Worksheets10ನೇಸವಿ:ಭೂಗೋಳ:ಅಧ್ಯಾಯ:09 ಭಾಗ 02:ರಚನೆ:ನಟರಾಜ್ &ಭಾಗ್ವತ್
Total questions: 15
Worksheet time: 8mins
ಇದು ಪ್ರಥಮ, ದ್ವಿತೀಯ ಮತ್ತು ತೃತೀಯ ಕ್ಷೇತ್ರದ ಮಾನವನ ಚಟುವಟಿಕೆಗಳ ಎಲ್ಲಾ ಪರಿಸ್ಥಿತಿಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ
ಸಾರಿಗೆ ವ್ಯವಸ್ಥೆ
ಕೈಗಾರಿಕೆ
ಕೃಷಿ
ಖನಿಜ ಸಂಪನ್ಮೂಲ
ಸಮರ್ಥನೀಯ ಮತ್ತು ಸುಲಭ ದರದ ಸಾರಿಗೆ ಸೌಲಭ್ಯವು ಸಂಪನ್ಮೂಲಗಳು ಮತ್ತು ಇದರ ಅಭಿವೃದ್ಧಿಗೆ ನೆರವಾಗುತ್ತದೆ.
ಕೈಗಾರಿಕೆ
ಕೃಷಿ
ಮಾರುಕಟ್ಟೆ
ಕೊಟ್ಟಿರುವ ಯಾವುದೂ ಅಲ್ಲ
ಬಹುಪ್ರಾಚೀನ ಹಾಗೂ ಸಾರ್ವತ್ರಿಕವಾದ ಸಾರಿಗೆ ಮಾಧ್ಯಮವಾದ ಇದು ಒಂದು
ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುವುದು
ಜಲಸಾರಿಗೆ
ರಸ್ತೆ ಸಾರಿಗೆ
ರೈಲ್ವೆ ಸಾರಿಗೆ
ವಾಯು ಸಾರಿಗೆ
ದೇಶದ ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳ ಪ್ರಗತಿಗಾಗಿ ರಸ್ತೆಗಳು ಅತ್ಯಾವಶ್ಯಕ. ಏಕೆಂದರೆ
ರಸ್ತೆಗಳನ್ನು ಅರಣ್ಯ ಮತ್ತು ಗುಡ್ಡಗಾಡುಗಳಲ್ಲಿಯೂ ನಿರ್ಮಿಸಬಹುದು.
ಅವು ಬಹುದೂರದ ಅಥವಾ
ಎಲ್ಲೋ ಇರುವ ಸ್ಥಳಗಳನ್ನು ಪಟ್ಟಣ ಮತ್ತು ನಗರಗಳೊಂದಿಗೆ ಸಂಪರ್ಕ ಕಲ್ಪಿಸುತ್ತವೆ.
ಮನೆಮನೆಗೆ ಸೇವೆ ಕಲ್ಪಿಸುತ್ತವೆ. ಮೂಲೆ ಮೂಲೆಗಳಲ್ಲಿರುವ ಹಳ್ಳಿಗಳನ್ನು ಸಂಪರ್ಕಿಸಲು ರಸ್ತೆಗಳು ಬಹಳ ಸೂಕ್ತವಾದವು.
ಕೊಟ್ಟಿರುವ ಎಲ್ಲಾ ಅಂಶಗಳು
ರಸ್ತೆ ಸಾರಿಗೆಯು ಅತ್ಯಂತ ಮಹತ್ವದ್ದು ಏಕೆಂದರೆ
ರೈಲು ಸಂಚಾರ, ಬಂದರು ಮತ್ತು ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುತ್ತವೆ.
ಪ್ರವಾಸೋದ್ಯಮ, ವ್ಯಾಪಾರ ಮತ್ತು ವಾಣಿಜ್ಯ ಹಾಗೂ ಕೈಗಾರಿಕಾಭಿವೃದ್ಧಿಗೆ ಹೆಚ್ಚು ನೆರವಾಗುತ್ತವೆ.
ಉದ್ಯೋಗಾವಕಾಶ ಕಲ್ಪಿಸುತ್ತವೆ. ರಕ್ಷಣಾ ಇಲಾಖೆಯಲ್ಲಿ, ಅದರಲ್ಲೂ ಗಡಿಪ್ರದೇಶಗಳಲ್ಲಿ ರಸ್ತೆಗಳು ಹೆಚ್ಚು ಉಪಯುಕ್ತ.
