NEW
Font size
Worksheetsಬಹು ಆಯ್ಕೆ ಮಾದರಿ ಪ್ರಶ್ನೆ ಪತ್ರಿಕೆ 4
Total questions: 40
Worksheet time: 20mins
ವಿದ್ಯುತ್ ವಿಭವಾಂತರವನ್ನು ಅಳೆಯುವ ಉಪಕರಣ ಮತ್ತು SI ಏಕಮಾನ ಅನುಕ್ರಮವಾಗಿ
ರಿಯೋ ಸ್ಟ್ಯಾಟ್ ಮತ್ತು ವೋಲ್ಟ್
ವೋಲ್ಟ್ ಮೀಟರ್ ಮತ್ತು ಆ್ಯಂಪಿಯರ್
ವೋಲ್ಟಾಮೀಟರ್ ಮತ್ತು ವೋಲ್ಟ್
ವೋಲ್ಟ್ ಮೀಟರ್ ಮತ್ತು ವೋಲ್ಟ್
ನಿಮ್ಮ ಬೆನ್ನು 1 ಗೋಡೆಯನ್ನು ಆಚರಿಸುವಂತೆ ನೀವು 1 ಕೊಠಡಿಯಲ್ಲಿ ಕುಳಿತಿರುವಿರೆಂದು ಭಾವಿಸಿ.ಹಿಂದಿನ ಗೋಡೆಯಿಂದ ಮುಂದಿನ ಗೋಡೆಯ ಕಡೆಗೆ ಸಮಾಂತರವಾಗಿ ಬರುತ್ತಿರುವ ಎಲೆಕ್ಟ್ರಾನ್ ಪುಂಜವು ಪ್ರಬಲ ಕಾಂತಕ್ಷೇತ್ರದಿಂದ ನಿಮ್ಮ ಬಲಬದಿಗೆ ವಿಚಲನೆ ಹೊಂದುತ್ತದೆ ಹಾಗಾದರೆ ಕಾಂತಕ್ಷೇತ್ರದ ದಿಕ್ಕು
ನಿಮ್ಮ ಬಲಕ್ಕೆ
ನಿಮ್ಮ ಎಡಕ್ಕೆ
ಕೆಳಮುಖವಾಗಿ
ಮೇಲ್ಮುಖವಾಗಿ
ಋಣಾತ್ಮಕ ಡಯಾಪ್ಟರ್ ಹೊಂದಿರುವ ಮಸೂರದ ವಿಧ ಮತ್ತು ಅದರಿಂದ ಸರಿಪಡಿಸುವ ದೃಷ್ಟಿ
ಪೀನ , ದೂರದೃಷ್ಟಿ
ಪೀನ , ಸಮೀಪದೃಷ್ಟಿ
ನಿಮ್ನ , ದೂರದೃಷ್ಟಿ
ನಿಮ್ನ , ಸಮೀಪದೃಷ್ಟಿ
ವಸ್ತುವನ್ನು ಪೀನಮಸೂರದ 2 F ನಲ್ಲಿ ಸೇರಿಸಿದಾಗ ಉಂಟಾಗುವ ಪ್ರತಿಬಿಂಬದ ಸ್ವಭಾವ ಮತ್ತು ಗಾತ್ರ
ಮಿಥ್ಯ, ನೇರ ಮತ್ತು ದೊಡ್ಡದು
ಸತ್ಯ, ನೇರ ಮತ್ತು ಚಿಕ್ಕದು
ಸತ್ಯ, ತಲೆಕೆಳಗಾದ ಮತ್ತು ಸಮಗಾತ್ರ
ಮಿಥ್ಯ, ನೇರ ಮತ್ತು ಚಿಕ್ಕದು
ಒಂದು ವಾಹಕದ ರೋಧವು 27 ಓಮ್ ಆಗಿದೆ ಅದನ್ನು 3 ಸಮ ಭಾಗಗಳಾಗಿ ಕತ್ತರಿಸಿ ಸಮಾಂತರವಾಗಿ ಜೋಡಿಸಿದಾಗ ಅದರ ಒಟ್ಟು ರೋಧ
