wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಅಲಂಕಾರಗಳು

Total questions: 50

Worksheet time: 25mins

Name
Class
Date
1.
ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರಗಳು
a)
ಅಲಂಕಾರಗಳು
b)
ಛಂದಸ್ಸು
c)
ಕೃದಂತಗಳು
d)
ಸಮಾಸಗಳು
2.
ಶಬ್ದ ಅಥವಾ ಪದಗಳ ಜೋಡಣೆಯ ಮೂಲಕ ಕಾವ್ಯ ಅಥವಾ ಮಾತಿನ ಸೌಂದರ್ಯ ಹೆಚ್ಚಿದರೆ ಅದು
a)
ಅರ್ಥಾಲಂಕಾರ
b)
ಶಬ್ಧಾಲಂಕಾರ
c)
ಉಪಮಾಲಂಕಾರ
d)
ದೃಷ್ಟಾಂತ ಅಲಂಕಾರ
3.
ಪದಗಳ ಅರ್ಥ ಚಮತ್ಕಾರದಿಂದ ಕಾವ್ಯದ ಅಥವಾ ಅರ್ಥದ ಸೌಂದರ್ಯ ಹೆಚ್ಚಿದ್ದರೆ ಅದು
a)
ಅರ್ಥಾಲಂಕಾರ
b)
ಶಬ್ಧಾಲಂಕಾರ
c)
ಉಪಮಾಲಂಕಾರ
d)
ದೃಷ್ಟಾಂತ ಅಲಂಕಾರ
4.
ಶಬ್ಧಾಲಂಕಾರದಲ್ಲಿನ ವಿಧ
a)
ಅನುಪ್ರಾಸ
b)
ಯಮಕ
c)
ಚಿತ್ರಕವಿತ್ವ
d)
ಈ ಮೂರು ಹೌದು
5.
ಅನುಪ್ರಾಸ ಅಲಂಕಾರ ಎಂದರೆ
a)
ಅಕ್ಷರಗಳ ಆವೃತ್ತತೆ
b)
ಅಕ್ಷರಗಳ ವಿಘಟನೆ
c)
ಅಕ್ಷರಗಳ ಹೊಂದಾಣಿಕೆ
d)
ಇವೆಲ್ಲವೂ
6.
ಅನುಪ್ರಾಸದ ವಿಧಗಳು
a)
ವೃತ್ತ್ಯಾನುಪ್ರಾಸ ಮತ್ತು ಛೇಕಾನುಪ್ರಾಸ
b)
ಗಜ ಪ್ರಾಸ ಮತ್ತು ಅಜಪ್ರಾಸ
c)
ಹಯಪ್ರಾಸ ಮತ್ತು ಸಿಂಹಪ್ರಾಸ
d)
ಆದಿಪ್ರಾಸ ಮತ್ತು ಅಂತ್ಯಪ್ರಾಸ
7.
ಒಂದು ಅಥವಾ ಎರಡು ವ್ಯಂಜನಾಕ್ಷರಗಳು ಪದ್ಯದ ಸಾಲುಗಳಲ್ಲಿ ಮತ್ತೆ ಮತ್ತೆ ಪುನರಾವರ್ತನೆಗೊಂಡಿರೆ ಅದು
a)
ಅಂತ್ಯಪ್ರಾಸ
b)
ಛೇಕಾನುಪ್ರಾಸ
c)
ವೃತ್ತ್ಯಾನುಪ್ರಾಸ
d)
ಆದಿಪ್ರಾಸ
8.

