NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( 'ಕೆಮ್ಮನೆ ಮೀಸೆವೊತ್ತೆನೇ)
Total questions: 50
Worksheet time: 25mins
Name
Class
Date
1.
'ಕೆಮ್ಮನೆ ಮೀಸೆವೊತ್ತೆನೇ' ಪದ್ಯವನ್ನು ಬರೆದ ಕವಿ
a)
ಲಕ್ಷ್ಮೀಶ
b)
ಪಂಪ
c)
ಕುಮಾರವ್ಯಾಸ
d)
ರನ್ನ
2.
ಪಂಪ ಕವಿಯ ಜನ್ಮಸ್ಥಳ
a)
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು
b)
ವೆಂಗಿಮಂಡಲದ ವೆಂಗಿಪಳು ಎಂಬ ಅಗ್ರಹಾರ
c)
ಗದಗ ಪ್ರಾಂತ್ಯದ ಕೋಳಿವಾಡ
d)
ಬಾಗಲಕೋಟೆ ಜಿಲ್ಲೆಯ ಮುದುವೊಳಲು
3.
ಕವಿ ಪಂಪನ ಕಾಲ
a)
ಕ್ರಿ.ಶ.1550
b)
ಕ್ರಿ.ಶ.902
c)
ಕ್ರಿ.ಶ.1430
d)
ಕ್ರಿ.ಶ.949
4.
ಕವಿ ಪಂಪ ಬರೆದ ಕೃತಿಗಳು
a)
ಜೈಮಿನಿ ಭಾರತ ಮತ್ತು ಪಂಚತಂತ್ರ
b)
ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ
c)
ಕರ್ಣಾಟ ಭಾರತ ಕಥಾಮಂಜರಿ ಮತ್ತು ಐರಾವತ
d)
ಅಜಿತ ತೀರ್ಥಂಕರ ಪುರಾಣ ಮತ್ತು ಸಾಹಸ ಭೀಮವಿಜಯ
5.
ಕವಿ ಪಂಪನಿಗೆ ಇದ್ದ ಬಿರುದುಗಳು
a)
ಉಪಮಾಲೋಲ, ಕರ್ಣಾಟ ಕವಿವಿನೂತನ ಚೈತ್ರ
b)
ಸರಸ್ವತಿ ಮಣಿಹಾರ, ಕವಿತಾಗುಣಾರ್ಣವ, ಸಂಸಾರ ಸಾರೋದಯ
c)
ರೂಪಕ ಸಾಮ್ರಾಜ್ಯದ ಚಕ್ರವರ್ತಿ
d)
ಕವಿಚಕ್ರವರ್ತಿ
6.
ಪಂಪಕವಿಗೆ ಆಶ್ರಯ ನೀಡಿದವರು
a)
ಚಾಲುಕ್ಯರ ಅರಿಕೇಸರಿ
b)
ಇಮ್ಮಡಿ ತೈಲಪ
c)
ಚಾಲುಕ್ಯರ ಜಗದೇಕಮಲ್ಲ
d)
ಇರಿವಬೆಡಂಗ
7.
'ಕೆಮ್ಮನೆ ಮೀಸೆವೊತ್ತೇನೆ' ಪದ್ಯದ ಆಕರಗ್ರಂಥ
a)
ವಡ್ಡಾರಾಧನೆ
b)
ಸಾಹಸ ಭೀಮವಿಜಯ
c)
ಕರ್ಣಾಟ ಭಾರತ ಕಥಾಮಂಜರಿ
d)
ವಿಕ್ರಮಾರ್ಜುನ ವಿಜಯ
8.
ಕನ್ನಡದ ಕವಿ ಚಕ್ರವರ್ತಿಗಳು ಯಾರು?
a)
ಪೊನ್ನ ರನ್ನ ಜನ್ನ
b)
ಪಂಪ ಪೊನ್ನ ರನ್ನ
c)
ಪಂಪ ಜನ್ನ ಪೊನ್ನ
d)
ಕುಮಾರವ್ಯಾಸ ಲಕ್ಷ್ಮೀಶ ಜನ್ನ
9.