ಕೊಟ್ಟಿರುವ ಎಲ್ಲಾ ಅಂಶಗಳು
ಜಲ್ಲಿ ಮತ್ತು ಮಣ್ಣುಗಳಿಂದ ನಿರ್ಮಿಸಿದ ಕಚ್ಛಾರಸ್ತೆಗಳು , ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿದ್ದು ಇವುಗಳನ್ನು ಸುಧಾರಣೆ ಮಾಡುವ ದಿಶೆಯಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ
ಪ್ರಧಾನಮಂತ್ರಿಗಳ ‘ಗ್ರಾಮಸಡಕ್ ಯೋಜನೆ’
ಪ್ರಧಾನಮಂತ್ರಿಗಳ ‘ಸುವರ್ಣ ಗ್ರಾಮೋದಯ ಯೋಜನೆ’
ಸೂಪರ್ ಹೆದ್ದಾರಿಗಳು
ಸುವರ್ಣ ಚತುಷ್ಕೋನ ಯೋಜನೆ
ನಾಲ್ಕರಿಂದ ಆರು ಪಥಗಳ ಉತ್ತಮ ರಸ್ತೆಗಳ ರಚನಾ ಯೋಜನೆಯಾದ ಇದು 1999ರಲ್ಲಿ ಆರಂಭವಾಗಿದ್ದು ಈ ಹೆದ್ದಾರಿ ಜಾಲವು ದೇಶದ ಪ್ರಮುಖ ನಗರ,ಸಾಂಸ್ಕøತಿಕ ಮತ್ತು ಕೈಗಾರಿಕಾ ಕೇಂದ್ರಗಳನ್ನು ಸಂಪರ್ಕಿಸುತ್ತದೆ.
ಗ್ರಾಮ ಸಡಕ್
ರಾಜ್ಯ ಹೆದ್ದಾರಿಗಳು
ಸುವರ್ಣ ಚತುಷ್ಕೋನ ಮತ್ತು ಸೂಪರ್ ಹೆದ್ದಾರಿಗಳು
ಜಿಲ್ಲಾ ರಸ್ತೆಗಳು
ಶ್ರೀನಗರದಿಂದ ಕನ್ಯಾಕುಮಾರಿಯವರೆಗೆ ವಿಸ್ತರಿಸಿರುವ ಸೂಪರ್ ಹೆದ್ದಾರಿ
ಪೂರ್ವ-ಪಶ್ಚಿಮ ಕಾರಿಡಾರ್
ದಕ್ಷಿಣ -ಪಶ್ಚಿಮ ಕಾರಿಡಾರ್
ಉತ್ತರ-ದಕ್ಷಿಣ ಕಾರಿಡಾರ್
ಉತ್ತರ -ಪಶ್ಚಿಮ ಕಾರಿಡಾರ್
ಅಸ್ಸಾಂನ ಸಿಲ್ಚಾರ್ ನಿಂದ ಗುಜರಾತ್‍ನ ಪೋರಬಂದರಿನ ವರೆಗೆ ಹಬ್ಬಿರುವ ಸೂಪರ್ ಹೆದ್ದಾರಿ
ಪೂರ್ವ-ಪಶ್ಚಿಮ ಕಾರಿಡಾರ್
ಉತ್ತರ -ಪಶ್ಚಿಮ ಕಾರಿಡಾರ್
ದಕ್ಷಿಣ -ಪಶ್ಚಿಮ ಕಾರಿಡಾರ್
ಪೂರ್ವ-ಉತ್ತರ ಕಾರಿಡಾರ್
ಈ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣಾ ಕಾರ್ಯವು “ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ”ಕ್ಕೆ ಸೇರಿರುತ್ತದೆ.
ಗ್ರಾಮ ಸಡಕ್
ಸೂಪರ್ ಹೆದ್ದಾರಿ
ಗಡಿ ರಸ್ತೆಗಳು
ಜಿಲ್ಲಾ ರಸ್ತೆಗಳು
ಈ ಪ್ರಮುಖ ರಸ್ತೆಗಳು ರಾಜ್ಯಗಳ ರಾಜಧಾನಿಯಿಂದ ಪ್ರಮುಖ ಬಂದರು,
ರಾಷ್ಟ್ರೀಯ ಪ್ರಾಮುಖ್ಯತೆಯುಳ್ಳ ಮುಖ್ಯ ನಗರ ಮತ್ತು ಪಟ್ಟಣಗಳೊಂದಿಗೆ ಸಂಪರ್ಕ ಕಲ್ಪಿಸುತ್ತವೆ. ಇವುಗಳ ನಿರ್ಮಾಣ ಮತ್ತು ನಿರ್ವಹಣೆಯು ಕೇಂದ್ರ ಲೋಕೋಪಯೋಗಿ ಇಲಾಖೆ( CPWD )ಗೆ ಸಂಬಂಧಿಸಿದೆ.
