wayground logo

Free Printable Worksheets

NEW

Font size

S
M
L
XL
Worksheets

SSLC 2020- 21 MCQ EXAM

Total questions: 40

Worksheet time: 20mins

Name
Class
Date
1.

ವಿದ್ಯುತ್ ಮಂಡಲದಲ್ಲಿ ರೋಧವನ್ನು ಬದಲಾಯಿಸುವ ಸಾಧನ

a)

ಅಮ್ಮೀಟರ್

b)

ರಿಯೋಸ್ಟಾಟ್

c)

ಗ್ಯಾಲ್ವನೋಮೀಟರ್

d)

ವೋಲ್ಟ್ ಮೀಟರ್

2.

ಫ್ಲೆಮಿಂಗ್‌ ನ ಎಡಗೈ ನಿಯಮದಲ್ಲಿ ಮಧ್ಯ ದ ಬೆರಳು ಸೂಚಿಸುವುದು

a)

ಕಾಂತಕ್ಷೇತ್ರದ ದಿಕ್ಕು

b)

ವಾಹಕದಲ್ಲಿ ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕು

c)

ವಿದ್ಯುತ್ ಪ್ರವಾಹದ ದಿಕ್ಕು

d)

ವಾಹಕದ ಚಲನೆಯ ದಿಕ್ಕು

3.

ಒಬ್ಬ ವೈದ್ಯರು - 0.5 D ಸಾಮರ್ಥ್ಯ ವನ್ನು ಹೊಂದಿರುವ ಸರಿಪಡಿಸುವ ಮಸೂರವನ್ನು ಒಬ್ಬ ವ್ಯಕ್ತಿಗೆ ಸೂಚಿಸಿದ್ದಾರೆ. ಈ ಮಸೂರದ ಸಂಗಮ ದೂರ & ವಿಧ

a)

-2 m ಮತ್ತು ನಿಮ್ನ ಮಸೂರ

b)

+2 m ಮತ್ತು ಪೀನ ಮಸೂರ

c)

+ 2 m ಮತ್ತು ನಿಮ್ನ ಮಸೂರ

d)

-2 m ಮತ್ತು ಪೀನ ಮಸೂರ

4.

ವಸ್ತುವನ್ನು ಪೀನ ಮಸೂರದ ಪ್ರಧಾನ ಸಂಗಮ F 1 ಮತ್ತು ದೃಕ್ ಕೇಂದ್ರ' O 'ಗಳ ಮಧ್ಯ ಇರಿಸಿದಾಗ ಉಂಟಾಗುವ ಪ್ರತಿಬಿಂಬದ ಸ್ವಭಾವ ಮತ್ತು ಗಾತ್ರ

a)

ಮಿಥ್ಯ ,ನೇರ, ಮತ್ತು ದೊಡ್ಡದು.

b)

ಸತ್ಯ ತಲೆಕೆಳಗಾದ ಮತ್ತು ಚಿಕ್ಕದು

c)

ಮಿಥ್ಯ ತಲೆಕೆಳಗಾದ ಮತ್ತು ಚಿಕ್ಕದು

d)

ಸತ್ಯ ತಲೆಕೆಳಗಾದ ಮತ್ತು ದೊಡ್ಡದು

5.

ಒಂದು ವಿದ್ಯುತ್ ಹೀಟರ್ ವಿದ್ಯುತ್ ಮೂಲದಿಂದ 4Aವಿದ್ಯುತ್ ಸೆಳೆಯುವಾಗ ಅದರ ತುದಿಗಳ ನಡುವಿನ ವಿಭವಾಂತರ 60 Vಆದರೆ ಸದರಿ ವಿದ್ಯುತ್ ಹೀಟರ್ ನ ಸುರುಳಿಯ ರೋಧ

a)

15 ಓಮ್

b)

240 ಓಮ್

c)

24 ಓಮ್

d)

64 ಓಮ್

6.