ಕನ್ನಡದ ರತ್ನತ್ರಯರು ಯಾರು?
a)
ಪೊನ್ನ ರನ್ನ ಜನ್ನ
b)
ಪಂಪ ಪೊನ್ನ ರನ್ನ
c)
ಕುಮಾರವ್ಯಾಸ ಪಂಪ ಜನ್ನ
d)
ಲಕ್ಷ್ಮೀಶ ಪೊನ್ನ ಜನ್ನ
10.
ಪಂಪ ತನ್ನ ಕಾವ್ಯದಲ್ಲಿ ಆಶ್ರಯದಾತ ಅರಿಕೇಸರಿಯನ್ನು ಯಾರಿಗೆ ಹೋಲಿಸಿದ್ದಾನೆ ?
a)
ಅರ್ಜುನ
b)
ಭೀಮ
c)
ಧರ್ಮರಾಯ
d)
ದುರ್ಯೋಧನ
11.
ದ್ರೋಣ ಮತ್ತು ದ್ರುಪದರ ಗುರುಗಳು
a)
ಭೀಷ್ಮಾಚಾರ್ಯ
b)
ಯಜ್ಞಸೇನ
c)
ಪ್ರಜಾಪತಿ ಕಶ್ಯಪರು
d)
ಮತಂಗ ಮುನಿ
12.
ದ್ರುಪದನು ತಾನು ದೊರೆಯಾದಾಗ ತನ್ನ ಬಳಿಗೆ ಬಂದರೆ ಸಹಾಯ ಮಾಡುವುದಾಗಿ ಯಾರಿಗೆ ಹೇಳಿದನು ?
a)
ಪರಶುರಾಮರಿಗೆ
b)
ಅಶ್ವತ್ಥಾಮನಿಗೆ
c)
ದ್ರೋಣಾಚಾರ್ಯರಿಗೆ
d)
ಪಡಿಯರನಿಗೆ
13.
ದ್ರುಪದ ರಾಜನು ದ್ರೋಣ ತನ್ನ ಸಹಪಾಠಿಯೆಂದು ಏಕೆ ಗುರುತಿಸದಾದನು ?
a)
ಮದ್ಯಪಾನ ಮಾಡಿದ್ದರಿಂದ
b)
ಅಧಿಕಾರದ ಮದದಿಂದ
c)
ವಯಸ್ಸಾಗಿದ್ದರಿಂದ
d)
ಮರೆವಿನಿಂದ
14.
ಪಂಪಮಹಾಕವಿ ವಿರಚಿತ 'ವಿಕ್ರಮಾರ್ಜುನವಿಜಯಂ' ಕಾವ್ಯವನ್ನು ಸಂಪಾದಿಸಿದವರು
a)
ಆರ್. ನರಸಿಂಹಾಚಾರ್ಯರು
b)
ಪು.ತಿ. ನರಸಿಂಹಾಚಾರ್ಯರು
c)
ಎ.ಎನ್. ಮೂರ್ತಿರಾವ್
d)
ಡಿ.ಎಲ್. ನರಸಿಂಹಾಚಾರ್ಯರು
15.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 'ಸುವರ್ಣ ಯುಗ' ಎಂದು ಕರೆಯಲಾಗುವ ಶತಮಾನ
a)
9ನೇ ಶತಮಾನ
b)
10ನೇ ಶತಮಾನ
c)
12ನೇ ಶತಮಾನ
d)
15ನೇ ಶತಮಾನ
16.
ದ್ರೋಣನಿಗೆ ಬಡತನವು ಬರಲು ಸಹಾಯಕ್ಕಾಗಿ ಮೊದಲು ಯಾರ ಬಳಿಗೆ ಬಂದನು ?
a)
ದ್ರುಪದನ ಬಳಿಗೆ
b)
ಪರಶುರಾಮರ ಬಳಿಗೆ
c)
ಅಶ್ವತ್ಥಾಮನ ಬಳಿಗೆ
d)
ಕೃಷ್ಣನ ಬಳಿಗೆ
17.
