wayground logo

Free Printable Worksheets

NEW

Font size

S
M
L
XL
Worksheets

ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು

Total questions: 25

Worksheet time: 10mins

Name
Class
Date
1.

ಮಾನವನ ಕಣ್ಣು ಈ ಸಾಧನದಂತೆ ಕಾರ್ಯನಿರ್ವಹಿಸುತ್ತದೆ

a)

ದ್ವಿಚಕ್ರ ವಾಹನ

b)

ಕ್ಯಾಮೆರಾ

c)

ಮೊಬೈಲ್

d)

ಟಿ.ವಿ.

2.

ಮಾನವನ ಕಣ್ಣಿನ ಈ ಭಾಗದಲ್ಲಿ ಪ್ರತಿಬಿಂಬ ಉಂಟಾಗುತ್ತದೆ

a)

ಕಾರ್ನಿಯ

b)

ವರ್ಣಪಟಲ

c)

ರೆಟಿನಾ (ಅಕ್ಷಿಪಟಲ)

d)

ಚಾಕ್ಷುಷ ನರ

3.

ಕಣ್ಣುಗುಡ್ಡೆಯ ವ್ಯಾಸ

a)

2.3 ಸೆಂಟಿಮೀಟರ್

b)

3.2 ಸೆಂಟಿಮೀಟರ್

c)

4.2 ಸೆಂಟಿಮೀಟರ್

d)

5.3 ಸೆಂಟಿಮೀಟರ್

4.

ಕಣ್ಣಿನ ರೆಟಿನಾದಲ್ಲಿ ಉಂಟಾಗುವ ಪ್ರತಿಬಿಂಬದ ಪ್ರಕಾರ ಎಂದರೆ

a)

ಸತ್ಯ ಮತ್ತು ನೇರ ಪ್ರತಿಬಿಂಬ

b)

ಸತ್ಯ ಮತ್ತು ತಲೆಕೆಳಗಾದ ಪ್ರತಿಬಿಂಬ

c)

ಮಿಥ್ಯ ಮತ್ತು ನೇರ ಪ್ರತಿಬಿಂಬ

d)

ಮಿಥ್ಯ ಮತ್ತು ತಲೆಕೆಳಗಾದ ಪ್ರತಿಬಿಂಬ

5.

ಕಣ್ಣಿನಲ್ಲಿರುವ ಈ ಜೀವಕೋಶಗಳ ಸಹಾಯದಿಂದ ನಮಗೆ ಬೆಳಕು ಮತ್ತು ಬಣ್ಣಗಳ ಗ್ರಹಿಕೆ ಸಾಧ್ಯವಾಗುತ್ತದೆ

a)

ಸಿಲಿಯರಿ ಸ್ನಾಯು ಕೋಶಗಳು

b)

ವರ್ಧನ ಕೋಶಗಳು

c)

ದೃಶ್ಯ ಗ್ರಾಹಕಗಳು ಕೋಶಗಳು

d)

ಕಾಚಕ ರಸಧಾತು ಕೋಶಗಳು

6.

ಕಣ್ಣಿನ ಹೊಂದಾಣಿಕೆ ಎಂದರೆ

a)

ಕಣ್ಣಿನ ಮಸೂರದ ಸಂಗಮ ದೂರ ವನ್ನು ಹೊಂದಾಣಿಕೆ ಮಾಡುವುದು

b)

ಕಣ್ಣಿನ ಮಸೂರದ ದೃಕ್ ಕೇಂದ್ರವನ್ನು ಹೊಂದಾಣಿಕೆ ಮಾಡುವುದು

c)

ಕಣ್ಣಿನ ಮಸೂರದ ತ್ರಿಜ್ಯವನ್ನು ಹೊಂದಾಣಿಕೆ ಮಾಡುವುದು

d)

ಕಣ್ಣಿನ ಮಸೂರದ ಅಪಾರದರ್ಶಕತೆ ಯನ್ನು ಹೊಂದಾಣಿಕೆ ಮಾಡುವುದು

7.

