NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-೩
Total questions: 50
Worksheet time: 25mins
Name
Class
Date
1.
"ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ" ಮಾತಿನ ಸ್ವಾರಸ್ಯ.
a)
ಚಾವಣಿ ಇಲ್ಲದ ಗುಡಿಯಲ್ಲಿ ಇರುವುದು
b)
ಎಲ್ಲರಿಗೂ ಮನೆ ಬೇಕು ಎನ್ನುವುದು
c)
ಗ್ರಾಮದೇವತೆಯು ಕಾರಣ್ಯ ಮತ್ತು ಸಮತೆಯ ದ್ಯೋತಕವಾಗಿರುವುದು
d)
ಗ್ರಾಮದೇವತೆಗೆ ಗುಡಿ ಕಟ್ಟದೇ ಇರುವುದು
2.
ಈ ವಾಕ್ಯವನ್ನು ಕುವೆಂಪು ವಿರಚಿತ 'ಪಕ್ಷಿಕಾಶಿ' ಕವನ ಸಂಕಲನದಿಂದ ಆಯ್ದ 'ಹಸುರು' ಪದ್ಯದಿಂದ ಆರಿಸಿಕೊಳ್ಳಲಾಗಿದೆ.
a)
ಬೇರೆ ಬಣ್ಣವನೆ ಕಾಣೆ'
b)
ನಾನು ಮುಖ ಮೇಲಾಗಿ ಬಿದ್ದಿದ್ದೆನೆ?
c)
'"ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ"
d)
'ಸಮರದೊಳಗಜ್ಜ ಪೇಳಿಮಾವುದು ಕಜ್ಜಂ'
3.
"ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ" ಎಂಬ ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ?
a)
ಹಸುರು
b)
ಎದೆಗೆ ಬಿದ್ದ ಅಕ್ಷರ
c)
ಛಲಮನೆ ಮೆರೆವೆಂ
d)
ವ್ಯಾಘ್ರಗೀತೆ
4.
ದೇವನೂರು ಮಹಾದೇವ ಅವರು ಯಾವ ಸಂದರ್ಭದಲ್ಲಿ 'ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ' ಎಂಬ ಮಾತನ್ನು ಉಲ್ಲೇಖಿಸುತ್ತಾರೆ
a)
ನನ್ನ ದೇವರು ಬುದ್ಧ ಎಂದು ಹೇಳುವ ಸಂದರ್ಭದಲ್ಲಿ
b)
ಮನೆಮಂಚಮ್ಮನ ಕತೆ ಹೇಳುವ ಸಂದರ್ಭದಲ್ಲಿ
c)
ವಚನಕಾರರ ಬಗ್ಗೆ ಹೇಳುವ ಸಂದರ್ಭದಲ್ಲಿ
d)
ಅಶೋಕ ಪೈ ಅವರು ಹೇಳಿದ ಸಂಶೋಧನಾ ಸತ್ಯದ ಬಗ್ಗೆ ಹೇಳುವ ಸಂದರ್ಭದಲ್ಲಿ
5.
"ಈ ಸಮಷ್ಟಿ ಮನಸ್ಸಿನಲ್ಲಿ ಎಲ್ಲರೂ ಇರುತ್ತಾರೆ" ಈ ಮಾತಿನ ಸಂದರ್ಭ
a)
ಕೊಲೆ,ಸುಲಿಗೆ ದ್ವೆಷ ಅಸೂಯೆಗಳಿಂದ ಕ್ಷೋಭೆಗೊಂಡು ನರಳುತ್ತಿರುವ ಜಗತ್ತು ಘಾಸಿಗೊಳಿಸುವುದು ಸಮಷ್ಟಿ ಮನಸ್ಸನ್ನು ಎಂದು ಹೇಳುವ ಸಂದರ್ಭದಲ್ಲಿ
b)
ವಚನಕಾರರು ತಮ್ಮ ಕಷ್ಟ ಸುಖಾನ,ದುಃಖ ದುಮ್ಮಾನಾನ ಏಳುಬೀಳುಗಳನ್ನು ಪ್ರಜ್ಞೆಯ ಮುಂದೆ ಹೇಳಿಕೊಳ್ಳಿತ್ತಾ ಒದ್ದಾಡುತ್ತಿದ್ದರು ಎಂದು ಹೇಳುವ ಸಂದರ್ಭದಲ್ಲಿ
c)
ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ ಎಂದು ಹೇಳುವ ಸಂದರ್ಭದಲ್ಲಿ
d)
ಯಾವುದೂ ಅಲ್ಲ
6.
