wayground logo

Free Printable Worksheets

NEW

Font size

S
M
L
XL
Worksheets

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ವಚನಗಳು

Total questions: 50

Worksheet time: 25mins

Name
Class
Date
1.
ಇವರಲ್ಲಿ ವಚನಕಾರರು
a)
ಬಸವಣ್ಣ
b)
ಸೊನ್ನಲಿಗೆಯ ಸಿದ್ದರಾಮ
c)
ಅಕ್ಕಮಹಾದೇವಿ
d)
ಇವರೆಲ್ಲರೂ
2.
ವಚನಕಾರರು ಸಾರಿದ್ದು
a)
ವಿಶ್ವಮಾನವತೆಯನ್ನು
b)
ಮೂಢನಂಬಿಕೆಯನ್ನು
c)
ಅಶಾಂತಿಯನ್ನು
d)
ಜಾತೀಯತೆಯನ್ನು
3.
ವಚನಕಾರರು ಯಾವುದನ್ನು ಕಿತ್ತೆಸೆದು ಮಾನವೀಯತೆಯನ್ನು ಸಾರಿದರು
a)
ಜಾತಿಯನ್ನು
b)
ಮತವನ್ನು
c)
ಮೂಢನಂಬಿಕೆಯನ್ನು
d)
ಇವೆಲ್ಲವುಗಳನ್ನು
4.
ವಚನಕಾರರು ಯಾವುದು ಖಂಡಿಸಿದರು
a)
ವಿಶ್ವಮಾನವತೆಯನ್ನು
b)
ಮೂಢನಂಬಿಕೆಯನ್ನು
c)
ವಚನಗಳನ್ನು
d)
ಭ್ರಾತೃತ್ವವನ್ನು
5.
ವಚನಕಾರರು ಯಾವ ಭಾವವನ್ನು ಬಿತ್ತಿದ್ದರು
a)
ಸರ್ವ ಸಮಾನತೆಯ ಭಾವವನ್ನು
b)
ಅಸಮಾನತೆಯ ಭಾವವನ್ನು
c)
ಜಾತಿಯ ಭಾವವನ್ನು
d)
ಮೂಢನಂಬಿಕೆಯ ಭಾವವನ್ನು
6.
ವಚನಕಾರರ ತತ್ವ ಯಾವುದಾಗಿತ್ತು ?
a)
ವಂಚನೆ
b)
ಕಾಯಕ
c)
ದಾಸೋಹ
d)
ವಚನ ರಚನಾತತ್ವ
7.
ವಚನಕಾರರು ಎಂತಹ ಸಮಾಜವನ್ನು ಕಟ್ಟ ಬಯಸಿದರು ?
a)
ವರ್ಗ ಸಹಿತ
b)
ವರ್ಣ ಸಹಿತ
c)
ವರ್ಗರಹಿತ ಮತ್ತು ವರ್ಣರಹಿತ
d)
ಜಾತಿಯ ಸಮಾಜ
8.
ಭಕ್ತಿ ಭಂಡಾರಿ ಎನಿಸಿಕೊಂಡವರು ಯಾರು ?
a)
ಬಸವಣ್ಣ
b)
ಸೊನ್ನಲಿಗೆ ಸಿದ್ದರಾಮ
c)
ಅಕ್ಕಮಹಾದೇವಿ
d)
ಇವರೆಲ್ಲರೂ
9.
ಬಸವಣ್ಣನವರು ಎಲ್ಲಿ ಜನಿಸಿದರು ?
a)
ಶಿವಮೊಗ್ಗ ಜಿಲ್ಲೆಯ ಉಡುತಡಿ
b)
ವಿಜಯಪುರ ಜಿಲ್ಲೆಯ ಬಾಗೇವಾಡಿ
c)
ಸೊನ್ನಾಲಿಗೆ
d)
ಬಸವಕಲ್ಯಾಣ
10.
ಬಸವಣ್ಣನವರು ಬದುಕಿದ್ದ ಕಾಲ
a)
10ನೆಯ ಶತಮಾನ
b)
11ನೆಯ ಶತಮಾನ
c)
12ನೆಯ ಶತಮಾನ
d)
13ನೆಯ ಶತಮಾನದ
11.
ಬಸವಣ್ಣನವರ ತಂದೆ ತಾಯಿಗಳ ಹೆಸರು
a)
ನಿರಹಂಕಾರ ಮತ್ತು ಸುಜ್ಞಾನಿ
b)
ಮುದ್ದುಗೌಡ ಮತ್ತು ಸುಗ್ಗವ್ವೆ
c)
ಮಾದರಸ ಮತ್ತು ಮಾದಲಾಂಬಿಕೆ
d)
ಚನ್ನಬಸವಣ್ಣ ಮತ್ತು ನೀಲಾಂಬಿಕೆ
12.