ಒಂದು ವಸ್ತುವನ್ನು ನಾವು ಆರಾಮವಾಗಿ ವೀಕ್ಷಿಸಲು ಅದು ನಮ್ಮಿಂದ ಕನಿಷ್ಠ ಇಷ್ಟು ಅಂತರದಲ್ಲಿ ಇರಬೇಕು

a)

12 ಸೆಂಟಿಮೀಟರ್

b)

25 ಸೆಂಟಿಮೀಟರ್

c)

15 ಸೆಂಟಿಮೀಟರ್

d)

18 ಸೆಂಟಿಮೀಟರ್

8.

ಮಾನವನ ಕಣ್ಣಿನ ಗರಿಷ್ಠ ದೂರ ಬಿಂದು ಎಷ್ಟು

a)

25 ಸೆಂಟಿಮೀಟರ್

b)

18 ಕಿಲೋಮೀಟರ್

c)

65 ಕಿಲೋಮೀಟರ್

d)

ಅನಂತ ದೂರ

9.

ಕ್ಯಾಟರಾಕ್ಟ್ ಎಂಬುದು

a)

ವಯಸ್ಸಾದವರಲ್ಲಿ ಉಂಟಾಗುವ ಕಣ್ಣಿನ ಪೊರೆ

b)

ವಯಸ್ಕ ವ್ಯಕ್ತಿಗಳಲ್ಲಿ ಉಂಟಾಗುವ ಕಣ್ಣಿನ ಅಸಮ ವ್ಯಾಕೋಚನೆ

c)

ವಯಸ್ಸಾದವರಲ್ಲಿ ಉಂಟಾಗುವ ಕಣ್ಣಿನ ಬಿರುಕು

d)

ಚಿಕ್ಕಮಕ್ಕಳಲ್ಲಿ ಉಂಟಾಗುವ ಕಣ್ಣಿನ ದೋಷ

10.

ಸಮೀಪದ ವಸ್ತುಗಳು ಸ್ಪಷ್ಟವಾಗಿ ಕಂಡು ದೂರದ ವಸ್ತುಗಳು ಸ್ಪಷ್ಟವಾಗಿ ಕಾಣದಿದ್ದರೆ ಅಂತಹ ದೋಷಕ್ಕೆ ಹೀಗೆನ್ನುವರು

a)

ದೂರದೃಷ್ಟಿ

b)

ಸಮೀಪ ದೃಷ್ಟಿ

c)

ಕ್ಯಾಟರಾಕ್ಟ್

d)

ಪ್ರೆಸ್ ಬಯೋಪಿಯಾ

11.

ಸಮೀಪ ದೃಷ್ಟಿ ಇದ್ದಾಗ ಈ ಮಸೂರವನ್ನು ಬಳಸಿ ಸರಿಪಡಿಸಬಹುದು

a)

ಪೀನ ಮಸೂರ

b)

ನಿಮ್ನ ಮಸೂರ

c)

ಸಮತಲ ದರ್ಪಣ

d)

ಗೋಳಿಯ ಮಸೂರ

12.

ದೂರದ ವಸ್ತುಗಳು ಸ್ಪಷ್ಟವಾಗಿ ಕಂಡು ಸಮೀಪದ ವಸ್ತುಗಳು ಸ್ಪಷ್ಟವಾಗಿ ಕಾಣದಿದ್ದರೆ ಅಂತಹ ದೋಷಕ್ಕೆ ಹೀಗೆನ್ನುವರು

a)

ದೂರದೃಷ್ಟಿ

b)

ಸಮೀಪ ದೃಷ್ಟಿ

c)

ಕ್ಯಾಟರಾಕ್ಟ್

d)

ಪ್ರೆಸ್ ಬಯೋಪಿಯಾ

13.

ದೂರ ದೃಷ್ಟಿ ಇದ್ದಾಗ ಈ ಮಸೂರವನ್ನು ಬಳಸಿ ಸರಿಪಡಿಸಬಹುದು

a)

ಪೀನ ಮಸೂರ

b)

ನಿಮ್ನ ಮಸೂರ

c)

ಸಮತಲ ದರ್ಪಣ

d)

ಗೋಳಿಯ ಮಸೂರ

14.