ವ್ಯಾಘ್ರಗೀತೆ ಗದ್ಯವನ್ನು ಎ.ಎನ್.ಮೂರ್ತಿರಾಯರ ಯಾವ ಕೃತಿಯಿಂದ ಆರಿಸಿಕೊಳ್ಳಲಾಗಿದೆ
a)
ಹಗಲುಗನಸುಗಳು
b)
ಸಮಗ್ರ ಲಲಿತ ಪ್ರಬಂಧಗಳು
c)
ಅಲೆಯುವ ಮನ
d)
ಮಿನುಗು-ಮಿಂಚು
7.
"ಸ್ವಧರ್ಮೇ ನಿಧನಂ ಶ್ರೇಯಃ" ಮಾತಿನ ಸ್ವಾರಸ್ಯ
a)
ಶಾನುಭೋಗರನ್ನು ಕೊಲ್ಲಲಾಗುತ್ತಿಲ್ಲವಲ್ಲ ಎಂದು ಕೋಪಿಸಿಕೊಳ್ಳುವುದು
b)
ಶಾನುಭೋಗರ ವಿಷಯದಲ್ಲಿ ಮೆಚ್ಚಿಕೆಯನ್ನು ಸೂಚಿಸುವುದು
c)
ಶಾನುಭೋಗರ ದುಂಡುದುಂಡಾದ ಶರೀರ ನೋಡಿ ಆನಂದ ಪಡುವುದು
d)
ಸ್ವಧರ್ಮದಲ್ಲಿ ಜನಿಸಿದ ಹುಲಿ ಹಿಂದಿನಿಂದ ಆಕ್ರಮಣ ಮಾಡದೇ ಭಗವದ್ಗೀತೆಯ ಮಾತನ್ನು ನೆನೆಯುವುದು
8.
"ದೇವರೇ ಮರ ಹತ್ತುವಷ್ಟು ಅವಕಾಶವನ್ನು ಕರುಣಿಸು" ಈ ಮಾತನ್ನು ಹೇಳಿರುವುದು
a)
ದುಷ್ಟಬುದ್ಧಿ
b)
ಧರ್ಮಬುದ್ಧಿ
c)
ಶಾನುಭೋಗರು
d)
ಹುಲಿ
9.
"ನಾನು ಮುಖ ಮೇಲಾಗಿ ಬಿದ್ದಿದ್ದೆನೆ?" ಈ ಮಾತನ್ನು ಹೇಳಿದ ಸಂದರ್ಭ
a)
ಶಾನುಭೋಗರನ್ನು ಹುಲಿ ಏಕೆ ಎಳೆದುಕೊಂಡು ಹೋಗಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು
b)
ಶಾನುಭೋಗರು ಜೀವ ಸಹಿತ ಮನೆ ಸೇರಿಕೊಂಡು ಊಟ ಮಾಡಲು ಕುಳಿತಾಗ
c)
ಶಾನುಭೋಗರು ಖಿರ್ದಿ ಪುಸ್ತಕದಿಂದ ಹೊಡೆದಾಗ
d)
ಹುಲಿ ಶಾನುಭೋಗರ ದುಂಡುದುಂಡಾದ ಶರೀರ ನೋಡಿ ಹಿಂದೆ ಬಂದಾಗ
10.
ಶಾನುಭೋಗರು ಮನೆಗೆ ಬಂದು ಊಟ ಮಾಡುವಾಗ ಹುಲಿಯ ಬಗ್ಗೆ ಯೋಚಿಸುವ ಸಂದರ್ಭ
a)
ಹುಲಿ ಈಗ ಏನು ಮಾಡುತ್ತಿರಬಹುದು?
b)
ಹುಲಿ ಈಗ ಎಷ್ಟು ಹಸಿದಿರಬೇಕು
c)
ಹುಲಿ ಈಗ ಏನನ್ನು ತಿನ್ನುತ್ತಿರಬಹುದು?
d)
ಯಾವುದೂ ಅಲ್ಲ
11.
ಹಸುರು ಪದ್ಯವನ್ನು ಕುವೆಂಪುರವರ ಯಾವ ಸಂಕಲನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ?
a)
ಕೊಳಲು
b)
ಪಕ್ಷಿಕಾಶಿ
c)
ಪ್ರೇಮಕಾಶ್ಮೀರ
d)
ಪಾಂಚಜನ್ಯ
12.
ಬೇರೆ ಬಣ್ಣವನೆ ಕಾಣೆ' ಎಂದು ಕವಿ ಕುವೆಂಪು ಅವರು ಹೇಳಿದ ಸಂದರ್ಭ
a)
ಕಾಡಿನ ಅಂಚಿನಲ್ಲಿ ಫಲಭರಿತ ಅಡಕೆಯ ತೋಟ
b)
ಹುಲ್ಲಿನ ಮಕಮಲ್ಲಿನ ಹೊಸ ಪಚ್ಚೆಯ ಜಮಖಾನೆಯ ನೋಟ
c)
ಅಶ್ವಿಜ ಮಾಸದ ಬತ್ತದ ಗದ್ದೆಯ ಗಿಳಿ ಹಸುರು ಬಣ್ಣದ ನೋಟ
d)
ಮೇಲಿನ ಎಲ್ಲವೂ
13.
