wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭಗಳು-೧

Total questions: 50

Worksheet time: 38mins

Name
Class
Date
1.
"ಪ್ರೀತಿಯ ಹಣತೆಯ ಹಚ್ಚೋಣ" - ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ ಮತ್ತು ಪಾಠದ ಕರ್ತೃ ಯಾರು ?
a)
ಸಂಕಲ್ಪಗೀತೆ - ಜಿ.ಎಸ್. ಶಿವರುದ್ರಪ್ಪ
b)
ಹಕ್ಕಿಹಾರುತಿದೆ ನೋಡಿದಿರಾ ! - ದ.ರಾ.ಬೇಂದ್ರೆ
c)
ಯುದ್ಧ - ಸಾರಾ ಅಬೂಬಕ್ಕರ್
d)
ಶಬರಿ - ಪು.ತಿ. ನರಸಿಂಹಾಚಾರ್ಯ
2.
"ಮುಂಗಾರಿನ ಮಳೆಯಾಗೋಣ" ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ? ಮತ್ತು ಆ ಪಾಠದ ಆಕರ ಗ್ರಂಥ ಯಾವುದು ?
a)
ಹಕ್ಕಿಹಾರುತಿದೆ ನೋಡಿದಿರಾ ! - ಗರಿ
b)
ಸಂಕಲ್ಪ ಗೀತೆ - ಎದೆ ತುಂಬಿ ಹಾಡಿದೇನು
c)
ಯುದ್ಧ - ಚಪ್ಪಲಿಗಳು
d)
ಶಬರಿ - ಶಬರಿ
3.
"ಹೊಸ ಭರವಸೆಗಳ ಕಟ್ಟೋಣ" ವಾಕ್ಯಕ್ಕೆ ತಕ್ಕಂತೆ ಕೆಳಗಿನವುಗಳಲ್ಲಿ ಸರಿಯಾದ ಉತ್ತರಹೊಂದಿರುವ ಜೋಡಿಗಳು
a)
ಪಾಠ - ಸಂಕಲ್ಪ ಗೀತೆ
b)
ಕವಿ - ಜಿ.ಎಸ್.ಶಿವರುದ್ರಪ್ಪ
c)
ಆಕರಗ್ರಂಥ - ಎದೆ ತುಂಬಿ ಹಾಡಿದೆನು
d)
ಎಲ್ಲವೂ ಸರಿಯಾಗಿವೆ
4.
"ಹೊಸ ಎಚ್ಚರದೊಳು ಬದುಕೋಣ" ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ ?
a)
ಶಬರಿ
b)
ಯುದ್ಧ
c)
ಹಕ್ಕಿಹಾರುತಿದೆ ನೋಡಿದಿರಾ !
d)
ಸಂಕಲ್ಪ ಗೀತೆ
5.
ಸಮಾಜದಲ್ಲಿ ಶಾಂತಿ ಮತ್ತು ಐಕ್ಯತೆ ನೆಲೆಸಲು ಮತಗಳು ಸಾಧನೆಯ ದಾರಿದೀಪಗಳು ಎಂಬ ಎಚ್ಚರದಲ್ಲಿ ಬದುಕಬೇಕೆಂದು ಅರ್ಥಸ್ವಾರಸ್ಯವನ್ನು ಹೊಂದಿರುವ ವಾಕ್ಯ
a)
ಹೊಸ ಎಚ್ಚರಗಳು ಬದುಕೋಣ
b)
ಹೊಸ ಭರವಸೆಗಳ ಕಟ್ಟೋಣ
c)
ಪ್ರೀತಿಯ ಹಣತೆಯ ಹಚ್ಚೋಣ
d)
ನಾಳಿನ ಕನಸನ್ನು ಬಿತ್ತೋಣ
6.
ಈ ವಾಕ್ಯವನ್ನು ' ಜಿ.ಎಸ್. ಶಿವರುದ್ರಪ್ಪ'ವಿರಚಿತ 'ಎದೆ ತುಂಬಿ ಹಾಡಿದೆನು' ಎಂಬ ಕವನ ಸಂಕಲನದಿಂದ ಆಯ್ದ 'ಸಂಕಲ್ಪಗೀತೆ' ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ
a)
ಎವೆತೆರೆದಿಕ್ಕುವ ಹೊತ್ತಿನ ಒಳಗೆ
b)
ಮಂಗಳಲೋಕದ ಅಂಗಳಕೇರಿ
c)
ಮನ್ವಂತರಗಳ ಭಾಗ್ಯವ ತೆರೆಸಿ
d)
ನಾಳಿನ ಕನಸನ್ನು ಬಿತ್ತೋಣ
7.
ದ.ರಾ. ಬೇಂದ್ರೆಯವರು ಕಾಲದ ವೇಗವನ್ನು ತಿಳಿಸುವ ಸಂದರ್ಭದಲ್ಲಿ ಈ ವಾಕ್ಯವು ಬಂದಿದೆ.
a)
ಎವೆತೆರೆದಿಕ್ಕುವ ಹೊತ್ತಿನ ಒಳಗೆ
b)
ಆಡಲು ಹಾಡಲು ತಾ ಹಾರಾಡಲು
c)
ತೇಲಿಸಿ ಮುಳುಗಿಸಿ ಖಂಡ ಖಂಡಗಳ
d)
ಬಲ್ಲರು ಯಾರಾ ಹಾಕಿದ ಹೊಂಚಾ
8.