ಸಾಮಾನ್ಯವಾಗಿ ವಯಸ್ಸಾದಂತೆ ಕಣ್ಣಿನ ಮಸೂರವು ತನ್ನ ಸ್ಥಿತಿಸ್ಥಾಪಕ ಶಕ್ತಿಯನ್ನು ಕಳೆದುಕೊಂಡು ಆರಾಮವಾಗಿ ನೋಡಲು ಸಾಧ್ಯವಾಗದೇ ಇರುವ ದೋಷಕ್ಕೆ ಹೀಗೆನ್ನುವರು

a)

ದೂರದೃಷ್ಟಿ

b)

ಸಮೀಪ ದೃಷ್ಟಿ

c)

ಕ್ಯಾಟರಾಕ್ಟ್

d)

ಪ್ರೆಸ್ ಬಯೋಪಿಯಾ

15.

ಪ್ರೆಸ್ ಬಾಯೋಪಿಯಾ ದೋಷ ಇದ್ದಾಗ ಈ ಮಸೂರವನ್ನು ಬಳಸಿ ಸರಿಪಡಿಸಬಹುದು

a)

ಪೀನ ಮಸೂರ

b)

ನಿಮ್ನ ಮಸೂರ

c)

ದ್ವಿ ಸಂಗಮ ಮಸೂರ

d)

ಗೋಳಿಯ ದರ್ಪಣ

16.

ಒಂದು ಪಟ್ಟಕದ ಮೂಲಕ ಬಿಳಿ ಬೆಳಕನ್ನು ಹಾಯಿಸಿದಾಗ ಹೊರಬರುವ ಬಣ್ಣಗಳಲ್ಲಿ ಕನಿಷ್ಠ ಬಾಗುವ ಬಣ್ಣ ಎಂದರೆ

a)

ನೇರಳೆ

b)

ಹಸಿರು

c)

ಹಳದಿ

d)

ಕೆಂಪು

17.

ಸೂರ್ಯನ ಬೆಳಕಿನ ರೋಹಿತ ವನ್ನು ಪಡೆಯಲು ಗಾಜಿನ ಪಟ್ಟವನ್ನು ಬಳಸಿದ ಮೊದಲ ವಿಜ್ಞಾನಿ ಎಂದರೆ

a)

ಜಗದೀಶ್ ಚಂದ್ರ ಬೋಸ್

b)

ಸರ್ ಐಸಾಕ್ ನ್ಯೂಟನ್

c)

ಗ್ರಹಾಂಬಲ್

d)

ಸಿ ವಿ ರಾಮನ್

18.

ವಾತಾವರಣದಲ್ಲಿ ಕಾಮನಬಿಲ್ಲು ಉಂಟಾಗಲು ಬೆಳಕಿನ ಈ ಗುಣ ಕಾರಣ

a)

ಆಂತರಿಕ ಪ್ರತಿಫಲನ

b)

ಬೆಳಕಿನ ವ್ಯತೀಕರಣ

c)

ಬೆಳಕಿನ ಪ್ರತಿಫಲನ

d)

ಬೆಳಕಿನ ವಿವರ್ತನೆ

19.

ವಾತಾವರಣದಲ್ಲಿ ಕಾಮನಬಿಲ್ಲು ಯಾವಾಗಲೂ ಈ ದಿಕ್ಕಿನಲ್ಲಿ ಉಂಟಾಗುತ್ತದೆ

a)

ಚಂದ್ರನ ವಿರುದ್ಧ ದಿಕ್ಕಿನಲ್ಲಿ

b)

ಚಂದ್ರನಿರುವ ದಿಕ್ಕಿನಲ್ಲಿ

c)

ಸೂರ್ಯನು ಇರುವ ದಿಕ್ಕಿನಲ್ಲಿ

d)

ಸೂರ್ಯನ ವಿರುದ್ಧ ದಿಕ್ಕಿನಲ್ಲಿ

20.