ಗೋಳಿಯ ಮಸೂರದ ವೃತ್ತಾಕಾರದ ಸೀಮಾರೇಖೆಯ ವ್ಯಾಸ

a)

ದೃಕ್ ಕೇಂದ್ರ

b)

ವಕ್ರತಾ ಕೇಂದ್ರ

c)

ಅಪರ್ಚರ್

d)

ಪ್ರಧಾನ ಅಕ್ಷ

7.

ಸೌರ ಕುಕ್ಕರ್ ನ ಒಳಮೇಲ್ಮೈಗೆ ಕಪ್ಪು ಬಣ್ಣವನ್ನು ಬಳೆದಿರುತ್ತಾರೆ ಏಕೆಂದರೆ ಅದು

a)

ಬೆಳಕನ್ನು ಪ್ರತಿಫಲಿಸಲು

b)

ಹೆಚ್ಚು ಉಷ್ಣವನ್ನು ಹೀರಿಕೊಳ್ಳಲು

c)

ಹೆಚ್ಚು ಉಷ್ಣವನ್ನು ಹೀರಿಕೊಳ್ಳಲು

d)

ತಕ್ಕು ಹಿಡಿಯುವುದನ್ನು ತಡೆಗಟ್ಟಲು

8.

ವಿದ್ಯುತ್ ಜನಕದ ಕಾರ್ಯ

a)

ವಿದ್ಯುತ್ಪ್ರವಾಹದ ದಿಕ್ಕನ್ನು ಹಿಮ್ಮುಖ ಗೊಳಿಸುತ್ತದೆ

b)

ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುತ್ತದೆ

c)

ಒಂದು ಮಂಡಲದಲ್ಲಿ ವಿದ್ಯುತ್ ಪ್ರವಾಹದ ಉಪಸ್ಥಿತಿಯನ್ನು ಕಂಡುಹಿಡಿಯುತ್ತದೆ

d)

ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುತ್ತದೆ

9.

ವಿದ್ಯುತ್ ವಾಹಕದ ರೋಧವು ಅವಲಂಬಿಸದೆ ಇರುವುದು

a)

ವಾಹಕದ ಉದ್ದ

b)

ವಾಹಕದ ವಾಹಕದ ಅಡ್ಡಕೊಯ್ತ

c)

ಕಾಂತೀಯ ಗುಣ

d)

ವಸ್ತುವಿನ ಪ್ರಾಕೃತಿಕ ಗುಣ

10.

ಡಿ ಸಿ ವಿದ್ಯುಜ್ಜನಕ ಕಾರ್ಯನಿರ್ವಹಿಸುವ ತತ್ವ

a)

ವಿದ್ಯುತ್ ಕಾಂತೀಯ ಪ್ರೇರಣೆ

b)

ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ

c)

ವಿದ್ಯುತ್ಪ್ರವಾಹದ ಪುಷ್ಪ ಉತ್ಪನ್ನ ಪರಿಣಾಮ

d)

ವಿದ್ಯುತ್ಪ್ರವಾಹದ ರಾಸಾಯನಿಕ ಪರಿಣಾಮ

11.

ವ್ಯಾಟ್ ಎಂಬುದು ಇದರ SI ಏಕಮಾನವಾಗಿದೆ

a)

ವಿದ್ಯುತ್ ಪ್ರವಾಹ

b)

ವಿದ್ಯುತ್ ಆವೇಶ

c)

ವಿದ್ಯುತ್ ವಿಭವಾಂತರ

d)

ವಿದ್ಯುತ್ ಸಾಮರ್ಥ್ಯ

12.

a)

A k

b)

B L

c)

C N

d)

D M

13.

ಜೈವಿಕ ಅನಿಲದ ಗುಣ

a)

ಇದರ ಶಾಖ ದಕ್ಷತೆ ಹೆಚ್ಚು

b)

ಇದು ಬೂದಿಯನ್ನು ಉಳಿಸುತ್ತದೆ.

c)

ಇದು ಹೊಗೆ ಸಹಿತ ಉರಿಯುತ್ತದೆ

d)

ಶಾಖ ದಕ್ಷತೆ ಕಡಿಮೆ

14.