6 ಓಮ್
3 ಓಮ್
9 ಓಮ್
27 ಓಮ್
18 V ವಿಭವಾಂತರ ಹೊಂದಿರುವ ಎರಡು ಬಿಂದುಗಳ ನಡುವೆ 3 C ಆವೇಶಗಳು ಚಲಿಸಿದಾಗ ನಡೆದ ಕೆಲಸ
6 J
21 J
15 J
54 J
ಜೈವಿಕ ಅನಿಲ ಸ್ಥಾವರದಲ್ಲಿ ಕಂಡುಬರುವ ಆಕ್ಸಿಜನ್ ರಹಿತ ಮೊಹರಾದ ಕೋಣೆ
ಮಿಶ್ರಣ ತೊಟ್ಟಿ
ಪಾಚಕ
ಅನಿಲ ತೊಟ್ಟಿ
ಬಗ್ಗಡ
ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ
ಮೋಟಾರ್
ರೆಫ್ರಿಜರೇಟರ್
ಡೈನಮೋ
ಇನ್ ವರ್ಟರ್
ಉಷ್ಣೋತ್ಪನ್ನ ಸುರುಳಿಗಳಲ್ಲಿ ಬಳಸುವ ವಾಹಕದ ರೋಧಶೀಲಕತೆಯು ವಿದ್ಯುತ್ ಸಾಗಾಣಿಕೆಯ ವಾಹಕದ ರೋಧಶೀಲತೆಗಿ೦ತ
ಹೆಚ್ಚು
ಕಡಿಮೆ
ಸಮ
ನಿರ್ಧರಿಸಲಿಕ್ಕಾಗದ್ದು
ವಿದ್ಯುದಾವೇಶಗಳ SI ಏಕಮಾನ
ವೋಲ್ಟ್
ಆ್ಯಂಪಿಯರ್
ಕೂಲಾಮ್
ಜೌಲ
ಒಂದು ಸೋಲೆನಾಯ್ಡ್ ಒಳಭಾಗದಲ್ಲಿ ಕಾಂತೀಯ ಬಲರೇಖೆಗಳು ಸರಳ ರೇಖೆಗಳಂತೆ ಇರುತ್ತವೆ ಇದಕ್ಕೆ ಕಾರಣ ಸೋಲೆನಾಯ್ಡ್ ನ ಒಳಭಾಗದಲ್ಲಿರುವ ಕಾಂತಕ್ಷೇತ್ರವು
ಏಕರೂಪವಾಗಿರುತ್ತದೆ
ಹೆಚ್ಚಾಗಿರುತ್ತದೆ
ಸೊನ್ನೆಯಾಗಿರುತ್ತದೆ
ಕಡಿಮೆಯಾಗಿರುತ್ತದೆ
ಕೆಳಗಿನ ಕೋಷ್ಟಕ ಗಮನಿಸಿ ಓಮ್ ನ ನಿಯಮ ಅನ್ವಯಿಸಿ X ಮತ್ತು Y ನ ಬೆಲೆಗಳು
X = 90, Y = 1
X = 4, Y = 90
X = 1, Y = 90
X = 1, Y = 4
ಒಂದು ಮಸೂರದ ವಕ್ರತಾ ತ್ರಿಜ್ಯ 30cm ಆದರೆ ಅದರ ಸಂಗಮ ದೂರ
17 m
17cm
68cm
68m
ಈ ಕೆಳಗಿನವುಗಳಲ್ಲಿ ಉತ್ತಮ ಇಂಧನದ ಲಕ್ಷಣ
ಸುಲಭವಾಗಿ ಲಭ್ಯತೆ
ಸುಲಭ ಸಂಗ್ರಹ ಮತ್ತು ಸಾಗಣೆ
