wayground logo

Free Printable Worksheets

NEW

Font size

S
M
L
XL
Worksheets

6. ಅಂಗಾಂಶಗಳು

Total questions: 15

Worksheet time: 5mins

Name
Class
Date
1.

ಒಂದು ನಿರ್ದಿಷ್ಟ ಮೂಲದಿಂದ ಬಂದ ಒಂದೇ ರೀತಿಯ ರಚನೆಯನ್ನು ಹೊಂದಿರುವ ಹಾಗೂ ಒಂದೇ ರೀತಿಯ ಕಾರ್ಯಗಳನ್ನು ಮಾಡುವ ಜೀವಕೋಶಗಳ ಗುಂಪಿಗೆ ಹೀಗೆನ್ನುವರು

a)

ಅಂಗ

b)

ಜೀವಕೋಶ

c)

ಅಂಗಾಂಶ

d)

ಅಂಗವ್ಯೂಹ

2.

ಸಸ್ಯಗಳಲ್ಲಿನ ಈ ಅಂಗಾಂಶವು ನಿರಂತರವಾಗಿ ವಿಭಜನೆ ಆಗುತ್ತಿರುವ ಭ್ರೂಣ ಜೀವಕೋಶಗಳಿಂದ ಕೂಡಲೇ

a)

ಕ್ಸೈಲಂ ಅಂಗಾಂಶ

b)

ಫ್ಲೋಯಂ ಅಂಗಾಂಶ

c)

ವರ್ಧನ ಅಂಗಾಂಶ

d)

ಹೊರಧರ್ಮ

3.

ಸಸ್ಯದ ಎಲೆಗಳಲ್ಲಿ ತಯಾರಾದ ಆಹಾರವನ್ನು ಸಸ್ಯದ ಇತರೆ ಭಾಗಗಳಿಗೆ ಸಾಗಿಸಲು ಸಹಾಯಕವಾಗುವ ಸಸ್ಯ ಅಂಗಾಂಶ

a)

ಕ್ಸೈಲಂ ಅಂಗಾಂಶ

b)

ಫ್ಲೋಯಂ ಅಂಗಾಂಶ

c)

ವರ್ಧನ ಅಂಗಾಂಶ

d)

ಹೊರಧರ್ಮ

4.

ತೆಳುವಾದ ಕೋಶಬಿತ್ತಿ ಯನ್ನು ಹೊಂದಿರುವ ಜೀವಂತ ಜೀವಕೋಶಗಳಿಂದ ಕೂಡಿದ ಸಸ್ಯ ಅಂಗಾಂಶ

a)

ಪೇರಂಕೈಮ

b)

ಕೋಲಂಕೈಮ

c)

ಸ್ಲೀರಂಕೈಮಾ

d)

ಏರಂಕೈಮ

5.

ಜಲವಾಸಿ ಸಸ್ಯಗಳ ಎಲೆಗಳು (ಉದಾ: ತಾವರೆ) ನೀರಿನ ಮೇಲೆ ತೇಲಲು ಕಾರಣವಾದ ಅಂಗಾಂಶ

a)

ಪೇರಂಕೈಮ

b)

ಕೋಲಂಕೈಮ

c)

ಸ್ಲೀರಂಕೈಮಾ

d)

ಏರಂಕೈಮ

6.

ನಮ್ಯತೆ ಹಾಗೂ ಸ್ಥಿತಿಸ್ಥಾಪಕತ್ವ ಗುಣಗಳನ್ನು ಹೊಂದಿರುವುದರಿಂದ ಈ ಅಂಗಾಂಶವನ್ನು ಗೋಣಿಚೀಲ ಮತ್ತು ಹಗ್ಗಗಳ ತಯಾರಿಕೆಯಲ್ಲಿ ಬಳಸುವರು

a)

ಪೇರಂಕೈಮ

b)

ಕೋಲಂಕೈಮ

c)

ಸ್ಲೀರಂಕೈಮಾ

d)

ಏರಂಕೈಮ

7.

ಅಂಗಾಂಶವನ್ನು 'ಸಸ್ಯ ದೇಹದ ಚರ್ಮ' ಎಂದೂ ಸಹ ಕರೆಯುತ್ತಾರೆ

a)

ಪೇರಂಕೈಮ

b)

ಕೋಲಂಕೈಮ

c)

ಸ್ಲೀರಂಕೈಮಾ

d)

ಹೊರದರ್ಮ ಅಂಗಾಂಶ

8.

