Wayground logo

Free Printable Worksheets

Font size

S
M
L
XL
Worksheets

ತ್ರಿಭುಜಗಳು

Total questions: 10

Worksheet time: 5mins

Name
Class
Date
1.

ಕೆಳಗಿನವುಗಳಲ್ಲಿ ಯಾವುದು ಸಮರೂಪ ಕೃತಿ ಅಲ್ಲ.

a)

ಎಲ್ಲಾ ವೃತ್ತಗಳು

b)

ಎಲ್ಲಾ ವರ್ಗಗಳು

c)

ಎಲ್ಲಾ ಸಮಬಾಹು ತ್ರಿಭುಜಗಳು

d)

ಎಲ್ಲಾ ಲಂಭಕೋನ ತ್ರಿಭುಜಗಳು

2.

ಸಮಕೋನೀಯ ತ್ರಿಭುಜಗಳು ಸಮರೂಪಿಗಳಾಗಿರುತ್ತವೆ.” ಇದು_____________________________

a)

ಥೇಲ್ಸ ಪ್ರಮೇಯ

b)

ಪೈಥಾಗೋರಸ್ ಪ್ರಮೇಯ

c)

ಮೂಲಸಮಾನುಪಾತತೆಯ ಪ್ರಮೇಯ

d)

ಕೋ.ಕೋ.ಕೋ ನಿರ್ಧಾರಕ ಗುಣ

3.

ಎರಡು ತ್ರಿಭುಜಗಳು ಸಮರೂಪಿಯಾಗ ಬೇಕಾದರೆ,

a)

ಅನುರೂಪ ಕೋನಗಳು ಸಮವಾಗಿರಬೇಕು.

b)

ಅನುರೂಪ ಬಾಹುಗಳ ಅನುಪಾತ ಸಮವಾಗಿರಬೇಕು

c)

ಮೇಲಿನ ಎರಡೂ ಸರಿ.

d)

ಮೇಲಿನ ಎರಡೂ ತಪ್ಪು.

4.

ತ್ರಿಭುಜ PQR ದಲ್ಲಿ DE || QR ಆದರೆ ಥೇಲ್ಸ ಪ್ರಮೇಯ ಅನ್ವಯಿಸಿದಾಗ,

a)

PD/PE = PQ/PR

b)

PE/PD= PR/PQ

c)

PD/DQ= PE/ER

d)

PD/PQ = PE/PR

5.

ತ್ರಿಭುಜದ ಎರಡು ಬಾಹುಗಳನ್ನು , ಎರಡು ವಿಭಿನ್ನ ಬಿಂದುಗಳಲ್ಲಿ ಛೇದಿಸುವಂತೆ ಒಂದು ಬಾಹುವಿಗೆ ಸಮಾಂತರವಾಗಿ ಎಳೆದ ಸರಳ ರೇಖೆಯು ಉಳಿದೆರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸುತ್ತದೆ.” ಇದು __________________ಪ್ರಮೇಯದ ಹೇಳಿಕೆ.

a)

ಪೈಥಾಗೋರಸ್ ಪ್ರಮೇಯ

b)

ಥೇಲ್ಸ ಪ್ರಮೇಯ

c)

ಮೂಲಸಮಾನುಪಾತೆಯ ಪ್ರಮೇಯ

d)

2 ಮತ್ತು 3 ಎರಡೂ ಸರಿ

6.

“ತ್ರಿಭುಜದ ಯಾವುದಾದರೂ ಎರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸುವ ರೇಖೆಯು ಅದರ ಮೂರನೇ ಬಾಹುವಿಗೆ ಸಮಾನಾಂತರವಾಗಿರುತ್ತದೆ.” ಇದು _________________________ ಹೇಳಿಕೆ

a)

ಥೇಲ್ಸ ಪ್ರಮೇಯದ ವಿಲೋಮ

b)

ಪೈಥಾಗೋರಸ್ ಪ್ರಮೇಯದ ವಿಲೋಮ

c)

ಕೋ,ಕೋ,ಕೋ ನಿರ್ಧಾರಕ ಗುಣದ ವಿಲೋಮ

d)

ಮೂಲ ಸಮಾನುಪಾತತೆಯ ಉಪಪ್ರಮೇಯದ ವಿಲೋಮ

7.

ತ್ರಿಭುಜPQR ನಲ್ಲಿ E ಮತ್ತು F ಗಳು PQ ಮತ್ತು PR ಗಳ ಮೇಲಿನ ಬಿಂದುಗಳು. ಕೆಳಗಿನ ಯಾವ ಸಂದರ್ಭದಲ್ಲಿ EF || QR ಆಗಿರುತ್ತದೆ?

a)

PE=3.9cm EQ=3cm PF=3.6cm FR=2.4cm

b)

PE=4cm QE=4.5cm PF=8cm RF=9cm

c)

PQ=1.28cm PR= 2.56cm PE= 0.18cm PF= 0.36cm

d)

ಮೇಲಿನ ಯಾವುದೂ ಅಲ್ಲ.

8.

ಲಂಭಕೋನ ತ್ರಿಭುಜದಲ್ಲಿ ಕರ್ಣ_________________________ ಬಾಹು ಆಗಿರುತ್ತದೆ

a)

ಅತೀ ಚಿಕ್ಕ ಬಾಹು

b)

ಲಂಭಕೋನದ ಎದುರಿಗಿನ ಬಾಹು

c)

ಲಂಭಕೋನವನ್ನು ಉಂಟು ಮಾಡುವ ಬಾಹು

d)

ಮೇಲಿನ ಯಾವುದೂ ಅಲ್ಲ.

9.

ಒಂದು ಲಂಭಕೋನ ತ್ರಿಭುಜದಲ್ಲಿ ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ” ಇದು ___________________ ಪ್ರಮೇಯದ ಹೇಳಿಕೆ

a)

ಪೈಥಾಗೋರಸ್ ಪ್ರಮೇಯ

b)

ಥೇಲ್ಸ ಪ್ರಮೇಯ

c)

ಮೂಲ ಸಮಾನುಪಾತತೆಯ ಪ್ರಮೇಯ

d)

ತ್ರಿಭುಜದ ಬಾಹ್ಯಕೋನ ಪ್ರಮೇಯ

10.

ತ್ರಿಭುಜ SMR ಯಲ್ಲಿ ಕೋನ M ಯ ಅಳತೆ 90 ಡಿಗ್ರಿ ಯಾದರೆ ತ್ರಿಭುಜಕ್ಕೆ ಪೈಥಾಗೋರಸ್ ಪ್ರಮೇಯ ಅನ್ವಯಿಸಿದಾಗ

a)

SM²= SR²+MR²

b)

MR²=SM²+SR²

c)

SM²+MR²=SR²

d)

ಮೇಲಿನ ಯಾವುದೂ ಅಲ್ಲ.