ಕಾಲದ ವ್ಯಾಪ್ತಿ ಮತ್ತು ವಿಶಾಲತೆಯನ್ನು ವಿವರಿಸುವ ಸಂದರ್ಭದಲ್ಲಿ ಈ ವಾಕ್ಯವು ಬಂದಿದೆ
a)
ಯುಗ-ಯುಗಗಳ ಹಣೆಬರಹವ ಒರಸಿ
b)
ನೀಲಮೇಘಮಂಡಲ-ಸಮ ಬಣ್ಣ
c)
ಆಚೆಗೆ ಚಾಚಿದೆ ತನ್ನಯ ಚುಂಚ
d)
ಹೊಸಗಾಲದ ಹಸುಮಕ್ಕಳ ಹರಸಿ
9.
ಕಾಲವೆಂಬ ಹಕ್ಕಿಯು ಜಗತ್ತಿನ ರಹಸ್ಯವನ್ನು ಭೇದಿಸುವಂತಿದೆ ಎಂದು ವಿಸ್ಮಯ ಪಡುತ್ತಾ ವಿಶ್ಲೇಷಿಸುವ ಸಂದರ್ಭದಲ್ಲಿ ಬೇಂದ್ರೆಯವರು ಈ ವಾಕ್ಯವನ್ನು ಹೇಳುತ್ತಾರೆ
a)
ಮಂಡಲ-ಗಿಂಡಲಗಳ ಗಡ ಮುಕ್ಕಿ
b)
ಬಲ್ಲರು ಯಾರಾ ಹಾಕಿದ ಹೊಂಚಾ !
c)
ಮಂಗಳ ಲೋಕದ ಅಂಗಳಕೇರಿ
d)
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
10.
"ರೆಕ್ಕೆಗಳೆರಡೂ ಪಕ್ಕದಲುಂಟು" ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ? ಮತ್ತು ಅದರ ಆಕರ ಗ್ರಂಥ ಯಾವುದು ?
a)
ಹಕ್ಕಿಹಾರುತಿದೆ ನೋಡಿದಿರಾ ! - ಗರಿ
b)
ಸಂಕಲ್ಪ ಗೀತೆ - ಎದೆ ತುಂಬಿ ಹಾಡಿದೇನು
c)
ಯುದ್ಧ - ಚಪ್ಪಲಿಗಳು
d)
ಶಬರಿ - ಶಬರಿ
11.
"ಸಾರ್ವಭೌಮರಾ ನೆತ್ತಿಯ ಕುಕ್ಕಿ" ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ ? ಮತ್ತು ಅದರ ಕರ್ತೃ ಯಾರು ?
a)
ಸಂಕಲ್ಪಗೀತೆ - ಜಿ.ಎಸ್. ಶಿವರುದ್ರಪ್ಪ
b)
ಹಕ್ಕಿಹಾರುತಿದೆ ನೋಡಿದಿರಾ ! - ದ.ರಾ.ಬೇಂದ್ರೆ
c)
ಯುದ್ಧ - ಸಾರಾ ಅಬೂಬಕ್ಕರ್
d)
ಶಬರಿ - ಪು.ತಿ. ನರಸಿಂಹಾಚಾರ್ಯ
12.
"ಬಲ್ಲರು ಯಾರಾ ಹಾಕಿದ ಹೊಂಚ " ಈ ವಾಕ್ಯವು ಯಾವ ಪಾಠದಲ್ಲಿ ಇದೆ ?
a)
ಶಬರಿ
b)
ಯುದ್ಧ
c)
ಹಕ್ಕಿಹಾರುತಿದೆ ನೋಡಿದಿರಾ !
d)
ಸಂಕಲ್ಪ ಗೀತೆ
13.
"ಹೊಸಗಾಲದ ಹಸುಮಕ್ಕಳ ಹರಸಿ " ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ ?
a)
ಶಬರಿ
b)
ಯುದ್ಧ
c)
ಹಕ್ಕಿಹಾರುತಿದೆ ನೋಡಿದಿರಾ !
d)
ಸಂಕಲ್ಪ ಗೀತೆ
14.
"ಮಂಗಳಲೋಕದ ಅಂಗಳಕೇರಿ" ಈ ವಾಕ್ಯದ ಆಯ್ಕೆಗೆ ಸಂಬಂಧಿಸಿದಂತೆ ಸರಿಯಾದ ಉತ್ತರಗಳ ಜೋಡಿ
a)
ಆಯ್ಕೆ ಪಾಠ - ಹಕ್ಕಿಹಾರುತಿದೆ ನೋಡಿದಿರಾ
b)
ಕವಿ- ದ.ರಾ.ಬೇಂದ್ರೆ
c)
ಆಕರಗ್ರಂಥ - ಗರಿ
d)
ಎಲ್ಲವೂ ಸರಿ ಇವೆ
15.
