wayground logo

Free Printable Worksheets

NEW

Font size

S
M
L
XL
Worksheets

ಗ್ರಾಹಕ ಶಿಕ್ಷಣ ಮತ್ತು ರಕ್ಷಣೆ

Total questions: 10

Worksheet time: 5mins

Name
Class
Date
1.

ಗ್ರಾಹಕ ಸಂರಕ್ಷಣೆಯ ಆಂದೋಲನ ಮೊಟ್ಟ ಮೊದಲಿಗೆ ಎಲ್ಲಿ ಪ್ರಾರಂಭವಾಯಿತು ?

a)

ಭಾರತ

b)

ಅಮೆರಿಕ

c)

ರಷ್ಯಾ

d)

ಇಂಗ್ಲೆಂಡ್

2.

‍ಟೆಲಿ ಶಾಪಿಂಗ್ ಎಂದರೆ ?

a)

ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಮನೆಯಲ್ಲೇ ಕುಳಿತು ವಸ್ತುಗಳನ್ನು ಕೊಳ್ಳುವುದು

b)

ಗ್ರಾಹಕರು ವಸ್ತುಗಳನ್ನು ಕೊಳ್ಳಲು ವ್ಯಾಪಾರದ ಮಳಿಗೆಗೆ ಹೋಗುವುದು

c)

ಉತ್ಪಾದಕರು ಚಿಲ್ಲರೆ ವ್ಯಾಪಾರಿಗಳಿಂದ ವಸ್ತುಗಳನ್ನು ಗ್ರಾಹಕರಿಗೆ ನೀಡುವುದು

d)

ಮಧ್ಯವರ್ತಿಗಳ ಮೂಲಕ ವ್ಯವಹಾರ ನಡೆಸುವುದು

3.

ಇವನನ್ನು "ಮಾರುಕಟ್ಟೆಯ ರಾಜ" ಎಂದು ಕರೆಯಲಾಗುವುದು

a)

ಉತ್ಪಾದಕ

b)

ಗ್ರಾಹಕ

c)

ಪೂರೈಕೆದಾರ

d)

ಮಧ್ಯವರ್ತಿಗಳು

4.

ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದು ವರ್ಷ ಯಾವುದು ?

a)

ಕ್ರಿಶ 1980

b)

ಕ್ರಿಶ್ 1984

c)

ಕ್ರಿ ಶ 1986

d)

ಕ್ರಿ ಶ 1988

5.

ಮಾರ್ಚ್ 15 ನೇ ತಾರೀಖಿನಂದು ವಿಶ್ವ ಗ್ರಾಹಕರ ಹಕ್ಕುಗಳ ದಿನ ಆಚರಿಸಲಾಗುತ್ತದೆ ಕಾರಣವೇನು?

a)

ಗ್ರಾಹಕ ಸಂರಕ್ಷಣಾ ಕಾಯ್ದೆಗೆ ಪ್ರಾಶಸ್ತ್ಯ ನೀಡಿದ ದಿನ

b)

ಗ್ರಾಹಕ ಸಂರಕ್ಷಣಾ ಮಂಡಳಿ ಸ್ಥಾಪಿಸಿದ ದಿನ

c)

ನಿರಂತರ ಶೋಷಣೆಯಿಂದ ಬೇಸತ್ತ ಬಳಕೆದಾರ ಅಸಹಾಯಕತೆಯಿಂದ ಚಳವಳಿ ನಡೆಸಿದ ದಿನ

d)

ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್ ಕೆನಡಿ ಅಲ್ಲಿನ ನಾಗರಿಕರಿಗೆ ಸಂರಕ್ಷ ತೆ ಮಾಹಿತಿ ನಿವೇದನೆ ಪರಿಹಾರ ಎಂಬ ಹಕ್ಕುಗಳನ್ನು ನೀಡಿ ವಿಧೇಯಕ ಅಂಗೀಕರಿಸಿದ ದಿನ

6.

ಜಿಲ್ಲಾ ಗ್ರಾಹಕ ಸಂರಕ್ಷಣಾ ಮಂಡಳಿಗೆ ಯಾರು ಅಧ್ಯಕ್ಷರಾಗಿರುತ್ತಾರೆ ?

a)

ಜಿಲ್ಲಾ ಪಂಚಾಯಿತಿ ಅಧ್ಯಕ್ಷರು

b)

ಜಿಲ್ಲಾ ಮುಖ್ಯ ನ್ಯಾಯಾಧೀಶರು

c)

ಜಿಲ್ಲಾಧಿಕಾರಿಗಳು

d)

ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು

7.

ಗ್ರಾಹಕ ಸಂರಕ್ಷಣಾ ಕಾಯ್ದೆಯ ಪ್ರಕಾರ ರಾಷ್ಟ್ರೀಯ ಆಯೋಗದ ವೇದಿಕೆಗೆ ಯಾರು ಅಧ್ಯಕ್ಷರಾಗಿರುತ್ತಾರೆ ?

a)

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ

b)

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ

c)

ಕೇಂದ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ

d)

ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ

8.

ಗ್ರಾಹಕ ಸಂರಕ್ಷಣಾ ಕಾಯ್ದೆಯ ಪ್ರಕಾರ ಇಪ್ಪತ್ತು ಲಕ್ಷ ರೂಪಾಯಿಗಿಂತ ಹೆಚ್ಚಾಗಿದ್ದು ಒಂದು ಕೋಟಿ ರೂಪಾಯಿ ವರೆಗಿನ ಮೌಲ್ಯದ ಗ್ರಾಹಕ ದೂರುಗಳನ್ನು ಯಾವ ಆಯೋಗಕ್ಕೆ ಸಲ್ಲಿಸಬೇಕು

a)

ಜಿಲ್ಲಾ ಆಯೋಗ

b)

ರಾಜ್ಯ ಆಯೋಗ

c)

ರಾಷ್ಟ್ರೀಯ ಆಯೋಗ

d)

ಅಂತಾರಾಷ್ಟ್ರೀಯ ಆಯೋಗ

9.

ಗ್ರಾಹಕ ಸಂರಕ್ಷಣಾ ಕಾಯ್ದೆಯ ಪ್ರಕಾರ ಇಪ್ಪತ್ತು ಲಕ್ಷ ರೂಪಾಯಿಗಿಂತ ಹೆಚ್ಚಾಗಿರದ ಗ್ರಾಹಕರ ದೂರುಗಳನ್ನು ಯಾವ ವೇದಿಕೆಗೆದೂರು ಸಲ್ಲಿಸಬೇಕು ?

a)

ತಾಲ್ಲೂಕು ವೇದಿಕೆ

b)

ಜಿಲ್ಲಾ ವೇದಿಕೆ

c)

ರಾಜ್ಯ ವೇದಿಕೆ

d)

ರಾಷ್ಟ್ರೀಯ ವೇದಿಕೆ

10.

ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಬೇಕಾದರೆ ಎಷ್ಟು ಶುಲ್ಕವನ್ನು ನೀಡಬೇಕು ?

a)

5 ರೂ

b)

10 ರೂ

c)

15 ರೂ

d)

ಯಾವುದೇ ಶುಲ್ಕ ಇರುವುದಿಲ್ಲ