wayground logo

Free Printable Worksheets

NEW

Font size

S
M
L
XL
Worksheets

ಹಕ್ಕಿ ಹಾರುತಿದೆ ನೋಡಿದಿರಾ

Total questions: 20

Worksheet time: 20mins

Name
Class
Date
1.

ದ ರಾ ಬೇಂದ್ರೆಯವರ ಅಂಕಿತನಾಮ

a)

ಅಂಬಿಕಾತನಯ

b)

ಅಂಬಿಕಾದತ್ತ

c)

ಅಂಬಿಕಾತನಯದತ್ತ

d)

ದತ್ತಾತ್ರೇಯ

2.

"ಹಕ್ಕಿಹಾರುತಿದೆ ನೋಡಿದಿರಾ" ಪದ್ಯದ ಆಕರ ಕೃತಿ ಕೃತಿ

a)

ನಾಕುತಂತಿ

b)

ನಾದಲೀಲೆ

c)

ಗರಿ

d)

ಉಯ್ಯಾಲೆ

3.

"ಕಣ್ಣರೆಪ್ಪೆ" ಅರ್ಥ ಕೊಡುವ ಪದ

a)

ಆಲಿ

b)

ಎವೆ

c)

ಕೆನ್ನ

d)

ಬೆಳ್ಳಿ

4.

ಸುತ್ತಮುತ್ತ ಈ ಪದವು ಕೆಳಗಿನ ವ್ಯಾಕರಣಾಂಶಕ್ಕೆ ಸಂಬಂಧಿಸಿದೆ.

a)

ನುಡಿಗಟ್ಟು

b)

ಅನುಕರಣಾವ್ಯಯ

c)

ದ್ವಿರುಕ್ತಿ

d)

ಜೋಡಿಪದ

5.

'ಬಣ್ಣ' ಪದದ ತತ್ಸಮ ರೂಪ

a)

ವರ್ಣ

b)

ಕರ್ಣ

c)

ಸ್ವರ್ಣ

d)

ಪರ್ಣ

6.

ಕಾಲದ ಹಕ್ಕಿಗೆ ಇರುವ ಕೆಂಪು ಮತ್ತು ಹೊನ್ನಿನ ಬಣ್ಣದ ರೆಕ್ಕೆಗಳು ಇದನ್ನು ಸೂಚಿಸುತ್ತಿವೆ.

a)

ಮಧ್ಯಾಹ್ನ ಸಂಜೆ

b)

ರಾತ್ರಿ ಇರುಳು

c)

ಸೂರ್ಯಾಸ್ತ ಸೂರ್ಯೋದಯ

d)

ಕನಸು ನನಸು

7.

ಹಕ್ಕಿಯು ಯಾವುದರ ಸಂಕೇತವಾಗಿದೆ.

?

a)

ಕಾಲ

b)

ಪಕ್ಷಿ

c)

ಮನಸ್ಸು

d)

ಹಗಲು

8.

'ಗಡ' ಪದದ ಸಮನಾರ್ಥಕ ಪದ

a)

ಅರಮನೆ

b)

ಸಣ್ಣ ಕೋಟೆ

c)

ಸಣ್ಣ ಮನೆ

d)

ಕಂದಕ

9.

'ಮನ್ವಂತರ' ಪದವು ಈ ಸಂಧಿಗೆ ಉದಾಹರಣೆಯಾಗಿದೆ.

a)

ಆದೇಶ ಸಂಧಿ

b)

ಜಶ್ತ್ವ ಸಂಧಿ

c)

ಗುಣಸಂಧಿ

d)

ಯಣ್ ಸಂಧಿ

10.

ಕೆಳಗಿನವುಗಳಲ್ಲಿ ಧಾತು ಪದಕ್ಕೆ ಉದಾಹರಣೆ.....

a)

ಹಚ್ಚೋಣ

b)

ಹಚ್ಚು

c)

ಹಚ್ಚುವ

d)

ಹಚ್ಚುತ್ತೇವೆ

11.

