಂದುಳಿದ ಸಮಾಜಕ್ಕೆ ಸೇರಿದವನು

d)

ನವೀನ ಗೆ ತುಂಬಾ ಚೆನ್ನಾಗಿ ಹಿಂದಿ ತಿಳಿದಿದೆ ಆದರೆ ಸುಚಿತ್ರಾ ಹಿಂದಿ ಮಾತನಾಡುತ್ತಾಳೆ

8.

ಇತಿಹಾಸ ಬೋಧನಾ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಯಾವುದು ತಪ್ಪಾಗಿದೆ

a)

ಇತಿಹಾಸ ಶಿಕ್ಷಣವು ಲಭ್ಯವಿರುವ ಮೂಲಗಳ ಆಧಾರದ ಮೇಲೆ ಇತಿಹಾಸವನ್ನು ನಿರ್ಮಿಸಲು ಪ್ರಯತ್ನಿಸುತ್ತದೆ

b)

ಸಾಮಾಜಿಕ ಪ್ರಕ್ರಿಯೆಗಳಲ್ಲಿ ನಿರಂತರತೆ ಮತ್ತು ಬದಲಾವಣೆಯನ್ನು ಪತ್ತೆ ಮಾಡುತ್ತದೆ

c)

ಸಾಮಾಜಿಕ-ರಾಜಕೀಯ ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ವಿಶ್ಲೇಷಿಸುತ್ತದೆ

d)

ಇತಿಹಾಸವು ಪ್ರಬಲ ಸಮುದಾಯದ ದೃಷ್ಟಿಕೋನಗಳನ್ನು ಸ್ವೀಕರಿಸುತ್ತದೆ

9.

ಗಾಳಿಯ ಹಕ್ಕನ್ನು ಭಾರತದಲ್ಲಿ ಯಾವ ನಿರ್ದಿಷ್ಟ ಮೂಲಭೂತ ಹಕ್ಕಿನ ಭಾಗವೆಂದು ಗುರುತಿಸಲಾಗಿದೆ

a)

ಸಮಾನತೆ

b)

ಜೀವನ

c)

ನ್ಯಾಯ

d)

ಸ್ವಾತಂತ್ರ್ಯ

10.

ಭಾರತವನ್ನು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ ಎಂದು ಕರೆದವರು

a)

ನೆಹರೂ

b)

ಅಂಬೇಡ್ಕರ್

c)

ಗಾಂಧಿಜಿ

d)

ಬಾಬು ರಾಜೇಂದ್ರ ಪ್ರಸಾದ್

11.

ನಿಜಜೀವನದ ಸನ್ನಿವೇಶಗಳಲ್ಲಿ ಭಾಷಾ ಅಗತ್ಯತೆಗಳನ್ನು ಇವರಿಂದ ಪೂರೈಸಲಾಗುತ್ತದೆ

a)

ಪಠ್ಯಪುಸ್ತಕಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡುವುದರಿಂದ

b)

ಭಾಷಾ ರಚನೆಗಳನ್ನು ಕಲಿಯುವುದರಿಂದ

c)

ಬೀದಿಗಳಲ್ಲಿ ಕಲಿಯುವುದರಿಂದ

d)

ಸರಿಯಾದ ಉಚ್ಚಾರಣೆಯನ್ನು ಕಲಿಯುವುದರಿಂದ

12.

ಇತಿಹಾಸ ಬೋಧನೆಯಲ್ಲಿ ಉಪನ್ಯಾಸ ವಿಧಾನಕ್ಕೆ ಸಂಬಂಧಿಸಿದಂತೆ ಯಾವುದು ಉಪನ್ಯಾಸ ಬೋಧನೆಯ ಅನಾನುಕೂಲವಾಗಿದೆ

a)

ಈ ವಿಧಾನ ಹೊಸ ಶಿಕ್ಷಕರಿಗೆ ಸುಲಭವಾದ ವಿಧಾನವಾಗಿದೆ

b)

ಈ ವಿಧಾನ ಆಲಿಸುವಿಕೆಯನ್ನು ಮತ್ತು ಟಿಪ್ಪಣಿ ಮಾಡಿಕೊಳ್ಳುವ ಕೌಶಲ್ಯವನ್ನು ಬೆಳೆಸುತ್ತದೆ

c)

ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮಧ್ಯೆ ಮುಖಾಮುಖಿ ಸಂವಹನ ಏರ್ಪಡಿಸುತ್ತದೆ

d)

ಕೆಲವೊಮ್ಮೆ ಏಕತಾನತೆಯಿಂದ ಮಕ್ಕಳಲ್ಲಿ ಆಯಾಸ ಉಂಟಾಗುವುದು

13.