ಯುವಜನಾಂಗದ ಭವಿಷ್ಯಕ್ಕೆ ಶುಭವಾಗಲಿ ಎಂದು ಹರಸುವ ಕಾಲಪಕ್ಷಿಯ ಗುಣದ ಸ್ವಾರಸ್ಯವನ್ನು ತೋರಿಸುವ ವಾಕ್ಯ
a)
ಸಾರ್ವಭೌಮರಾ ನೆತ್ತಿಯ ಕುಕ್ಕಿ
b)
ಚಿಕ್ಕಿಯ ಮಲೆಯ ಸೆಕ್ಕಿಸಿಕೊಂಡು
c)
ಹೊಸಗಾಲದ ಹಸುಮಕ್ಕಳ ಹರಸಿ
d)
ಬಲ್ಲರು ಯಾರಾ ಹಾಕಿದ ಹೊಂಚಾ
16.
ಈ ವಾಕ್ಯವನ್ನು 'ದ.ರಾ.ಬೇಂದ್ರೆ' ವಿರಚಿತ 'ಗರಿ' ಕವನ ಸಂಕಲನದಿಂದ ಆಯ್ದ ' ಹಕ್ಕಿಹಾರುತಿದೆ ನೋಡಿದಿರಾ!' ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
a)
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
b)
ಹೊಸ ಎಚ್ಚರದೊಳು ಬದುಕೋಣ
c)
ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು
d)
ದಯವಿಟ್ಟು ಬಾಗಿಲು ತೆರೆಯಿರಿ ನಾನು ಗಾಯಗೊಂಡಿದ್ದಾನೆ
17.
ಮೌಲ್ಯಗಳನ್ನು ಪುನರ್ ಸ್ಥಾಪಿಸುವ ಹಾಗೂ ಶೋಷಿತರ ಬದುಕಿಗೆ ಭರವಸೆ ತುಂಬುವ ಸಂಕಲ್ಪ ಬೇಕು ಎಂಬ ಸ್ವಾರಸ್ಯವನ್ನು ತಿಳಿಸುವ ವಾಕ್ಯ
a)
ನಾಳಿನ ಕನಸನ್ನು ಬಿತ್ತೋಣ
b)
ಪ್ರೀತಿಯ ಹಣತೆಯ ಹಚ್ಚೋಣ
c)
ವಸಂತವಾಗುತ ಮುಟ್ಟೋಣ
d)
ಹೊಸ ಭರವಸೆಗಳ ಕಟ್ಟೋಣ
18.
ಅರ್ಥ ತಪ್ಪಾಗಿರುವ ವಾಕ್ಯವನ್ನು ಗುರುತಿಸಿ
a)
ಮನುಷ್ಯರ ನಡುವಿನ ಧರ್ಮ,ಜಾತಿ, ವರ್ಣಗಳಿಂದ ಆವೃತ್ತವಾದ ಅಡ್ಡ ಗೋಡೆಗಳನ್ನು ಕೆಡವಿ ಹಾಕಬೇಕು.
b)
ಮತಗಳೆಲ್ಲವೂ ಸನ್ಮಾರ್ಗಕ್ಕೆ ಕರೆದುಕೊಂಡು ಹೋಗುವ ಮಾರ್ಗಗಳಿಂದ ತಿಳಿಯಬೇಕು.
c)
ಅಜ್ಞಾನ ,ಅಂಧಕಾರಗಳನ್ನು ಓಡಿಸಲು ಪ್ರೀತಿಯ ಹಣತೆಯನ್ನು ಹಚ್ಚಬೇಕು.
d)
ಎತ್ತೆತ್ತಲೋ ಸಾಗುತ್ತಿರುವ ಬಾಳ ನೌಕೆಯನ್ನು ನಿರಾಸಕ್ತಿಯಿಂದ ನಡೆಸಬೇಕು.
19.
"ಪ್ರತಿಯೊಬ್ಬರೂ ಧನಾತ್ಮಕ ಭಾವನೆಯನ್ನು, ದೃಢ ನಿರ್ಧಾರಗಳನ್ನು ಹೊಂದಿರಬೇಕು" ಎಂಬ ಮೌಲ್ಯವನ್ನು ತಿಳಿಸುವ ಪಾಠ
a)
ಸಂಕಲ್ಪ ಗೀತೆ
b)
ಯುದ್ಧ
c)
ಹಕ್ಕಿಹಾರುತಿದೆ ನೋಡಿದಿರಾ
d)
ಶಬರಿ
20.
ಕಾಲದ ಹೊಡೆತಕ್ಕೆ ಮಾನವ ಪ್ರಪಂಚದಲ್ಲಿ ಆಗುವ ವೈಚಿತ್ರ್ಯದ ವಿಸ್ಮಯವನ್ನು ಅಭಿವ್ಯಕ್ತಪಡಿಸುವ ಅರ್ಥಸ್ವಾರಸ್ಯ ಮೌಲ್ಯವನ್ನು ಹೊಂದಿರುವ ಪಾಠ
a)
ಸಂಕಲ್ಪ ಗೀತೆ
b)
ಯುದ್ಧ
c)
ಹಕ್ಕಿಹಾರುತಿದೆ ನೋಡಿದಿರಾ
d)
ಶಬರಿ
21.