ನಕ್ಷತ್ರಗಳ ಮಿನುಗುವಿಕೆಗೆ ಕಾರಣ

a)

ವಾಯುಮಂಡಲದಲ್ಲಿನ ಬೆಳಕಿನ ವಕ್ರೀಭವನ

b)

ವಾಯುಮಂಡಲದಲ್ಲಿನ ಬೆಳಕಿನ ವ್ಯತೀಕರಣ

c)

ಬೆಳಕಿನ ಪ್ರತಿಫಲನ

d)

ಬೆಳಕಿನ ವಿವರ್ತನೆ

21.

ಟಿಂಡಾಲ್ ಪರಿಣಾಮ ಎಂದರೇನು

a)

ಗಾಜಿನಿಂದ ಬೆಳಕಿನ ಪ್ರತಿಫಲನ ಉಂಟಾಗುವುದು

b)

ಕಲೀಲ ಪದಾರ್ಥಗಳಿಂದ ಬೆಳಕಿನ ಚದುರುವಿಕೆ

c)

ಪಟ್ಟಕದ ಮೂಲಕ ಬೆಳಕಿನ ವಿಭಜನೆ

d)

ಶುದ್ಧ ನೀರಿನ ಮೂಲಕ ಬೆಳಕಿನ ವಕ್ರೀಭವನ

22.

ಶುಭ್ರ ಆಕಾಶದ ಬಣ್ಣ ನೀಲಿಯಾಗಿ ಕಾಣುತ್ತದೆ ಏಕೆಂದರೆ

a)

ಆಕಾಶದಲ್ಲಿ ನೀಲಿ ಬಣ್ಣವು ಹೆಚ್ಚು ಚದುರುತ್ತವೆ

b)

ಆಕಾಶದಲ್ಲಿ ಎಲ್ಲಾ ಬಣ್ಣಗಳು ಸಮವಾಗಿ ಮಿಶ್ರಣವಾಗುತ್ತದೆ

c)

ಆಕಾಶದಲ್ಲಿ ಕೆಂಪು ಬಣ್ಣ ಮಾತ್ರ ಹೆಚ್ಚು ಚದುರುತ್ತವೆ

d)

ನಮ್ಮ ಕಣ್ಣು ನೀಲಿ ಬಣ್ಣವನ್ನು ಬೇಗ ಗ್ರಹಿಸುತ್ತದೆ

23.

ಭೂಮಿಗೆ ವಾಯುಮಂಡಲ ಇಲ್ಲದಿದ್ದರೆ ಆಗ ಆಕಾಶ ಈ ಬಣ್ಣದಿಂದ ಕಾಣಿಸುತ್ತಿತ್ತು

a)

ನೀಲಿ ಬಣ್ಣ

b)

ಬಿಳಿ ಬಣ್ಣ

c)

ಕೆಂಪು ಬಣ್ಣ

d)

ಕಡು ಕತ್ತಲಾಗಿ

24.

ಅಪಾಯ ಸಂಕೇತ ದೀಪಗಳು ಹಾಗೂ ಸಿಗ್ನಲ್ ದೀಪಗಳು ಕೆಂಪು ಬಣ್ಣದಲ್ಲಿರುತ್ತವೆ. ಕಾರಣ

a)

ಕೆಂಪುಬಣ್ಣದ ಕನಿಷ್ಠ ಚದುರುವಿಕೆ

b)

ಕೆಂಪುಬಣ್ಣದ ಗರಿಷ್ಠ ಚದುರುವಿಕೆ

c)

ಕೆಂಪು ಬಣ್ಣದ ಗರಿಷ್ಠ ವಕ್ರೀಭವನ

d)

ಕೆಂಪು ಬಣ್ಣ ತುಂಬಾ ಸುಂದರವಾಗಿ ಕಾಣುವುದು

25.

ಸೂರ್ಯೋದಯ ಹಾಗೂ ಸೂರ್ಯಾಸ್ತದ ಕಾಲದಲ್ಲಿ ಸೂರ್ಯನ ಕೆಂಪು ಬಣ್ಣಕ್ಕೆ ಕಾರಣ

a)

ಆಂತರಿಕ ಪ್ರತಿಫಲನ

b)

ಬೆಳಕಿನ ವ್ಯತೀಕರಣ

c)

ಬೆಳಕಿನ ಚದುರುವಿಕೆ

d)

ಬೆಳಕಿನ ವಿವರ್ತನೆ