ಈ ಅಂಗಾಂಶವು ಪ್ರಾಣಿಗಳ ದೇಹದ ವಿವಿಧ ಭಾಗಗಳ ಒಳಭಾಗದಲ್ಲಿ ಮತ್ತು ಹೊರ ಭಾಗದಲ್ಲಿ ಹೊದಿಕೆಯಾಗಿ ಕಂಡುಬರುತ್ತದೆ

a)

ಅನುಲೇಪಕ ಅಂಗಾಂಶ

b)

ಸ್ನಾಯು ಅಂಗಾಂಶ

c)

ಸಂಯೋಜಕ ಅಂಗಾಂಶ

d)

ನರ ಅಂಗಾಂಶ

9.

ಈ ಅಂಗಾಂಶವು ಪ್ರಾಣಿಗಳ ದೇಹದ ವಿವಿಧ ಭಾಗಗಳ ಚಲನವಲನಗಳಿಗೆ ಕಾರಣವಾದ ಅಂಗಾಂಶ ವಾಗಿದೆ

a)

ಅನುಲೇಪಕ ಅಂಗಾಂಶ

b)

ಸ್ನಾಯು ಅಂಗಾಂಶ

c)

ಸಂಯೋಜಕ ಅಂಗಾಂಶ

d)

ನರ ಅಂಗಾಂಶ

10.

ಅನೈಚ್ಛಿಕ ಕ್ರಿಯೆಗಳಿಗೆ ಉದಾಹರಣೆ

a)

ಓಡುವುದು

b)

ಉಸಿರಾಟ

c)

ಬಾಗುವುದು

d)

ಈಜುವುದು

11.

ಈ ಸ್ನಾಯುಗಳು ಲಯಬದ್ಧವಾದ ಸಂಕುಚನ ವಿಕಸನ ಗಳನ್ನು ಹೊಂದಿದ್ದು ಯಾವಾಗಲೂ ಆಯಾಸಗೊಳ್ಳುವುದಿಲ್ಲ

a)

ಬೆನ್ನಿನ ಸ್ನಾಯುಗಳು

b)

ಹೃದಯ ಸ್ನಾಯುಗಳು

c)

ತೊಡೆಯ ಸ್ನಾಯುಗಳು

d)

ನರ ಅಂಗಾಂಶ

12.

ರಕ್ತದ ಈ ಕಣಗಳು ದೇಹದ ಎಲ್ಲಾ ಜೀವಕೋಶಗಳಿಗೆ ಆಕ್ಸಿಜನ್ ಅನ್ನು ಪೂರೈಕೆ ಮಾಡುತ್ತದೆ

a)

ಕಿರುತಟ್ಟೆಗಳು

b)

ಬಿಳಿ ರಕ್ತಕಣಗಳು

c)

ಕೆಂಪು ರಕ್ತಕಣಗಳು

d)

ಮೇಲಿನ ಎಲ್ಲವೂ

13.

ಈ ಕಣಗಳು ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ

a)

ಕಿರುತಟ್ಟೆಗಳು

b)

ಬಿಳಿ ರಕ್ತಕಣಗಳು

c)

ಕೆಂಪು ರಕ್ತಕಣಗಳು

d)

ಮೇಲಿನ ಎಲ್ಲವೂ

14.

ಪರಕೀಯ ಜೀವಿ/ ಜೀವಕೋಶಗಳಿಂದ ನಮ್ಮ ದೇಹಕ್ಕೆ ರಕ್ಷಣೆ ನೀಡುವ ಕಣ ಗಳೆಂದರೆ

a)

ಕಿರುತಟ್ಟೆಗಳು

b)

ಬಿಳಿ ರಕ್ತಕಣಗಳು

c)

ಕೆಂಪು ರಕ್ತಕಣಗಳು

d)

ಮೇಲಿನ ಎಲ್ಲವೂ

15.

ನರ ಅಂಗಾಂಶದ ರಚನಾತ್ಮಕ ಹಾಗೂ ಕಾರ್ಯತ್ಮಕ ಮೂಲ ಘಟಕ ಹೀಗೆಂದು ಕರೆಯುತ್ತಾರೆ

a)

ಸೆಲ್ (ಕೋಶ)

b)

ಸೈನಾಪ್ಸ್ (ಸಂಸರ್ಗ)

c)

ನ್ಯೂರಾನ್ (ನರಕೋಶ)

d)

ಅಂಗಾಂಶ