ಎರಡೆರಡು ವ್ಯಂಜನಗಳು ಪುನರಾವರ್ತನೆ ಗೊಂಡರೆ ಅದು

a)

ಛೇಕಾನುಪ್ರಾಸ

b)

ವೃತ್ತ್ಯಾನುಪ್ರಾಸ

c)

ಸಿಂಹ ಪ್ರಾಸ

d)

ಅಜಪ್ರಾಸ

9.
ಮೂರು ಅಥವಾ ಅದಕ್ಕಿಂತ ಹೆಚ್ಚು ಅಕ್ಷರಗಳುಳ್ಳ ಪದವಾಗಲಿ, ಪದ ಭಾಗವಾಗಲಿ ಒಂದು ಪದ್ಯದ ಆದಿ ,ಮಧ್ಯ ಮತ್ತು ಅಂತ್ಯದಲ್ಲಿ ನಿಯತವಾಗಿ ಬಂದರೆ ಅದು
a)
ವೃತ್ತ್ಯಾನುಪ್ರಾಸ
b)
ಛೇಕಾನುಪ್ರಾಸ
c)
ಚಿತ್ರಕವಿತ್ವ
d)
ಯಮಕಾಲಂಕಾರ
10.
ವೈಚಿತ್ರ ಪೂರ್ಣವಾಗಿ ಅಕ್ಷರಗಳನ್ನು ಪದಗಳನ್ನು ಜೋಡಿಸಿ ಪದ್ಯ ರಚಿಸುವುದು
a)
ವೃತ್ತ್ಯಾನುಪ್ರಾಸ
b)
ಛೇಕಾನುಪ್ರಾಸ
c)
ಚಿತ್ರಕವಿತ್ವ
d)
ಯಮಕಾಲಂಕಾರ
11.
ನಿರೋಷ್ಠ್ಯ, ತಾಲವ್ಯ, ಏಕಾಕ್ಷರ, ದ್ವ್ಯಕ್ಷರ, ತ್ರ್ಯಕ್ಷರ, ಹಾರಬಂಧ, ಮುರಜಬಂಧ ಇತ್ಯಾದಿ ಪ್ರಕಾರಗಳಿರುವ ಅಲಂಕಾರ
a)
ವೃತ್ತ್ಯಾನುಪ್ರಾಸ
b)
ಉತ್ಪ್ರೇಕ್ಷಾಲಂಕಾರ
c)
ಚಿತ್ರಕವಿತ್ವ
d)
ಉಪಮಾಲಂಕಾರ
12.
ಕಾವ್ಯದಲ್ಲಿ ವರ್ಣಿಸಿ ಕೊಳ್ಳುವ ಪದ ಅಥವಾ ವಿಷಯವನ್ನು ಹೀಗೆ ಕರೆಯಲಾಗುತ್ತದೆ
a)
ಉಪಮೇಯ
b)
ಉಪಮಾನ
c)
ಸಾಧಾರಣ ಧರ್ಮ
d)
ಉಪಮಾವಾಚಕ
13.
ಒಂದು ವಸ್ತುವನ್ನು ವರ್ಣಿಸಲು ಆಧಾರವಾಗಿಟ್ಟುಕೊಳ್ಳುವ ಪದ ಅಥವಾ ವಿಷಯವನ್ನು ಹೀಗೆ ಕರೆಯಲಾಗುತ್ತದೆ
a)
ಉಪಮೇಯ
b)
ಉಪಮಾನ
c)
ಸಾಧಾರಣ ಧರ್ಮ
d)
ಉಪಮಾವಾಚಕ
14.
ಉಪಮೇಯ - ಉಪಮಾನಗಳನ್ನು ಕೂಡಿಸುವ ಪದ
a)
ಉಪಮೇಯ
b)
ಉಪಮಾನ
c)
ಸಾಧಾರಣ ಧರ್ಮ
d)
ಉಪಮಾವಾಚಕ
15.
ಎರಡು ವಸ್ತುಗಳಿಗೆ ಪರಸ್ಪರ ಸುಂದರವಾಗಿ ಹೋಲಿಸುವ ಅಲಂಕಾರ
a)
ಉಪಮಾಲಂಕಾರ
b)
ರೂಪಕಾಲಂಕಾರ
c)
ದೃಷ್ಟಾಂತ ಅಲಂಕಾರ
d)
ಅರ್ಥಾಂತರನ್ಯಾಸಾಲಂಕಾರ
16.
