NEW
Font size
Worksheets6.ಜೀವಕ್ರಿಯೆಗಳು
Total questions: 10
Worksheet time: 5mins
01. ಯಾವ ನಿರ್ದಿಷ್ಟ ಕಾರ್ಯ ಮಾಡದಿದ್ದ ಸಮಯದಲ್ಲೂ ನಿರ್ವಹಣಾ ಕಾರ್ಯ ಜೊತೆಯಾಗಿ ನಿರ್ವಹಿಸುವ ಪ್ರಕ್ರಿಯೆಗೆ -----ಎನ್ನುವರು
ರಸಾಯನಿಕ ಕ್ರಿಯೆಗಳು
ಭೌತಿಕ ಕ್ರಿಯೆಗಳು
ಜೈವಿಕ ಕ್ರಿಯೆಗಳು
ಉಷ್ಣ ಕ್ರಿಯೆಗಳು
02. ಜೀವಿಯ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಶಕ್ತಿಯ ಅವಶ್ಯಕತೆಯನ್ನು ಪೂರೈಸುವ ಜೈವಿಕ ಕ್ರಿಯೆಯನ್ನು ತಿಳಿಸಿ
ವಿಸರ್ಜನೆ
ಪೋಷಣೆ
ಸಾಗಾಣಿಕೆ
ಉಸಿರಾಟ
03. ಬಹುಕೋಶ ಜೀವಿಯ ಸರಿಯಾದ ಜೀವ ವ್ಯವಸ್ಥೆ ರಚನೆಯನ್ನು ಆಯ್ಕೆ ಮಾಡಿ
ಜೀವಕೋಶ-ಅಂಗಾಂಶ-ಅಂಗ-ಅಂಗವ್ಯೂಹ-ಜೀವಿ
ಅಂಗ-ಜೀವಕೋಶ-ಅಂಗಾಂಶ-ಅಂಗವ್ಯೂಹ-ಜೀವಿ
ಅಂಗಾಂಶ-ಜೀವಕೋಶ-ಅಂಗ-ಅಂಗವ್ಯೂಹ-ಜೀವಿ
ಜೀವಕೋಶ-ಅಂಗ-ಅಂಗವ್ಯೂಹ-ಅಂಗಾಂಶ- ಜೀವಿ
04. ಜೀವಿಗಳಿಂದ ಪೋಷಕಾಂಶಗಳನ್ನು ಒಳಗೆ ತೆಗೆದುಕೊಳ್ಳುವ ಕ್ರಿಯೆ
ಸಾಗಾಣಿಕೆ
ಉಸಿರಾಟ
ಪೋಷಣೆ
ವಿಸರ್ಜನೆ
05. ಹಸಿರು ಸಸ್ಯಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಅಪಕರ್ಷಿಸಿ ಗ್ಲುಕೋಸ್ ಕಾರ್ಬೋಹೈಡ್ರೇಟ್ ತಯಾರಾಗುವ ಸಮಯ
ಹಗಲಿನಲ್ಲಿ
ರಾತ್ರಿ ಸಮಯದಲ್ಲಿ
ಹಗಲು - ರಾತ್ರಿ ವೇಳೆ
ಮೇಲಿನ ಯಾವುದೂ ಅಲ್ಲ
06. ಜೀವಿಗಳನ್ನು ಕೊಲ್ಲದೆ ಆಹಾರ ಸೇವಿಸುವ ಜೀವಿ
ಹುಲಿ
ಸಿಂಹ
ಹೇನು
ನರಿ
07. ಆಹಾರ ಚಲನೆಗೆ ಸ್ನಾಯುಗಳ ಸಂಕುಚನ ವಿಕಸನಕ್ಕೆ ಕಾರಣ ವಾದ ಪರಿಕ್ರಮ ಚಲನೆ ಕಂಡು ಬರುವ ಮಾನವನ ಜೀರ್ಣಾಂಗದ ಭಾಗ
ಬಾಯಿ
ಗಂಟಲು
ಅನ್ನನಾಳ
ಜಠರ
08. ಚಿಕ್ಕ ವಯಸ್ಸಿನ ಮಕ್ಕಳ ಜಠರದಲ್ಲಿ ಹಾಲಿನ ಕೇಸಿನ್ ಪ್ರೋಟೀನ್ ಜೀರ್ಣ ಕ್ರಿಯೆಗೆ ಸಹಾಯಕವಾಗುವ ಕಿಣ್ವ ಹೆಸರಿಸಿ
ಪೇಪ್ಸಿನ್
ರೇನಿನ್
ಲೈಪೇಸ್
ಮಾಲ್ಟೇಸ್
09. ಆಹಾರದಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಮಾಡುವ ಜೀರ್ಣಾಂಗದ ಭಾಗ
ಹೈಡ್ರೋಕ್ಲೋರಿಕ್ ಆಮ್ಲ - ಜಠರ
ಪಿತ್ತರಸ- ಪಿತ್ತಜನಕಾಂಗ
ಮೇದೋಜೀರಕ ರಸ - ಮೇದೋಜೀರಕ
ಕರಳು ರಸ - ಸಣ್ಣ ಕರಳು
10. ಪ್ರೋಟೀನ್, ಕಾರ್ಬೋಹೈಡ್ರೇಟ್, ಕೊಬ್ಬು ಸಂಕೀರ್ಣ ಆಹಾರ ಅಮೈನೋ ಆಮ್ಲ, ಗ್ಲುಕೋಸ್, ಕೊಬ್ಬಿನ ಆಮ್ಲ ಸರಳ ಪದಾರ್ಥವಾಗಿ ರಕ್ತ ಕ್ಕೆ ಸೇರುವ ಭಾಗ
ಜಠರ
ಮೇದೋಜೀರಕ
ಪಿತ್ತಜನಕಾಂಗದ
ಸಣ್ಣ ಕರಳು
