wayground logo

Free Printable Worksheets

NEW

Font size

S
M
L
XL
Worksheets

ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು - MCQ =STF DK

Total questions: 15

Worksheet time: 8mins

Name
Class
Date
1.

ಆಮ್ಲೀಯ ದ್ರಾವಣವು...

a)

ಕೆಂಪು ಲಿಟ್ಮಸ್ ನ್ನು ನೀಲಿ ಬಣ್ಣಕ್ಕೆ ಬದಲಾಯಿಸುತ್ತದೆ

b)

ಫಿನಾಫ್ತಲೀನ್ ಸೂಚಕದಲ್ಲಿ ಗುಲಾಬಿ ಬಣ್ಣಕ್ಕೆ ಬದಲಾಗುತ್ತದೆ

c)

pH ಮೌಲ್ಯ 7ಕ್ಕಿಂತ ಹೆಚ್ಚಿರುತ್ತದೆ

d)

ಮೇಲಿನ ಯಾವುದೂ ಅಲ್ಲ

2.

ವಿಜ್ಞಾನ ಪ್ರಯೋಗಾಲಯದ ಪ್ರಯೋಗ ಮಾಡುವಾಗ ಶುಷ್ಕ ಹೈಡ್ರೋಜನ್ ಕ್ಲೋರೈಡ್ ಅನಿಲವನ್ನು ಶುಷ್ಕ ನೀಲಿ ಮತ್ತು ಕೆಂಪು ಲಿಟ್ಮಸ್ ಕಾಗದದ ಮೂಲಕ ಹಾಯಿಸಿದಾಗ ಈ ಕೆಳಗಿನ ಯಾವ ಬದಲಾವಣೆಯನ್ನು ಗಮನಿಸುವಿರಿ

a)

ಲಿಟ್ಮಸ್ ಕಾಗದಗಳ ಬಣ್ಣ ಬದಲಾಗುವುದಿಲ್ಲ

b)

ನೀಲಿ ಲಿಟ್ಮಸ್ ಕಾಗದದ ಬಣ್ಣವು ಕೆಂಪಾಗುತ್ತದೆ

c)

ಕೆಂಪು ಲಿಟ್ಮಸ್ ಕಾಗದದ ಬಣ್ಣವು ನೀಲಿ ಬಣ್ಣಕ್ಕೆ ತಿರುಗುತ್ತದೆ

d)

ಎರಡೂ ಲಿಟ್ಮಸ್ ಕಾಗದಗಳ ಬಣ್ಣ ಬದಲಾಗುತ್ತದೆ

3.

ಕೆಳಗಿನವುಗಳಲ್ಲಿ ಹೆಚ್ಚು ಹೈಡ್ರಾಕ್ಸಿಲ್ (OH-) ಅಯಾನುಗಳನ್ನು ಉಂಟು ಮಾಡುವ ಸಂಯುಕ್ತ...

a)

ಅಸಿಟಿಕ್ ಆಮ್ಲ

b)

ಅಮೋನಿಯಂ ಹೈಡ್ರಾಕ್ಸೈಡ್

c)

ಸೋಡಿಯಂ ಹೈಡ್ರಾಕ್ಸೈಡ್

d)

ಲಿಂಬೆರಸ

4.

ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣ ದಲ್ಲಿ ಸತುವಿನ ಚೂರನ್ನು ಹಾಕಿದಾಗ ದೊರೆಯುವ ಉತ್ಪನ್ನಗಳು...

a)

ಸೋಡಿಯಂ ಕಾರ್ಬೋನೇಟ್ ಮತ್ತು ಹೈಡ್ರೋಜನ್ ಅನಿಲ

b)

ಸೋಡಿಯಂ ಝಿಂಕೇಟ್ ಮತ್ತು ಹೈಡ್ರೋಜನ್ ಅನಿಲ

c)

ಸೋಡಿಯಂ ಕಾರ್ಬೋನೇಟ್ ಮತ್ತು ಆಕ್ಸಿಜನ್ ಅನಿಲ

d)

ಸೋಡಿಯಂ ಕ್ಲೋರೈಡ್ ಮತ್ತು ಹೈಡ್ರೋಜನ್ ಅನಿಲ

5.