"ಹಸುರತ್ತಲ್,ಹಸುರಿತ್ತಲ್,ಹಸುರೆತ್ತಲ್" ಎಂದು ಕವಿ ಹೇಳಿದ ಸಂದರ್ಭ
a)
ಅತ್ತ ಇತ್ತ ಎಲ್ಲ ಕಡೆಯೂ ಹಸುರೇ ಆವರಿಸಿದ ಕವಿ ದೃಷ್ಟಿ
b)
ಕಡಲಿನಲಿ ಎಲ್ಲೆಲ್ಲೂ ಹಸುರೇ ಹಸುರು
c)
ಕವಿಯಾತ್ಮ ಹಸುರು ನೆತ್ತರಿನಿಂದ ಹಸುರುಗಟ್ಟಿತು
d)
ಎಲ್ಲವೂ
14.
ನೆಲಕಿರಿವೆನೆಂದು ಬಗೆದಿರೆ ಚಲಕಿರಿವೆಂ' ಈ ಮಾತನ್ನು ಯಾರು ಹೇಳಿದರು?
a)
ದೃತರಾಷ್ಟ್ರ
b)
ಭೀಮ
c)
ದುರ್ಯೋಧನ
d)
ಅರ್ಜುನ
15.
ಛಲಮನೆ ಮೆರೆವೆಂ' ಪದ್ಯವನ್ನು ರನ್ನ ಕವಿಯ ಯಾವ ಕೃತಿಯಿಂದ ಆರಿಸಿಕೊಳ್ಳಲಾಗಿದೆ?
a)
ಸಾಹಸ ಭೀಮ ವಿಜಯಂ
b)
ಅಜಿತ ಪುರಾಣ
c)
ಚಕ್ರೇಶ್ವರ ಚರಿತೆ
d)
ಪರಶುರಾಮ ಚರಿತೆ
16.
ನೆಲಕಿರಿವೆನೆಂದು ಬಗೆದಿರೆ ಚಲಕಿರಿವೆಂ' ಮಾತಿನ ಸಂದರ್ಭ
a)
ನಾನು ಛಲಕ್ಕಾಗಿ ಯುದ್ಧಮಾಡುತ್ತೇನೆ
b)
ದಿನಪಸುತನನ್ನು ಕೊಲಿಸಿದ ಈ ನೆಲ ಹಾಳು ನೆಲ
c)
ಎಲ್ಲವೂ
d)
ಈ ನೆಲದೊಡನೆ ಮತ್ತೆ ಬಾಳುವೆನೆ?
17.
ಈ ವಾಕ್ಯವನ್ನು ಕುವೆಂಪು ವಿರಚಿತ 'ಪಕ್ಷಿಕಾಶಿ' ಕವನ ಸಂಕಲನದಿಂದ ಆಯ್ದ 'ಹಸುರು' ಪದ್ಯದಿಂದ ಆರಿಸಿಕೊಳ್ಳಲಾಗಿದೆ.
a)
"ಹಸುರತ್ತಲ್,ಹಸುರಿತ್ತಲ್,ಹಸುರೆತ್ತಲ್"
b)
ಹಸುರಾದುದು ಕವಿಯಾತ್ಮಂ
c)
ಹಸುರು ಹಸುರಿಳೆಯುಸಿರು
d)
ಈ ಎಲ್ಲವೂ
18.
"ನೆಲಕಿರಿವೆನೆಂದು ಬಗೆದಿರೆ ಛಲಕಿರಿವೆಂ" ಈ ವಾಕ್ಯದಲ್ಲಿ ಕಂಡು ಬರುವ ಸ್ವಾರಸ್ಯ
a)
ನೆಲ ಮತ್ತು ಛಲ ಮುಖ್ಯವೆಂಬುದು
b)
ನೆಲವೇ ಮುಖ್ಯ ಎಂಬುದು
c)
ನೆಲ ಮತ್ತು ಛಲ ಮುಖ್ಯವಲ್ಲ ಎಂಬುದು
d)
ಛಲವೇ ಮುಖ್ಯ ಎಂಬುದು
19.
ಈ ವಾಕ್ಯವನ್ನು ' ರನ್ನ ' ಕವಿ ವಿರಚಿತ ' ಸಾಹಸ ಭೀಮ ವಿಜಯಂ ' ಕೃತಿಯಿಂದ ಆಯ್ದ ' ಛಲಮನೆ ಮೆರೆವೆಂ ' ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ
a)
'ಸಮರದೊಳಗಜ್ಜ ಪೇಳಿಮಾವುದು ಕಜ್ಜಂ'
b)
'ಮೇಣಾಯ್ತು ಕೌರವಂಗವನೀತಳಮಂ'
c)
ನೆಲಕಿರಿವೆನೆಂದು ಬಗೆದಿರೆ ಛಲಕಿರಿವೆಂ
d)
ಈ ಎಲ್ಲವೂ
20.