ಈ ವಾಕ್ಯವನ್ನು ' ಜಿ.ಎಸ್. ಶಿವರುದ್ರಪ್ಪ'ವಿರಚಿತ 'ಎದೆ ತುಂಬಿ ಹಾಡಿದೆನು' ಎಂಬ ಕವನ ಸಂಕಲನದಿಂದ ಆಯ್ದ 'ಸಂಕಲ್ಪಗೀತೆ' ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ
a)
ಎವೆತೆರೆದಿಕ್ಕುವ ಹೊತ್ತಿನ ಒಳಗೆ
b)
ಮಂಗಳಲೋಕದ ಅಂಗಳಕೇರಿ
c)
ಮುಂಗಾರಿನ ಮಳೆಯಾಗೋಣ
d)
ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ !
22.
ಈ ವಾಕ್ಯವನ್ನು 'ದ.ರಾ.ಬೇಂದ್ರೆ' ವಿರಚಿತ 'ಗರಿ' ಕವನ ಸಂಕಲನದಿಂದ ಆಯ್ದ ' ಹಕ್ಕಿಹಾರುತಿದೆ ನೋಡಿದಿರಾ!' ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
a)
ಮನ್ವಂತರಗಳ ಭಾಗ್ಯವ ತೆರೆಸಿ
b)
ಎವೆತೆರೆದಿಕ್ಕುವ ಹೊತ್ತಿನ ಒಳಗೆ
c)
ಮಂಗಳಲೋಕದ ಅಂಗಳಕೇರಿ
d)
ಈ ಎಲ್ಲಾ ವಾಕ್ಯಗಳನ್ನು
23.
ಈ ವಾಕ್ಯವನ್ನು 'ಸಾರಾ ಅಬೂಬಕ್ಕರ್' ಅವರು ಬರೆದ 'ಚಪ್ಪಲಿಗಳು' ಕವನಸಂಕಲನದಿಂದ ಆಯ್ದ 'ಯುದ್ಧ' ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ
a)
ದಯವಿಟ್ಟು ಬಾಗಿಲು ತೆರೆಯಿರಿ ನಾನು ಗಾಯಗೊಂಡಿದ್ದೇನೆ
b)
ತಾಯಿ ದಾರಿಗರಿಗೆ ಬಿಡಿಲ್ಲಿ ದೊರೆಯುವುದೇ ?
c)
ಸಾರ್ವಭೌಮರಾ ನೆತ್ತಿಯ ಕುಕ್ಕಿ
d)
ಪ್ರೀತಿಯ ಹಣತೆಯ ಹಚ್ಚೋಣ
24.
ತಪ್ಪಾದ ಉತ್ತರವನ್ನು ಗುರುತಿಸಿ
a)
ನಾಚುತಿಹೆನೀ ಪೂಜ್ಯೆಯೀ ನಲುಮೆಯಿಂದ - ಶಬರಿ
b)
ನಾನಾಕೆಯನ್ನು ಪರೀಕ್ಷಿಸುವೆ ನೀವು ಬಿಸಿನೀರು ಸಿದ್ಧಪಡಿಸಿ - ಯುದ್ಧ
c)
ಬಲ್ಲರು ಯಾರಾ ಹಾಕಿದ ಹೊಂಚಾ - ಹಕ್ಕಿಹಾರುತಿದೆ ನೋಡಿದಿರಾ !
d)
ಯಾರೀತ ತಮ್ಮವನೇ ಅಥವಾ ವೈರಿ ದೇಶದವನೇ - ಶಬರಿ
25.
ಪಾಠ ಮತ್ತು ಆಕರ ಗ್ರಂಥಗಳ ಸರಿಯಾದ ಹೊಂದಾಣಿಕೆ
a)
ಹಕ್ಕಿಹಾರುತಿದೆ ನೋಡಿದಿರಾ - ಗರಿ
b)
ಸಂಕಲ್ಪ ಗೀತೆ - ಎದೆ ತುಂಬಿ ಹಾಡಿದೇನು
c)
ಯುದ್ಧ - ಚಪ್ಪಲಿಗಳು
d)
ಈ ಎಲ್ಲವೂ ಸರಿಯಾಗಿವೆ
26.
ಈ ವಾಕ್ಯವನ್ನು ಪು.ತಿ. 'ನರಸಿಂಹಾಚಾರ್ಯ' ವಿರಚಿತ 'ಶಬರಿ' ಎಂಬ ಕೃತಿದಿಂದ ಆಯ್ದ 'ಶಬರಿ' ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ
a)
ನಾಚುತಿಹೆನೀ ಪೂಜ್ಯೆಯೀ ನಲುಮೆಯಿಂದ - ಶಬರಿ
b)
ನಾನಾಕೆಯನ್ನು ಪರೀಕ್ಷಿಸುವೆ ನೀವು ಬಿಸಿನೀರು ಸಿದ್ಧಪಡಿಸಿ - ಯುದ್ಧ
c)
ಮುಂಗಾರಿನ ಮಳೆಯಾಗೋಣ
d)
ಸಾರ್ವಭೌಮರಾ ನೆತ್ತಿಯ ಕುಕ್ಕಿ
27.
