Worksheets10th ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು Prashantha.SB
Total questions: 20
Worksheet time: 11mins
ಕೆಳಗಿನವುಗಳಲ್ಲಿ ಯಾವುದು ಆಮ್ಲದ ಗುಣವಲ್ಲ_
ಇವುಗಳ PH < 7
ನೀಲಿ ಲಿಟ್ಮಸ್ ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸುತ್ತವೆ.
ಇವುಗಳ PH > 7
ಆಮ್ಲಗಳು ನೀರಿನಲ್ಲಿ ಹೈಡ್ರೋಜನ್ ಅಯಾನುಗಳನ್ನು ಉಂಟುಮಾಡುತ್ತವೆ.
ಈ ಕೆಳಗಿನವುಗಳಲ್ಲಿ ಯಾವ ಪ್ರಕಾರದ ಔಷಧಗಳನ್ನು ಅಜೀರ್ಣತೆಯ ಚಿಕಿತ್ಸೆಗೆ ಬಳಸಲಾಗುತ್ತದೆ?
ಜೀವನಿರೋಧಕ
ನೋವುನಿವಾರಕ
ಆಮ್ಲಶಾಮಕ
ನಂಜುನಿವಾರಕ
ಒಂದು ದ್ರಾವಣ ನೀಲಿ ಲಿಟ್ಮಸ್ ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸಿದರೆ, ಅದರ PH ಮೌಲ್ಯವು_
6
8
10
12
ಕ್ಲೋರ್-ಆಲ್ಕಲಿ ಪ್ರಕ್ರಿಯೆಯಲ್ಲಿ ಬಿಡುಗಡೆಯಾಗುವ ಉತ್ಪನ್ನಗಳೆಂದರೆ_
ಸೋಡಿಯಂ ಕ್ಲೋರೈಡ್, ಕ್ಲೋರಿನ್ ಮತ್ತು ಹೈಡ್ರೋಜನ್
ಸೋಡಿಯಂ ಹೈಡ್ರಾಕ್ಸೈಡ್, ಕ್ಲೋರಿನ್ ಮತ್ತು ಹೈಡ್ರೋಜನ್
ಸೋಡಿಯಂ ಕ್ಲೋರೈಡ್, ನೀರು ಮತ್ತು ಹೈಡ್ರೋಜನ್
ಕ್ಲೋರಿನ್ ಅನಿಲ ಮತ್ತು ಹೈಡ್ರೋಜನ್ ಅನಿಲ
ನಿಮ್ಮಲ್ಲಿ 'A’ ಮತ್ತು 'B’ ಎಂಬ ಎರಡು ದ್ರಾವಣಗಳಿವೆ. ದ್ರಾವಣ 'A’ಯ PH - 6 ಮತ್ತು 'B’ಯ PH – 8 ಆದರೆ, ಇವುಗಳಲ್ಲಿ ಯಾವುದು ಆಮ್ಲ ಮತ್ತು ಯಾವುದು ಪ್ರತ್ಯಾಮ್ಲ ?
'A’ ಆಮ್ಲ ಮತ್ತು 'B’ ಪ್ರತ್ಯಾಮ್ಲ
‘A’ ಪ್ರತ್ಯಾಮ್ಲ ಮತ್ತು 'B’ ಆಮ್ಲ
A’ ಮತ್ತು 'B’ ಎರಡೂ ಪ್ರತ್ಯಾಮ್ಲ
‘A’ ಮತ್ತು 'B’ ಎರಡೂ ಆಮ್ಲ
ಅಡುಗೆ ಸೋಡದ ರಾಸಾಯನಿಕ ಸೂತ್ರ_
NaOH
NaCl
Na2CO3.10H2O
NaHCO3
ಒಂದು ಗೋಡೆಯ ನುಣುಪಾದ ಮೇಲ್ಮೈಯನ್ನು ನಿರ್ಮಿಸಲು ಬಳಸುವುದು_
ತಾಮ್ರದ ಸಲ್ಫೇಟ್
ಜಿಪ್ಸಂ
ಕ್ಯಾಲ್ಸಿಯಂ ಸಲ್ಫೇಟ್ ಹೆಮಿಹೈಡ್ರೇಟ್
ಸೋಡಿಯಂ ಕಾರ್ಬೋನೇಟ್
ಲೋಹದ ಕಾರ್ಬೋನೇಟ್‌ಳು ಆಮ್ಲಗಳೊಂದಿಗೆ ವರ್ತಿಸಿದಾಗ ದೊರೆಯುವ ಉತ್ಪನ್ನ_
ಲವಣ ಮತ್ತು ನೀರು
ಲವಣ, ನೀರು ಮತ್ತು ಕಾರ್ಬನ್ ಡೈಆಕ್ಸೈಡ್
ಲವಣ ಮತ್ತು ಹೈಡ್ರೋಜನ್ ಅನಿಲ
ಹೈಡ್ರೋಜನ್ ಮತ್ತು ಹೈಡ್ರಾಕ್ಸೈಡ್
ಕ್ಲೋರಿನ್‌ನೊಂದಿಗೆ ಯಾವ ಸಂಯುಕ್ತವು ವರ್ತಿಸಿದಾಗ ಚೆಲುವೆ ಪುಡಿಯನ್ನು ಉತ್ಪತ್ತಿಮಾಡುತ್ತದೆ ?
