Worksheetsರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು
Total questions: 26
Worksheet time: 2mins
ನೀರಿನ ವಿದ್ಯುದ್ವಿಭಜನೆಯು ವಿಭಜನೆಯ ಪ್ರತಿಕ್ರಿಯೆಯಾಗಿದೆ. ನೀರಿನ ವಿದ್ಯುದ್ವಿಭಜನೆಯ ಸಮಯದಲ್ಲಿ ಬಿಡುಗಡೆಯಾದ ಹೈಡ್ರೋಜನ್ ಮತ್ತು ಆಮ್ಲಜನಕ ಅನಿಲಗಳ ಮೋಲ್ ಅನುಪಾತ
1: 1
2: 1
4: 1
1: 2
ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ನಿಜ? ಬೆಳ್ಳಿ ಕ್ಲೋರೈಡ್ ನ್ನು ಸೂರ್ಯನ ಬೆಳಕಿನಲ್ಲಿ ದೀರ್ಘಾವಧಿಯವರೆಗೆ ತೆರೆದಿಟ್ಟಾಗ ಬೂದು ಬಣ್ಣಕ್ಕೆ ತಿರುಗುತ್ತದೆ ಕಾರಣ
(i) ಬೆಳ್ಳಿ ಕ್ಲೋರೈಡ್ ವಿಭಜನೆ ಮೂಲಕ ಬೆಳ್ಳಿಯ ಉತ್ಪತ್ತಿ.
(ii) ಬೆಳ್ಳಿ ಕ್ಲೋರೈಡ್ ನ ಉತ್ಪತನ
(III) ಬೆಳ್ಳಿ ಕ್ಲೋರೈಡ್ ನಿಂದ ಕ್ಲೋರಿನ್ ಅನಿಲದ ವಿಭಜನೆ
(iv) ಬೆಳ್ಳಿ ಕ್ಲೋರೈಡ್ ನ ಉತ್ಕರ್ಷಣ
(i) ಮಾತ್ರ
(i) ಮತ್ತು (iii)
(ii) ಮತ್ತು (iii)
(iv) ಮಾತ್ರ
ಕೆಳಗಿನವುಗಳಲ್ಲಿ ಯಾವುವು ರಾಸಾಯನಿಕ ದ್ವಿ ಸ್ಥಾನಪಲ್ಲಟನೆ ಪ್ರತಿಕ್ರಿಯೆ (ಗಳು)?
(i) Pb + CuCl2 → PbCl2 + Cu
(ii) Na2 SO4 + BaCl2 → BaSO4 + 2NaCl
(iii) C + O2 → CO2
(iv) CH4 + 2O2 → CO2 + 2H2O
(i) ಮತ್ತು (iv)
(ii) ಮಾತ್ರ
(i) ಮತ್ತು (ii)
(iii) ಮತ್ತು (iv)
1. ಕೆಳಗಿನವುಗಳಲ್ಲಿ ಯಾವುದು ಭೌತಿಕ ಬದಲಾವಣೆಯಲ್ಲ?
ನೀರನ್ನು ಆವಿಯಾಗುವಂತೆ ಕುದಿಸುವುದು
ಮಂಜುಗಡ್ಡೆ ಕರಗಿ ನೀರನ್ನು ನೀಡುವುದು
ನೀರಿನಲ್ಲಿ ಉಪ್ಪಿನ ಕರಗುವಿಕೆ
ದ್ರವೀಕೃತ ಪೆಟ್ರೋಲಿಯಂ (LPG)ನ ದಹಿಸುವಿಕೆ
ಆಕ್ಸಿಜನ್ ಪಡೆಯುವ ಅಥವಾ ಹೈಡ್ರೋಜನ್ ಕಳೆದುಕೊಳ್ಳುವ ಪ್ರಕ್ರಿಯೆ
ಅಪಕರ್ಷಣೆ
ಉತ್ಕರ್ಷಣೆ
ಆಕರ್ಷಣೆ
ವಿಕರ್ಷಣೆ
ಒಂದು ರಾಸಾಯನಿಕ ಕ್ರಿಯೆ ನಡೆದಿದೆ ಎಂದು ಅರ್ಥೈಸಬೇಕಾದರೆ ಅಲ್ಲಿ
ವಸ್ತುವಿನ ಸ್ಥಿತಿ ಬದಲಾವಣೆಯಾಗಿರಬೇಕು