ಬಸವಣ್ಣನವರು ಯಾರ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ?
a)
ಚಾಲುಕ್ಯರ ತೈಲಪನ ಆಸ್ಥಾನದಲ್ಲಿ
b)
ಕಳಚೂರಿಯ ಬಿಜ್ಜಳನ ಆಸ್ಥಾನದಲ್ಲಿ
c)
ಚಾಲುಕ್ಯರ ಅರಿಕೇಸರಿ ಆಸ್ಥಾನದಲ್ಲಿ
d)
ಗಂಗರ ರಾಚಮಲ್ಲನ ಆಸ್ಥಾನದಲ್ಲಿ
13.
ವಿಶ್ವದ ಮೊಟ್ಟಮೊದಲ ಸಂಸತ್ತು ಎಂದು ಖ್ಯಾತಿ ಪಡೆದಿದ್ದು
a)
ಅನುಭವ ಮಂಟಪ
b)
ಆಸ್ಥಾನ ಮಂಟಪ
c)
ಮದುವೆ ಮಂಟಪ
d)
ಬಸವ ಮಂಟಪ
14.
ಅನುಭವ ಮಂಟಪದ ರೂವಾರಿಗಳು
a)
ಅಲ್ಲಮಪ್ರಭು
b)
ಅಕ್ಕಮಹಾದೇವಿ
c)
ಸೊನ್ನಲಿಗೆ ಸಿದ್ಧರಾಮ
d)
ಬಸವಣ್ಣ
15.
ಬಸವಣ್ಣನವರ ವಚನಗಳ ಅಂಕಿತ
a)
ಚೆನ್ನಮಲ್ಲಿಕಾರ್ಜುನ
b)
ಕಪಿಲಸಿದ್ಧ ಮಲ್ಲಿಕಾರ್ಜುನ
c)
ಗುಹೇಶ್ವರ
d)
ಕೂಡಲಸಂಗಮದೇವ
16.
ವಚನಕಾರ ಸಿದ್ಧರಾಮ ಊರು
a)
ಸೊನ್ನಾಲಿಗೆ
b)
ಬಾಗೇವಾಡಿ
c)
ಉಡುತಡಿ
d)
ಬಸವಕಲ್ಯಾಣ
17.
ಸೊನ್ನಲಿಗೆ ಸಿದ್ದರಾಮರ ತಂದೆ-ತಾಯಿಗಳು
a)
ನಿರಹಂಕಾರ ಮತ್ತು ಸುಜ್ಞಾನಿ
b)
ಮುದ್ದುಗೌಡ ಮತ್ತು ಸುಗ್ಗವ್ವೆ
c)
ಮಾದರಸ ಮತ್ತು ಮಾದಲಾಂಬಿಕೆ
d)
ಚನ್ನಬಸವಣ್ಣ ಮತ್ತು ನೀಲಾಂಬಿಕೆ
18.
ಸೊನ್ನಲಿಗೆ ಸಿದ್ದರಾಮರ ವಚನಗಳ ಅಂಕಿತ
a)
ಚೆನ್ನಮಲ್ಲಿಕಾರ್ಜುನ
b)
ಕಪಿಲಸಿದ್ಧ ಮಲ್ಲಿಕಾರ್ಜುನ
c)
ಗುಹೇಶ್ವರ
d)
ಕೂಡಲಸಂಗಮದೇವ
19.
ಅಕ್ಕಮಹಾದೇವಿಯ ಜನ್ಮಸ್ಥಳ
a)
ಶಿವಮೊಗ್ಗ ಜಿಲ್ಲೆಯ ಉಡುತಡಿ
b)
ವಿಜಯಪುರ ಜಿಲ್ಲೆಯ ಬಾಗೇವಾಡಿ
c)
ಸೊನ್ನಾಲಿಗೆ
d)
ಬಸವಕಲ್ಯಾಣ
20.
ಕನ್ನಡ ಸಾಹಿತ್ಯದ ಮೊದಲನೆಯ ಕವಯತ್ರಿ
a)
ಸುಕನ್ಯ ಮಾರುತಿ
b)
ಮುಕ್ತಾಯಕ್ಕ
c)
ಅಕ್ಕಮಹಾದೇವಿ
d)
ಗಂಗಾಂಬಿಕೆ
21.