ಸೋಡಿಯಂ ಹೈಡ್ರಾಕ್ಸೈಡ್
ಸೋಡಿಯಂ ಕ್ಲೋರೈಡ್
ಸೋಡಿಯಂ ಕಾರ್ಬೋನೇಟ್
ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್
ಟೊಮ್ಯಾಟೋ ಹಣ್ಣಿನಲ್ಲಿ ಕಂಡುಬರುವ ಆಮ್ಲ_
ಅಸಿಟಿಕ್ ಆಮ್ಲ
ಮೆಥೆನಾಯಿಕ್ ಆಮ್ಲ
ಆಕ್ಸಾಲಿಕ್ ಆಮ್ಲ
ಸಿಟ್ರಿಕ್ ಆಮ್ಲ
ಕೆಳಗಿನವುಗಳಲ್ಲಿ ಸ್ಫಟಿಕೀಕರಣ ನೀರನ್ನು ಹೊಂದಿರದೇ ಇರುವ ಸಂಯುಕ್ತ ಗುರುತಿಸಿ.
ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್
ಸೋಡಿಯಂ ಕಾರ್ಬೋನೇಟ್
ತಾಮ್ರದ ಸಲ್ಫೇಟ್
ಕ್ಯಾಲ್ಸಿಯಂ ಸಲ್ಫೇಟ್
ನಿಮ್ಮಲ್ಲಿ A, B, C ಮತ್ತು D ಎಂಬ ನಾಲ್ಕು ದ್ರಾವಣಗಳಿವೆ. ಆ ದ್ರಾವಣಗಳ PH ಮೌಲ್ಯವು ಕ್ರಮವಾಗಿ 8, 3.5, 10.2 ಮತ್ತು 14 ಆಗಿದೆ. ಹಾಗಾದರೆ, ಯಾವ ದ್ರಾವಣದಲ್ಲಿ ಹೈಡ್ರೋಜನ್ ಅಯಾನ್‌ಗಳ ಸಾರತೆ ಹೆಚ್ಚಿದೆ?
ದ್ರಾವಣ A
ದ್ರಾವಣ B
ದ್ರಾವಣ C
ದ್ರಾವಣ D
ಈ ಕೆಳಗಿನವುಗಳಲ್ಲಿ ಸಂಶ್ಲೇಷಿತ ಸೂಚಕ ಗುರುತಿಸಿ.
ಅರಿಷಿನ
ಫೀನಾಫ್ತಲೀನ್
ಲಿಟ್ಮಸ್
ಕೆಂಪು ಕ್ಯಾಬೇಜ್
ಈ ಕೆಳಗಿನ ಯಾವ ಕಾರ್ಯದಲ್ಲಿ ವಾಷಿಂಗ್ ಸೋಡವನ್ನು ಬಳಸುತ್ತಾರೆ ?
ಸೋಂಕುನಾಶಕವಾಗಿ
ಬ್ರೆಡ್ ತಯಾರಿಕೆಯಲ್ಲಿ
ಸೋಡಾ-ಆಸಿಡ್ ಉಪಕರಣಗಳಲ್ಲಿ
ಸಾಬೂನು ತಯಾರಿಕೆಯಲ್ಲಿ
ಸುಣ್ಣದ ತಿಳಿನೀರಿಗೆ ಯಾವ ಅನಿಲವನ್ನು ಹಾಯಿಸಿದಾಗ ಬಿಳಿಯ ಬಣ್ಣದ ಪ್ರಕ್ಷೇಪ ದೊರೆಯುತ್ತದೆ ?
