wayground logo

Free Printable Worksheets

NEW

Font size

S
M
L
XL
Worksheets

ಭಾರತದ ಅರಣ್ಯ ಸಂಪತ್ತು

Total questions: 20

Worksheet time: 15mins

Name
Class
Date
1.

ಅರಣ್ಯ ಎಂದರೆ

a)

ಕಚ್ಚಾ ಪದಾರ್ಥಗಳನ್ನು ಪೂರೈಸುವುದು

b)

ಮೇಲ್ಮೈ ಲಕ್ಷಣಗಳನ್ನು ಸಂರಕ್ಷಿಸುವುದು

c)

ಮರುಭೂಮೀಕರಣ ವನ್ನು ತಡೆಯುವುದು

d)

ಸಸ್ಯ ಸಂಕುಲಗಳಿಂದ ಆವರಿಸಿದ ಭೂಭಾಗ

2.

ಭಾರತದಲ್ಲಿ ಅರಣ್ಯಗಳ ವಿಧಗಳನ್ನು ನಿರ್ಧರಿಸುವ ಪ್ರಮುಖವಾದ ಅಂಶ

a)

ಮಣ್ಣು

b)

ಮೇಲ್ಮೈ ಲಕ್ಷಣ

c)

ವಾಯುಗುಣ

d)

ಪ್ರಸ್ಥಭೂಮಿ

3.

ದಟ್ಟವಾಗಿರುವ ಹಾಗೂ ಎತ್ತರವಾದ ಮರಗಳನ್ನು ಹೊಂದಿರುವ ಕಾಡುಗಳು

a)

ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳು

b)

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

c)

ಮ್ಯಾಂಗ್ರೋವ್ ಕಾಡುಗಳು

d)

ಪರ್ವತ ಕಾಡುಗಳು

4.

ಉಷ್ಣವಲಯದ ಎಲೆ ಉದುರಿಸುವ ಕಾಡುಗಳನ್ನು ಹೀಗೂ ಕರೆಯುತ್ತಾರೆ

a)

ಪರ್ಣಪಾತಿ ಅರಣ್ಯ

b)

ಮರುಭೂಮಿ ಸಸ್ಯವರ್ಗ

c)

ಬೇಸಿಗೆ ಕಾಡುಗಳು

d)

ಸ್ವಾಭಾವಿಕ ಅರಣ್ಯ

5.

ಉಷ್ಣವಲಯದ ಎಲೆ ಉದುರಿಸುವ ಕಾಡುಗಳನ್ನು "ಮಾನ್ಸೂನ್ ಕಾಡುಗಳು" ಎಂದು ಕರೆಯಲು ಕಾರಣ

a)

ಇವು ಅಧಿಕ ಮಳೆ ಪಡೆಯುತ್ತವೆ

b)

ಇವು ವರ್ಷವಿಡಿ ಹಸಿರಾಗಿರುತ್ತವೆ

c)

ಇವು ಇಳಿಜಾರು ಪ್ರದೇಶದಲ್ಲಿ ಕಂಡುಬರುತ್ತವೆ

d)

ಇವು ವಸಂತ ಋತುವಿನಲ್ಲಿ ಎಲೆ ಉದುರಿಸುತ್ತವೆ

6.

ಕಾರ್ಡಮಮ್ ಬೆಟ್ಟಗಳಲ್ಲಿ ಕಂಡುಬರುವ ಸಸ್ಯವರ್ಗ

a)

ಮರುಭೂಮಿ ಸಸ್ಯವರ್ಗ

b)

ಪರ್ವತ ಸಸ್ಯವರ್ಗ

c)

ಮ್ಯಾಂಗ್ರೋವ್ ಸಸ್ಯವರ್ಗ

d)

ಕುರುಚಲು, ಹುಲ್ಲುಗಾವಲು ಸಸ್ಯವರ್ಗ

7.

ಭಾರತದಲ್ಲಿರುವ ಮರುಭೂಮಿಯ ಹೆಸರು

a)

ಥಾರ್

b)

ಕಲಹರಿ

c)

ಮಂಗೋಲಿಯನ್

d)

ಸಹರಾ

8.

ಮ್ಯಾಂಗ್ರೋವ್ ಕಾಡುಗಳು : ಸುಂದರಿ : : ಪರ್ವತ ಕಾಡುಗಳು : ___________

a)

ಸಿಡಾರ್

b)

ಚಂಪ

c)

ಗುರ್ಜಾನ್

d)

ಕಗ್ಗಲಿ

9.

ಮ್ಯಾಂಗ್ರೋವ್ ಅರಣ್ಯಗಳ ವಿಶೇಷತೆ

a)

ಒರಟಾದ ಹುಲ್ಲು

b)

ಮುಳ್ಳು ಪೊದೆ

c)

ಬಿಳಿಲು

d)

ಎತ್ತರದ ಮರಗಳು

10.