ರಾಜ್ಯ ಹೆದ್ದಾರಿಗಳು
ಜಿಲ್ಲಾ ರಸ್ತೆಗಳು
ರಾಷ್ಟ್ರೀಯ ಹೆದ್ದಾರಿಗಳು
ಗ್ರಾಮೀಣ ರಸ್ತೆಗಳು
ರಾಜ್ಯ ರಾಜಧಾನಿಗಳೊಂದಿಗೆ ಜಿಲ್ಲಾಕೇಂದ್ರ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಗೆ
ಸಂಪರ್ಕ ಕಲ್ಪಿಸುವ ಈ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಯು ರಾಜ್ಯದ ಲೋಕೋಪಯೋಗಿ ಇಲಾಖೆ (PWD)ಗೆ ಸೇರಿದೆ.
ರಾಜ್ಯಹೆದ್ದಾರಿಗಳು
ರಾಷ್ಟ್ರೀಯ ಹೆದ್ದಾರಿಗಳು
ಜಿಲ್ಲಾ ರಸ್ತೆಗಳು
ಗ್ರಾಮೀಣ ರಸ್ತೆ
ಈ ರಸ್ತೆಗಳ ನಿರ್ವಹಣೆಯು ಜಿಲ್ಲಾ ಪಂಚಾಯತ್‍ಗೆ ಸೇರಿರುತ್ತದೆ. ಇವು ತಾಲ್ಲೂಕು
ಕೇಂದ್ರಗಳನ್ನು ರಾಜ್ಯ ಹೆದ್ದಾರಿ, ರೈಲು ಸಾರಿಗೆ ಮೊದಲಾದುವುಗಳೊಂದಿಗೆ ಸಂಪರ್ಕಿಸುತ್ತವೆ.
ರಾಷ್ಟ್ರೀಯ ಹೆದ್ದಾರಿ
ರಾಜ್ಯ ಹೆದ್ದಾರಿ
ಜಿಲ್ಲಾ ರಸ್ತೆಗಳು
ಗ್ರಾಮೀಣ ರಸ್ತೆ
ಬಹಳಷ್ಟು ಕಚ್ಚಾ ರಸ್ತೆಗಳಾದ ಇವು ಹಳ್ಳಿಗಳನ್ನು ಪರಸ್ಪರ ಸಂಪರ್ಕಿಸುವ ರಸ್ತೆಗಳಾಗಿದ್ದು , ಪಟ್ಟಣ ಮತ್ತು ಮಾರುಕಟ್ಟೆ ಕೇಂದ್ರಗಳೊಂದಿಗೆ ಸಂಪರ್ಕ ಕಲ್ಪಿಸುವವು. ಇವುಗಳಲ್ಲಿ ಮಳೆಗಾಲದಲ್ಲಿ ಸಂಚಾರ ಕಷ್ಟ. ಇವುಗಳನ್ನು ಪಕ್ಕಾ ರಸ್ತೆಗಳಾಗಿ ಪರಿವರ್ತಿಸುವ ಪ್ರಯತ್ನ ಸಾಗಿದೆ.
ರಾಷ್ಟ್ರೀಯ ಹೆದ್ದಾರಿ
ಜಿಲ್ಲಾ ರಸ್ತೆಗಳು
ಗ್ರಾಮೀಣ ರಸ್ತೆಗಳು
ಗಡಿ ರಸ್ತೆಗಳು
ಈ ರಸ್ತೆಗಳನ್ನು ರಕ್ಷಣಾಪಡೆಗಳ ಬಳಕೆಗಾಗಿಯೇ ನಿರ್ಮಿಸಲಾಗಿದೆ
ಗಡಿರಸ್ತೆಗಳು
ಗ್ರಾಮೀಣ ರಸ್ತೆ
ಜಿಲ್ಲಾ ರಸ್ತೆಗಳು
ರಾಷ್ಟ್ರೀಯ ಹೆದ್ದಾರಿ