ಒಂದು ಮಸೂರದ ವಸ್ತು ದೂರ ಮತ್ತು ಪ್ರತಿಬಿಂಬದ ದೂರಗಳು ಕ್ರಮವಾಗಿ -60 cm & - 20 cm. ಆದರೆ ಮಸೂರದ ವರ್ಧನೆ

a)

-0.33

b)

+3.0

c)

+0.33

d)

+ 4.0

15.

ಲೋಹದ ಕಾರ್ಬೋನೇಟ್ ಅದಿರುಗಳನ್ನು ಅವುಗಳ ಆಕ್ಸೈಡ್ ಗಳಾಗಿ ಪರಿವರ್ತಿಸುವ ಪ್ರಕ್ರಿಯೆ

a)

ಹುರಿಯುವಿಕೆ

b)

ಅಪಕರ್ಷಣೆ

c)

ವಿದ್ಯುದ್ವಿಭಜನೆ

d)

ಕಾಸು ವಿಕೆ

16.

ಪರ್ಯಾಪ್ತ ಹೈಡ್ರೋಕಾರ್ಬನ್ ಗಳ ಸರಿಯಾದ ಗುಂಪು

a)

CH4, C2H4, C3H4

b)

C2H6, C3H8 C4H10

c)

C2H2, C2H6, CH4

d)

C2H2,C3H6, C4H6

17.

'X' ಧಾತುವಿನ ಪರಮಾಣು ಸಂಖ್ಯೆ 11, ಮತ್ತು Y ಧಾತುವಿನ ಪರಮಾಣು ಸಂಖ್ಯೆ 17 ಹಾಗಾದರೆ ಈ ಧಾತುಗಳ ನಡುವೆ ಉಂಟಾಗುವ ಬಂಧದ ವಿಧ

a)

ಹೈಡ್ರೋಜನ್ ಬಂಧ

b)

ಕೋವೆಲೆಂಟ್ ಬಂಧ

c)

ಅಯಾನಿಕ್ ಬಂಧ

d)

ಲೋಹೀಯ ಬಂಧ

18.

ಒಂದು ದ್ರಾವಣದ pH ಮೌಲ್ಯ ಕಡಿಮೆ ಯಾದಂತೆ

a)

OH^- ಅಯಾನುಗಳ ಸಂಖ್ಯೆ ಹೆಚ್ಚಾಗುತ್ತದೆ

b)

H^+ ಅಯಾನುಗಳ ಸಂಖ್ಯೆ ಹೆಚ್ಚಾಗುತ್ತದೆ

c)

H^+ ಅಯಾನುಗಳ ಸಂಖ್ಯೆ ಕಡಿಮೆ ಯಾಗುತ್ತದೆ.

d)

OH^- & H^+ ಅಯಾನುಗಳ ಸಂಖ್ಯೆ ಸಮನಾಗಿರುತ್ತದೆ.

19.

a)

ಆಲ್ಡಿಹೈಡ್

b)

ಅಲ್ಕೋಹಾಲ್

c)

ಕೀಟೋನ್

d)

ಕಾರ್ಬಾಕ್ಸಲಿಕ್ ಆಮ್ಲ

20.

ಒಂದು ಧಾತುವಿನ ಪರಮಾಣು ಸಂಖ್ಯೆ 20 ಆದರೆ ಆಧುನಿಕ ಆವರ್ತಕ ಕೋಷ್ಟಕದಲ್ಲಿ ಧಾತುವಿನ ಅವರ ಸಂಖ್ಯೆ

a)

4

b)

8

c)

2

d)

3

21.

ಸೈಕ್ಲೋನ್ ಹೆಕ್ಸೇನ್ ಅಣು ರಚನೆಯಲ್ಲಿ ಕಂಡುಬರುವ ಏಕ ಬಂಧಗಳ ಸಂಖ್ಯೆ

a)

12

b)

18

c)

24

d)

6

22.

