wayground logo

Free Printable Worksheets

Font size

S
M
L
XL
Worksheets

ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು

Total questions: 20

Worksheet time: 15mins

Name
Class
Date
1.

ಆಮ್ಲಗಳು

a)

ಕೆಂಪು ಲಿಟ್ಮಸ್ ಕಾಗದವನ್ನು ನೀಲಿ ಲಿಟ್ಮಸ್ ಕಾಗದವನ್ನಾಗಿ ಪರಿವರ್ತಿಸುತ್ತದೆ

b)

ನೀಲಿ ಲಿಟ್ಮಸ್ ಕಾಗದವನ್ನು ಕೆಂಪು ಲಿಟ್ಮಸ್ ಕಾಗದವನ್ನಾಗಿ ಪರಿವರ್ತಿಸುತ್ತದೆ

c)

ತಟಸ್ಥ ಗುಣ ಹೊಂದಿವೆ

d)

ಲಿಟ್ಮಸ್ ಕಾಗದದಲ್ಲಿ ಯಾವುದೇ ಬದಲಾವಣೆ ಕಂಡು ಬರುವುದಿಲ್ಲ

2.

ಮೆಗ್ನೀಷಿಯಂ ಹೈಡ್ರಾಕ್ಸೈಡ್ ಒಂದು

a)

ಸೌಮ್ಯ ಆಮ್ಲ

b)

ಸೌಮ್ಯ ಪ್ರತ್ಯಾಮ್ಲ

c)

ಪ್ರಬಲ ಆಮ್ಲ

d)

ಯಾವುದೂ ಅಲ್ಲ

3.

ಸಾರರಿಕ್ತ ಸಲ್ಫ್ಯೂರಿಕ್ ಆಮ್ಲದೊಂದಿಗೆ ಸತುವಿನ ಚೂರುಗಳು ವರ್ತಿಸಿದಾಗ ಬಿಡುಗಡೆಯಾಗುವ ಅನಿಲ

a)

ನೈಟ್ರೋಜನ್

b)

ಆಕ್ಸಿಜನ್

c)

ಕ್ಲೋರಿನ್

d)

ಹೈಡ್ರೋಜನ್

4.

ಸತುವು ಸೋಡಿಯಂ ಹೈಡ್ರಾಕ್ಸೈಡ್ ನೊಂದಿಗೆ ಪ್ರತಿಕ್ರಿಯಿಸಿದಾಗ ಬರುವ ಉತ್ಪನ್ನ

a)

ಸೋಡಿಯಂ ಜಿಂಕೇಟ್ ಮತ್ತು ಹೈಡ್ರೋಜನ್ ಅನಿಲ

b)

ಸೋಡಿಯಂ ಕಾರ್ಬೋನೇಟ್ ಮತ್ತು ಹೈಡ್ರೋಜನ್ ಅನಿಲ

c)

ಸೋಡಿಯಂ ಜಿಂಕೇಟ್ ಮತ್ತು ಕಾರ್ಬನ್ ಡೈಯಾಕ್ಸೈಡ್

d)

ಸೋಡಿಯಂ ಕಾರ್ಬೊನೇಟ್ ಮತ್ತು ಕಾರ್ಬನ್ ಡೈಆಕ್ಸೈಡ್

5.

ತಟಸ್ಥೀಕರಣ ಕ್ರಿಯೆಯು ಒಳಗೊಂಡಿರುವುದು

a)

ಆಮ್ಲಗಳು ಮತ್ತು ಪ್ರತ್ಯಾಮ್ಲಗಳ ನಡುವಿನ ಪ್ರತಿಕ್ರಿಯೆ

b)

ಎರಡು ಪ್ರತ್ಯಾಮ್ಲಗಳ ನಡುವಿನ ಪ್ರತಿಕ್ರಿಯೆ

c)

ಎರಡು ಆಮ್ಲಗಳ ನಡುವಿನ ಪ್ರತಿಕ್ರಿಯೆ

d)

ಎರಡು ಲವಣಗಳ ನಡುವಿನ ಪ್ರತಿಕ್ರಿಯೆ

6.

ಲೋಹದ ಆಕ್ಸೈಡ್ಗಳು

a)

ಆಮ್ಲೀಯ ಗುಣವನ್ನು ಹೊಂದಿವೆ

b)

ತಟಸ್ಥ ಗುಣವನ್ನು ಹೊಂದಿದೆ

c)

ಪ್ರತ್ಯಾಮ್ಲೀಯ ಗುಣವನ್ನು ಹೊಂದಿದೆ

d)

ಎಲ್ಲವೂ ಸರಿ

7.