ವಸ್ತುವಿನ ಬಣ್ಣದಲ್ಲಿ ಬದಲಾವಣೆಯಾಗಿರಬೇಕು
ವಸ್ತುವಿನ ತಾಪದಲ್ಲಿ ಬದಲಾವಣೆಯಾಗಿರಬೇಕು
ಈ ಮೇಲಿನ ಎಲ್ಲವೂ
ರಾಸಾಯನಿಕ ಕ್ರಿಯೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ
ರಾಸಾಯನಿಕ ಕ್ರಿಯೆಯಲ್ಲಿ ರಾಶಿಯನ್ನು ಸೃಷ್ಟಿಸುವುದಾಗಲಿ ಲಯಗೊಳಿಸುವುದಾಗಲಿ ಸಾಧ್ಯವಿಲ್ಲ
ರಾಶಿಯನ್ನು ಸೃಷ್ಟಿಸಬಹುದು ಹಾಗೂ ಲಯಗೊಳಿಸಬಹುದು
ರಾಸಾಯನಿಕ ಕ್ರಿಯೆಯಲ್ಲಿ ಪ್ರತಿವರ್ತಕ ಗಳು ಉತ್ಪನ್ನಗಳಿಗೆ ಸಮವಾಗಿರುವುದಿಲ್ಲ
ರಾಸಾಯನಿಕ ಕ್ರಿಯೆಯಲ್ಲಿ ರಾಶಿಯನ್ನು ಪರಿಗಣಿಸುವ ಅಗತ್ಯತೆ ಇರುವುದಿಲ್ಲ
ಈ ರಾಸಾಯನಿಕ ಕ್ರಿಯೆಯನ್ನು ಸಮದೂಗಿಸಿ Mg + O2 --> MgO
Mg + O2 --> MgO2
2 Mg + O2 -->2 MgO
2 Mg + 2 O2 -->2 MgO
3 Mg + O2 --> 3 MgO
ಇದು ಯಾವ ಪ್ರಕಾರದ ರಾಸಾಯನಿಕ ಕ್ರಿಯೆ ಯಾಗಿದೆ 2H2 + O2 --> 2H2O
ಸಂಯೋಗ ಕ್ರಿಯೆ
ದ್ವಿಸ್ಥಾನಪಲ್ಲಟ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ವಿಭಜನೆ ಕ್ರಿಯೆ
ಲೋಹಗಳು ತನ್ನ ಸುತ್ತಲಿರುವ ತೇವಾಂಶ ಮತ್ತು ಆಮ್ಲಗಳಿಂದ ಆಕ್ರಮಿಸಲ್ಪಟ್ಟು ಹಾನಿಗೊಳಗಾಗುವ ಕ್ರಿಯೆಯನ್ನು ಹೀಗೆನ್ನುವರು.
ಕಮಟುವಿಕೆ
ನಶಿಸುವಿಕೆ
ಕ್ರಿಯಾ ವರ್ಧನೆ
ಲೋಹೋದ್ಧರಣ
ಚಿಪ್ಸ್ ತಯಾರಕರು ಚಿಪ್ಸ್ ಉತ್ಕರ್ಷಣೆ ಗೊಳ್ಳುವುದನ್ನು ತಡೆಯಲು ಚಿಪ್ಸ್ ನ ಪೊಟ್ಟಣದಲ್ಲಿ ಈ ಅನಿಲವನ್ನು ತುಂಬುತ್ತಾರೆ
ಹೈಡ್ರೋಜನ್ ಅನಿಲ
ಕಾರ್ಬನ್ ಡೈಯಾಕ್ಸೈಡ್ ಅನಿಲ
ನೈಟ್ರೋಜೆನ್ ಅನಿಲ
ಸಲ್ಫರ್ ಡೈಆಕ್ಸೈಡ್ ಅನಿಲ
ಉತ್ಕರ್ಷಣೆ ಕ್ರಿಯೆಯೆಂದರೆ
ಆಕ್ಸಿಜನ್ ಅನ್ನು ಬಿಡುಗಡೆ ಮಾಡುವುದು ಅಥವಾ ಹೈಡ್ರೋಜನ್ ಅನ್ನು ಪಡೆಯುವುದು
ಆಕ್ಸಿಜನ್ ಅನ್ನು ಪಡೆದುಕೊಳ್ಳುವುದು ಅಥವಾ ಹೈಡ್ರೋಜನ್ ಅನ್ನು ಕಳೆದುಕೊಳ್ಳುವುದು
ಗಂಧಕದ ಡೈ ಆಕ್ಸೈಡ್ ನೊಂದಿಗೆ ವರ್ತಿಸುವುದು
ಗಂಧಕದ ಡೈ ಆಕ್ಸೈಡ್ ನೊಂದಿಗೆ ವರ್ತಿಸುವುದು