ಮಿತವ್ಯಯಕಾರಿ
ಈ ಎಲ್ಲವೂ
ಉಷ್ಣದ ಅತ್ಯುತ್ತಮ ವಾಹಕಗಳಿಗೆ ಉದಾಹರಣೆ
ಸೀಸ ಮತ್ತು ಪಾದರಸ
ಬೆಳ್ಳಿ ಮತ್ತು ತಾಮ್ರ
ಸೀಸ ಮತ್ತು ತಾಮ್ರ
ಬೆಳ್ಳಿ ಮತ್ತು ಪಾದರಸ
CH4 + Cl2-----> CH3Cl+ HCl (ಸೂರ್ಯನ ಬೆಳಕಿನ ಸಮ್ಮುಖದಲ್ಲಿ) ಇದು ಯಾವ ವಿಧದ ರಾಸಾಯನಿಕ ಕ್ರಿಯೆ
ಆದೇಶನ ಕ್ರಿಯೆ
ಸಂಕಲನ ಕ್ರಿಯೆ
ಉತ್ಕರ್ಷಣ ಕ್ರಿಯೆ
ದಹನ ಕ್ರಿಯೆ
Na, Ca, K, Mg. ಈ ಲೋಹಗಳನ್ನು ಅವುಗಳ ಕ್ರಿಯಾಶೀಲತೆಯ ಇಳಿಕೆ ಕ್ರಮದಲ್ಲಿ ಬರೆದಾಗ
Na > Ca > K > Mg
Mg > K > Ca > Na
K > Na > Ca > Mg
Mg > Ca > Na > K
ನೀರಿನಲ್ಲಿ ವಿಲೀನವಾಗುವ ಪ್ರತ್ಯಾಮ್ಲಗಳು
ಲವಣಗಳು
ಕ್ಷಾರಗಳು
ಆಮ್ಲಗಳು
ಕ್ರಿಯಾವರ್ಧಕಗಳು
ಈ ಕಾರ್ಬನ್ ಸಂಯುಕ್ತದಲ್ಲಿರುವ ಕ್ರಿಯಾ ಗುಂಪು
ಕೀಟೋನ್
ಅಲ್ಡಿಹೈಡ್
ಆಲ್ಕೋಹಾಲ್
ಕಾರ್ಬಾಕ್ಸಿಲಿಕ್ ಆಮ್ಲ
ಧಾತುಗಳ ವರ್ಗೀಕರಣಕ್ಕಾಗಿ ಅಷ್ಟಕಗಳ ನಿಯಮ ರೂಪಿಸಿದವರು
ನ್ಯೂಲ್ಯಾಂಡ್ಸ್
ಡೊಬರೀನರ್
ಮೆಂಡಲೀವ್
ಹೆನ್ರಿ ಮೋಸ್ಲೆ
ರಾಸಾಯನಿಕವಾಗಿ ಬದಲಾವಣೆಗೊಳ ಪಡದೆ ಕ್ರಿಯಾ ದರದಲ್ಲಿ ಬದಲಾವಣೆ ತರುವ ರಾಸಾಯನಿಕಗಳೇ
ಉತ್ಕರ್ಷಣಕಾರಿಗಳು
ಅಪಕರ್ಷಣಕಾರಿಗಳು
ಕ್ರಿಯಾವರ್ಧಕಗಳು
ಕ್ಷಾರಗಳು
ಧಾತುವೊಂದರ ಇಲೆಕ್ಟ್ರಾನಿಕ್ ವಿನ್ಯಾಸ ಬರೆದಾಗ ಇಲೆಕ್ಟ್ರಾನ್ ಗಳು K ,L ಮತ್ತು Mಕವಚಗಳಲ್ಲಿ ಹಂಚಿಕೆಯಾದರೆ ಆ ಧಾತು ಯಾವ ವರ್ಗಕ್ಕೆ ಸೇರಿದೆ
2ನೆಯ ಆವರ್ತ
4ನೆಯ ಆವರ್ತ
6ನೆಯ ಆವರ್ತ
3ನೆಯ ಆವರ್ತ