ತಾಜಾ ಹಾಲಿನ pH 6 ಆಗಿರುತ್ತದೆ. ಹಾಲು ಮೊಸರಾಗಿ ಪರಿವರ್ತನೆ ಹೊಂದಿದ ನಂತರ ಅದರ pH ಮೌಲ್ಯ

a)

6

b)

6 ಕ್ಕಿಂತ ಕಡಿಮೆ

c)

7 ಕ್ಕಿಂತ ಹೆಚ್ಚು

d)

ಬದಲಾಗುವುದಿಲ್ಲ

6.

ಬಾಯಿಯ pH ಮೌಲ್ಯ 5.5 ಕ್ಕಿಂತ ಕಡಿಮೆಯಾದಾಗ ಸವೆತಕ್ಕೆ ಒಳಗಾಗುವ ಹಲ್ಲಿನ ಭಾಗವು ಈ ವಸ್ತುವಿನಿಂದ ಮಾಡಲ್ಪಟ್ಟಿದೆ.

a)

ಕ್ಯಾಲ್ಸಿಯಂ ಆಕ್ಸೈಡ್

b)

ಕ್ಯಾಲ್ಸಿಯಂ ಹೈಡ್ರಾಕ್ಸೈಡ್

c)

ಕ್ಯಾಲ್ಸಿಯಂ ಹೈಡ್ರಾಕ್ಸಿ ಅಪಟೈಟ್

d)

ಕ್ಯಾಲ್ಸಿಯಂ ಕ್ಲೋರೈಡ್

7.

ನಮ್ಮ ದೇಹವು ಕಾರ್ಯ ನಿರ್ವಹಿಸಲು ಅಗತ್ಯವಾಗಿರುವ pH ವ್ಯಾಪ್ತಿ...

a)

7.0--7.8

b)

7.8--8.5

c)

6.0--7.0

d)

5.6 ಕ್ಕಿಂತ ಕಡಿಮೆ

8.

ಹೆಚ್ಚಿನ ಪ್ರಮಾಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಅನಿಲವನ್ನು ಸುಣ್ಣದ ತಿಳಿನೀರಿನ ಮೂಲಕ ಹಾಯಿಸಿದಾಗ ಅದರ ಹಾಲಿನಂತಹ ಬಣ್ಣ ನಿಧಾನವಾಗಿ ಕಣ್ಮರೆಯಾಗುತ್ತದೆ. ಇದಕ್ಕೆ ಕಾರಣ..... ಉಂಟಾಗುವುದರಿಂದ.

a)

CaCO3

b)

Ca(HCO3)

c)

CaO

d)

CaCl2

9.

NaOH+HCl-----> NaCl + H2O ಇದರಲ್ಲಿ ನಡೆದ ರಾಸಾಯಿನಿಕ ಕ್ರಿಯೆ....

a)

ಆಮ್ಲೀಯ ಕ್ರಿಯೆ

b)

ಪ್ರಕ್ಷೇಪಣ ಕ್ರಿಯೆ

c)

ಉತ್ಕರ್ಷಣ ಕ್ರಿಯೆ

d)

ತಟಸ್ಥೀಕರಣ ಕ್ರಿಯೆ

10.

ಸಾರೀಕೃತ ನೈಟ್ರಿಕ್ ಆಮ್ಲ ಅಥವಾ ಸಲ್ಫ್ಯೂರಿಕ್ ಆಮ್ಲವನ್ನು ನೀರಿಗೆ ಸೇರಿಸುವಾಗ ನಿರಂತರ ಕಲಕುವಿಕೆಯೊಂದಿಗೆ ಆಮ್ಲವನ್ನು ನಿಧಾನವಾಗಿ ಸೇರಿಸಬೇಕು. ಏಕೆಂದರೆ...

a)

ಆಮ್ಲವನ್ನು ತಕ್ಷಣ ನೀರಿಗೆ ಹಾಕಿದರೆ ಅದು ವರ್ತಿಸುವುದಿಲ್ಲ

b)

ಈ ಪ್ರಕ್ರಿಯೆಯು ಅಂತರುಷ್ಣಕ ಆಗಿರುವುದರಿಂದ

c)

ಈ ಪ್ರಕ್ರಿಯೆಯು ಬಹಿರುಷ್ಣಕ ಆಗಿರುವುದರಿಂದ

d)

ಆಮ್ಲವನ್ನು ದಿಢೀರನೆ ನೀರಿಗೆ ಹಾಕಿದರೆ ನೀರು ಆವಿಯಾಗುತ್ತದೆ

11.