ಯಾವುದೇ ರಾಸಾಯನಿಕ ಕ್ರಿಯೆಯಲ್ಲಿ ತಳಭಾಗದಲ್ಲಿ ಸಂಗ್ರಹವಾಗುವ ಜಲ ವಿಲೀನಗೊಳ್ಳದ ಬಿಳಿಯ ವಸ್ತುವನ್ನು ಹೀಗೆನ್ನುವರು
ಕ್ರಿಯಾವರ್ಧಕ
ಉತ್ಕರ್ಷಕ
ಪ್ರಕ್ಷೇಪ
ಮೇಲಿನ ಎಲ್ಲವೂ
ಯಾವ ರಾಸಾಯನಿಕ ಕ್ರಿಯೆಯಲ್ಲಿ ಪ್ರತಿವರ್ತಕಗಳ ನಡುವೆ ಅಯಾನುಗಳ ವಿನಿಮಯ ನಡೆಯುತ್ತದೆಯೋ ಅಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆನ್ನುವರು
ಸಂಯೋಗ ಕ್ರಿಯೆ
ದ್ವಿಸ್ಥಾನಪಲ್ಲಟ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ವಿಭಜನೆ ಕ್ರಿಯೆ
ಯಾವ ರಾಸಾಯನಿಕ ಕ್ರಿಯೆಯಲ್ಲಿ ಉಷ್ಣವು ವಾತಾವರಣಕ್ಕೆ ಬಿಡುಗಡೆಯಾದರೆ ಅಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆನ್ನುವರು
ಬಹಿರುಷ್ಣಕ ಕ್ರಿಯೆ
ಅಂತರುಷ್ಣಕ ಕ್ರಿಯೆ
ಮೇಲಿನ ಎಲ್ಲವೂ ಸರಿ
ಮೇಲಿನ ಎಲ್ಲವೂ ತಪ್ಪು
ಯಾವ ರಾಸಾಯನಿಕ ಕ್ರಿಯೆಯಲ್ಲಿ ಉಷ್ಣವು ಹೀರಲ್ಪಡುತ್ತದೆಯೋ ಅಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆನ್ನುವರು
ಬಹಿರುಷ್ಣಕ ಕ್ರಿಯೆ
ಅಂತರುಷ್ಣಕ ಕ್ರಿಯೆ
ಮೇಲಿನ ಎಲ್ಲವೂ ಸರಿ
ಮೇಲಿನ ಎಲ್ಲವೂ ತಪ್ಪು
ಈ ರಾಸಾಯನಿಕ ಸಮೀಕರಣವನ್ನು ಪೂರ್ಣಗೊಳಿಸಿ CaCO3 (s) →
CaCO3 (s)
CO2 (g)
CaO (s) + CO2 (g)
Ca (s) + CO3 (g)
ಒಂದು ಪ್ರತಿವರ್ತಕ ದಿಂದ ಎರಡು ಅಥವಾ ಎರಡಕ್ಕಿಂತ ಹೆಚ್ಚು ಉತ್ಪನ್ನಗಳು ಉತ್ಪತ್ತಿಯಾದರೆ ಅಂತಹ ರಾಸಾಯನಿಕ ಕರೆಯನ್ನು ಹೀಗೆನ್ನುವರು.
ಸಂಯೋಗ ಕ್ರಿಯೆ
ದ್ವಿಸ್ಥಾನಪಲ್ಲಟ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ವಿಭಜನೆ ಕ್ರಿಯೆ
ಯಾವಾಗ ರಾಸಾಯನಿಕ ಕ್ರಿಯೆಯಲ್ಲಿ ಎರಡು ಅಥವಾ ಹೆಚ್ಚು ಪ್ರತಿವರ್ತಕಗಳು ಸೇರಿ ಒಂದೇ ಉತ್ಪನ್ನ ಉಂಟಾದರೆ ಅಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆ ಕರೆಯುತ್ತಾರೆ?