ಬೆಸುಗೆ ಲೋಹದ ಘಟಕಗಳು
ಸೀಸ ಮತ್ತು ತವರ
ಸೀಸ ಮತ್ತು ತಾಮ್ರ
ತವರ ಮತ್ತು ತಾಮ್ರ
ತವರ ಮತ್ತು ಕಬ್ಬಿಣ
ಕೆಳಗಿನವುಗಳಲ್ಲಿ ಸಂಶ್ಲೇಷಿತ ಸೂಚಕ
ಅರಿಶಿಣ
ಲಿಟ್ಮಸ್ ಕಾಗದ
ಫಿನಾಫ್ತಲೀನ್
ಈ ಎಲ್ಲವೂ
pH ಮೌಲ್ಯ 7 ರಿಂದ 14 ರೆಡೆಗೆ ಹೆಚ್ಚಾದಂತೆ ದ್ರಾವಣದಲ್ಲಿನ
OH- ಅಯಾನುಗಳ ಸಾರತೆ ಕಡಿಮೆಯಾಗುತ್ತದೆ
OH-ಅಯಾನುಗಳ ಸಾರತೆ ಅಧಿಕವಾಗುತ್ತದೆ
H+ ಅಯಾನುಗಳ ಸಾರತೆ ಅಧಿಕವಾಗುತ್ತದೆ
H+ & OH- ಅಯಾನು ಗಳೆರಡರ ಸಾರತೆ ಕಡಿಮೆಯಾಗುತ್ತದೆ
ಸೈಕ್ಲೋಹೆಕಸೆನ ಕೆಳಗಿನ ಯಾವ ಸಾಮಾನ್ಯ ಸೂತ್ರವನ್ನು ಹೊಂದಿದೆ
CnH2n
CnH2n+2
CnH2n-2
CnH2n-1
ಮಾನವನ ಹೃದಯದಲ್ಲಿ ಆಕ್ಸಿಜನ್ ಸಮೃದ್ಧ ರಕ್ತದ ಹರಿವಿನ ಸರಿಯಾದ ಮಾರ್ಗ
ಶ್ವಾಸಕೋಶ ---->ಎಡ ಹೃತ್ಕರ್ಣ ----->ಎಡ ಹೃತ್ಕುಕ್ಷಿ ------>ದೇಹದ ಎಲ್ಲ ಭಾಗ
ದೇಹದ ಎಲ್ಲ ಭಾಗ---->ಎಡ ಹೃತ್ಕುಕ್ಷಿ ---->ಎಡ ಹೃತ್ಕರ್ಣ ---->ಶ್ವಾಸಕೋಶ
ಎಡ ಹೃತ್ಕರ್ಣ ---->ಎಡ ಹೃತ್ಕುಕ್ಷಿ ---->ಶ್ವಾಸಕೋಶ ---->ದೇಹದ ಎಲ್ಲ ಭಾಗ
ಶ್ವಾಸಕೋಶ ---->ಎಡ ಹೃತ್ಕುಕ್ಷಿ ---->ಎಡ ಹೃತ್ಕರ್ಣ ---->ದೇಹದ ಎಲ್ಲ ಭಾಗ
ಸಸ್ಯಗಳಲ್ಲಿ ಮಣ್ಣಿನ ಸಂಪರ್ಕದಲ್ಲಿರುವ ಅಂಗಗಳು ಮತ್ತು ಕ್ಲೋರೋಫಿಲ್ ಹೊಂದಿರುವ ಅಂಗಗಳ ನಡುವಿನ ಅಂತರ ಹೆಚ್ಚಿದಾಗ ಸಾಗಾಣಿಕೆಗೆ ನೆರವಾಗುವ ವ್ಯವಸ್ಥೆ
ವಿಸರಣೆ
ಸಮರ್ಪಕ ಸಾಗಾಣಿಕೆ
ಅಭಿಸರಣೆ
ಚೋಷಣ
ನರವ್ಯೂಹ ವ್ಯವಸ್ಥೆಯು ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಮಾಹಿತಿಯನ್ನು ಇವುಗಳ ಮೂಲಕ ಸಾಗಿಸುತ್ತದೆ
