wayground logo

Free Printable Worksheets

NEW

Font size

S
M
L
XL
Worksheets

10th Science ನಿಯಂತ್ರಣ ಮತ್ತು ಸಹಭಾಗಿತ್ವ

Total questions: 19

Worksheet time: 10mins

Name
Class
Date
1.

ವೀರ್ಯಾಣುಗಳ ಉತ್ಪಾದನೆಗೆ ಸಹಾಯಕವಾದ ಗ್ರಂಥಿ

a)

ಪಿಟ್ಯುಟರಿ

b)

ಅಂಡಾಶಯ

c)

ಅಡ್ರಿನಲ್

d)

ವೃಷಣ

2.

ಮಿದುಳು ಬಳ್ಳಿಯನ್ನು ರಕ್ಷಿಸುವ ದೇಹದ ಭಾಗ

a)

ಹೊಟ್ಟೆ

b)

ಕಪಾಲ

c)

ಬೆನ್ನುಮೂಳೆ

d)

ಎದೆಗೂಡು

3.

ಬೆಳಗಿನ ವೇಳೆ ಪತ್ರರಂಧ್ರಗಳು ತೆರೆಯಲು ಕಾರಣವಾದ ಹಾರ್ಮೋನ್

a)

ಆಕ್ಸಿನ್

b)

ಜಿಬ್ಬರ್ ಲಿನ್

c)

ಅಬ್ಸಿಸಿಕ್ ಆಮ್ಲ

d)

ಸೈಟೋಕೈನಿನ್

4.

ಥೈರಾಯಿಡ್ ಗ್ರಂಥಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಅವಶ್ಯಕವಾದ ಪೋಷಕಾಂಶ

a)

ಅಯೋಡಿನ್

b)

ಕ್ಯಾಲ್ಸಿಯಂ

c)

ಕಬ್ಬಿಣ

d)

ಪೊಟ್ಯಾಸಿಯಂ

5.

ಒಂದು ನರಕೋಶದ ಆಕ್ಸಾನ್ ನ ತುದಿ ಮತ್ತು ಮತ್ತೊಂದು ನರಕೋಶದ ಡೆಂಡ್ರೈಟ್ ಗಳ ನಡುವಿನ ಸಣ್ಣ ಸ್ಥಳಾವಕಾಶ

a)

ನರಕೋಶ

b)

ಸಂಸರ್ಗ

c)

ಡೆಂಡ್ರೈಟ್

d)

ಆಕ್ಸಾನ್

6.

ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ಪರಾವರ್ತಿತ ಚಾಪದ ಸರಿಯಾದ ಭಾಗಗಳು

a)

ಗ್ರಾಹಕ, ಅಪಧಮನಿ, ಜ್ಞಾನವಾಹಿ ನರಕೋಶ, ಕ್ರಿಯಾವಾಹಿ ನರಕೋಶ, ಕಾರ್ಯನಿರ್ವಾಹಕ

b)

ಗ್ರಾಹಕ, ಜ್ಞಾನವಾಹಿ ನರಕೋಶ, ಸಂಬಂಧ ಕಲ್ಪಿಸುವ ನರಕೋಶ, ಕ್ರಿಯಾವಾಹಿ ನರಕೊಶ, ಕಾರ್ಯನಿರ್ವಾಹಕ

c)

ಗ್ರಾಹಕ, ಅಭಿದಮನಿ, ಕಾರ್ಯನಿರ್ವಾಹಕ, ಕ್ರಿಯಾವಾಹಿ ನರ, ಜ್ಞಾನವಾಹಿ ನರಕೋಶ

d)

ಅಭಿಧಮನಿ, ಅಪಧಮನಿ, ಜ್ಞಾನವಾಹಿ ನರಕೋಶ, ಕ್ರಿಯಾವಾಹಿ ನರಕೋಶ, ಕಾರ್ಯನಿರ್ವಾಹಕ

7.

ನೀರಿನ ಸೆಳೆತಕ್ಕೆ ಪ್ರತಿಕ್ರಿಯೆಯಾಗಿ ಸಸ್ಯದ ಬೇರುಗಳು ನೀರಿನ ಕಡೆಗೆ ಬೆಳೆಯುವ ವಿದ್ಯಮಾನ

a)

ಜಲಾನುವರ್ತನೆ

b)

ದ್ಯುತಿ ಅನುವರ್ತನೆ

c)

ರಾಸಾಯನಿಕ ಅನುವರ್ತನೆ

d)

ಗುರುತ್ವಾನುವರ್ತನೆ

8.