ಅಲ್ಲಮನಿಂದ 'ವೈರಾಗ್ಯನಿಧಿ' ಎನಿಸಿಕೊಂಡವರು
a)
ಬಸವಣ್ಣ
b)
ಸೊನ್ನಲಿಗೆಯ ಸಿದ್ದರಾಮ
c)
ಅಕ್ಕಮಹಾದೇವಿ
d)
ಚನ್ನಬಸವಣ್ಣ
22.
ಚೆನ್ನಮಲ್ಲಿಕಾರ್ಜುನ ಇದು ಯಾರ ವಚನಗಳ ಅಂಕಿತ
a)
ಬಸವಣ್ಣ
b)
ಸೊನ್ನಲಿಗೆಯ ಸಿದ್ದರಾಮ
c)
ಅಕ್ಕಮಹಾದೇವಿ
d)
ಚನ್ನಬಸವಣ್ಣ
23.
ಅಕ್ಕಮಹಾದೇವಿ ಐಕ್ಯವಾದ ಸ್ಥಳ
a)
ಬಸವಕಲ್ಯಾಣ
b)
ಬಸವನಬಾಗೇವಾಡಿ
c)
ಶ್ರೀಶೈಲದ ಕದಳಿ ಬನ
d)
ಉಡುತಡಿ
24.
ಬಸವಣ್ಣನವರು ಜನರ ಯಾವ ಧಾರ್ಮಿಕ ನಂಬಿಕೆಗಳನ್ನು ಖಂಡಿಸಿದ್ದಾರೆ ?
a)
ನೀರ ಕಂಡಲ್ಲಿ ಮುಳುಗುವುದು, ಮರನ ಕಂಡಲ್ಲಿ ಸುತ್ತುವುದು
b)
ನೀರ ಕಂಡಲ್ಲಿ ಕುಡಿಯುವುದು, ಮರನ ಕಂಡಲ್ಲಿ ಕುಳಿತುಕೊಳ್ಳುವುದು
c)
ನೀರ ಕಂಡಲ್ಲಿ ಪೂಜಿಸುವುದು, ಮರನ ಕಂಡಲ್ಲಿ ಕಡಿಯುವುದು
d)
ನೀರ ಕಂಡಲ್ಲಿ ಮುಖ ತೊಳೆಯುವುದು, ಮರವ ಕಂಡಲ್ಲಿ ಹಣ್ಣು ಕೇಳುವುದು
25.
ಜನರು ನೀರು ಕಂಡಲ್ಲಿ ಏನು ಮಾಡುತ್ತಾರೆ ?
a)
ಕೈ ತೊಳೆಯುತ್ತಾರೆ
b)
ಮುಳುಗುತ್ತಾರೆ
c)
ದೂರ ಹೋಗುತ್ತಾರೆ
d)
ಕುಡಿಯುತ್ತಾರೆ
26.
ಜನರು ಮರನ ಕಂಡಲ್ಲಿ ಏನು ಮಾಡುತ್ತಾರೆ ?
a)
ಕಡಿಯುವರು
b)
ಓಡುವರು
c)
ಬೀಳುವರು
d)
ಸುತ್ತುವರು
27.
ಜನರು ಯಾವುದನ್ನು ಮೆಚ್ಚಿದ್ದಾರೆ ಎಂದು ಬಸವಣ್ಣನವರು ಹೇಳುತ್ತಾರೆ ?
a)
ಬತ್ತುವ ಜಲ,ಒಣಗುವ ಮರ
b)
ಕುಡಿಯುವ ನೀರು, ಬೆಳೆಯುವ ಮರ
c)
ಗಿಳಿಯ ತತ್ವನಿಷ್ಠೆ
d)
ಏಣಿಯ ಸಹಕಾರ ಗುಣ
28.
ವೇಷ ಧರಿಸಿದಂತೆ ಏನಿರಬೇಕು ?
a)
ಬಣ್ಣ ಇರಬೇಕು
b)
ಆಚರಣೆ ಇರಬೇಕು
c)
ಭಾಷೆ ಇರಬೇಕು
d)
ಮಾತು ಇರಬೇಕು
29.
ವೇದಾಂತ ಓದಿದವರು ಹೇಗಿರಬೇಕೆಂದು ಸಿದ್ದರಾಮ ಹೇಳುತ್ತಾನೆ ?
a)
ಬತ್ತುವ ಜಲವಾಗಬೇಕು
b)
ಒಣಗುವ ಮರವಾಗಬೇಕು
c)
ಬ್ರಹ್ಮ ತಾನಾಗಬೇಕು
d)
ಬಸವಣ್ಣನಾಗಬೇಕು
30.