ಭಾರತದಲ್ಲಿ ವಿಶಾಲವಾದ ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯ

a)

ಆಂಧ್ರಪ್ರದೇಶ

b)

ಮಧ್ಯಪ್ರದೇಶ

c)

ಉತ್ತರಪ್ರದೇಶ

d)

ಅರುಣಾಚಲ ಪ್ರದೇಶ

11.

ಭಾರತದಲ್ಲಿ ಗುರುತಿಸಲಾಗಿರುವ ಜೀವಿ ಸಂರಕ್ಷಣಾ ವಲಯಗಳ ಸಂಖ್ಯೆ

a)

523

b)

98

c)

18

d)

99

12.

ಕೃಷಿ ಚಟುವಟಿಕೆಗಳನ್ನು ಈ ಪ್ರದೇಶಗಳಲ್ಲಿ ನಿಷೇಧಿಸಲಾಗಿದೆ

a)

ವನ್ಯ ಜೀವಿಧಾಮಗಳು

b)

ರಾಷ್ಟ್ರೀಯ ಉದ್ಯಾನಗಳು

c)

ಜೀವಿ ಸಂರಕ್ಷಣಾ ವಲಯಗಳು

d)

ಗಿರಿಧಾಮಗಳು

13.

ಹಿಮಾಲಯ ಪ್ರದೇಶಗಳಲ್ಲಿ ಈ ವಿಧದ ಅರಣ್ಯಗಳಿವೆ

a)

ಮ್ಯಾಂಗ್ರೋವ್ ಅರಣ್ಯ

b)

ನಿತ್ಯಹರಿದ್ವರ್ಣ ಅರಣ್ಯ

c)

ಪರ್ವತ ಅರಣ್ಯ

d)

ಹುಲ್ಲುಗಾವಲು

14.

"ಮಾನಸ" ವನ್ಯ ಜೀವಿಧಾಮವು _________ ರಾಜ್ಯದಲ್ಲಿದೆ

a)

ಅಸ್ಸಾಂ

b)

ಕರ್ನಾಟಕ

c)

ಕೇರಳ

d)

ತೆಲಂಗಾಣ

15.

ಕಡಿಮೆ ಅರಣ್ಯ ಪ್ರದೇಶವಿರುವ ಭಾರತದ ರಾಜ್ಯ

a)

ಸಿಕ್ಕಿಂ

b)

ಗೋವಾ

c)

ಕೇರಳ

d)

ದೆಹಲಿ

16.

ನಕ್ಷೆಯಲ್ಲಿ ಗುರುತಿಸಿರುವ ಪ್ರದೇಶದಲ್ಲಿ ಕಂಡುಬರುವ ಅರಣ್ಯದ ವಿಧ

a)

ಕುರುಚಲು ಸಸ್ಯವರ್ಗ

b)

ಹುಲ್ಲುಗಾವಲು

c)

ಪರ್ಣಪಾತಿ ಅರಣ್ಯ

d)

ಪರ್ವತ ಕಾಡುಗಳು

17.

ಕರ್ನಾಟಕದಲ್ಲಿರುವ ರಾಷ್ಟ್ರೀಯ ಉದ್ಯಾನವನಗಳ ಸರಿಯಾದ ಆಯ್ಕೆ

a)

ಬಂಡೀಪುರ, ಬನ್ನೇರುಘಟ್ಟ, ಕುದುರೆಮುಖ

b)

ಬಂಡೀಪುರ, ಕುದುರೆಮುಖ, ನಾಗರಹೊಳೆ

c)

ಬಂಡೀಪುರ, ಬನ್ನೇರುಘಟ್ಟ, ನಾಗರಹೊಳೆ

d)

ಬಂಡೀಪುರ, ಬನ್ನೇರುಘಟ್ಟ, ಮಲೆನಾಡು

18.

ಭಾರತದ ಅರಣ್ಯ ಪ್ರದೇಶದ ಒಟ್ಟು ವಿಸ್ತೀರ್ಣ

a)

7.70 ಲಕ್ಷ ಚ. ಕಿ. ಮೀ.

b)

8.70 ಲಕ್ಷ ಚ. ಕಿ. ಮೀ.

c)

7.74 ಲಕ್ಷ ಚ. ಕಿ. ಮೀ.

d)

2.36 ಲಕ್ಷ ಚ. ಕಿ. ಮೀ.

19.

ಪರಿಯಾವರಣ ಸಮತೋಲನವನ್ನು ಕಾಪಾಡಲು ಸಹಕಾರಿಯಾಗಿರುವುದು

a)

ಹಸಿರುಮನೆ ಪರಿಣಾಮ

b)

ಅರಣ್ಯಗಳು

c)

ಓಝೋನ್ ಪದರ

d)

ಭೂ ಸಂಪತ್ತು

20.

ಭಾರತದಲ್ಲಿ ಅರಣ್ಯ ನಾಶಕ್ಕೆ ಕಾರಣವಾದ ಅಂಶ

a)

ನಗರೀಕರಣ

b)

ಕೈಗಾರಿಕೀಕರಣ

c)

ಕಾಡ್ಗಿಚ್ಚು

d)

ಎಲ್ಲವೂ