ಈ ದ್ರಾವಣಗಳ ಮೂಲಕ ವಿದ್ಯುತ್ ಪ್ರವಾಹ ನಡೆಯುವುದಿಲ್ಲ

a)

ಅಸಿಟಿಕ್ ಆಮ್ಲ ಮತ್ತು ನೈಟ್ರಿಕ್ ಆಮ್ಲ

b)

ಸೋಡಿಯಂ ಕ್ಲೋರೈಡ್ ಮತ್ತು ತಾಮ್ರದ ಸಲ್ಫೇಟ್

c)

ಸೋಡಿಯಂ ಕ್ಲೋರೈಡ್ ಮತ್ತು ಸತುವಿನ ಸಲ್ಫೇಟ್

d)

ಗ್ಲೂಕೋಸ್ ಮತ್ತು ಆಲ್ಕೋಹಾಲ್ ದ್ರಾವಣ

8.

ಪ್ರತ್ಯಾಮ್ಲಗಳು

a)

ಹೈಡ್ರೋಜನ್ ಅಯಾನುಗಳನ್ನು ಉತ್ಪತ್ತಿ ಮಾಡುತ್ತವೆ

b)

ಹೈಡ್ರಾಕ್ಸಿಲ್ ಅಯಾನುಗಳನ್ನು ಉತ್ಪತ್ತಿಮಾಡುತ್ತವೆ

c)

ಹೈಡ್ರೋಜನ್ ಮತ್ತು ಹೈಡ್ರಾಕ್ಸಿಲ್ ಅಯಾನುಗಳನ್ನು ಉತ್ಪತ್ತಿ ಮಾಡುತ್ತವೆ

d)

ಯಾವ ಅಯಾನುಗಳನ್ನು ಉತ್ಪತ್ತಿ ಮಾಡುವುದಿಲ್ಲ

9.

ಕೆಳಗಿನವುಗಳಲ್ಲಿ ಸರಿಯಲ್ಲದ ಹೇಳಿಕೆಯನ್ನು ಗುರುತಿಸಿ

a)

ಆಮ್ಲಗಳು ಪ್ರತ್ಯಾಮ್ಲಗಳೊಂದಿಗೆ ವರ್ತಿಸಿದಾಗ ಲವಣ ಮತ್ತು ನೀರು ಉಂಟಾಗುತ್ತದೆ

b)

ಅಲೋಹೀಯ ಆಕ್ಸೈಡ್ಗಳು ಆಮ್ಲೀಯ ಗುಣವನ್ನು ಹೊಂದಿವೆ

c)

ಆಮ್ಲಗಳಿಗೆ ನೀರನ್ನು ಸೇರಿಸುವುದು ಸೂಕ್ತವಾದ ಕ್ರಮ

d)

ಆಮ್ಲಗಳನ್ನು ನಿಧಾನವಾಗಿ ನೀರಿಗೆ ಸೇರಿಸುವುದು ಸೂಕ್ತವಾದ ಕ್ರಮ

10.

ಜೇನುಹುಳುಗಳು ನಮಗೆ ಕಚ್ಚಿದಾಗ ನಮ್ಮ ಚರ್ಮವನ್ನು ಪ್ರವೇಶಿಸುವ ಆಮ್ಲ

a)

ಮೆಥನೊಯಿಕ್ ಆಮ್ಲ

b)

ಈಥನೋಯಿಕ್ ಆಮ್ಲ

c)

ಪ್ರೊಪನೋಯಿಕ್ ಆಮ್ಲ

d)

ಬ್ಯುಟನೋಯಿಕ್ ಆಮ್ಲ

11.

ಆಮ್ಲ ಮಳೆಯ ಪಿಎಚ್ ಮೌಲ್ಯ

a)

7 ರಿಂದ 9

b)

10 ರಿಂದ 14

c)

5.6 ಕ್ಕಿಂತ ಕಡಿಮೆ

d)

5.6 ರಿಂದ 7.0 ವರೆಗೆ

12.

ನಮ್ಮ ಬಾಯಿಯಲ್ಲಿನ ಪಿಎಚ್ ಮೌಲ್ಯವು 5.5 ಕ್ಕಿಂತ ಕಡಿಮೆಯಾದರೆ

a)

ಹೊಸ ಹಲ್ಲುಗಳು ಹುಟ್ಟುತ್ತವೆ

b)

ಹಲ್ಲುಗಳು ಹುಳುಕಾಗುತ್ತವೆ

c)

ಎಲ್ಲ ಹಲ್ಲುಗಳು ಬಿದ್ದು ಹೋಗುತ್ತವೆ

d)

ಹಲ್ಲುಗಳಿಗೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ

13.

ಸೌಮ್ಯ ಪ್ರತ್ಯಾಮ್ಲ ವಾದ ಮೆಗ್ನೀಷಿಯಂ ಹೈಡ್ರಾಕ್ಸೈಡ್

a)

ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತದೆ

b)

ಪ್ರತ್ಯಾಮ್ಲದ ಪ್ರಮಾಣವನ್ನು ಹೆಚ್ಚಿಸುತ್ತದೆ

c)

ಅಧಿಕ ಪ್ರಮಾಣದ ಆಮ್ಲವನ್ನು ತಟಸ್ಥಗೊಳಿಸುತ್ತದೆ

d)

ಯಾವುದು ಅಲ್ಲ

14.