"ಪೂಜ್ಯಳಾದ ಶಬರಿ ತೋರಿಸುವ ಪ್ರೀತಿಯಿಂದ ಎನಗೆ ನಾಚಿಕೆಯಾಗುತ್ತಿದೆ " ಎಂದು ಹೇಳುವ ಸಂದರ್ಭದ ವಾಕ್ಯ
a)
ಆವುದೀ ಮರುಳು ? ನಮ್ಮೆಡೆಗೆ ಬರುತಿಹುದು.
b)
ನಾಚುತಿಹೆನೀ ಪೂಜ್ಯೆಯೀ ನಲುಮೆಯಿಂದ - ಶಬರಿ
c)
ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆ ಇವೆಯಲ್ಲ
d)
ನಿತ್ಯ ನೋಡುತಲಿಹೆನು ಬೆರಗು ತಣಿಯದಿದೆ
28.
"ಎನ್ನಹಂಕೃತಿಗೆಯೇ ಮನ್ನಣೆಯ ಕೊಟ್ಟೆ" - ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ ಮತ್ತು ಅದರ ಲೇಖಕರು ಯಾರು ?
a)
ಸಂಕಲ್ಪಗೀತೆ - ಜಿ.ಎಸ್. ಶಿವರುದ್ರಪ್ಪ
b)
ಹಕ್ಕಿಹಾರುತಿದೆ ನೋಡಿದಿರಾ ! - ದ.ರಾ.ಬೇಂದ್ರೆ
c)
ಯುದ್ಧ - ಸಾರಾ ಅಬೂಬಕ್ಕರ್
d)
ಶಬರಿ - ಪು.ತಿ. ನರಸಿಂಹಾಚಾರ್ಯ
29.
"ಎನ್ನ ಬಗೆಗನಿವಾರ್ಯವೀ ಶೋಕದುಲ್ಕೆ" -ಈ ವಾಕ್ಯವನ್ನು ಯಾರು ಯಾಕೆ ಹೇಳಿದರು ?
a)
ರಾಮನು ಸೀತೆಯನ್ನು ನೆನೆದು ಈ ಮಾತನ್ನು ಹೇಳಿದನು
b)
ಲಕ್ಷ್ಮಣನು ರಾಮನನ್ನು ನೆನೆದು ಈ ಮಾತನ್ನು ಹೇಳಿದನು
c)
ರಾಮನು ಶಬರಿಯನ್ನು ನೆನೆದು ಈ ಮಾತನ್ನು ಹೇಳಿದನು
d)
ಶಬರಿಯು ಗುರುಗಳನ್ನು ನೆನೆದು ಈ ಮಾತನ್ನು ಹೇಳಿದಳು
30.
"ಆದೊಡೆಯು ನೆನೆಯುತಿಹಳೆನಿತರ್ತಿಯಿಂದ" - ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ ಮತ್ತು ಯಾರು ಯಾರನ್ನು ಕುರಿತು ಹೇಳಿದರು ?
a)
ಯುದ್ಧ ಪಾಠದಿಂದ ಆರಿಸಲಾಗಿದೆ.ರಾಹಿಲ್ ಮುದುಕಿಯನ್ನು ಕುರಿತು ಹೇಳಿದನು.
b)
ಶಬರಿ ಪಾಠದಿಂದ ಆರಿಸಲಾಗಿದೆ. ರಾಮ ಶಬರಿಯನ್ನು ಕುರಿತು ಹೇಳಿದನು.
c)
ಶಬರಿ ಪಾಠದಿಂದ ಆರಿಸಲಾಗಿದೆ. ರಾಮ ಸೀತೆಯನ್ನು ಕುರಿತು ಹೇಳಿದನು.
d)
ಯುದ್ಧ ಪಾಠದಿಂದ ಆರಿಸಲಾಗಿದೆ. ಮುದುಕಿ ಸೊಸೆಯನ್ನು ಕುರಿತು ಹೇಳಿದಳು.
31.
"ದಯವಿಟ್ಟು ಬಾಗಿಲು ತೆರೆಯಿರಿ ನಾನು ಗಾಯಗೊಂಡಿದ್ದಾನೆ " -ಈ ವಾಕ್ಯವನ್ನು ಯಾವ ಪಾಠಸಲಾಗಿದೆ ? ಮತ್ತು ಯಾರು ಯಾರಿಗೆ ಹೇಳಿದರು ?
a)
ಯುದ್ಧ ಪಾಠದಿಂದ ಆರಿಸಲಾಗಿದೆ. ರಾಹಿಲ ಮುದುಕಿಗೆ ಹೇಳಿದನು
b)
ಶಬರಿ ಪಾಠದಿಂದ ಆರಿಸಲಾಗಿದೆ. ರಾಮ ಶಬರಿಗೆ ಹೇಳಿದನು
c)
ಯುದ್ಧ ಪಾಠದಿಂದ ಆರಿಸಲಾಗಿದೆ. ಸೈನಿಕರು ಮುದುಕಿಗೆ ಹೇಳಿದರು.
d)
ಶಬರಿ ಪಾಠದಿಂದ ಆರಿಸಲಾಗಿದೆ. ಶಬರಿ ಗುರುಗಳಿಗೆ ಹೇಳಿದಳು
32.