ದ್ರೋಣನು ಪರಶುರಾಮರಲ್ಲಿಗೆ ಏಕೆ ಬಂದನು ?
a)
ದಾನ ಕೊಡಲು
b)
ಶಸ್ತ್ರಗಳನ್ನು ಬೇಡಿಕೊಂಡು
c)
ದ್ರವ್ಯಾರ್ಥಿಯಾಗಿ
d)
ತಪಸ್ಸಿಗೆ ಕಳುಹಿಸಲು
18.
ದ್ರೋಣನು ದ್ರವ್ಯಾರ್ಥಿಯಾಗಿ ಯಾರೊಡನೆ ಪರಶುರಾಮನ ಬಳಿಗೆ ಬಂದನು ?
a)
ದ್ರುಪದನೊಡನೆ
b)
ಪಡಿಯರನೊಂದಿಗೆ
c)
ಭ್ರಾಂತಿಯೊಡನೆ
d)
ಅಶ್ವತ್ಥಾಮನೊಡನೆ
19.
ಕುಂಭಸಂಭವ ಎಂದು ಯಾರನ್ನು ಕರೆಯಲಾಗುತ್ತದೆ ?
a)
ಅಶ್ವತ್ಥಾಮನನ್ನು
b)
ದ್ರುಪದನನ್ನು
c)
ದ್ರೋಣಾಚಾರ್ಯರನ್ನು
d)
ಪರಶುರಾಮರನ್ನು
20.
ದ್ರೋಣನು ದ್ರವ್ಯಾರ್ಥಿಯಾಗಿ ಬಂದಾಗ ಪರಶುರಾಮರು ಎಲ್ಲಿಗೆ ಹೊರಟಿದ್ದರು ?
a)
ತಪೋವನಕ್ಕೆ
b)
ಯುದ್ಧಕ್ಕೆ
c)
ದ್ರುಪದನ ಅರಮನೆಗೆ
d)
ಕೌರವನ ಅರಮನೆಗೆ
21.
ನಾರುಮಡಿಯಿಂದ ಸುತ್ತಿದ ಸೊಂಟವುಳ್ಳವನಾಗಿ,ಜಡೆಯ ಸಮೂಹ ಗಳಿಂದ ಕೂಡಿದವನಾಗಿ ತಪೋವನಕ್ಕೆ ಹೊರಟವರು ಯಾರು ?
a)
ದ್ರೋಣಾಚಾರ್ಯರು
b)
ಪರಶುರಾಮರು
c)
ಯಜ್ಞಸೇನ ಮುನಿಗಳು
d)
ಅಶ್ವತ್ಥಾಮ
22.
ದ್ರವ್ಯಾರ್ಥಿಯಾಗಿ ಬಂದ ದ್ರೋಣರನ್ನು ಪರಶುರಾಮರು ಯಾವುದರಲ್ಲಿ ಅರ್ಘ್ಯವನ್ನು ಕೊಟ್ಟು ಪೂಜಿಸಿದರು ?
a)
ಮಣ್ಣಿನ ಪಾತ್ರೆಯಲ್ಲಿ
b)
ಚಿನ್ನದ ಪಾತ್ರೆಯಲ್ಲಿ
c)
ಬೆಳ್ಳಿಯ ಪಾತ್ರೆಯಲ್ಲಿ
d)
ಕಂಚಿನ ಪಾತ್ರೆಯಲ್ಲಿ
23.
ದ್ರೋಣಾಚಾರ್ಯರಿಗೆ ಪರಶುರಾಮರು ಮಣ್ಣಿನ ಪಾತ್ರೆಯಲ್ಲಿ ಅರ್ಘ್ಯವನ್ನು ಕೊಡಲು ಕಾರಣ
a)
ಬಡತನ ಬಂದಿದ್ದರಿಂದ
b)
ತಪಸ್ಸಿಗೆ ಹೊರಟಿದ್ದರಿಂದ
c)
ಕನಕ ಪಾತ್ರೆ ಇಲ್ಲದಿರುವುದರಿಂದ
d)
ದ್ರುಪದನು ವ್ಯಗ್ರಚಿತ್ತನಾಗಿದ್ದರಿಂದ
24.