ಆಧುನಿಕ ಆವರ್ತಕ ಕೋಷ್ಟಕದಲ್ಲಿ ಒಂದು ವರ್ಗದ ಕೆಳಗೆ ಸಾಗಿದಂತೆ ಪರಮಾಣು ಗಾತ್ರ

a)

ಕಡಿಮೆ ಯಾಗುತ್ತದೆ

b)

ಬದಲಾಗುವುದಿಲ್ಲ

c)

ಹೆಚ್ಚಾಗುತ್ತದೆ

d)

ಮೊದಲು ಹೆಚ್ಚಾಗಿ ನಂತರ ಕಡಿಮೆಯಾಗುತ್ತದೆ

23.
a)

Zn > Fe > Cu

b)

Fe > Cu > Zn

c)

Zn> Cu> Fe

d)

Cu > Fe > Zn

24.

ಸಾರರಿಕ್ತ ಸಲ್ಫ್ಯೂರಿಕ್ ಆಮ್ಲದೊಂದಿಗೆ ಸತುವಿನ ಚೂರುಗಳು ವರ್ತಿಸಿದಾಗ ಬಿಡುಗಡೆಯಾಗುವ ಅನಿಲ

a)

ಸ್ವಲ್ಪರ್ ಡೈಯಾಕ್ಸೈಡ್

b)

ಕಾರ್ಬನ್ ಡೈಯಾಕ್ಸೈಡ್

c)

ನೈಟ್ರೋಜನ್

d)

ಹೈಡ್ರೋಜನ್

25.
a)

ತಟಸ್ಥೀಕರಣ ಕ್ರಿಯೆ

b)

ಆದೇಶನ ಕ್ರಿಯೆ

c)

ಸಂಕಲನ ಕ್ರಿಯೆ

d)

ದಹನ ಕ್ರಿಯೆ

26.

ಬೆಂಜಿನ್ ಅಣು ಸೂತ್ರ

a)

C5H12

b)

C6H12

c)

C6H6

d)

C6H10

27.

ಸಸ್ಯಗಳ ಬೇರಿನ ಮೂಲಕ ಎಲೆಗಳಿಗೆ ನೀರು ಮತ್ತು ಅದರಲ್ಲಿ ಕರಗಿರುವ ಲವಣಗಳ ಹೀರುವಿಕೆಗೆ ಮತ್ತು ಮೇಲ್ಮುಖ ಚಲನೆಗೆ ಸಹಾಯ ಮಾಡುವ ಪ್ರಕ್ರಿಯೆ

a)

ಉಸಿರಾಟ

b)

ಭಾಷ್ಪವಿಸರ್ಜನೆ

c)

ದ್ಯುತಿಸಂಶ್ಲೇಷಣೆ

d)

ವಸ್ತು ಸ್ಥಾನಾಂತರಣ

28.

ಮಾನವನ ದೇಹದಲ್ಲಿ ಆಕ್ಸಿಜನ್ ಸಹಿತ ರಕ್ತವು ಶ್ವಾಸಕೋಶ ಗಳಿಂದ ಹೃದಯಕ್ಕೆ ಬರುವ ಸರಿಯಾದ ಮಾರ್ಗ

a)

ಪುಪ್ಪಸಕ ಅಪಧಮನಿಗಳು --> --> ಬಲಹೃತ್ಕುಕ್ಷಿ->ಬಲಹೃತ್ಕರ್ಣ.

b)

ಪುಪ್ಪಸಕ ಅಪಧಮನಿಗಳು --> ಬಲಹೃತ್ಕರ್ಣ --> ಬಲಹೃತ್ಕುಕ್ಷಿ

c)

ಪುಪ್ಪಸಕ ಅಭಿಧಮನಿಗಳು -->> ಎಡಹೃತ್ಕುಕ್ಷಿ--->ಎಡಹೃತ್ಕರ್ಣ

d)

ಪುಪ್ಪಸಕ ಅಭಿಧಮನಿಗಳು---->> ಎಡಹೃತ್ಕ ರ್ಣ---->> ಎಡಹೃತ್ಕುಕ್ಷಿ

29.

