wayground logo

Free Printable Worksheets

Font size

S
M
L
XL
Worksheets

ನೈದಾನಿಕ ಪರೀಕ್ಷೆ 9ನೇ ತರಗತಿ

Total questions: 20

Worksheet time: 10mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಸ್ವರಗಳ ಸಂಖ್ಯೆ

a)

10

b)

7

c)

6

d)

13

2.

ಮಗ್ಗವೆಲ್ಲ ಜೇಡನ ಬಲೆಗಳಿಂದ ಆಚ್ಛಾದಿತವಾಗಿದೆ - ಇಲ್ಲಿ ಆಚ್ಛಾದಿತ ಎಂದರೆ

a)

ಮುಚ್ಚಲ್ಪಟ್ಟ

b)

ಸುಂದರವಾದ

c)

ಬಯಸಿದ

d)

ಹಾಳಾದ

3.

ಚಾಮುಂಡರಾಯನನ್ನು ಜನರು 'ರಾಯ' 'ಅಣ್ಣ' ಎಂದು ಸಂಬೋಧಿಸುತ್ತಿದ್ದರು ಈ ವಾಕ್ಯದಲ್ಲಿರುವ ಲೇಖನ ಚಿಹ್ನೆ

a)

ಆವರಣ ಚಿಹ್ನೆ

b)

ಪ್ರಶ್ನಾರ್ಥಕ ಚಿಹ್ನೆ

c)

ವಾಕ್ಯವೇಷ್ಟನ ಚಿಹ್ನೆ

d)

ಉದ್ಧರಣ ಚಿಹ್ನೆ

4.

ವಿದೇಶಗಳಲ್ಲಿ ಮನೆಯ ನಲ್ಲಿಯಲ್ಲಿ ಬರುವ ನೀರನ್ನು ಯಾರು ಕುಡಿಯುವುದಿಲ್ಲ. ಇಲ್ಲಿರುವ ನೀರನ್ನು ಪದವು ಈ ವಿಭಕ್ತಿ ಯಾಗಿದೆ

a)

ಪ್ರಥಮಾ

b)

ದ್ವಿತೀಯಾ

c)

ಸಪ್ತಮೀ

d)

ತೃತೀಯಾ

5.

'ಗ್ರೀಟಿಂಗ್ ಕಾರ್ಡ್' ಮಾರುವ ಹೊಸ ಹೊನ್ನಾರ ಗಳೆಂದು ಸರ್ವರಿಗೂ ವೇದ್ಯವಾಗಿದೆ : ಈ ವಾಕ್ಯದಲ್ಲಿರುವ ಗ್ರೀಟಿಂಗ್ ಕಾರ್ಡ್ ಎಂಬ ಪದವು ಈ ಭಾಷೆಯಿಂದ ಬಂದಿದೆ

a)

ಉರ್ದು

b)

ಇಂಗ್ಲಿಷ್

c)

ಸಂಸ್ಕೃತ

d)

ಪೋರ್ಚುಗೀಸ್

6.

'ತನ್ನ ಕಾಲಮೇಲೆ ತಾನು ನಿಲ್ಲು' ಎಂಬ ನುಡಿಗಟ್ಟಿನ ಸರಿಯಾದ ಅರ್ಥವಿದು

a)

ಸ್ವಾವಲಂಬಿಯಾಗು

b)

ಪರಾವಲಂಬಿಯಾಗು

c)

ತನ್ನ ಕಾಲ ಮೇಲೆ ನಿಲ್ಲುವಂತಾಗಲು

d)

ತನ್ನವರ ಕಾಲಮೇಲೆ ನಿಲ್ಲುವಂತಾಗು

7.

ಮೂಡಣ : ದಿಗ್ವಾಚಕ : : ಇಪ್ಪತ್ತು : __________

a)

ಸಂಖ್ಯಾವಾಚಕ

b)

ಸಂಖ್ಯೆಯ ವಾಚಕ

c)

ಗುಣವಾಚಕ

d)

ಪರಿಮಾಣವಾಚಕ

8.

ಮುಖ : ಮೊಗ : : ಚತುರ್ಥಿ : ___________

a)

ನಾಲ್ಕು

b)

ಚೌತಿ

c)

ಚತುರತಿ

d)

ಗಣೇಶನ ಹಬ್ಬ

9.

ಸದಾಚಾರ : ಜಸ್ತ್ವ ಸಂಧಿ : : ಕೃಷ್ಣಾಷ್ಟಮಿ : _______

a)

ಲೋಪ ಸಂಧಿ

b)

ಗುಣಸಂಧಿ

c)

ಸವರ್ಣದೀರ್ಘ ಸಂಧಿ

d)

ಆದೇಶ ಸಂಧಿ

10.

ಅಂತರಂಗ : ಬಹಿರಂಗ : : ಕೃತಕತೆ : __________

a)

ಅಕೃತಕತೆ

b)

ಸುಕೃತೆ

c)

ನಿಕ್ರತೆ

d)

ನೈಜತೆ

11.