ಅಶ್ವತ್ಥಾಮನ ತಂದೆ ಯಾರು ?
a)
ಪರಶುರಾಮ
b)
ಯಜ್ಞಸೇನ
c)
ದ್ರೋಣಾಚಾರ್ಯರು
d)
ಭೀಷ್ಮಾಚಾರ್ಯರು
25.
ಪರಶುರಾಮರನ್ನು ಭಾರ್ಗವ ಎಂದು ಕರೆಯಲು ಕಾರಣ
a)
ಭೃಗು ವಂಶದಲ್ಲಿ ಜನಿಸಿದವನಾಗಿದ್ದರಿಂದ
b)
ಭೃಂಗೋಧರ ಕಾಯಕಾಂತಿಯುಳ್ಳವನಾಗಿದ್ದರಿಂದ
c)
ಬ್ರಾಹ್ಮಣ ವಂಶದವನಾಗಿದ್ದರಿಂದ
d)
ಸಂಪತ್ತನ್ನೆಲ್ಲ ದಾನಮಾಡಿದ್ದರಿಂದ
26.
ಪರಶುರಾಮರು ಒಡವೆಗಳನ್ನೆಲ್ಲ(ಸಂಪತ್ತನ್ನೆಲ್ಲ)ಯಾರಿಗೆ ಕೊಟ್ಟರು ?
a)
ದ್ರೋಣಾಚಾರ್ಯರಿಗೆ
b)
ಅಶ್ವತ್ಥಾಮನಿಗೆ
c)
ಬೇಡಿದವರಿಗೆ
d)
ಗುರುಗಳಿಗೆ
27.
ಪರಶುರಾಮರು ಭೂಮಂಡಲವನ್ನು ಯಾರಿಗೆ ಕೊಟ್ಟರು ?
a)
ದ್ರೋಣಾಚಾರ್ಯರಿಗೆ
b)
ಅಶ್ವತ್ಥಾಮನಿಗೆ
c)
ಬೇಡಿದವರಿಗೆ
d)
ಗುರುಗಳಿಗೆ
28.
ಪರಶುರಾಮರ ಗುರುಗಳು ಯಾರು ?
a)
ಪ್ರಜಾಪತಿ ಕಶ್ಯಪ ಮುನಿಗಳು
b)
ಮತಂಗ ಮುನಿಗಳು
c)
ದ್ರೋಣಾಚಾರ್ಯರು
d)
ವಾಲ್ಮೀಕಿ ಮುನಿಗಳು
29.
"ಈಗಳೊಂದಡಿಕೆಯುಮಿಲ್ಲ ಕೈಯೊಳ್ " - ಈ ವಾಕ್ಯವನ್ನು ಹೇಳಿದವರು
a)
ಪರಶುರಾಮರು
b)
ದ್ರೋಣಾಚಾರ್ಯರು
c)
ದ್ರುಪದ
d)
ಪಡಿಯರ
30.
ಶಾಸ್ತ್ರಪಾರಂಗತನಾದ ದ್ರೋಣಾಚಾರ್ಯರನ್ನು ಹೇಗೆ ಸಂತಸಪಡಿಸಲಿ ಎಂದು ಹೇಳಿದವರು
a)
ದ್ರುಪದ
b)
ಅಶ್ವತ್ಥಾಮ
c)
ಪರಶುರಾಮ
d)
ಪಡಿಯರ
31.
ಪರಶುರಾಮರ ಬಳಿ ಇದ್ದವುಗಳು
a)
ಭೂಮಂಡಲ ಮತ್ತು ಒಡವೆಗಳು
b)
ಕನಕ ಪಾತ್ರೆ ಮತ್ತು ಕಂಚಿನ ಪಾತ್ರೆ
c)
ಧನಸ್ಸು ಮತ್ತು ದಿವ್ಯವಾದ ಶರಗಳ ಸಮೂಹ
d)
ಅರಮನೆ ಮತ್ತು ಆನೆ
32.