"ಪೂರ್ವದಿಕ್ಕಿನಲ್ಲಿ ಮೂಡಿದ ಸೂರ್ಯನು ಮುತ್ತೈದೆಯ ಹಣೆಯಲ್ಲಿರುವ ಕುಂಕುಮ ದಂತೆ ಕಂಡನು" -ಈ ವಾಕ್ಯವು ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ
a)
ರೂಪಕಲಂಕಾರ
b)
ಯಮಕಾಲಂಕಾರ
c)
ಉಪಮಾಲಂಕಾರ
d)
ಉತ್ಪ್ರೇಕ್ಷಾಲಂಕಾರ
17.
"ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ" - ಈ ವಾಕ್ಯವು ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ ?
a)
ಉಪಮಾಲಂಕಾರ
b)
ದೃಷ್ಟಾಂತಾಲಂಕಾರ
c)
ರೂಪಕಾಲಂಕಾರ
d)
ಶ್ಲೇಷಾಲಂಕಾರ
18.
"ಭೀಮ ದುರ್ಯೋಧನರು ಮದಗಜಗಳಂತೆ ಹೋರಾಡಿದರು" ಈ ವಾಕ್ಯವು ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ
a)
ಚಿತ್ರಕವಿತ್ವ ಅಲಂಕಾರ
b)
ಉತ್ಪ್ರೇಕ್ಷಾಲಂಕಾರ
c)
ಉಪಮಾಲಂಕಾರ
d)
ದೃಷ್ಟಾಂತಾಲಂಕಾರ
19.
"ಭೀಮ ದುರ್ಯೋಧನರು ಮದಗಜಗಳಂತೆ ಹೋರಾಡಿದರು" ಈ ವಾಕ್ಯದಲ್ಲಿನ ಉಪಮೇಯ
a)
ಮದಗಜಗಳು
b)
ಭೀಮ ದುರ್ಯೋಧನರು
c)
ಹೋರಾಡಿದರು
d)
ಅಂತೆ
20.
ಉಪಮಾಲಂಕಾರಕ್ಕೆ ಉದಾಹರಣೆ
a)
ಸೀತೆಯ ಮುಖ ಕಮಲದಂತೆ ಅರಳಿತು
b)
ಮಗುವಿನ ಮುಖ ಚಂದ್ರನಂತೆ ಹೊಳೆಯಿತು
c)
ಗುಬ್ಬಚ್ಚಿ ಗೂಡುಗಳು ತೊಟ್ಟಿಲಿನಂತೆ ತೂಗುತ್ತಿದ್ದವು
d)
ಈ ಮೂರು ಹೌದು
21.
"ಬಲ್ಲವನೇ ಬಲ್ಲ ಬೆಲ್ಲದ ರುಚಿಯ"- ಈ ವಾಕ್ಯದಲ್ಲಿರುವ ಅಲಂಕಾರ
a)
ವೃತ್ತ್ಯಾನುಪ್ರಾಸ ಅಲಂಕಾರ
b)
ಛೇಕಾನುಪ್ರಾಸಾಲಂಕಾರ
c)
ಉಪಮಾಲಂಕಾರ
d)
ರೂಪಕಾಲಂಕಾರ
22.
"ಒಳಗಿನ ಮಂದಿ ಗುಂಡು ಹೊಡಿದರೊ ಮುಂಗಾರಿ ಸಿಡಿಲ ಸಿಡಿದ್ಹಾಂಗ "- ಈ ವಾಕ್ಯದಲ್ಲಿರುವ ಅಲಂಕಾರ
a)
ರೂಪಕಾಲಂಕಾರ
b)
ಯಮಕಾಲಂಕಾರ
c)
ಉಪಮಾಲಂಕಾರ
d)
ಉತ್ಪ್ರೇಕ್ಷಾಲಂಕಾರ
23.
"ಸಿಡಿಲು ಸಿಡಿದ್ಹಾಂಗ ಗುಂಡು ಸುರಿದಾವ" - ಇದು ಯಾವ ಅಲಂಕಾರಕ್ಕೆ ಉದಾಹರಣೆ ಯಾಗಿದೆ ?