ವಿಭಜನೆ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ಸಂಯೋಗ ಕ್ರಿಯೆ
ದ್ವಿ ಸ್ಥಾನ ಪಲ್ಲಟ ಕ್ರಿಯೆ
ಪ್ರತಿವರ್ತಕ ಅಥವಾ ಉತ್ಪನ್ನಗಳಿಗೆ ಸಂಬಂಧಿಸಿದಂತೆ (s), (l), (g), ಹಾಗೂ (aq) ಸಂಕೇತಗಳ ಅರ್ಥವು ಕ್ರಮವಾಗಿ
ಘನ ದ್ರವ ಅನಿಲ ಹಾಗೂ ಜಲೀಯ
ಜಲೀಯ ಘನ ದ್ರವ ಹಾಗೂ ಅನಿಲ
ದ್ರವ ಜಲೀಯ ಘನ ಹಾಗೂ ಅನಿಲ
ಅನಿಲ ಘನ ದ್ರವ ಹಾಗೂ ಜಲೀಯ
ಸೀಸದ ನೈಟ್ರೇಟ್ ಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳು
ಸೀಸದ ನೈಟ್ರೇಟ್ ಕಾಸಿದರೆ ಉಷ್ಣ ವಿಭಜನೆ ಹೊಂದುವುದು
ಸೀಸದ ನೈಟ್ರೇಟ್ ಕಾಸಿದರೆ ಸೀಸದ ಆಕ್ಸೈಡ್ ಆಗಿ ವಿಭಜನೆ ಹೊಂದುವುದು
ಸೀಸದ ನೈಟ್ರೇಟ್ ಕಾಸಿದರೆ ಕಂದು ಬಣ್ಣದ NO2 ನ ಧೂಮ ಕೊಡುವುದು
ಸೀಸದ ನೈಟ್ರೇಟ್ ಕಾಸಿದರೆ ದ್ವಿವಿಭಜನೆ ಹೊಂದುವುದು
ಸೀಸದ ನೈಟ್ರೇಟ್ ಕಾಸಿದರೆ ಉಷ್ಣ ವಿಭಜನೆ ಹೊಂದುವುದಿಲ್ಲ
CaCO3------------> CaO + CO2 ಈ ಸಮೀಕರಣಲ್ಲಿರುವ ಸಿಮೆಂಟ್ ತಯಾರಿಕೆಗೆ ಬಳಸುವ ಕಚ್ಚಾ ವಸ್ತು
CaCO3
CaO
CO2
CO
ನೀರಿನೊಂದಿಗೆ ಕ್ಯಾಲ್ಸಿಯಂ ಆಕ್ಸೈಡ್ ವರ್ತಿಸಿ ಅರಳಿದ ಸುಣ್ಣ ಉಂಟಾಗುವ ಕ್ರಿಯೆ
ಸಂಯೋಗ ಮತ್ತು ಅಂರುಷ್ಣಕ ಕ್ರಿಯೆ
ಸಂಯೋಗ ಮತ್ತು ಬಹಿರುಷ್ಣಕ ಕ್ರಿಯೆ
ವಿಭಜನೆ ಮತ್ತು ಬಹಿರುಷ್ಣಕ ಕ್ರಿಯೆ
ದ್ವಿವಿಭಜನೆ ಮತ್ತು ಬಹಿರುಷ್ಣಕ ಕ್ರಿಯೆ
ಮೆಗ್ನೀಸಿಯಂ ಪಟ್ಟಿಯನ್ನು ಗಾಳಿಯಲ್ಲಿ ಉರಿಸುವ ಮೊದಲು ಸ್ವಚ್ಚಗೊಳಿಸಬೇಕು.ಏಕೆ?
ಅದರಲ್ಲಿರುವ ಸೂಕ್ಷ್ಮ ಜೀವಿಗಳನ್ನು ತೆಗೆಯಲು
ಅದನ್ನು ಬಿಸಿ ಮಾಡಲು
ಅದರ ಆಕ್ಸೈಡನ್ನು ತೆಗೆಯಲು
ಅದರ ಅಂದ ಹೆಚ್ಚಿಸಲು
ರಾಸಾಯನಿಕ ಕ್ರಿಯೆ ಜರುಗಿರುವುದಕ್ಕೆ ಪುರಾವೆಗಳು
ಸ್ಥಿತಿ ಬದಲಾವಣೆ
ಬಣ್ಣದಲ್ಲಿ ಬದಲಾವಣೆ
ಪರಿಮಾಣದಲ್ಲಿ ಬದಲಾವಣೆ
ತಾಪದಲ್ಲಿ ಬದಲಾವಣೆ
ಅನಿಲದ ಬಿಡುಗಡೆ
ಸತುವಿನ ಚೂರುಗಳ ಮೇಲೆ ಸಾರರಿಕ್ತ HCl ಹಾಕಿದಾಗ ಈ ರಾಸಾಯನಿಕ ಕ್ರಿಯೆ ಜರುಗಿತು
ಸತುವಿನ ಲವಣ ಮತ್ತು ಹೈಡ್ರೋಜನ್ ಅನಿಲ ಬಿಡುಗಡೆಯಾಯಿತು
ಸತುವಿನ ಆಕ್ಸೈಡ್ ಮತ್ತು ಹೈಡ್ರೋಜನ್ ಅನಿಲ ಬಿಡುಗಡೆಯಾಯಿತು
ಸತು ಮತ್ತು ಹೈಡ್ರೋಜನ್ ಅನಿಲ ಬಿಡುಗಡೆಯಾಯಿತು
ಸತುವಿನ ಲವಣ ಮತ್ತು ಕ್ಲೋರಿನ್ ಅನಿಲ ಬಿಡುಗಡೆಯಾಯಿತು