ಸಸ್ಯಗಳು ಬೆಳಕನ್ನು ಗ್ರಹಿಸಿದಾಗ ಕಾಂಡದ ತುದಿಯನ್ನು ಜೀವಕೋಶಗಳು ಉದ್ದವಾಗಿ ಬೆಳೆಯಲು ಸಹಾಯಕವಾದ ಹಾರ್ಮೋನ್

a)

ಆಕ್ಸಿನ್

b)

ಜಿಬ್ಬರ್ ಲಿನ್

c)

ಅಬ್ಸಿಸಿಕ್ ಆಮ್ಲ

d)

ಸೈಟೋಕೈನಿನ್

9.

ರಕ್ತದಲ್ಲಿ ಸಕ್ಕರೆಯ ಮಟ್ಟವು ಸಮತೋಲನದಲ್ಲಿರುವಂತೆ ನಿಯಂತ್ರಸುವ ಹಾರ್ಮೋನ್

a)

ಇನ್ಸುಲಿನ್

b)

ಅಡ್ರಿನಲಿನ್

c)

ಥೈರಾಕ್ಸಿನ್

d)

ಈಸ್ಟ್ರೋಜನ್

10.

ಅಯೋಡಿನ್ ಕೊರತೆಯಿಂದ ದೇಹದಲ್ಲಿ ಈ ಕಾಯಿಲೆ ಉಂಟಾಗುತ್ತದೆ

a)

ಬೆರಿ ಬೆರಿ

b)

ಗಳಗಂಡ

c)

ಮರಾಸ್ಮಸ್

d)

ಇರುಳು ಕುರುಡು

11.

ಮೆದೋಜೀರಕಾಂಗವು ಈ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ

a)

ಇನ್ಸುಲಿನ್ ಮಾತ್ರ

b)

ಗ್ಲುಕಗಾನ್ ಮಾತ್ರ

c)

ಇನ್ಸುಲಿನ್ ಮತ್ತು ಗ್ಲುಕಗಾನ್ ಎರಡನ್ನೂ

d)

ಮೇಲಿನ ಯಾವುದೂ ಅಲ್ಲ

12.

ಮಾನವರಲ್ಲಿ ಕಂಡುಬರದ ಹಾರ್ಮೋನ್

a)

ಥೈರಾಕ್ಸಿನ್

b)

ಇನ್ಸುಲಿನ್

c)

ಈಸ್ಟ್ರೋಜನ್

d)

ಸೈಟೋಕೈನಿನ್

13.

ಇವುಗಳಲ್ಲಿ ಸರಿಯಾದ ಹೇಳಿಕೆ (1) ಪರಿಸರದಲ್ಲಿನ ಹಠಾತ್ ಪ್ರತಿಕ್ರಿಯೆಯು ಪರಾವರ್ತಿತ ಕ್ರಿಯೆಯಾಗಿದೆ. (2) ಜ್ಞಾನವಾಹಿ ನರಕೋಶಗಳು ಮಿದುಳು ಬಳ್ಳಿಯಿಂದ ಸ್ನಾಯುಗಳಿಗೆ ಸಂದೇಶ ರವಾನಿಸುತ್ತವೆ. (3) ಕ್ರಿಯಾವಾಹಿ ನರಕೋಶಗಳು ಗ್ರಾಹಕದಿಂದ ಮಿದುಳುಬಳ್ಳಿಗೆ ಸಂದೇಶ ರವಾನಿಸುತ್ತವೆ. (4) ಗ್ರಾಹಕದಿಂದ ಸ್ನಾಯು ಅಥವಾ ಗ್ರಂಥಿಗಳಿಗೆ ಸಂದೇಶಗಳು ಹಾದು ಹೋಗುವ ಮಾರ್ಗವನ್ನು ಪರಾವರ್ತಿತ ಚಾಪ ಎನ್ನುತ್ತೇವೆ.

a)

(1) ಮತ್ತು (2)

b)

(1) ಮತ್ತು (3)

c)

(1) ಮತ್ತು (4)

d)

(1), (2) ಮತ್ತು (3)

14.