a)
ದೃಷ್ಟಾಂತಾಲಂಕಾರ
b)
ರೂಪಕಾಲಂಕಾರ
c)
ಅರ್ಥಾಂತರನ್ಯಾಸ ಅಲಂಕಾರ
d)
ಉಪಮಾಲಂಕಾರ
24.
"ಸಿಡಿಲು ಸಿಡಿದ್ಹಾಂಗ ಗುಂಡು ಸುರಿದಾವ" - ಈ ವಾಕ್ಯವನ್ನು ಅನುಸರಿಸಿ ಸರಿಯಾದ ಉತ್ತರ ಪದಗಳ ಜೋಡಿ
a)
ಉಪಮೇಯ - ಸಿಡಿಲು ಸಿಡಿಯುವುದು
b)
ಉಪಮಾನ - ಗುಂಡು ಸುರಿಯುವುದು
c)
ಸಾಧಾರಣ ಧರ್ಮ - ಸುರಿಯುವುದು
d)
ಎಲ್ಲವೂ ಸರಿ ಇವೆ
25.
"ಒಳಗಿನ ಮಂದಿ ಗುಂಡು ಹೊಡಿದರೊ ಮುಂಗಾರಿ ಸಿಡಿಲ ಸಿಡಿದ್ಹಾಂಗ "- ಈ ವಾಕ್ಯದಲ್ಲಿನ ಉಪಮಾನ
a)
ಒಳಗಿನ ಮಂದಿ ಗುಂಡು ಹೊಡೆಯುವುದು
b)
ಮುಂಗಾರಿನ ಸಿಡಿಲು ಸಿಡಿಯುವುದು
c)
ಹಾಂಗ
d)
ಸಿಡಿಯುವುದು
26.
ನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರವುಂಟೆ ನಿನ್ನದೊಂದಳವು - ಈ ವಾಕ್ಯದಲ್ಲಿನ ಉಪಮೇಯ, ಉಪಮಾನ ಉಪಮಾವಾಚಕಗಳ ಸರಿಯಾದ ಹೊಂದಾಣಿಕೆ ಯಾವುದು ?
a)
ಉಪಮೇಯ - ದ್ರುಪದನ ಪರಾಕ್ರಮ
b)
ಉಪಮಾನ - ನೊಣಕ್ಕೆ ಶ್ರೇಷ್ಠ ವೆನ್ನುವ ಕುಪ್ಪೆ
c)
ಉಪಮಾವಾಚಕ - ವೂಲ್
d)
ಎಲ್ಲವೂ ಹೊಂದಾಣಿಯಾಗಿವೆ
27.
ಉಪಮೇಯ ಉಪಮಾನಗಳಲ್ಲಿ ಅಭೇಧತೆಯನ್ನು ಕಲ್ಪಿಸುವುದು
a)
ಉಪಮಾಲಂಕಾರ
b)
ರೂಪಕಾಲಂಕಾರ
c)
ದೃಷ್ಟಾಂತಾಲಂಕಾರ
d)
ಉತ್ಪ್ರೇಕ್ಷಾಲಂಕಾರ
28.
ರೂಪಕಾಲಂಕಾರಕ್ಕೆ ಉದಾಹರಣೆ
a)
ಸೀತೆಯ ಮುಖಕಮಲ ಅರಳಿತು
b)
ಮಗುವಿನ ಮುಖಚಂದ್ರ ಹೊಳೆಯಿತು
c)
ಶಾನುಭೋಗರ ವದನಾರವಿಂದದಲ್ಲಿ ನಗು ಉಕ್ಕಿತು
d)
ಎಲ್ಲವೂ ಹೌದು
29.
ಮಾರಿಗೌತಣವಾಯಿತು ನಾಳಿನ ಭಾರತವು - ಈ ವಾಕ್ಯವು ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ ?
a)
ಉತ್ಪ್ರೇಕ್ಷಾಲಂಕಾರ
b)
ರೂಪಕಾಲಂಕಾರ
c)
ದೃಷ್ಟಾಂತಾಲಂಕಾರ