'ತಿನ್ನು' ಪದದ ನಿಷೇಧಾರ್ಥಕ ರೂಪ

a)

ತಿನ್ನನು

b)

ತಿಂದ

c)

ತಿನ್ನಲಿ

d)

ತಿಂದಾನು

12.

ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದ

a)

ಪುಚ್ಚ

b)

ಗರಿ

c)

ಗಾವುದ

d)

ರೆಕ್ಕೆ

13.

ಇದು ದ್ವಂದ್ವ ಸಮಾಸಕ್ಕೆ ಉದಾಹರಣೆಯಾಗಿದೆ .

a)

ಕಾರ್ಮುಗಿಲು

b)

ದಿಗ್ಮಂಡಲ

c)

ಬ್ರಹ್ಮಾಂಡ

d)

ಸೂರ್ಯಚಂದ್ರರು

14.

ದ ರಾ ಬೇಂದ್ರೆ ಅವರಿಗೆ ಭಾರತ ಸರ್ಕಾರ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

a)

ಪದ್ಮಶ್ರೀ

b)

ಪದ್ಮವಿಭೀಷಣ

c)

ಪದ್ಮಭೂಷಣ

d)

ಪದ್ಮವಿಭೂಷಣ

15.

'ದೇವರು ನಿಮಗೆ ಒಳ್ಳೆಯದನ್ನು ಮಾಡಲಿ' - ಈ ಪದವನ್ನು ಸಂಭವನಾರ್ಥಕ ಕ್ರಿಯಾಪದಕ್ಕೆ ಪರಿವರ್ತಿಸಿದಾಗ ಆಗುವ ರೂಪ

a)

ದೇವರು ನಿಮಗೆ ಒಳ್ಳೆಯದನ್ನು ಮಾಡಲಿ

b)

ದೇವರು ನಿಮಗೆ ಒಳ್ಳೆಯದನ್ನು ಮಾಡಿಯಾನು.

c)

ದೇವರು ನಿಮಗೆ ಒಳ್ಳೆಯದನ್ನು ಮಾಡನು.

d)

ದೇವರು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ

16.

'ಯುಗ' ಪದದ ತದ್ಭವ ರೂಪ.

a)

ಜುಗ

b)

ಮುಗ

c)

ನಗ

d)

ಜಗ

17.

ಕೆಳಗಿನ ಪದಗಳಲ್ಲಿ ಆಗಮ ಸಂಧಿಗೆ ಉದಾಹರಣೆ.

a)

ಇರುಳಳಿದು

b)

ಚೇತನಗೊಳಿಸಿ

c)

ಅಂಗಳಕೇರಿ

d)

ಗರಿಯುಂಟು

18.

ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ?

a)

ವಿಧವಿಧಬಣ್ಣ

b)

ಕರಿನೆರೆ ಬಣ್ಣ

c)

ಬಿಳಿ-ಹೊಳೆ ಬಣ್ಣ

d)

ಕೆನ್ನನ ಹೊನ್ನನ ಬಣ್ಣ

19.

ರೆಕ್ಕೆಗಳು + ಎರಡೂ - ಈ ಪದವನ್ನು ಬಿಡಿಸಿ ಬರೆದಾಗ ಹೀಗೆ ಬರೆಯುತ್ತೇವೆ.

a)

ರೆಕ್ಕೆಗಳುರಡೂ

b)

ರೆಕ್ಕೆಗಳೆರಡೂ

c)

ರೆಕ್ಕೆಗಳರಡೂ

d)

ರೆಕ್ಕೆಗಳೆರಡು

20.

ಕಾಲದ ಹಕ್ಕಿಯು ಯಾವುದನ್ನು ಒಡೆಯಲು ಹೊಂಚು ಹಾಕಿರಬಹುದೆಂದು ಕವಿ ಹೇಳಿದ್ದಾರೆ.

a)

ನವಗ್ರಹಗಳನ್ನು

b)

ಭೂಮಂಡಲವನ್ನು

c)

ಬ್ರಹ್ಮಾಂಡವನ್ನು

d)

ನಕ್ಷತ್ರ ರಾಶಿಯನ್ನು