ಹೈಡ್ರೋಜನ್
ಕಾರ್ಬನ್ ಮಾನಾಕ್ಸೈಡ್
ಕಾರ್ಬನ್ ಡೈಯಾಕ್ಸೈಡ್
ಕ್ಲೋರಿನ್
ದುರ್ಬಲ ಆಮ್ಲ ಮತ್ತು ಪ್ರಬಲ ಪ್ರತ್ಯಾಮ್ಲಗಳಿಂದ ಉಂಟಾದ ಲವಣಗಳ PH ಮೌಲ್ಯ_
7
7ಕ್ಕಿಂತ ಕಡಿಮೆ
7ಕ್ಕಿಂತ ಹೆಚ್ಚು
0
ಕೆಳಗಿನವುಗಳಲ್ಲಿ ಯಾವುದು ಪ್ರಬಲ ಪ್ರತ್ಯಾಮ್ಲವಾಗಿದೆ ?
ಹೆಚ್ಚು H+ ಅಯಾನುಗಳನ್ನು ಉತ್ಪತ್ತಿಮಾಡುವುದು.
ಕಡಿಮೆ H+ ಅಯಾನುಗಳನ್ನು ಉತ್ಪತ್ತಿಮಾಡುವುದು.
ಹೆಚ್ಚು OH- ಅಯಾನುಗಳನ್ನು ಉತ್ಪತ್ತಿಮಾಡುವುದು.
ಕಡಿಮೆ OH- ಅಯಾನುಗಳನ್ನು ಉತ್ಪತ್ತಿಮಾಡುವುದು.
ಕೆಳಗಿನ ಯಾವ ಸಂದರ್ಭದಲ್ಲಿ ರೈತ ತನ್ನ ಕೃಷಿ ಭೂಮಿಯ ಮಣ್ಣಿಗೆ ಸುಟ್ಟ ಸುಣ್ಣ(ಕ್ಯಾಲ್ಸಿಯಂ ಆಕ್ಸೈಡ್)ವನ್ನು ಸೇರಿಸುತ್ತಾನೆ ?
ಮಣ್ಣಿನ ಪ್ರತ್ಯಾಮ್ಲೀಯತೆ ಹೆಚ್ಚಿದ್ದಾಗ
ಮಣ್ಣಿನ ಆಮ್ಲೀಯತೆ ಹೆಚ್ಚಿದ್ದಾಗ
ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳನ್ನು ನಾಶ ಮಾಡಲು
ಮಣ್ಣು ಬರಡಾಗ್ಗಿದ್ದಾಗ
ಆಮ್ಲ ಮತ್ತು ಪ್ರತ್ಯಾಮ್ಲಗಳು ನೀರಿನಲ್ಲಿ ಕರಗಿದಾಗ ಕ್ರಮವಾಗಿ ಈ ಅಯಾನುಗಳನ್ನು ಉತ್ಪತ್ತಿ ಮಾಡುತ್ತವೆ_
ಹೈಡ್ರೋಜನ್ ಅಯಾನ್ ಮತ್ತು ಕ್ಲೋರಿನ್ ಅಯಾನ್
ಸೋಡಿಯಂ ಅಯಾನ್ ಮತ್ತು ಕ್ಲೋರಿನ್ ಅಯಾನ್
ಹೈಡ್ರೋನಿಯಂ ಅಯಾನ್ ಮತ್ತು ಹೈಡ್ರಾಕ್ಸೈಡ್ ಅಯಾನ್
ಮೆಗ್ನೀಷಿಯಂ ಅಯಾನ್ ಮತ್ತು ಸಲ್ಫೇಟ್ ಅಯಾನ್
'A' ಪಟ್ಟಿಯ ಕ್ರಮಾಕ್ಷಾರಗಳನ್ನು 'B' ಪಟ್ಟಿಯೊಂದಿಗಿನ ಕ್ರಮಾಕ್ಷಾರದೊಂದಿಗೆ ಸರಿಯಾಗಿ ಹೊಂದಿಸಿದ ಜೋಡಣೆಯನ್ನು ಆಯ್ಕೆಮಾಡಿ.
a-2, b-4, c-3, d-1
a-3, b-4, c-2, d-1
a-3, b-5, c-2, d-1
a-3, b-4, c-5, d-2