d)
ಶ್ಲೇಷಾಲಂಕಾರ
30.
ಮಾರಿಗೌತಣವಾಯಿತು ನಾಳಿನ ಭಾರತವು - ಈ ವಾಕ್ಯದಲ್ಲಿನ ಉಪಮೇಯ
a)
ನಾಳಿನ ಭಾರತ ಯುದ್ಧ
b)
ಮಾರಿ
c)
ಔತಣ
d)
ಮಾರಿಗೆ ಔತಣ
31.
ಅಳ್ಳಿರಿಯುತಿಪ್ಪ ಎಮ್ಮ ಒಡಲಬೇಗೆಯ ಬೆಂಕಿಯುರಿ ನಿನ್ನನಿರಿಯದೆ ಪೇಳು ವಿಶ್ವಾಮಿತ್ರ - ಈ ವಾಕ್ಯವು ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ ?
a)
ದೃಷ್ಟಾಂತಾಲಂಕಾರ
b)
ಉಪಮಾಲಂಕಾರ
c)
ರೂಪಕಾಲಂಕಾರ
d)
ಅರ್ಥಾಂತರನ್ಯಾಸಾಲಂಕಾರ
32.
ಎರಡು ಬೇರೆ ಬೇರೆ ವಾಕ್ಯಗಳಲ್ಲಿ ಅರ್ಥಸಾದೃಶ್ಯದಿಂದ ಬಿಂಬ ಪ್ರತಿಬಿಂಬ ಭಾವವು ತೋರಿದರೆ ಅದು
a)
ದೃಷ್ಟಾಂತಾಲಂಕಾರ
b)
ಉಪಮಾಲಂಕಾರ
c)
ರೂಪಕಾಲಂಕಾರ
d)
ಅರ್ಥಾಂತರನ್ಯಾಸಾಲಂಕಾರ
33.
ಮಾತು ಬಲ್ಲವನಿಗೆ ಜಗಳವಿಲ್ಲ ; ಊಟ ಬಲ್ಲವನಿಗೆ ರೋಗವಿಲ್ಲ - ಈ ವಾಕ್ಯದಲ್ಲಿರುವ ಅಲಂಕಾರ
a)
ರೂಪಕಾಲಂಕಾರ
b)
ಉತ್ಪ್ರೇಕ್ಷಾಲಂಕಾರ
c)
ದೃಷ್ಟಾಂತಾಲಂಕಾರ
d)
ಯಮಕಾಲಂಕಾರ
34.
ಉಪ್ಪಿಗಿಂತ ರುಚಿಯಿಲ್ಲ ; ತಾಯಿಗಿಂತ ಬಂಧುವಿಲ್ಲ - ಈ ವಾಕ್ಯವು ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ ?
a)
ಉಪಮಾಲಂಕಾರ
b)
ರೂಪಕಾಲಂಕಾರ
c)
ದೃಷ್ಟಾಂತಾಲಂಕಾರ
d)
ಉತ್ಪ್ರೇಕ್ಷಾಲಂಕಾರ
35.
ಉಪಮೇಯವಾದ ವಸ್ತುವನ್ನು ಅಥವಾ ಸನ್ನಿವೇಶವನ್ನು ಉಪಮಾನವಾದ ವಸ್ತುವನ್ನಾಗಿ ಅಥವಾ ಸನ್ನಿವೇಶವನ್ನಾಗಿ ಕಲ್ಪಿಸುವುದೇ
a)
ಉತ್ಪ್ರೇಕ್ಷಾಲಂಕಾರ
b)
ಉಪಮಾಲಂಕಾರ
c)
ರೂಪಕಾಲಂಕಾರ
d)
ಅರ್ಥಾಂತರನ್ಯಾಸಾಲಂಕಾರ
36.
"ಅಚ್ಚೋದ ಸರೋವರವು ತ್ರೈಲೋಕ್ಯಲಕ್ಷ್ಮಿಯು ತನ್ನ ಸೌಂದರ್ಯವನ್ನು ನೋಡಲು ಮಾಡಿಟ್ಟ ರನ್ನಗನ್ನಡಿಯೋ ಎಂಬಂತೆ ಶೋಭಿಸಿತು " - ಈ ವಾಕ್ಯ ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ ?