ರಾಸಾಯನಿಕ ಆವೇಗಗಳು
ವಿದ್ಯುತ್ ಆವೇಗಗಳು
ಹಾರ್ಮೋನುಗಳು
ಕಾಂತೀಯ ಆವೇಗಗಳು
ಸಸ್ಯಗಳಲ್ಲಿ ಅವುಗಳ ಬೆಳವಣಿಗೆಯನ್ನು ಆಧರಿಸಿ ಉಂಟಾಗದ ಪ್ರತಿಕ್ರಿಯೆಯೆಂದರೆ
ಕಾಂಡಗಳು ಬೆಳಕಿನ ಕಡೆಗೆ ಬಾಗುವುದು
ಬೇರುಗಳು ಮಣ್ಣಿನ ಆಳಕ್ಕೆ ಇಳಿಯುವುದು
ಎಲೆಗಳನ್ನು ಸ್ಪರ್ಶಿಸಿದಾಗ ಮುದುರುವುದು
ಬಳ್ಳಿಯೊಂದರ ಕುಡಿಗಳು ಮೇಲೇರುವುದು
ಅಂಡಾಣುಗಳ ಕಡೆಗೆ ಪರಾಗರೇಣು ನಳಿಕೆಗಳ ಬೆಳವಣಿಗೆಯೂ ಇದಕ್ಕೆ ಉದಾಹರಣೆಯಾಗಿದೆ
ದ್ಯುತಿ ಅನುವರ್ತನೆ
ಗುರುತ್ವಾನುವರ್ತನೆ
ರಾಸಾಯನಿಕಾನುವರ್ತನೆ
ಜಲಾನುವರ್ತನೆ
ಈ ಚಿತ್ರದಲ್ಲಿ ತೋರಿಸಿದ ಮಿದುಳಿನ ಭಾಗ ಮತ್ತು ಕಾರ್ಯದ ಸರಿಯಾದ ಆಯ್ಕೆ ಎಂದರೆ
ಮಹಾಮಸ್ತಿಷ್ಕ- ದೇಹದ ಸಮತೋಲನ
ಅನುಮಸ್ತಿಷ್ಕ- ದೇಹದ ತಾಪಮಾನದ ನಿಯಂತ್ರಣ
ಅನುಮಸ್ತಿಷ್ಕ -ದೇಹದ ಸಮತೋಲನ
ಮಹಾಮಸ್ತಿಷ್ಕ- ದೇಹದ ತಾಪಮಾನ ನಿಯಂತ್ರಣ
ಸಂತಾನೋತ್ಪತ್ತಿಯಲ್ಲಿ ಪಾಲ್ಗೊಳ್ಳುವ ಹೂವಿನ ಭಾಗಗಳು
ಕೇಸರ ಮತ್ತು ಪುಷ್ಪ ಪಾತ್ರೆ
ಶಲಾಕೆ ಮತ್ತು ಕೇಸರ
ಪುಷ್ಪದಳ ಮತ್ತು ಕೇಸರ
ಕೇಸರ ಮತ್ತು ತೊಟ್ಟು
ಋತುಚಕ್ರದ ಕುರಿತಂತೆ ಸರಿಯಲ್ಲದ ಹೇಳಿಕೆ
ಅಂಡ ಫಲಿತಗೊಳದಿದ್ದಾಗ ಉಂಟಾಗುತ್ತದೆ
ಅಂಡ ಫಲಿತಗೊಂಡಾಗ ಉಂಟಾಗುತ್ತದೆ
ಪ್ರತಿ ತಿಂಗಳು ನಡೆಯುತ್ತದೆ
2 ರಿಂದ 8 ದಿನಗಳವರೆಗೆ ಮುಂದುವರೆಯುತ್ತದೆ
ಈ ಕೆಳಗಿನವುಗಳಲ್ಲಿ 'ಕಾಪರ್ - ಟಿ' ಯ ಪ್ರಮುಖ ಕಾರ್ಯವೆಂದರೆ
i) ಗರ್ಭನಿರೋಧಕ