ಮಾನವನ ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ಕೊಬ್ಬಿನ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವ ಹಾರ್ಮೋನ್

a)

ಟೆಸ್ಟೋಸ್ಟಿರಾನ್

b)

ಅಡ್ರಿನಲಿನ್

c)

ಥೈರಾಕ್ಸಿನ್

d)

ಇನ್ಸುಲಿನ್

30.

ಈ ಕೆಳಗಿನವುಗಳಲ್ಲಿ ಹೊಂದಿಕೆಯಾಗದ ಜೋಡಿ

a)

ಅಡ್ರಿನಲಿನ್ => ಪಿಟ್ಯೂಟರಿ

b)

ಟೆಸ್ಟೋಸ್ಟಿರಾನ್=> ವೃಷಣಗಳು

c)

ಇನ್ಸುಲಿನ್ => ಮೇದೋಜೀರಕ ಗ್ರಂಥಿ

d)

ಥೈರಾಕ್ಸಿನ್= > ಥೈರಾಯ್ಡ್ ಗ್ರಂಥಿ

31.

ಐಚ್ಛಿಕ ಕ್ರಿಯೆಗಳ ನಿಖರತೆ,ಮತ್ತು ದೇಹದ ಭಂಗಿ ಹಾಗೂ ಸಮತೋಲನ ಕಾಪಾಡಲು ಕಾರಣವಾದ ಮಾನವನ ಮೆದುಳಿನ ಭಾಗ

a)

ಪಾನ್ಸ್

b)

ಮಹಾಮಸ್ತಿಷ್ಕ

c)

ಹೈಪೋಥಲಾಮಸ್

d)

ಅನುಮಸ್ತಿಷ್ಕ

32.

ಲೈಂಗಿಕ ಸಂಪರ್ಕ ದ ಮೂಲಕ ಹರಡುವ ರೋಗಗಳಾದ ಗೋನೋರಿಯಾ, ಹಾಗೂ ಸಿಫಿಲಿಸ್ ಕಾರಣವಾದ ರೋಗಕಾರಕ

a)

ವೈರಸ್

b)

ಬ್ಯಾಕ್ಟೀರಿಯಾ

c)

ಪ್ರೋಟೋಜುವಾ

d)

ಶಿಲೀಂಧ್ರ

33.

ಹೂವಿನಲ್ಲಿ ಲೈಂಗಿಕ ಸಂತಾನೋತ್ಪತ್ತಿ ಜರುಗುವ ಸರಿಯಾದ ಹಂತಗಳು

a)

ಪರಾಗಸ್ಪರ್ಶ, ನಿಶೇಚನ, ಭ್ರೂಣ, ಬೀಜ

b)

ಬೀಜ, ಭ್ರೂಣ, ನಿಶೇಚನ, ಪರಾಗಸ್ಪರ್ಶ

c)

ಭ್ರೂಣ, ಬೀಜ, ಪರಾಗಸ್ಪರ್ಶ, ನಿಶೇಚನ

d)

ಪರಾಗಸ್ಪರ್ಶ, ನಿಶೇಚನ, ಬೀಜ, ಭ್ರೂಣ

34.

ಬೀಜ ಮೊಳಕೆಯೊಡೆಯುವಾಗ ಬೇರಾಗಿ ಬೆಳೆದು ಅಭಿವೃದ್ಧಿಯಾಗುವ ಸಸ್ಯ ಬೀಜದ ಭಾಗ

a)

ಬೀಜದಳ

b)

ಎಂಡೋಸ್ಪಮ್೯

c)

ಪ್ರ ಥಮ ಮೂಲ

d)

ಬೀಜದ ಪೊರೆ

35.

a)

ದುಂಡನೆಯ ಹಸಿರು

b)

ಸುಕ್ಕಾದ ಹಳದಿ

c)

ಸುಕ್ಕಾದ ಹಸಿರು

d)

ದುಂಡನೆಯ ಹಳದಿ

36.