ಮೇಣಾಯ್ತು ಕೌರವಂಗವನೀತಳಂ' ಈ ಮಾತನ್ನು ಯಾರು ಹೇಳಿದರು
a)
ದುರ್ಯೋಧನ
b)
ಭೀಮ
c)
ಭೀಷ್ಮ
d)
ಧರ್ಮರಾಯ
21.
ಪಾಂಡವರೊಳಿರಿದು ಛಲಮನೆ ಮೆರೆವೆಂ' ಈ ಮಾತನ್ನು ಹೇಳಿದವರು
a)
ಅರ್ಜುನ
b)
ಭೀಷ್ಮ
c)
ದುರ್ಯೋಧನ
d)
ಧರ್ಮರಾಯ
22.
ಪಾಂಡವರೊಳಿರಿದು ಛಲಮನೆ ಮೆರೆವೆಂ' ಈ ಮಾತನ್ನು ಯಾರಿಗೆ ಹೇಳಿದನು
a)
ದೃತರಾಷ್ರ್ಟನಿಗೆ
b)
ಧರ್ಮರಾಯನಿಗೆ
c)
ಭೀಮನಿಗೆ
d)
ಭೀಷ್ಮರಿಗೆ
23.
ಪಾಂಡವರೊಳಿರಿದು ಛಲಮನೆ ಮೆರೆವೆಂ' ಈ ಮಾತಿನ ಸ್ವಾರಸ್ಯ
a)
ಪಾಂಡವರ ವಿರುದ್ಧ ಹೋರಾಡುತ್ತೇನೆ ಎಂಬ ದುರ್ಯೋಧನನ ದಿಟ್ಟ ನಿರ್ಧಾರ
b)
ಸಂಧಿ ಮಾಡಿಯೇ ತೀರುತ್ತೇನೆ ಎಂಬದೃಢ ನಿರ್ಧಾರ
c)
ಯುದ್ಧ ಮಾಡುವುದಿಲ್ಲ ಎಂಬ ದಿಟ್ಟತನ
d)
ಯಾವುದೂ ಅಲ್ಲ
24.
ಮೇಣಾಯ್ತು ಕೌರವಂಗವನೀತಳಮಂ' ಈ ಮಾತನ್ನು ಯಾರು ಯಾರಿಗೆ ಹೇಳಿದರು
a)
ಭೀಮ-ಅರ್ಜುನನಿಗೆ
b)
ದುರ್ಯೋಧನ- ಭೀಷ್ಮರಿಗೆ
c)
ದುರ್ಯೋಧನ - ಧೃತರಾಷ್ಟ್ರನಿಗೆ
d)
ದುರ್ಯೋಧನ -ಅರ್ಜುನನಿಗೆ
25.
ಸಮರದೊಳಗಜ್ಜ ಪೇಳಿಮಾವುದು ಕಜ್ಜ' ಈ ಮಾತಿನ ಸಂದರ್ಭ
a)
ದುರ್ಯೋಧನ ಭೀಷ್ಮರನ್ನು ಭೇಟಿ ಮಾಡುವ ಸಂದರ್ಭ
b)
ದುರ್ಯೋಧನನು ಭೀಷ್ಮರಿಗೆ ನಮಸ್ಕರಿಸಿ ಹೋಗಲು ಬಂದಿರುವ ಸಂದರ್ಭ
c)
ಪಾಂಡವರೊಂದಿಗೆ ಸಂಧಿ ಮಾಡಿಕೊಳ್ಳಲು ಬಂದಿರುವುದಲ್ಲ ಎಂದು ಹೇಳುವ ಸಂದರ್ಭ
d)
ಈ ಎಲ್ಲವೂ
26.
'ಸಮರದೊಳಗಜ್ಜ ಪೇಳಿಮಾವುದು ಕಜ್ಜಂ' ಈ ಮಾತನ್ನು ದುರ್ಯೋಧನನು ಯಾರಿಗೆ ಹೇಳಿದನು
a)
ಭೀಮನಿಗೆ
b)
ಅರ್ಜುನನಿಗೆ
c)
ಭೀಷ್ಮರಿಗೆ
d)
ಕರ್ಣನಿಗೆ
27.
"ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು" ದೇವನೂರು ಮಹಾದೇವ ಅವರು ಯಾರ ಕುರಿತು ಈ ಮಾತನ್ನು ಹೇಳುತ್ತಾರೆ
a)
ವಚನಕಾರರು
b)
ದಾಸರು
c)
ಬುದ್ಧ
d)
ಗ್ರಾಮದೇವತೆ
28.
"ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು" ಈ ಮಾತಿನ ಸ್ವಾರಸ್ಯ.
a)
ಸುಡುವ ಬೆಂಕಿಯಂತಹ ಪ್ರಜ್ಞೆಯ ಮುಂದೆ ಸತ್ಯವನ್ನು ಪ್ರಮಾಣಿಕರಿಸುವುದು
b)
ಬೇರೆ ದೇವರುಗಳನ್ನು ಪೂಜಿಸುವುದು
c)
ಸುತ್ತಮುತ್ತಲಿನ ದೇವರುಗಳನ್ನು ದೇವರು ಅಂದುಕೊಳ್ಳುವುದು
d)
ಸುಲಭವಾಗಿ ಸುಳ್ಳನ್ನು ಹೇಳಲು ಸಾಧ್ಯವಾಗುವುದು
29.
"ಖಂಡವಿದಕೋ, ಮಾಂಸವಿದಕೋ, ಗುಂಡಿಗೆಯ ಬಿಸಿ ರಕ್ತವಿದಕೋ" ಮಾತಿನ ಸಂದರ್ಭ
a)
ಹುಲಿಯು ಗೊಂದಲದಲ್ಲಿದ್ದ ಸಂದರ್ಭದಲ್ಲಿ ತನ್ನ ಪೂರ್ವಜರು ಧರ್ಮವನ್ನು ಪರಿಪಾಲಿಸಿದ್ದನ್ನು ನೆನೆಯುವುದು
b)
ರೈತರು ಕೋವಿಯಿಂದ ಒಂದೆರಡು ತೋಟಾ ಹಾರಿಸಿದಾಗ ಹುಲಿ ಹತಾಶೆಯಿಂದ ಪಲಾಯನ ಮಾಡುವಾಗ
c)
ಮೂರ್ಛೆಯಲ್ಲಿದ್ದ ಶಾನುಭೋಗರನ್ನು ಕಂಡ ಹುಲಿ ಸಂತೋಷದಿಂದ ನೆನೆಯುವುದು
d)
ಯಾವುದೂ ಅಲ್ಲ
30.
ಮೂರ್ಛೆಯಿಂದ ಎಚ್ಚರಗೊಂಡ ಶಾನುಭೋಗರು ರೈತರನ್ನು ಕೇಳಿದಾದ ಬಂದ ಸಂದರ್ಭದ ವಾಕ್ಯ
a)
ಹುಲಿ ಈಗ ಎಷ್ಟು ಹಸಿದಿರಬೇಕು
b)
ಹುಲಿ ನನ್ನನ್ನು ಎಳೆದುಕೊಂಡು ಹೋಗಲಿಲ್ಲವೇ?
c)
ನಾನು ಮುಖ ಮೇಲಾಗಿ ಬಿದ್ದಿದ್ದೆನೆ?
d)
ಹುಲಿ ಭಯದಿಂದ ಓಡಿ ಹೋಯಿತೇ?
31.
ವ್ಯಾಘ್ರಗೀತೆ' ಗದ್ಯವು ಕನ್ನಡ ಸಾಹಿತ್ಯದ ಈ ಪ್ರಕಾರಕ್ಕೆ ಸೇರಿದೆ..
a)
ವೈಚಾರಿಕ ಪ್ರಬಂಧ
b)
ಲಲಿತ ಪ್ರಬಂಧ
c)
ಪ್ರವಾಸ ಕಥನ
d)
ಕಾದಂಬರಿ
32.
"ಸ್ವಧರ್ಮೇ ನಿಧನಂ ಶ್ರೇಯಃ" ಎಂಬ ಉಕ್ತಿಯು ಈ ಗ್ರಂಥದಲ್ಲಿದೆ
a)
ರಾಮಾಯಣ
b)
ಕುರಾನ್
c)
ಬೈಬಲ್
d)
ಭಗವದ್ಗೀತೆ
33.
ಈ ವಾಕ್ಯವನ್ನು ಎ.ಎನ್.ಮೂರ್ತಿರಾಯರ ' ಸಮಗ್ರ ಲಲಿತ ಪ್ರಬಂಧಗಳು ' ಎಂಬ ಕೃತಿಯಿಂದಾಯ್ದ ' ವ್ಯಾಘ್ರಗೀತೆ ' ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
a)
ಎಲೆ ಬೆಕ್ಕೆ ರೂಪಿನಿಂದಲೆ ಹುಲಿಯ ಜಾತಿಗೆ ಸೇರ್ದೆನೆಂದು ಗರ್ವಿಸಬೇಡ
b)
"ಖಂಡವಿದಕೋ, ಮಾಂಸವಿದಕೋ, ಗುಂಡಿಗೆಯ ಬಿಸಿ ರಕ್ತವಿದಕೋ"
c)
ಸ್ವಧರ್ಮೇ ನಿಧನಂ ಶ್ರೇಯಃ
d)
ಈ ಎಲ್ಲವೂ
34.