ವಿನೆಗರ್ ನ ರಾಸಾಯನಿಕ ಹೆಸರು

a)

ಹೈಡ್ರೋಕ್ಲೋರಿಕ್ ಆಮ್ಲ

b)

ನೈಟ್ರಿಕ್ ಆಮ್ಲ

c)

ಗಂಧಕಾಮ್ಲ

d)

ಅಸಿಟಿಕ್ ಆಮ್ಲ

15.

ಆಕ್ಸಾಲಿಕ್ ಆಮ್ಲವನ್ನು ಹೊಂದಿರುವ ಆಹಾರ ಪದಾರ್ಥ

a)

ಹುಣಸೆಹಣ್ಣು

b)

ನೆಲ್ಲಿಕಾಯಿ

c)

ಟೊಮ್ಯಾಟೊ

d)

ನಿಂಬೆಹಣ್ಣು

16.

ಎ ಬಿ ಸಿ ಮತ್ತು ಡಿ ಎಂಬ 4 ದ್ರಾವಣಗಳು ಕ್ರಮವಾಗಿ 2.0, 4.6, 7.0 ಮತ್ತು 13.9 ಪಿಎಚ್ ಮೌಲ್ಯವನ್ನು ಹೊಂದಿವೆ ಹಾಗಾದರೆ ಇವುಗಳಲ್ಲಿ ಪ್ರಬಲ ಪ್ರತ್ಯಾಮ್ಲೀಯ ದ್ರಾವಣ

a)

ದ್ರಾವಣ ಎ

b)

ದ್ರಾವಣ ಬಿ

c)

ದ್ರಾವಣ ಸಿ

d)

ದ್ರಾವಣ ಡಿ

17.

ಸೋಡಿಯಂ ಹೈಡ್ರಾಕ್ಸೈಡ್ ಹೈಡ್ರೋಕ್ಲೋರಿಕ್ ಆಮ್ಲ ದೊಂದಿಗೆ ವರ್ತಿಸಿದಾಗ

a)

ಸೋಡಿಯಂ ಕ್ಲೋರೈಡ್ ಮತ್ತು ನೀರು ಉಂಟಾಗುತ್ತದೆ

b)

ಸೋಡಿಯಂ ಹೈಡ್ರಾಕ್ಸೈಡ್ ಮತ್ತು ನೀರು ಉಂಟಾಗುತ್ತದೆ

c)

ಸೋಡಿಯಂ ಕ್ಲೋರೈಡ್ ಮತ್ತು ಹೈಡ್ರೋಕ್ಲೋರಿಕ್ ಆಮ್ಲ ಉಂಟಾಗುತ್ತದೆ

d)

ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಹೈಡ್ರೋಕ್ಲೋರಿಕ್ ಆಮ್ಲ ಉಂಟಾಗುತ್ತದೆ

18.

ಆಮ್ಲೀಯ ಅಥವಾ ಪ್ರತ್ಯಾಮ್ಲೀಯ ಮಾಧ್ಯಮಗಳಲ್ಲಿ ತಮ್ಮ ವಾಸನೆಯನ್ನು ಬದಲಾಯಿಸುವ ವಸ್ತುಗಳಿಗೆ ಹೀಗೆ ಕರೆಯುತ್ತಾರೆ

a)

ನೈಸರ್ಗಿಕ ಸೂಚಕಗಳು

b)

ಘ್ರಾಣ ಸೂಚಕಗಳು

c)

ಸಾಮಾನ್ಯ ಸೂಚಕಗಳು

d)

ಎಲ್ಲವೂ ಸರಿ

19.

ಮಿಥೈಲ್ ಆರೆಂಜ್ ಒಂದು

a)

ಘ್ರಾಣ ಸೂಚಕ

b)

ನೈಸರ್ಗಿಕ ಸೂಚಕ

c)

ಸಂಶ್ಲೇಷಿತ ಸೂಚಕ

d)

ಯಾವುದು ಅಲ್ಲ

20.

ಒಂದು ದ್ರಾವಣದ ಬಣ್ಣವು ಗಾಢ ಕೆಂಪು ಅಥವಾ ಗಾಢ ಕೇಸರಿ ಬಣ್ಣ ಆಗಿದೆ ಹಾಗಾದರೆ ಈ ದ್ರಾವಣವು

a)

ಪ್ರಬಲ ಪ್ರತ್ಯಾಮ್ಲೀಯ ಗುಣ ಹೊಂದಿದೆ

b)

ಪ್ರತ್ಯಾಮ್ಲೀಯ ಗುಣ ಹೊಂದಿದೆ

c)

ಆಮ್ಲೀಯ ಗುಣ ಹೊಂದಿದೆ

d)

ಪ್ರಬಲ ಆಮ್ಲೀಯ ಗುಣ ಹೊಂದಿದೆ