ಜೀವಿಯು ತನ್ನ ಜೀವಿತ ಅವಧಿಯಲ್ಲಿ ಪಡೆದ ಅನುಭವಗಳನ್ನು ತನ್ನ ಸಂತತಿಗೆ ವರ್ಗಾಯಿಸುವುದಿಲ್ಲ ಏಕೆಂದರೆ

a)

ಅನುವಂಶೀಯ ಗುಣಗಳು

b)

ಗಳಿಸಿದ ಗುಣಗಳು

c)

ಪ್ರಬಲ ಗುಣಗಳು

d)

ದುರ್ಬಲ ಗುಣಗಳು

37.

ಕಾರ್ಯಾನುರೂಪಿ ಅಂಗಗಳು

a)

ಒಂದೇ ರೀತಿಯ ರಚನೆ ಮತ್ತು ಒಂದೇ ರೀತಿಯ ಕಾರ್ಯವನ್ನು ಹೊಂದಿವೆ

b)

ಒಂದೇ ರೀತಿಯ ರಚನೆ ಮತ್ತು ವಿಭಿನ್ನ ಕಾರ್ಯಗಳನ್ನು ಹೊಂದಿವೆ

c)

ವಿಭಿನ್ನ ರೀತಿಯ ರಚನೆ ಮತ್ತು ಒಂದೇ ರೀತಿಯ ಕಾರ್ಯಗಳನ್ನು ಹೊಂದಿವೆ

d)

ವಿಭಿನ್ನ ರೀತಿಯ ರಚನೆ ಮತ್ತು ವಿಭಿನ್ನ ರೀತಿಯ ಕಾರ್ಯಗಳನ್ನು ಹೊಂದಿವೆ

38.

ವಾತಾವರಣದ ಉನ್ನತ ಸ್ತರದಲ್ಲಿ ಆಮ್ಲಜನಕು ಓಝೋನ್ ಆಗಿ ರೂಪಗೊಳ್ಳು ವುದು ಇದರ ಪ್ರಭಾವದಿಂದಾಗಿ

a)

ಕ್ಷ ಕಿರಣಗಳ

b)

ನೇರಳಾತೀತ ವಿಕಿರಣಗಳ

c)

ಅವಕೆಂಪು ಕಿರಣಗಳ

d)

ರೇಡಿಯೋ ತರಂಗಗಳ

39.

ಒಂದು ವಸ್ತುವನ್ನು ಅದರ ಮೂಲ ಉದ್ದೇಶಕ್ಕೆ ಬಳಸಲು ಸಾಧ್ಯವಾಗದಿದ್ದರೆ ಅದನ್ನು ಬೇರೆ ಉಪಯುಕ್ತ ಉದ್ದೇಶಗಳಿಗಾಗಿ ಬಳಸುವುದನ್ನು

a)

ಮರುಚಕ್ರೀಕರಣ

b)

ಮರುಬಳಕೆ

c)

ಮಿತಬಳಕೆ

d)

ಮರು ಉದ್ದೇಶ

40.

ಜಲಾನಯನ ಪ್ರದೇಶದ ನಿರ್ವಹಣೆಯು

a)

ಜಲಾನಯನ ಪ್ರದೇಶದ ಜನರ ಉತ್ಪಾದನೆ ಮತ್ತು ಆದಾಯವನ್ನು ಹೆಚ್ಚಿಸುತ್ತದೆ

b)

ಬರಗಾಲ ಮತ್ತು ಪ್ರವಾಹ ಗಳನ್ನು ಹೆಚ್ಚಿಸುತ್ತದೆ

c)

ಜಲಾಶಯದ ಕೆಳಗಿನ ಪ್ರದೇಶದ ಜೀವವೈವಿಧ್ಯತೆಯನ್ನು ಕಡಿಮೆಗೊಳಿಸುತ್ತದೆ

d)

ಅರಣ್ಯನಾಶವನ್ನು ಹೆಚ್ಚಿಸುತ್ತದೆ