"ಖಂಡವಿದಕೋ, ಮಾಂಸವಿದಕೋ, ಗುಂಡಿಗೆಯ ಬಿಸಿ ರಕ್ತವಿದಕೋ" ಎಂಬ ವಾಕ್ಯವನ್ನು ನೆನಪಿಸಿಕಂಡವರು ?
a)
ಬೆಕ್ಕು
b)
ಶಾನುಭೋಗರು
c)
ಹುಲಿ
d)
ಕೃಷ್ಣಮೂರ್ತಿಯವರು
35.
" ಈ ಶಾನುಭೋಗರಿಗೆ ಹುಚ್ಚು ಹಿಡಿಯಿತೋ " ಈ ವಾಕ್ಯವನ್ನು ಪಾಠದಿಂದ ಆರಿಸಲಾಗಿದೆ.
a)
ವೃಕ್ಷಸಾಕ್ಷಿ
b)
ಎದೆಗೆ ಬಿದ್ದ ಅಕ್ಷರ
c)
ವ್ಯಾಘ್ರಗೀತೆ
d)
ಛಲಮನೆ ಮೆರೆವೆಂ
36.
ಈ ವಾಕ್ಯವನ್ನು' ದೇವನೂರ ಮಹಾದೇವ' ವಿರಚಿತ ' ಎದೆಗೆ ಬಿದ್ದ ಅಕ್ಷರ ' ಪಾಠದಿಂದ ಆಯ್ದ ' ಎದೆಗೆ ಬಿದ್ದ ಅಕ್ಷರ' ಎಂಬ ಪಾಠದಿಂದ ಆರಿಸಲಾಗಿದೆ.
a)
ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ
b)
"ಈ ಸಮಷ್ಟಿ ಮನಸ್ಸಿನಲ್ಲಿ ಎಲ್ಲರೂ ಇರುತ್ತಾರೆ"
c)
ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ
d)
ಈ ಎಲ್ಲವೂ
37.
ದುರ್ಯೋಧನನು ಭೀಷ್ಮಾಚಾರ್ಯರಿಗೆ ಹೇಳಿದ ಸಂದರ್ಭದ ಮಾತುಗಳು...
a)
ನೆಲಕಿರಿವಿನೆಂದು ಬಗೆದಿರೆ ಛಲಕಿರಿವೆಂ
b)
ಪಾಂಡವರೊಳಿರಿದು ಛಲಮನೆ ಮೆರೆವೆಂ
c)
ದಿನಪಸುತನಂ ಕೊಲಿಸಿದ ನೆಲನೊಡನೆ ಮತ್ತೆ ಪುದುವಾಳ್ದಪೆನೆ
d)
ಈ ಎಲ್ಲ ಮಾತುಗಳು
38.
" ದೇವರೆ ಮರ ಹತ್ತುವಷ್ಟು ಅವಕಾಶ ಕರ್ಣಿಸು " -ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಲಾಗಿದೆ ? ಮತ್ತು ಈ ಮಾತನ್ನು ಯಾರು ಹೇಳಿಕೊಂಡರು ?
a)
ವ್ಯಾಘ್ರಗೀತೆ ಪಾಠದಿಂದ ಆರಿಸಲಾಗಿದೆ. ಶಾನುಭೋಗರು ಹೇಳಿಕೊಂಡರು
b)
ವ್ಯಾಘ್ರಗೀತೆ ಪಾಠದಿಂದ ಆರಿಸಲಾಗಿದೆ. ಹುಲಿ ಹೇಳಿಕೊಂಡಿತು.
c)
ವೃಕ್ಷಸಾಕ್ಷಿ ಪಾಠದಿಂದ ಆರಿಸಿಕೊಳ್ಳಲಾಗಿದೆ. ದುಷ್ಟಬುದ್ಧಿ ಹೇಳಿಕೊಂಡನು.
d)
ಛಲಮನೆ ಮೆರೆವೆಂ ಪದ್ಯದಿಂದ ಆರಿಸಲಾಗಿದೆ. ದುರ್ಯೋಧನ ಹೇಳಿಕೊಂಡನು.
39.
" ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ " - ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಲಾಗಿದೆ ? ಮತ್ತು ಅದರ ಲೇಖಕರು ಯಾರು ?
a)
ಎದೆಗೆ ಬಿದ್ದ ಅಕ್ಷರ - ಎ.ಎನ್. ಮೂರ್ತಿರಾವ್
b)
ಎದೆಗೆ ಬಿದ್ದ ಅಕ್ಷರ - ದೇವನೂರ ಮಹಾದೇವ
c)
ಎದೆಗೆ ಬಿದ್ದ ಅಕ್ಷರ - ಕುವೆಂಪು
d)
ಎದೆಗೆ ಬಿದ್ದ ಅಕ್ಷರ - ರನ್ನ
40.
ಡಾ.ಅಶೋಕ ಪೈ ಅವರು ಹೇಳಿದ ಸಂಶೋಧನ ಸತ್ಯವನ್ನು ತೋರ್ಪಡಿಸುವ ಸಂದರ್ಭದ ವಾಕ್ಯ
a)
ಎಲ್ಲಾ ಜೀವಿಗಳು ತನ್ನಷ್ಟಕ್ಕೆ ತಾನೇ ಇರುತ್ತವೆ.
b)
ಪ್ರತಿಯೊಂದು ಜೀವಿಯೂ ಬೇರೆ ಬೇರೆ
c)
ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ
d)
ಒಂದು ಜೀವಿಯು ಮತ್ತೊಂದನ್ನು ಅವಲಂಬಿಸಿಲ್ಲ
41.
ಪಾಠದ ಹೆಸರು ಮತ್ತು ಆಕರ ಗ್ರಂಥಗಳ ಸರಿಯಾದ ಜೋಡಿ
a)
ಹಸುರು - ಪಕ್ಷಿಕಾಶಿ
b)
ಎದೆಗೆ ಬಿದ್ದ ಅಕ್ಷರ - ಎದೆಗೆ ಬಿದ್ದ ಅಕ್ಷರ
c)
ಛಲಮನೆ ಮೆರೆವೆಂ - ರನ್ನ
d)
ಎಲ್ಲವೂ ಸರಿಯಾಗಿವೆ
42.
" ಸ್ವಲ್ಪ ದೊಡ್ಡ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಮನೆ ಸೇರಿಕೊಳ್ಳಬಹುದು " - ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಲಾಗಿದೆ ?
a)
ವೃಕ್ಷಸಾಕ್ಷಿ
b)
ಎದೆಗೆ ಬಿದ್ದ ಅಕ್ಷರ
c)
ಛಲಮನೆ ಮೆರೆವೆಂ
d)
ವ್ಯಾಘ್ರಗೀತೆ
43.
" ಸೈತಾನ ಹಿಂದಿರುಗು " -ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಲಾಗಿದೆ ?
a)
ಎದೆಗೆ ಬಿದ್ದ ಅಕ್ಷರ
b)
ಛಲಮನೆ ಮೆರೆವೆಂ
c)
ವ್ಯಾಘ್ರಗೀತೆ
d)
ಹಸುರು
44.
" ಮಡಿಯಬೇಕಾದರೆ ಮಾಡಿಯೇ ಮಡಿಯುತ್ತೇನೆ " ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಲಾಗಿದೆ ? ಇದರ ಅರ್ಥಸ್ವಾರಸ್ಯವೇನು
a)
ವ್ಯಾಘ್ರಗೀತೆ ಪಾಠದಿಂದ ಆರಿಸಲಾಗಿದೆ. ಶಾನುಭೋಗರ ಧೈರ್ಯಗುಣವನ್ನು ಸ್ವಾರಸ್ಯಭರಿತವಾಗಿಸಿದೆ
b)
ವ್ಯಾಘ್ರಗೀತೆ ಪಾಠದಿಂದ ಆರಿಸಲಾಗಿದೆ. ಹುಲಿಯ ಧೈರ್ಯವನ್ನು ತೋರಿಸುತ್ತದೆ.
c)
ವ್ಯಾಘ್ರಗೀತೆ ಪಾಠದಿಂದ ಆರಿಸಲಾಗಿದೆ. ಶಾನುಭೋಗರ ಪುಕ್ಕಲುತನವನ್ನು ತೋರಿಸಿದೆ.
d)
ಶಾನುಭೋಗರ ಹೆದರಿಕೆಯನ್ನು ಅಭಿವ್ಯಕ್ತಪಡಿಸುತ್ತದೆ.
45.