a)
ಉಪಮಾಲಂಕಾರ
b)
ರೂಪಕಾಲಂಕಾರ
c)
ದೃಷ್ಟಾಂತ ಅಲಂಕಾರ
d)
ಉತ್ಪ್ರೇಕ್ಷಾಲಂಕಾರ
37.
"ಸೀತೆಯ ಮುಖ ಕಮಲವೋ ಎಂಬಂತೆ ಅರಳಿತು" - ಈ ವಾಕ್ಯದಲ್ಲಿರುವ ಅಲಂಕಾರ
a)
ಉತ್ಪ್ರೇಕ್ಷಾಲಂಕಾರ
b)
ದೃಷ್ಟಾಂತಾಲಂಕಾರ
c)
ರೂಪಕಾಲಂಕಾರ
d)
ಶ್ಲೇಷಾಲಂಕಾರ
38.
ಒಂದು ವಿಶೇಷ ವಾಕ್ಯವನ್ನು ಸಾಮಾನ್ಯವಾಕ್ಯದಿಂದ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದ ಸಮರ್ಥನೆ ಮಾಡುವುದು
a)
ಉತ್ಪ್ರೇಕ್ಷಾಲಂಕಾರ
b)
ಉಪಮಾಲಂಕಾರ
c)
ರೂಪಕಾಲಂಕಾರ
d)
ಅರ್ಥಾಂತರನ್ಯಾಸಾಲಂಕಾರ
39.
"ಆತನ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತೀರ್ಣನಾದನು; ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೇ" - ಈ ವಾಕ್ಯ ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ ?
a)
ಯಮಕಾಲಂಕಾರ
b)
ಚಿತ್ರಕವಿತ್ವ
c)
ಅರ್ಥಾಂತರನ್ಯಾಸಾಲಂಕಾರ
d)
ಉಪಮಾಲಂಕಾರ
40.
ಇದೊಂದು ಶಬ್ಧಾಲಂಕಾರ
a)
ಅನುಪ್ರಾಸ
b)
ಉಪಮಾಲಂಕಾರ
c)
ರೂಪಕಾಲಂಕಾರ
d)
ಉತ್ಪ್ರೇಕ್ಷಾಲಂಕಾರ
41.
"ಮರನೇರಿದ ಮರ್ಕಟನಂತೆ" - ಈ ವಾಕ್ಯದಲ್ಲಿರುವ ಉಪಮಾನ
a)
ಮರ
b)
ಮರ್ಕಟ
c)
ಮರನೇರಿದ ಮರ್ಕಟ
d)
ಮನಸ್ಸು
42.
"ರಕ್ತಸಿಕ್ತವಾಗಿದ್ದ ಮಣ್ಣನ್ನು ನಿಧಿಯಂತೆ ಕಾಪಾಡಿಕೊಂಡು ಬಂದಿದ್ದನು " - ಇದು
a)
ಉಪಮಾಲಂಕಾರವಾಗಿದೆ
b)
ರೂಪಕಾಲಂಕಾರವಾಗಿದೆ
c)
ಉತ್ಪ್ರೇಕ್ಷಾಲಂಕಾರವಾಗಿದೆ
d)
ದೃಷ್ಟಾಂತಾಲಂಕಾರವಾಗಿದೆ
43.
"ವಿದ್ವಾಂಸನಾದ ಆತನು ಸಾಕ್ಷಾತ್ ಸರಸ್ವತಿ" - ಈ ವಾಕ್ಯವು ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ ?