ಹದಿಹರೆಯದಲ್ಲಿ ಉಂಟಾಗುವ ದೈಹಿಕ ಬದಲಾವಣೆಗಳಿಗೆ ಕಾರಣವಾದ ಸ್ರವಿಕೆ

a)

ವೃಷಣದಿಂದ ಈಸ್ಟ್ರೋಜನ್ ಮತ್ತು ಅಂಡಾಶಯದಿಂದ ಟೆಸ್ಟೋಸ್ಟೀರಾನ್

b)

ಅಡ್ರಿನಲ್ ಗ್ರಂಥಿಯಿಂದ ಈಸ್ಟ್ರೋಜನ್ ಮತ್ತು ಪಿಟ್ಯುಟರಿ ಗ್ರಂಥಿಯಿಂದ ಟೆಸ್ಟೋಸ್ಟೀರಾನ್

c)

ವೃಷಣದಿಂದ ಟೆಸ್ಟೋಸ್ಟೀರಾನ್ ಮತ್ತು ಅಂಡಾಶಯದಿಂದ ಈಸ್ಟ್ರೋಜನ್

d)

ಥೈರಾಯಿಡ್ ಗ್ರಂಥಿಯಿಂದ ಟೆಸ್ಟೋಸ್ಟೀರಾನ್ ಮತ್ತು ಪಿಟ್ಯುಟರಿ ಗ್ರಂಥಿಯಿಂದ ಈಸ್ಟ್ರೋಜನ್

15.

ಸಕ್ಕರೆಯಂತಹ ವಸ್ತುವಿನ ಪ್ರಚೋದನೆಯಿಂದಾಗಿ ಪರಾಗನಳಿಕೆಯು ಅಂಡಾಣುವಿನೆಡೆಗೆ ಬೆಳವಣಿಗೆ ಹೊಂದುತ್ತದೆ. ಇದು ಈ ಕೆಳಗಿನ ಯಾವುದಕ್ಕೆ ಉದಾಹರಣೆಯಾಗಿದೆ?

a)

ಜಲಾನುವರ್ತನೆ

b)

ದ್ಯುತಿ ಅನುವರ್ತನೆ

c)

ರಾಸಾಯನಿಕ ಅನುವರ್ತನೆ

d)

ಗುರುತ್ವಾನುವರ್ತನೆ

16.

ಮಾನವನ ಮಿದುಳಿನ ಪ್ರಮುಖ ಆಲೋಚನಾ ಭಾಗ ಯಾವುದು?

a)

ಮುಮ್ಮೆದುಳು

b)

ಮಧ್ಯ ಮಿದುಳು

c)

ಹಿಮ್ಮೆದುಳು

d)

ಹೈಪೋಥಲಾಮಸ್

17.

ಇದು ಮುಮ್ಮೆದುಳು ಹಾಗೂ ಹಿಮ್ಮೆದುಳಿಗೆ ಸೇತುವೆಯಂತೆ ವರ್ತಿಸುತ್ತದೆ.

a)

ಮಿದುಳುಬಳ್ಳಿ

b)

ಅನುಮಸ್ತಿಷ್ಕ

c)

ಮಧ್ಯಮಿದುಳು

d)

ಕಪಾಲ

18.

ಹೈಪೋಥಲಾಮಸ್ ಭಾಗವು ಈ ಕಾರ್ಯವನ್ನು ನಿಯಂತ್ರಿಸುತ್ತದೆ.

a)

ನಿದ್ರೆ

b)

ಆಹಾರದ ಅಪೇಕ್ಷೆ

c)

ಬಾಯಾರಿಕೆ

d)

ಮೇಲಿನ ಎಲ್ಲವೂ

19.

ರಕ್ತದ ಒತ್ತಡ, ವಾಂತಿಯಾಗುವಿಕೆ ಮತ್ತು ಬಾಯಲ್ಲಿ ನೀರೂರುವುದು ಕ್ರಿಯೆಗಳನ್ನು ನಿಯಂತ್ರಿಸುವ ಮಿದುಳಿನ ಭಾಗ

a)

ಪಾನ್ಸ್

b)

ಮೆಡುಲ್ಲಾ

c)

ಅನುಮಸ್ತಿಷ್ಕ

d)

ಮಹಾಮಸ್ತಿಷ್ಕ