ಮೂಲಾಧಾರ ವಿಧಾನಕ್ಕೆ ಸಂಬಂಧಿಸಿದಂತೆ ಯಾವುದು ತಪ್ಪಾಗಿದೆ

a)

ವಸ್ತು ಸಂಪನ್ಮೂಲ

b)

ಮೌಖಿಕ ಸಂಪನ್ಮೂಲ

c)

ಲಿಖಿತ ಮತ್ತು ಮುದ್ರಿತ ಸಂಪನ್ಮೂಲ

d)

ಆಡಿಯೋ ಧ್ವನಿಮುದ್ರಣ

14.

ಸಮಸ್ಯೆ ಪರಿಹಾರ ವಿಧಾನದ ಕೊನೆಯ ಹಂತ

a)

ಊಹೆಯನ್ನು ರೂಪಿಸುವುದು

b)

ಸಮಸ್ಯೆಯನ್ನು ಗ್ರಹಿಸುವುದು

c)

ಮೌಲ್ಯಮಾಪನ

d)

ತೀರ್ಮಾನಗಳನ್ನು ರೂಪಿಸುವುದು

e)

ಸಂಭಾವ್ಯ ಊಹೆಯನ್ನು ಪರೀಕ್ಷಿಸುವುದು

15.

ವಿಶೇಷ ಅಗತ್ಯವುಳ್ಳ ಮಗುವಿಗೆ ತರಗತಿಯ ಬೋಧನಾ ವಿಧಾನದ ಯಾವ ಹಂತದಲ್ಲಿ ಶಿಕ್ಷಕ ಸಹಾಯ ಮಾಡಬಹುದು

a)

ತೊಡಗಿಸಿಕೊಳ್ಳುವಿಕೆ

b)

ಆವಿಷ್ಕಾರ ವಿಧಾನ

c)

ವಿವರಿಸುವುದು

d)

ಮೌಲ್ಯಮಾಪನ

16.

ಚರ್ಚಾ ವಿಧಾನದಲ್ಲಿ ತರಗತಿಯ ಮಗುವನ್ನು ಹೀಗೆ ಅವಲೋಕಿಸಬಹುದು

a)

ಮಾತನಾಡುವುದು

b)

ನಡೆವಳಿಕೆ

c)

ಆತ್ಮವಿಶ್ವಾಸ

d)

ಮೇಲಿನ ಎಲ್ಲವೂ

17.

ತರಗತಿಯಲ್ಲಿ ಯಾವ ವಿದ್ಯಾರ್ಥಿಗಳಿಗೆ ನಾವಿನ್ಯತೆಯ ಲಾಭ ಹೆಚ್ಚು ದೊರೆಯುವಂತೆ ಮಾಡಬಹುದು

a)

ಕಲಿಕೆಯಲ್ಲಿ ಹಿಂದುಳಿದವರಿಗೆ

b)

ಸಮಾನ ಕಲಿಕೆದಾರರಿಗೆ

c)

ಪ್ರತಿಭಾವಂತರಿಗೆ

d)

ಮೇಲಿನ ಎಲ್ಲರಿಗೂ

18.

ತರಗತಿಯಲ್ಲಿ ಇತಿಹಾಸ ಬೋಧಿಸುವಾಗ ಕಲಿಕೋಪಕರಣವಾಗಿ ಚಲನಚಿತ್ರವನ್ನು ಹೀಗೆ ಬೆಳೆಸಬಹುದು

a)

ಪಾಠಕ್ಕೆ ಪೂರಕವಾದ ಅಂಶಗಳ ಬಳಕೆ

b)

ಚಿತ್ರದ ಮೂಲಕ ಮನರಂಜನೆ

c)

ಸಂದರ್ಭಕ್ಕೆ ಅನುಗುಣವಾಗಿ ವಿಷಯ ಜೋಡಿಸಲು

d)

ಮಕ್ಕಳ ಮನಸ್ಸನ್ನು ಮುದಗೊಳಿಸಲು

19.

ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ಬೋಧನೆಯನ್ನು ಈ ಕಾರಣಕ್ಕೆ ಬೋಧಿಸಲಾಗುತ್ತದೆ

a)

ಸಾಮಾಜಿಕ ವ್ಯವಸ್ಥೆ ಬಗ್ಗೆ ತಿಳುವಳಿಕೆ

b)

ಪರಿಸರದ ಬಗ್ಗೆ ತಿಳುವಳಿಕೆ

c)

ಸಂಪನ್ಮೂಲಗಳನ್ನು ಕ್ರೂಡೀಕರಿಸಲು

d)

ರಾಜಕೀಯ ಅಂಶಗಳನ್ನು ತಿಳಿಸಲು

20.

ಒಳಗೊಳ್ಳುವ ಶಿಕ್ಷಣದ ಮೌಲ್ಯಮಾಪನದ ಅಳತೆಗಳು ಹೀಗಿವೆ

a)

ಅವಲೋಕನ

b)

ಚಟುವಟಿಕೆ

c)

ಪರೀಕ್ಷೆ

d)

ಮೇಲಿನ ಎಲ್ಲವೂ

21.

ಗಣಕಯಂತ್ರ ಆಧಾರಿತ ಸಮಾಜ ವಿಜ್ಞಾನ ಬೋಧನೆಯನ್ನು ಮಾಡುವಾಗ ಶಿಕ್ಷಕನ ಪಾತ್ರ

a)

ಮುಖ್ಯ ಕಾರ್ಯವಿಧಿ ನಿಯೋಜಕ

b)

ಕಾರ್ಯವಿಧಿ ನಿಯೋಜಕ

c)

ಕಲಿಸುವವ

d)

ಸ್ನೇಹಿತ

22.

ಕ್ರಮಾನುಗತ ಬೋಧನೆಯ ಮೂಲ ತತ್ವಗಳನ್ನು ರೂಪಿಸಿದ ಪರಿಣತ ಶಾಸ್ತ್ರಜ್ಞ

a)

ಥಾಮಸ್ ಎಫ್ ಗಿಲ್ ಬರ್ಟ

b)

ರಾಬರ್ಟ್ ಮೇಜರ್

c)

ಬಿ.ಎಫ್.ಸ್ಕಿನ್ನರ್

d)

ನಾರ್ಮನ್ ಎ ಕ್ರೌಡರ್

23.

ಪಠ್ಯವಸ್ತು ಎಂದರೆ ಶಾಲೆಯಲ್ಲಿ ಮಗು ಪಡೆಯುವ ಒಟ್ಟು ಅನುಭವದ ಮೊತ್ತ ಈ ಹೇಳಿಕೆ ನೀಡಿದವರು

a)

ರಾಷ್ಟ್ರೀಯ ಶಿಕ್ಷಣ ಆಯೋಗ

b)

ಮಾಧ್ಯಮಿಕ ಶಿಕ್ಷಣ ಆಯೋಗ

c)

ವಿಶ್ವ ವಿದ್ಯಾಲಯ ಶಿಕ್ಷಣ ಆಯೋಗ

d)

ರಾಷ್ಟ್ರೀಯ ಶಿಕ್ಷಣ ನೀತಿ

24.

ಬೋಧನೆಯಲ್ಲಿ ಪಾಠೋಪಕರಣಗಳ ಬಳಕೆಯು ಈ ತತ್ವದ ಆಧಾರದ ಮೇಲಿದೆ

a)

ಕಲಿಕಾ ತತ್ವ

b)

ಮನಃಶಾಸ್ತ್ರ

c)

ಭಾವನಾ ತತ್ವ

d)

ತಂತ್ರಜ್ಞಾನ ತತ್ವ

25.

ಕಲಿಕಾ ಅನುಭವಗಳನ್ನು ರಚಿಸುವಾಗ ಗಮನಿಸುವ ದೃಷ್ಟಿಕೋನ

a)

ವಿಷಯ ಮತ್ತು ವಿದ್ಯಾರ್ಥಿ

b)

ಉದ್ದೇಶಗಳು ಮತ್ತು ವಿಷಯ

c)

ಉಪಾಧ್ಯಾಯ ಮತ್ತು ವಿಷಯ

d)

ಶಿಕ್ಷಕ ಮತ್ತು ವಿದ್ಯಾರ್ಥಿ