ಕೆರೆಗಳು ನಿಷ್ಪ್ರಯೋಜಕವಾಗುವುದು ಯಾವಾಗ ?
a)
ಪುಣ್ಯ ತೀರ್ಥಗಳು ಬರದಿದ್ದಾಗ
b)
ಕೆರೆಯ ಏರಿ ಒಡೆದಾಗ
c)
ಶಿವ ನೋಡಲು ಬಂದಾಗ
d)
ನೋಡಲು ವೈಭೋಗವಾಗಿದ್ದಾಗ
31.
ಧನವಿದ್ದವರಲ್ಲಿ ಇರಬೇಕಾದ ಗುಣ
a)
ದಯೆ
b)
ದಾನ
c)
ಕಾಯಕ
d)
ಸಂಪನ್ನ
32.
ಅಕ್ಕಮಹಾದೇವಿ ತನ್ನ ಬದುಕು ಯಾವಾಗ ಫಲದಾಯಕ ವಾಗುತ್ತದೆ ಎಂದು ಹೇಳುತ್ತಾಳೆ ?
a)
ಚೆನ್ನಮಲ್ಲಿಕಾರ್ಜುನನ ಜ್ಞಾನವಿದ್ದಾಗ
b)
ವೈರಾಗ್ಯ ತಾಳಿದಾಗ
c)
ಮದುವೆಯಾದಾಗ
d)
ಬಸವಣ್ಣನವರನ್ನು ನೋಡಿದಾಗ
33.
ಹಸುವಿನಲ್ಲಿ ಯಾವ ಫಲ ಇರಬೇಕು ?
a)
ಜ್ಞಾನ
b)
ನೆರಳು
c)
ಅನ್ನ
d)
ಹಯ
34.
ಬಿಟ್ಟಸ್ಥಳ ತುಂಬಿರಿ : ಮರವಿದ್ದು ಫಲವೇನು -----ದನ್ನಕ್ಕ
a)
ದಯೆಯಿಲ್ಲ
b)
ನೆಳಲಿಲ್ಲ
c)
ಹಯವಿಲ್ಲ
d)
ಗುಣವಿಲ್ಲ
35.
ಬಿಟ್ಟ ಸ್ಥಳ ತುಂಬಿರಿ : ಅಗಲಿದ್ದು ಫಲವೇನು -----------ದನ್ನಕ್ಕ
a)
ದಯೆಯಿಲ್ಲ
b)
ನೆಳಲಿಲ್ಲ
c)
ಬಾನವಿಲ್ಲ
d)
ಗುಣವಿಲ್ಲ
36.
ಬಿಟ್ಟ ಸ್ಥಳ ತುಂಬಿರಿ : ಧನವಿದ್ದು ಫಲವೇನು -------ವಿಲ್ಲದನ್ನಕ್ಕ
a)
ದಯೆ
b)
ರೂಪು
c)
ಗುಣ
d)
ಬಾನ
37.
ಬಿಟ್ಟ ಸ್ಥಳ ತುಂಬಿರಿ : ರೂಪಿದ್ದು ಫಲವೇನು --------ವಿಲ್ಲದನ್ನಕ್ಕ
a)
ದಯೆ
b)
ಕಾಯಕ
c)
ಗುಣ
d)
ಅನ್ನ
38.
ಹೊಂದಿಕೆಯಾಗುವ ಉತ್ತರಗಳು
a)
ಮರ - ನೆಳಲು
b)
ಧನ - ದಯ
c)
ಹಸು - ಹಯ
d)
ಎಲ್ಲವೂ ಸರಿ ಇವೆ
39.
ಸರಿಯಾದ ಉತ್ತರಗಳ ಜೋಡಿ
a)
ರೂಪ - ಗುಣ
b)
ಅಗಲು - ಬಾನ
c)
ಜ್ಞಾನ - ಅಕ್ಕಮಹಾದೇವಿ
d)
ಎಲ್ಲವೂ ಸರಿ ಇವೆ
40.
ಸರಿಯಾದ ಉತ್ತರಗಳ ಜೋಡಿ
a)
ವೇಷ - ಆಚರಣೆ
b)
ವೇದಾಂತ - ಬ್ರಹ್ಮ
c)
ಕೆರೆ - ಪುಣ್ಯತೀರ್ಥ ಗಳು
d)
ಎಲ್ಲವೂ ಸರಿ ಇವೆ
41.
"ನೀರ ಕಂಡಲ್ಲಿ ಮುಳುಗುವರಯ್ಯ ಎಂದು ಹೇಳಿದವರು
a)
ಅಕ್ಕಮಹಾದೇವಿ
b)
ಬಸವಣ್ಣ
c)
ಸೊನ್ನಾಲಿಗೆ ಸಿದ್ದರಾಮ
d)
ಅಲ್ಲಮಪ್ರಭು
42.