ತಾಯಿಗೆ ಪತ್ರ ಬರೆದಾಗ : ಮಾತೃಶ್ರೀ ಅವರಿಗೆ : : ತಂದೆಗೆ ಪತ್ರ ಬರೆದಾಗ : ________

a)

ಪಿತೃ ಶ್ರೀ

b)

ತೀರ್ಥರೂಪ

c)

ತೀರ್ಥರೂಪ ಸಮಾನರಾದ

d)

ಪಿತಾಶ್ರೀ ಅವರಿಗೆ

12.

ಮನೋರಮೆಯ ಮುಖ ಕಮಲದಂತೆ ಅರಳಿತು - ಈ ವಾಕ್ಯದಲ್ಲಿರುವ ಅಲಂಕಾರ

a)

ಉಪಮಾಲಂಕಾರ

b)

ರೂಪಕಾಲಂಕಾರ

c)

ಉಪಮಾಲೋಲ ಅಲಂಕಾರ

d)

ದೃಷ್ಟಾಂತಾಲಂಕಾರ

13.

ಕರೀಮನು ಆಟದಲ್ಲೂ ಪಾಠದಲ್ಲೂ ಬಲು ಚುರುಕು - ಈ ವಾಕ್ಯದಲ್ಲಿರುವ ಕರ್ತೃಪದ

a)

ಆಟದಲ್ಲೂ

b)

ಪಾಠದಲ್ಲೂ

c)

ಕರೀಮನು

d)

ಚುರುಕು

14.

ಈ ಕೆಳಗಿನವುಗಳಲ್ಲಿ ದ್ವಿರುಕ್ತಿ ಪದವನ್ನು ಗುರುತಿಸಿ.

a)

ಮೆಲ್ಲಮೆಲ್ಲನೆ

b)

ಸರಸರನೆ

c)

ಅಡ್ಡಬಾಯಿ ಹಾಕು

d)

ರಪರಪನೆ

15.

ತಲಕಾಡಿನ ವೈಭವ ಗದ್ಯವು ಈ ಸಾಹಿತ್ಯ ಪ್ರಕಾರಕ್ಕೆ ಸೇರಿದೆ

a)

ಸಣ್ಣಕಥೆ

b)

ಪ್ರಬಂಧ ಸಾಹಿತ್ಯ

c)

ಪ್ರವಾಸ ಸಾಹಿತ್ಯ

d)

ಹಳೆಗನ್ನಡ ಸಾಹಿತ್ಯ

16.

ಈ ಗಾದೆಯನ್ನು ಪೂರ್ಣಗೊಳಿಸಿ

ಉಪ್ಪಿಗಿಂತ ರುಚಿಯಿಲ್ಲ ,: ______________

a)

ಉಪ್ಪಿಲ್ಲದೆ ರುಚಿಯಿಲ್ಲ

b)

ತಾಯಿಯಂತೆ ಬೇರೆ ಇಲ್ಲ

c)

ನೀರಿಗಿಂತ ಶ್ರೇಷ್ಠ ವಿಲ್ಲ

d)

ತಾಯಿಗಿಂತ ಬಂಧುವಿಲ್ಲ

17.

ಈ ಪದ್ಯದ ಮುಂದಿನ ಸಾಲನ್ನು ಗುರುತಿಸಿ

ಜೈನರಾದ ಪೂಜ್ಯಪಾದ ಕೊಂಡಕುಂದವರ್ಯರ

ಮಧ್ವಯತಿಯೆ ಬಸವಪತಿಯೆ ಮುಖ್ಯಮತಾಚಾರ್ಯರ

______________

a)

ಪುರಂದರವರೇಣ್ಯರ

b)

ಶರ್ವ ಪಂಪ ರನ್ನರ

c)

ಹಳೆಯಬೀಡ ಬೇಲನಾಡ

d)

ಹಳೆಯ ಹಾಡನುಕ್ಕಿಸು

18.

ಅಬ್ದುಲ್ ರಹೀಮನ ಮಗ್ಗವನ್ನು ಮುಟ್ಟದೆ ಇಷ್ಟು ವರ್ಷಗಳಾಗಿತ್ತು

a)

ಇಪ್ಪತ್ತು

b)

ನಾಲ್ಕು

c)

ಮೂರು

d)

ಹದಿನಾರು

19.

ಕನ್ನಡಿಗರ ತಾಯಿ ಪದ್ಯ ಬರೆದ ಕವಿ

a)

ಕೆ ಎಸ್ ನರಸಿಂಹಸ್ವಾಮಿ

b)

ಬಾಗಲೋಡಿ ದೇವರಾಯ

c)

ನೇಮಿಚಂದ್ರ

d)

ಎಂ ಗೋವಿಂದ ಪೈ

20.

'ದೀನ - ದಲಿತ' ಪದವು ಇದಕ್ಕೆ ಉದಾಹರಣೆಯಾಗಿದೆ

a)

ದ್ವಿರುಕ್ತಿ

b)

ಜೋಡಿ ಪದ

c)

ಅನುಕರಣಾವ್ಯಯ

d)

ನುಡಿಗಟ್ಟು