ತುರಿಕೆ ಗಿಡದ ಎಲೆಗಳ ಕೂದಲು ಚುಚ್ಚುವಿಕೆಯಿಂದ ಚರ್ಮದಲ್ಲಿ ತುರಿಕೆ ಉಂಟಾಗಲು ಕಾರಣವಾದ ಆಮ್ಲ ಮತ್ತು ಅದಕ್ಕೆ ಉಪಶಮನ ನೀಡಲು ಬಳಸಬಹುದಾದ ಪ್ರತ್ಯಾಮ್ಲ...

a)

ಹೈಡ್ರೋಕ್ಲೋರಿಕ್ ಆಮ್ಲ & ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್

b)

ಮೆಥನೋಯಿಕ್ ಆಮ್ಲ & ಮೆಗ್ನೀಸಿಯಂ ಹೈಡ್ರಾಕ್ಸೈಡ್

c)

ಅಸಿಟಿಕ್ ಆಮ್ಲ & ಸೋಡಿಯಂ ಹೈಡ್ರಾಕ್ಸೈಡ್

d)

ಮೆಥನೋಯಿಕ್ ಆಮ್ಲ & ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್

12.

pH ಅಳತೆ ಪಟ್ಟಿಯಲ್ಲಿ pH ಮೌಲ್ಯ ಕಡಿಮೆಯಾದಷ್ಟು...

a)

ಆಮ್ಲೀಯ ಗುಣ ಹೆಚ್ಚಾಗುತ್ತದೆ

b)

ಪ್ರತ್ಯಾಮ್ಲೀಯ ಗುಣ ಹೆಚ್ಚಾಗುತ್ತದೆ

c)

ತಟಸ್ಥವಾಗಿರುತ್ತದೆ

d)

ಯಾವುದೇ ಅಲ್ಲ

13.

ರೈತನು ನಡೆಸಿದ ಮಣ್ಣಿನ ಪರೀಕ್ಷೆಯಲ್ಲಿ pH ಕಾಗದದ ಬಣ್ಣವು ಹಳದಿ ಆಗಿದೆ. ಹಾಗಾದರೆ ಮಣ್ಣಿನ ಗುಣಮಟ್ಟ ನಿರ್ವಹಿಸಲು ಆತನು ಸೇರಿಸಬೇಕಾದ ವಸ್ತು...

a)

ಸೋಡಿಯಂ ಹೈಡ್ರಾಕ್ಸೈಡ್

b)

ಅರಳಿದ ಸುಣ್ಣ

c)

ಪೊಟಾಸಿಯಂ ನೈಟ್ರೇಟ್

d)

ಸೋಡಿಯಂ ಕ್ಲೋರೈಡ್

14.

ಕ್ಷಾರಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಯು ಸರಿಯಾಗಿದೆ...

a)

ಪ್ರತ್ಯಾಮ್ಲಗಳು ಎಲ್ಲವೂ ಕ್ಷಾರಗಳು

b)

ಕ್ಷಾರಗಳು ನೀರಿನಲ್ಲಿ ಕರಗುವ ಆಮ್ಲಗಳಾಗಿವೆ

c)

ಕ್ಷಾರಗಳು ನೀರಿನಲ್ಲಿ ಕರಗುವ ಪ್ರತ್ಯಾಮ್ಲಗಳು ಆಗಿವೆ

d)

ಮೇಲಿನ ಎಲ್ಲವೂ ಸರಿ

15.

ಸಾರರಿಕ್ತ ಸಲ್ಫ್ಯೂರಿಕ್ ಆಮ್ಲದೊಂದಿಗೆ ಸತು ಲೋಹದ ಚೂರುಗಳ ವರ್ತನೆಯಲ್ಲಿ ಬಿಡುಗಡೆಯಾಗುವ ಅನಿಲ.......

a)

ಆಕ್ಸಿಜನ್

b)

ಕಾರ್ಬನ್ ಡೈ ಆಕ್ಸೈಡ್

c)

ಹೈಡ್ರೋಜನ್

d)

ಸತುವಿನ ಸಲ್ಫೇಟ್