ii) ಲೈಂಗಿಕ ಸಂಪರ್ಕದಿಂದ ಹರಡುವ ರೋಗಗಳ ತಡೆಗಟ್ಟುವಿಕೆ
i ಮಾತ್ರ ಸರಿ
ii ಮಾತ್ರ ಸರಿ
i ಮತ್ತು ii ಎರಡೂ ಸರಿ
i ಮತ್ತು ii ಎರಡೂ ತಪ್ಪು
ಜೀವಿಯ ಬದುಕಿಗೆ ಉಪಯುಕ್ತವಾಗದೇ ಕೇವಲ ವೈವಿಧ್ಯತೆಯನ್ನು ಒದಗಿಸುವ ಅನುವಂಶೀಯ ಗುಣವೇ
ನಿಸರ್ಗದ ಆಯ್ಕೆ
ಪ್ರಭೇದೀಕರಣ
ದಿಕ್ಚ್ಯುತಿ
ಉತ್ಪರಿವರ್ತನೆ
ಇವುಗಳಲ್ಲಿ ಸರ್ಯಾದ ಹೇಳಿಕೆಯೆಂದರೆ
ಚಿತ್ರ ನಟರ ಮಕ್ಕಳು ನಟನೆಯನ್ನು ತಮ್ಮ ತಂದೆಯಿಂದ ಅನುವಂಶೀಯವಾಗಿ ಪಡೆದುಕೊಳ್ಳುತ್ತಾರೆ
ಬಾಲವಿಲ್ಲದ ಇಲಿಗಳಿಂದ ಬಾಲವಿಲ್ಲದ ಇಲಿ ಮರಿಗಳು ಹುಟ್ಟುತ್ತವೆ
ಎತ್ತರವಿರುವ ಪೋಷಕರಿಂದ ಹುಟ್ಟುವ ಮಕ್ಕಳು ಎತ್ತರವಾಗಿಯೇ ಬೆಳೆಯುತ್ತಾರೆ
ಜೀವಿಯೊಂದು ತನ್ನ ಜೀವಿತ ಕಾಲದ ಅನುಭವಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಾಧ್ಯವಿಲ್ಲ
ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಪೂರಕ ಅಂಶವಾಗಿದೆ
ರೆಫ್ರಿಜರೇಟರ್ ನೀರಿನ ಬಳಕೆ
ಅಡುಗೆಮನೆ ತ್ಯಾಜ್ಯದಿಂದ ಗೊಬ್ಬರ ತಯಾರಿಕೆ
ತ್ಯಾಜ್ಯ ಪದಾರ್ಥಗಳ ದಹನ
ಕಾಫಿ, ಟೀ ಕುಡಿಯಲು ಒಮ್ಮೆ ಮಾತ್ರ ಬಳಸಬಹುದಾದ ಲೋಟಗಳ ಬಳಕೆ
ಕೆಳಗಿನವುಗಳಲ್ಲಿ ಯಾವುದು ಹಸಿರುಮನೆ ಅನಿಲ ವಾಗಿದೆ
ಇಂಗಾಲ
ಆಮ್ಲಜನಕ
ಇಂಗಾಲದ ಡಯಾಕ್ಸೈಡ್
ಹೈಡ್ರೋಜನ್ ಅನಿಲ
ಬಳಸಿದ ಕಾಗದದಿಂದ ಲಕೋಟೆಗಳ ತಯಾರಿಕೆ :ಮರುಬಳಕೆ :: ಬಳಸಿದ ಪ್ಲಾಸ್ಟಿಕ್ ಗಳ ನಿರ್ವಹಣೆ
ಮಿತ ಬಳಕೆ
ನಿರಾಕರಣೆ
ಮರುಚಕ್ರೀಕರಣ
ಮರುಬಳಕೆ