a)
ಉಪಮಾಲಂಕಾರ
b)
ರೂಪಕಾಲಂಕಾರ
c)
ದೃಷ್ಟಾಂತ ಅಲಂಕಾರ
d)
ಉತ್ಪ್ರೇಕ್ಷಾಲಂಕಾರ
44.
ಉಪಮೆಯವಾದ ನಾಳಿನ ಭಾರತ ಯುದ್ಧವನ್ನು ಉಪಮಾನವಾದ ಮಾರಿಯ ಔತಣಕ್ಕೆ ಅಭೇದವಾಗಿ ಕಲ್ಪಿಸುವುದು
a)
ಅರ್ಥಾಂತರನ್ಯಾಸಾಲಂಕಾರ
b)
ರೂಪಕಾಲಂಕಾರ
c)
ದೃಷ್ಟಾಂತ ಅಲಂಕಾರ
d)
ಉತ್ಪ್ರೇಕ್ಷಾಲಂಕಾರ
45.
ರೂಪಕಾಲಂಕಾರಕ್ಕೆ ಉದಾಹರಣೆ
a)
ಪಾದಕಮಲ
b)
ವನಜಮುಖಿ
c)
ಪ್ರೀತಿಯ ಹಣತೆ
d)
ಇವೆಲ್ಲವೂ
46.
ಅಂತೆ, ವೊಲ್,ಆಂಗ,ಹಾಂಗ - ಇವುಗಳು
a)
ಉಪಮೇಯವಾಗುತ್ತವೆ
b)
ಉಪಮಾನವಾಗುತ್ತವೆ
c)
ಉಪಮಾವಾಚಕಗಳಾಗುತ್ತವೆ
d)
ಸಾಧಾರಣ ಧರ್ಮವಾಗುತ್ತವೆ
47.
"ವಿದ್ವಾಂಸನಾದ ಆತನು ಸಾಕ್ಷಾತ್ ಸರಸ್ವತಿಯಂತೆ ಬೆಳಗಿದನು" - ಈ ವಾಕ್ಯದಲ್ಲಿನ ಉಪಮೇಯ, ಉಪಮಾನ, ಸಾಧಾರಣ ಧರ್ಮಗಳ ತಪ್ಪಾದ ಜೋಡಿ
a)
ಉಪಮೇಯ - ವಿದ್ವಾಂಸ
b)
ಉಪಮಾನ - ಸರಸ್ವತಿ
c)
ಸಾಧಾರಣ ಧರ್ಮ - ಬೆಳಗುವುದು
d)
ಉಪಮೇಯ - ಸರಸ್ವತಿ
48.
"ಗೀಜುಗನ ಗೂಡುಗಳು ತೊಟ್ಟಿಲಿನಂತೆ ಹಾರಾಡುತ್ತಿದ್ದವು" ಈ ವಾಕ್ಯವು ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ ?
a)
ಯಮಕಾಲಂಕಾರ
b)
ಚಿತ್ರಕವಿತ್ವ
c)
ಅರ್ಥಾಂತರನ್ಯಾಸಾಲಂಕಾರ
d)
ಉಪಮಾಲಂಕಾರ
49.
ಉಪಮೇಯವಾದ ರಕ್ತಸಿಕ್ತಮಣ್ಣನ್ನು ಉಪಮಾನವಾದ ನಿಧಿಗೆ ಹೋಲಿಸಲಾಗಿದೆ " - ಆದ್ದರಿಂದ ಇದು
a)
ಉಪಮಾಲಂಕಾರ
b)
ರೂಪಕಾಲಂಕಾರ
c)
ದೃಷ್ಟಾಂತ ಅಲಂಕಾರ
d)
ಉತ್ಪ್ರೇಕ್ಷಾಲಂಕಾರ
50.
ಶ್ರೀರಾಮನು ಶಬರಿಗೆ ಹಸುಳೆಯಂತೆ ಒಲಿದನು -ಈ ವಾಕ್ಯದಲ್ಲಿರುವ ಅಲಂಕಾರ
a)
ಉಪಮಾಲಂಕಾರ
b)
ಅರ್ಥಾಂತರನ್ಯಾಸಾಲಂಕಾರ
c)
ದೃಷ್ಟಾಂತ ಅಲಂಕಾರ
d)
ಉತ್ಪ್ರೇಕ್ಷಾಲಂಕಾರ