ದ್ರೋಣರಿಗೆ ಯಾವುದು ಧನ(ಸಂಪತ್ತು)ವಾಗಿತ್ತು ?
a)
ಧನಸ್ಸು
b)
ವಿದ್ಯೆ
c)
ಶರ
d)
ಕಳ್ಳು
33.
ಪರಶುರಾಮರು ದ್ರೋಣರಿಗೆ ಕೊಟ್ಟ ಪ್ರಧಾನವಾದ ಅಸ್ತ್ರಗಳು
a)
ವಾರುಣ ಅಸ್ತ್ರ
b)
ವಾಯುವ್ಯ ಅಸ್ತ್ರ
c)
ಆಗ್ನೇಯ ಮತ್ತು ಪೌರಂದರ ಅಸ್ತ್ರಗಳು
d)
ಈ ಎಲ್ಲಾ ಅಸ್ತ್ರಗಳು
34.
ದ್ರೋಣಾಚಾರ್ಯರ ಬಾಲ್ಯದ ಗೆಳೆಯ
a)
ಪರಶುರಾಮ
b)
ದ್ರುಪದ
c)
ಯಜ್ಞಸೇನ
d)
ಭಾರ್ಗವ
35.
ದ್ರೋಣಾಚಾರ್ಯರ ಬಾಲ್ಯದ ಗೆಳೆಯ ದ್ರುಪದ ಎಲ್ಲಿ ಅರಸನಾಗಿದ್ದನು ?
a)
ಛತ್ರಾವತಿಯಲ್ಲಿ
b)
ಅಯೋಧ್ಯೆಯಲ್ಲಿ
c)
ಉಜ್ಜಯಿನಿಯಲ್ಲಿ
d)
ಹಸ್ತಿನಾವತಿಯಲ್ಲಿ
36.
"ನಿಮ್ಮ ಒಡನಾಡಿ ಗೆಳೆಯನಾದ ದ್ರೋಣ ಎಂಬ ಪಾರ್ವನು ಬಂದಿದ್ದಾನೆಂದು ನಿಮ್ಮ ಅರಸನಿಗೆ ತಿಳಿಸು" ಎಂದು ಯಾರು ಯಾರಿಗೆ ಹೇಳಿದರು ?
a)
ದ್ರುಪದ - ಪಡಿಯರನಿಗೆ
b)
ದ್ರೋಣ - ಪಡಿಯರನಿಗೆ
c)
ಪರಶುರಾಮ - ದ್ರೋಣನಿಗೆ
d)
ದ್ರೋಣ - ದ್ರುಪದನಿಗೆ
37.
"ವಿದ್ಯಾಧನಮೆ ಧನಮಪ್ಪುದು" -ಈ ಮಾತನ್ನು ಯಾರು ಯಾರಿಗೆ ಹೇಳಿದರು ?
a)
ಪರಶುರಾಮ - ದ್ರೋಣರಿಗೆ
b)
ದ್ರೋಣ - ಪರಶುರಾಮರಿಗೆ
c)
ಅಶ್ವತ್ಥಾಮ - ದ್ರೋಣನಿಗೆ
d)
ದ್ರೋಣ - ದ್ರುಪದನಿಗೆ
38.
ದ್ರೋಣರು ದ್ರುಪದನು ಅರಮನೆಯ ಬಾಗಿಲೊಳು ನಿಂತು ಯಾರನ್ನು ಕರೆದರು ?
a)
ಪರಶುರಾಮರನ್ನು
b)
ಅಶ್ವತ್ಥಾಮನನ್ನು
c)
ಪಡಿಯರನನ್ನು
d)
ದ್ರುಪದನನ್ನು
39.
"ದ್ರೋಣ ಎಂಬುವವನು ಪಾರ್ವನೆ ? ಅವನು ನನಗೆ ಹೇಗೆ ಗೆಳೆಯ ! ಅವನಾರೆಂಬುದನ್ನು ತಿಳಿಯನು ;ನೂಕು ಅಂಥವನನ್ನು - ಎಂದು ಯಾರು ಹೇಳಿದರು ?
a)
ಪರಶುರಾಮ
b)
ಪಡಿಯರ
c)
ದ್ರುಪದ
d)
ದ್ರೋಣಚಾರ್ಯ
40.