"ನಾನಾಕೆಯನ್ನು ಪರೀಕ್ಷಿಸುವೆ ನೀವು ಬಿಸಿ ನೀರು ಸಿದ್ಧಪಡಿಸಿ" - ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ ಮತ್ತು ಅದರ ಲೇಖಕರು, ಆಕಾರಗ್ರಂಥ ಯಾವುದು ?
a)
ಶಬರಿ - ಶಬರಿ -ಪು.ತಿ ನರಸಿಂಹಾಚಾರ್ಯ
b)
ಯುದ್ಧ -ಚಪ್ಪಲಿಗಳು -ಸಾರಾ ಅಬೂಬಕ್ಕರ್
c)
ಸಂಕಲ್ಪಗೀತೆ - ಎದೆತುಂಬಿ ಹಾಡಿದೆನು - ಜಿ.ಎಸ್. ಶಿವರುದ್ರಪ್ಪ
d)
ಹಕ್ಕಿಹಾರುತಿದೆ ನೋಡಿದಿರಾ - ಗರಿ - ದ.ರಾ. ಬೇಂದ್ರೆ
33.
"ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆ ಇವೆಯಲ್ಲಾ " ಎಂದು ಮುದುಕಿ ಹೇಳಿದ ಈ ಮಾತಿನಲ್ಲಿರುವ ಅರ್ಥ ಸ್ವಾರಸ್ಯವೇನು ?
a)
ತಾಯಿ ಮಮತೆಯನ್ನು ತೋರುವ ಅರ್ಥದೃಷ್ಟಿ
b)
ರೋಷದ ದೃಷ್ಟಿ
c)
ಅಸಹಾಯಕತೆಯ ದೃಷ್ಟಿ
d)
ಕೋಪದ ದೃಷ್ಟಿ
34.
"ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ; ಅದನ್ನೂ ನೋಡಿ" ಎಂದು ಯಾರು ಯಾರಿಗೆ ಹೇಳಿದರು ?
a)
ಮುದುಕಿ - ರಾಹಿಲನಿಗೆ
b)
ಶಬರಿ - ರಾಮನಿಗೆ
c)
ಮುದುಕಿ - ಸೈನಿಕರಿಗೆ
d)
ಮುದುಕಿ - ಪೈಲೆಟ್ ಗೆ
35.
"ಆವುದೀ ಮರುಳು ? ನಮ್ಮೆಡೆಗೆ ಬರುತಿಹುದು " - ಈ ವಾಕ್ಯವನ್ನು ಕುರಿತ ಸರಿಯಾದ ಉತ್ತರಗಳು
a)
ಶಬರಿ' ಗೀತ ನಾಟಕದಿಂದ ಆಯ್ದ 'ಶಬರಿ' ಪಾಠದಿಂದ ಆರಿಸಲಾಗಿದೆ.
b)
ಈ ವಾಕ್ಯವನ್ನು ರಾಮ ಲಕ್ಷ್ಮಣನಿಗೆ ಹೇಳಿದನು.
c)
ಈ ವಾಕ್ಯವನ್ನು ಶಬರಿ ಕುರಿತು ಹೇಳಲಾಗಿದೆ.
d)
ಇವೆಲ್ಲವೂ ಸರಿಯಾಗಿವೆ
36.
"ತಾಯಿ ದಾರಿಗರಿಗೆ ಬಿಡಿಲ್ಲಿ ದೊರೆಯುವುದೇ ?" ಈ ವಾಕ್ಯವನ್ನು ಕುರಿತ ಸರಿಯಾದ ಉತ್ತರಗಳು
a)
ರಾಮ ಶಬರಿಗೆ ಮೊದಲ ಸಲ ಮಾತನಾಡಿಸುವ ಸಂದರ್ಭವಾಗಿದೆ.
b)
ಶಬರಿ' ಗೀತ ನಾಟಕದಿಂದ ಆಯ್ದ 'ಶಬರಿ' ಪಾಠದಿಂದ ಆರಿಸಲಾಗಿದೆ.
c)
ರಾಮಲಕ್ಷ್ಮಣರು ಶಬರಿಯ ಆಶ್ರಮವನ್ನು ಪ್ರವೇಶಿಸುವ ಸಂದರ್ಭದಲ್ಲಿ ರಾಮ ಶಬರಿಗೆ ಹೇಳುತ್ತಾನೆ.
d)
ಇವೆಲ್ಲವೂ ಸರಿಯಾಗಿವೆ
37.
"ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ " ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು ?
a)
ರಾಮ - ಶಬರಿಗೆ
b)
ಶಬರಿ - ರಾಮನಿಗೆ
c)
ಮುದುಕಿ - ರಾಹುಲನಿಗೆ
d)
ಲಕ್ಷ್ಮಣ - ರಾಮನಿಗೆ
38.
"ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು" - ಈ ವಾಕ್ಯವನ್ನು
a)
ರಾಮ ಶಬರಿಯನ್ನು ಕುರಿತು ಹೇಳದ್ದಾಗಿದೆ.
b)
ಶಬರಿ ಪಾಠದಿಂದ ಆರಿಸಲಾಗಿದೆ.
c)
ಈ ವಾಕ್ಯದಲ್ಲಿ ಶಬರಿಯ ವ್ಯಕ್ತಿತ್ವ ಮತ್ತು ಅವಳ ಅಂತ:ಸತ್ವಗುಣ ತೋರುವುದು.
d)
ಈ ಎಲ್ಲವೂ ಸರಿಯಾಗಿವೆ.
39.
"ನನ್ನೆದೆಯ ಬಿಡದಲಾ ಈ ಜಗವ ಸುಡದಲಾ !" - ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ ?
a)
ಯುದ್ಧ
b)
ಹಕ್ಕಿಹಾರುತಿದೆ ನೋಡಿದಿರಾ
c)
ಶಬರಿ
d)
ಸಂಕಲ್ಪ ಗೀತೆ
40.
"ನಿಮ್ಮ ನಿಂತಾ ದೈವ ಮರುಳು ಮಾಡಿತ್ತು " - ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು ?
a)
ರಾಮ - ಶಬರಿಗೆ
b)
ರಾಮ - ಲಕ್ಷ್ಮಣನಿಗೆ
c)
ಮುದುಕಿ - ರಾಹುಲನಿಗೆ
d)
ಲಕ್ಷ್ಮಣ - ರಾಮನಿಗೆ
41.
" ಬರಿಗಾಳಿಗಾರಿರುವ ನಿನ್ನೆ ಚೆಂದಳಿರೆ " - ಈ ವಾಕ್ಯವನ್ನು
a)
ಶಬರಿ - ತಳಿರುಗಳನ್ನು ಕುರಿತು ಹೇಳಿದ್ದು
b)
ಶಬರಿ - ಸೀತೆಯನ್ನು ಕುರಿತು ಹೇಳಿದ್ದು
c)
ಹಕ್ಕಿ ಕಾಲವನ್ನು ಕುರಿತು ಹೇಳಿದ್ದು
d)
ರಾಮ ಸೀತೆಯನ್ನು ಕುರಿತು ಹೇಳಿದ್ದು
42.
"ಇದರಷ್ಟು ರುಚಿಯ ಹಣ್ಣೆ ಇಲ್ಲ ಜಗದೊಳೆಂದು " - ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು ?
a)
ಶಬರಿ - ರಾಮನಿಗೆ
b)
ರಾಮ - ಶಬರಿಗೆ
c)
ರಾಹಿಲ - ಮುದುಕಿಗೆ
d)
ಸೀತೆ - ರಾಮನಿಗೆ
43.
"ಕಣ್ಣ ನೀರಿದೇಕೆ ತಾಯೆ, ತುಸುವೂಣೆಯವಿಲ್ಲ" - ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ? ಮತ್ತು ಯಾರು ಯಾರಿಗೆ ಹೇಳಿದರು ?
a)
ಶಬರಿ ಪಾಠದಿಂದ ಆರಿಸಲಾಗಿದೆ. ಲಕ್ಷ್ಮಣ ಶಬರಿಗೆ ಹೇಳಿದನು.
b)
ಶಬರಿ ಪಾಠದಿಂದ ಆರಿಸಲಾಗಿದೆ. ರಾಮ ಶಬರಿಗೆ ಹೇಳಿದನು.
c)
ಯುದ್ಧ ಪಾಠದಿಂದ ಆರಿಸಲಾಗಿದೆ. ರಾಹಿಲ ಮುದುಕಿಗೆ ಹೇಳಿದನು
d)
ಯುದ್ಧ ಪಾಠದಿಂದ ಆರಿಸಲಾಗಿದೆ. ರಾಹಿಲ ಮುದುಕಿಯ ಸೊಸೆಗೆ ಹೇಳಿದನು.
44.
"ಇಷ್ಟು ವರ್ಷಗಳಿಂದಲೂ ಹಂಬಲಿಸಿ ಹುಟ್ಟಿದ ಮಗು ಕೊನೆಗೂ ದಕ್ಕಲಿಲ್ಲವಲ್ಲ ? " - ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ ?
a)
ಹಕ್ಕಿಹಾರುತಿದೆ ನೋಡಿದಿರಾ
b)
ಸಂಕಲ್ಪ ಗೀತೆ
c)
ಯುದ್ಧ
d)
ಶಬರಿ
45.
ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ ತಾನೇ "-ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ? ಅದರ ಆಕರ ಗ್ರಂಥ ಮತ್ತು ಪಾಠದ ಲೇಖಕರು ಯಾರು ?
a)
ಶಬರಿ - ಶಬರಿ -ಪು.ತಿ ನರಸಿಂಹಾಚಾರ್ಯ
b)
ಯುದ್ಧ -ಚಪ್ಪಲಿಗಳು -ಸಾರಾ ಅಬೂಬಕ್ಕರ್
c)
ಸಂಕಲ್ಪಗೀತೆ - ಎದೆತುಂಬಿ ಹಾಡಿದೆನು - ಜಿ.ಎಸ್. ಶಿವರುದ್ರಪ್ಪ
d)
ಹಕ್ಕಿಹಾರುತಿದೆ ನೋಡಿದಿರಾ - ಗರಿ - ದ.ರಾ. ಬೇಂದ್ರೆ
46.
"ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು" -ಈ ವಾಕ್ಯವು ಯಾವ ಪಾಠದಲ್ಲಿದೆ ಮತ್ತು ಯಾರು ಯಾರಿಗೆ ಹೇಳಿದರು ?
a)
ಶಬರಿ ಪಾಠದಲ್ಲಿದೆ. ರಾಮ ಶಬರಿ ಹೇಳಿದನು.
b)
ಶಬರಿ ಪಾಠದಲ್ಲಿದೆ. ರಾಮ ಲಕ್ಷ್ಮಣನಿಗೆ ಹೇಳಿದ್ದಾನೆ
c)
ಶಬರಿ ಪಾಠದಲ್ಲಿದೆ. ದನು ರಾಮನಿಗೆ ಹೇಳಿದ್ದೇನೆ
d)
ಯುದ್ಧ ಪಾಠದಲ್ಲಿದೆ. ರಾಹಿಲ ಮುದುಕಿಗೆ ಹೇಳಿದನು.
47.
" ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆ ಬಂದಿದ್ದಾರೆಯೇ "- ಈ ವಾಕ್ಯವು ಯಾವ ಪಾಠದಲ್ಲಿ ಮತ್ತು ಯಾರು ಯಾರಿಗೆ ಹೇಳಿದರು ?
a)
ಶಬರಿ ಪಾಠದಲ್ಲಿದೆ. ರಾಮನು ದನು ಮಹರ್ಷಿಗೆ ಹೇಳಿದನು.
b)
ಯುದ್ಧ ಪಾಠದಲ್ಲಿ ಇದೆ. ಸೈನಿಕರು ಮುದುಕಿಗೆ ಹೇಳಿದರು.
c)
ಯುದ್ಧ ಪಾಠದಲ್ಲಿದೆ. ರಾಹಿಲ ಮುದುಕಿಗೆ ಹೇಳಿದನು.
d)
ಯುದ್ಧ ಪಾಠದಲ್ಲಿದೆ. ಮುದುಕಿ ರಾಹಿಲನಿಗೆ ಹೇಳಿದಳು.
48.
"ಅಳಲನ್ನೆಲ್ಲ ಮರೆಸಿ ಶಾಂತಿಯೊಂದ ತೋರುವೀ ಬನ " - ಈ ವಾಕ್ಯವನ್ನು ಯಾವ ಪಾದದಿಂದ ಆರಿಸಲಾಗಿದೆ ?
a)
ಹಕ್ಕಿಹಾರುತಿದೆ ನೋಡಿದಿರಾ
b)
ಸಂಕಲ್ಪ ಗೀತೆ
c)
ಯುದ್ಧ
d)
ಶಬರಿ
49.
"ಪುಣ್ಯ ಲೋಕ ದೊರೆಯಲೆಂದು ಹರಕೆಯಿಡೆನಗೆ "- ಈ ವಾಕ್ಯಕ್ಕೆ ಸಂಬಂಧಿಸಿದ ಸರಿಯಾದ ಉತ್ತರಗಳು
a)
ಪು.ತಿ.ನ ವಿರಚಿತ ಶಬರಿ ಎಂಬ ಪಾಠದಿಂದ ಆರಿಸಲಾಗಿದೆ.
b)
ಶಬರಿ - ರಾಮನಿಗೆ ಕೇಳಿದಳು.
c)
ಶಬರಿ ಮುಕ್ತಿಯನ್ನು ಬಯಸಿ, ಆಶೀರ್ವದಿಸಬೇಕೆಂದು ಕೇಳುವುದು ಸ್ವಾರಸ್ಯ ಪೂರ್ಣವಾಗಿದೆ.
d)
ಈ ಎಲ್ಲವೂ ಸರಿಯಾಗಿವೆ.
50.
"ನೀನೊಲಿದೊಪ್ಪಲು ದಿವ ತಪ್ಪದಲಾ" - ಈ ವಾಕ್ಯಕ್ಕೆ ಸಂಬಂಧಿಸಿದ ತಪ್ಪಾದ ಉತ್ತರ
a)
ಪು.ತಿ.ನ ವಿರಚಿತ ಶಬರಿ ಎಂಬ ಪಾಠದಿಂದ ಆರಿಸಲಾಗಿದೆ.
b)
ಶಬರಿ - ರಾಮನಿಗೆ ಹೇಳಿದಳು.
c)
ರಾಮ ಒಪ್ಪಿದರೆ ಸ್ವರ್ಗ ತಪ್ಪುವುದಿಲ್ಲ ಎನ್ನುವುದು ಸ್ವಾರಸ್ಯಕರವಾಗಿ ಬಂದಿದೆ.
d)
ರಾಮ ಒಪ್ಪಿದರೆ ಸ್ವರ್ಗ ತಪ್ಪುತ್ತದೆ ಎಂದು ಹೇಳುವುದು ಸ್ವಾರಸ್ಯಕರವಾಗಿ ಬಂದಿದೆ.