" ಧರ್ಮಾಧರ್ಮಗಳ ಲೆಕ್ಕವನ್ನೇ ಇಡದೆ ಸ್ವಚ್ಛಂದವಾಗಿ ವರ್ತಿಸುತ್ತಿದೆಯೇ " - ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಲಾಗಿದೆ ? ಮತ್ತು ಇದು ಯಾರನ್ನು ಕುರಿತು ಹೇಳಿದ್ದಾಗಿದೆ ?
a)
ವ್ಯಾಘ್ರಗೀತೆ ಪಾಠದಿಂದ ಆರಿಸಲಾಗಿದೆ. ಹುಲಿಯನ್ನು ಕುರಿತು ಹೇಳಿದ್ದಾಗಿದೆ.
b)
ಛಲಮನೆ ಮೆರೆವೆಂ ಪದ್ಯದಿಂದ ಆರಿಸಲಾಗಿದೆ. ದುರ್ಯೋಧನನ ಮನಸ್ಸನ್ನು ಕುರಿತು ಹೇಳಲಾಗಿದೆ.
c)
ಹಕ್ಕಿ ಹಾರುತಿದೆ ನೋಡಿದಿರಾ ಪದ್ಯದಿಂದ ಆರಿಸಿಲಾಗಿದೆ. ಹಕ್ಕಿಯನ್ನು ಕುರಿತು ಹೇಳಲಾಗಿದೆ.
d)
ಹಸುರು ಪದ್ಯದಿಂದ ಆರಿಸಿಕೊಳ್ಳಲಾಗಿದೆ. ಹಸುರನ್ನು ಕುರಿತು ಹೇಳಲಾಗಿದೆ.
46.
'ಎದೆಗೆ ಬಿದ್ದ ಅಕ್ಷರ' ಗದ್ಯವನ್ನು ದೇವನೂರು ಮಹಾದೇವ ಅವರ ಯಾವ ಕೃತಿಯಿಂದ ಆಯ್ಕೆ ಮಾಡಿಕೊಳ್ಳಲಾಗಿದೆ
a)
ಕುಸುಮಬಾಲೆ
b)
ದ್ಯಾವನೂರು
c)
ಎದೆಗೆ ಬಿದ್ದ ಅಕ್ಷರ
d)
ಒಡಲಾಳ
47.
" ಗಿಳಿಯದೆ ಬಣ್ಣದ ನೋಟ" - ಈ ವಾಕ್ಯವನ್ನು ಅನುಸರಿಸಿ ಸರಿಯಾದ ಉತ್ತರಗಳ ಜೋಡಿ
a)
ಹಸುರು ಪದ್ಯದಿಂದ ಆರಿಸಲಾಗಿದೆ.
b)
ಶಾಲಿವನ ಗಿಳಿಯ ಬಣ್ಣದ ರೀತಿಯಲ್ಲಿತ್ತು ಎಂದು ಹೇಳಲಾಗಿದೆ.
c)
ಕುವೆಂಪುರವರು ಹಸುರನ್ನು ವರ್ಣಿಸುವ ಸಂದರ್ಭದಲ್ಲಿ ಈ ಮಾತು ಬಂದಿದೆ.
d)
ಈ ಎಲ್ಲವೂ ಸರಿ ಇವೆ.
48.
ಬೈಬಲ್ ನಲ್ಲಿ ಇರುವ ಈ ಉಕ್ತಿಯನ್ನು ಹುಲಿ ನೆನಪಿಸಿಕೊಂಡಿತು.
a)
ಸ್ವಧರ್ಮೇ ನಿಧನಂ ಶ್ರೇಯಃ
b)
ಸೈತಾನ ಹಿಂದಿರುಗು
c)
ಮಡಿಯಬೇಕಾದರೆ ಮಾಡಿಯೇ ಮಡಿಯುತ್ತೇನೆ
d)
ಯಾವುದೂ ಅಲ್ಲ
49.
" ಸಂಧಿಯಂ ಮಾಡಿ ಪೂರ್ವ ಕ್ರಮದೊಳ್ ನಡೆವಂತೆ ಮಾಳ್ಪೆಂ " - ಈ ಮಾತನ್ನು ಯಾರು ಯಾರಿಗೆ ಹೇಳಿದರು ?
a)
ದುರ್ಯೋಧನ- ಭೀಷ್ಮರಿಗೆ
b)
ದುರ್ಯೋಧನ - ಧೃತರಾಷ್ಟ್ರನಿಗೆ
c)
ಭೀಮ-ಅರ್ಜುನನಿಗೆ
d)
ಭೀಷ್ಮರು - ದುರ್ಯೋಧನನಿಗೆ
50.
"ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ" ಈ ಮಾತನ್ನು ಯಾರು ಯಾರಿಗೆ ಹೇಳಿದರು ?
a)
ಮನೆ ಮಂಚಮ್ಮ - ಗ್ರಾಮದ ಜನರಿಗೆ
b)
ಮನೆಮಂಚಮ್ಮ - ವಚನಕಾರರಿಗೆ
c)
ಮನೆಮಂಚಮ್ಮ - ಕವಿ ಸಿದ್ಧಲಿಂಗಯ್ಯಗೆ
d)
ಬುದ್ಧ - ಮನೆಮಂಚಮ್ಮನಿಗೆ
Reset