"ವೇದಾಂತವನೋದಿ ಫಲವೇನಯ್ಯ" ಎಂದು ಹೇಳಿದವರು
a)
ಅಕ್ಕಮಹಾದೇವಿ
b)
ಬಸವಣ್ಣ
c)
ಸೊನ್ನಾಲಿಗೆ ಸಿದ್ದರಾಮ
d)
ಅಲ್ಲಮಪ್ರಭು
43.
"ಮರವಿದ್ದು ಫಲವೇನು ನೆಳಲಿಲ್ಲದನ್ನಕ" ಎಂದು ಹೇಳಿದವರು
a)
ಅಕ್ಕಮಹಾದೇವಿ
b)
ಬಸವಣ್ಣ
c)
ಸೊನ್ನಾಲಿಗೆ ಸಿದ್ದರಾಮ
d)
ಅಲ್ಲಮಪ್ರಭು
44.
ಕಾವ್ಯಮಯ ಭಾಷೆಯಲ್ಲಿನ ಶಬ್ದಾರ್ಥ ವೈಚಿತ್ರ ಗಳ ಹೀಗೆ ಕರೆಯಲಾಗುತ್ತದೆ
a)
ಛಂಧಸ್ಸು
b)
ಅಲಂಕಾರ
c)
ಸಂಧಿಗಳು
d)
ಸಮಾಸಗಳು
45.
ಪರಸ್ಪರ ಎರಡು ವಸ್ತುಗಳಿಗೆ ಸುಂದರವಾಗಿ ಹೋಲಿಸುವುದು
a)
ಉಪಮಾಲಂಕಾರ
b)
ರೂಪಕಲಂಕಾರ
c)
ಉತ್ಪ್ರೇಕ್ಷೆ ಅಲಂಕಾರ
d)
ದೃಷ್ಟಾಂತ ಅಲಂಕಾರ
46.
ಉಪಮೇಯ ಉಪಮಾನಗಳೊಳಗೆ ಅಬೇಧತೆಯನ್ನು ಕಲ್ಪಿಸುವುದು
a)
ಉಪಮಾಲಂಕಾರ
b)
ಶಬ್ದಲಂಕಾರ
c)
ದೃಷ್ಟಾಂತ ಅಲಂಕಾರ
d)
ರೂಪಕ ಅಲಂಕಾರ
47.
ಮಗುವಿನ ಮುಖ ಚಂದ್ರನಂತೆ ಅರಳಿತು - ಈ ವಾಕ್ಯದಲ್ಲಿರುವ ಅಲಂಕಾರ
a)
ಉಪಮಾಲಂಕಾರ
b)
ಶಬ್ದಲಂಕಾರ
c)
ಶ್ಲೇಷ ಅಲಂಕಾರ
d)
ರೂಪಕ ಅಲಂಕಾರ
48.
ಸೀತೆಯ ಮುಖ ಕಮಲ ಅರಳಿತು - ಈ ವಾಕ್ಯವು ಯಾವ ಅಲಂಕಾರಕ್ಕೆ ಉದಾಹರಣೆ
a)
ಉಪಮಾಲಂಕಾರ
b)
ರೂಪಕಲಂಕಾರ
c)
ಉತ್ಪ್ರೇಕ್ಷೆ ಅಲಂಕಾರ
d)
ದೃಷ್ಟಾಂತ ಅಲಂಕಾರ
49.
ಉಪಮಾಲಂಕಾರಕ್ಕೆ ಉದಾಹರಣೆ
a)
ಬಾಳೆಯ ಹಣ್ಣಿನಂತೆ ಬಾಗಿದ ಕುಣಿಗಲ್ ಕೆರೆ
b)
ನಿಂಬೆಯ ಹಣ್ಣಿನಂತೆ ತುಂಬಿದ ಕುಣಿಗಲ್ ಕೆರೆ
c)
ಹಕ್ಕಿಯ ಗೂಡುಗಳು ತೊಟ್ಟಿಲಿನಂತೆ ತೂಗಾಡುತ್ತಿದ್ದವು
d)
ಈ ಎಲ್ಲವೂ
50.
ರೂಪಕ ಅಲಂಕಾರಕ್ಕೆ ಉದಾಹರಣೆ
a)
ವನಜಮುಖಿ
b)
ಮುಖಚಂದ್ರ
c)
ಪಾದಕಮಲ
d)
ಈ ಎಲ್ಲವೂ