"ನೀನು-ನಾನು ಜೊತೆಯಲ್ಲಿ ಓದಿದೆವು ಎಂಬುದನ್ನು ತಿಳಿಯಿರೇ ಅಣ್ಣ"- ಎಂದು ಯಾರು ಯಾರಿಗೆ ಹೇಳಿದರು ?
a)
ದ್ರೋಣ - ದ್ರುಪದನಿಗೆ
b)
ದ್ರುಪದ - ದ್ರೋಣನಿಗೆ
c)
ದ್ರೋಣ - ಪರಶುರಾಮರಿಗೆ
d)
ಪರಶುರಾಮ - ದ್ರೋಣರಿಗೆ
41.
"ರಾಜನಿಗೂ ಬ್ರಾಹ್ಮಣರಿಗೂ ಹೇಗೆ ಗೆಳೆತನ ? ಮನುಷ್ಯರಾದವರು ಇಷ್ಟೊಂದು ನಾಚಿಕೆ ಕೆಟ್ಟವರಾಗುತ್ತಾರೆಯೇ " - ಎಂದು ಯಾರು ಯಾರನ್ನು ಹೀಯಾಳಿಸಿದರು ?
a)
ದ್ರೋಣ - ದ್ರುಪದನಿಗೆ
b)
ದ್ರುಪದ - ದ್ರೋಣನಿಗೆ
c)
ದ್ರೋಣ - ಪರಶುರಾಮರಿಗೆ
d)
ಪರಶುರಾಮ - ದ್ರೋಣರಿಗೆ
42.
ದ್ರೋಣಾಚಾರ್ಯರು ಹೇಳಿದಂತೆ ಐಶ್ವರ್ಯ ಬಂದಾಗ ಮನುಷ್ಯರ ವರ್ತನೆಗಳು ಹೇಗಾಗುತ್ತವೆ ?
a)
ಮದ್ಯ ಕುಡಿದವರ ರೀತಿ ಮಾತುಗಳು ತೊದಲಾಗುತ್ತವೆ.
b)
ಮುಖದಲ್ಲಿ ವಕ್ರ ಚೇಷ್ಟೆ ಉಂಟಾಗುತ್ತದೆ.
c)
ಮಾತುಗಳು ನಾಚಿಕೆ ಇಲ್ಲದಂತಾಗಿ ಬಾಂಧವ್ಯವನ್ನು ಮರೆಯುವಂತೆ ಮಾಡುತ್ತವೆ.
d)
ಎಲ್ಲಾ ರೀತಿಯ ವರ್ತನೆಗಳು ಉಂಟಾಗುತ್ತವೆ.
43.
ಸಿರಿ ಯಾವುದರೊಡನೆ ಹುಟ್ಟಿದ್ದು
a)
ಕಳ್ಳಿನೊಡನೆ(ಹೆಂಡ)
b)
ಭೂಮಿಯೊಡನೆ
c)
ಸಮುದ್ರದೊಡನೆ
d)
ಮರದೊಡನೆ
44.
ನೊಣಕ್ಕೆ ಯಾವುದು ಶ್ರೇಷ್ಠ ?
a)
ಅನ್ನ
b)
ಹೆಂಡ
c)
ಸಿರಿ
d)
ತಿಪ್ಪೆ
45.
"ದುಷ್ಟ ನೊಣಕ್ಕೆ ತಿಪ್ಪೆಯೇ ಶೇಷ್ಠ ಎಂಬಂತೆ ನಿನ್ನ ಯೋಗ್ಯತೆ(ಪರಾಕ್ರಮ)ನನ್ನವರೆಗೂ ಉಂಟೆ ? ಎಂದು ಯಾರು ಯಾರಿಗೆ ಹೇಳಿದರು ?
a)
ದ್ರೋಣ - ದ್ರುಪದನಿಗೆ
b)
ದ್ರುಪದ - ದ್ರೋಣನಿಗೆ
c)
ದ್ರೋಣ - ಪರಶುರಾಮರಿಗೆ
d)
ಪರಶುರಾಮ - ದ್ರೋಣರಿಗೆ
46.
"ನಿರಾಯಾಸವಾಗಿ ಎನ್ನ ಶಿಷ್ಯರಿಂದ ಗಾಬರಿ ಪಡುವಂತೆ ನಿನ್ನನ್ನು ಕಟ್ಟಿಸಿದೆ ಬಿಟ್ಟರೆ ಸುಮ್ಮನೆ ಮೀಸೆವೊತ್ತನೆ "- ಎಂದು ಯಾರು ಯಾರ ಮೇಲೆ ಪ್ರತಿಜ್ಞೆ ಮಾಡಿದರು ?
a)
ದ್ರುಪದ -ದ್ರೋಣನನ್ನು ಮೇಲೆ
b)
ದ್ರೋಣ - ದ್ರುಪದನ ಮೇಲೆ
c)
ದ್ರೋಣ - ಪಡಿಯರನ ಮೇಲೆ
d)
ಅಶ್ವತ್ಥಾಮ - ದ್ರುಪದನ ಮೇಲೆ
47.
ಸಭಾವಲಯದಲ್ಲಿ ದ್ರೋಣನನ್ನು ಹೀಯಾಳಿಸಿದವರು
a)
ಪರಶುರಾಮ
b)
ಪಡಿಯರ (ಸೇವಕ)
c)
ದ್ರುಪದ
d)
ಅಶ್ವತ್ಥಾಮ
48.
" ಜಲಕ್ಕನೀಗಳರಿದೆಂ ಸಿರಿ ಕಳ್ಳೊಡವುಟ್ಟಿತೆಂಬುದಂ " (ವಿಶದವಾಗಿ ತಟ್ಟನೆ ಅರಿತೆನು ಸಿರಿ ಹೆಂಡದೊಡನೆ ಹುಟ್ಟಿತು ಎಂಬುದನ್ನು) - ಈ ಮಾತನ್ನು ಯಾರು ಯಾರಿಗೆ ಹೇಳಿದರು ?
a)
ದ್ರೋಣ - ದ್ರುಪದನಿಗೆ
b)
ದ್ರುಪದ - ದ್ರೋಣನಿಗೆ
c)
ದ್ರೋಣ - ಪರಶುರಾಮರಿಗೆ
d)
ಪರಶುರಾಮ - ದ್ರೋಣರಿಗೆ
49.
"ನೊಳವಿಂಗೆ ಕುಪ್ಪೆ ವರಂ" ಈ ವಾಕ್ಯದ ಸರಿಯಾದ ಅರ್ಥ
a)
ನೊಣಕ್ಕೆ ತಿಪ್ಪೆಯೇ ಶ್ರೇಷ್ಠ
b)
ನೋಡಲು ತಿಪ್ಪೆ ವಾಸನೆ
c)
ನೊಣಕ್ಕೆ ತಿಪ್ಪೆಯಾಗುವ ವರವಿದೆ
d)
ನೊಣ ಮತ್ತು ತಿಪ್ಪೆ ವರ -ವಧುಗಳು
50.
"ಜೊತೆಯಲ್ಲಿ ಓದಿದೆವು ಎಂಬ ಕಾರಣದಿಂದ ನಿನ್ನನ್ನು ಕೊಲ್ಲದೆ ಬಿಡುತ್ತಿದ್ದೇನೆ" ಎಂದು ಯಾರು ಯಾರಿಗೆ ಹೇಳಿದರು ?
a)
ದ್ರೋಣ - ದ್ರುಪದನಿಗೆ
b)
ದ್ರುಪದ - ದ್ರೋಣನಿಗೆ
c)
ದ್ರೋಣ - ಪಡಿಯರನಿಗೆ
d)
ಅಶ್ವತ್ಥಾಮ - ದ್ರುಪದನಿಗೆ
Reset
