NEW
Font size
Worksheetsಲೋಹಗಳು ಮತ್ತು ಅಲೋಹಗಳು-ರಚನೆ:ಖಲೀಲ್
Total questions: 15
Worksheet time: 15mins
ಬೆಸುಗೆ ಲೋಹ ಒಂದು ಮಿಶ್ರ ಲೋಹ.
ಇದರ ಘಟಕ ಧಾತುಗಳು....
ಸತು ಮತ್ತು ತಾಮ್ರ
ಸತು ಮತ್ತು ತವರ
ಸೀಸ ಮತ್ತು ತವರ
ಸತು ಮತ್ತು ಸೀಸ
ಕೊಠಡಿಯ ತಾಪದಲ್ಲಿ ದ್ರವರೂಪದಲ್ಲಿರುವ ಲೋಹ...
ಸೋಡಿಯಂ
ಅಯೋಡಿನ್
ಪಾದರಸ
ಬ್ರೋಮಿನ್
ಕೆಳಗಿನವುಗಳಲ್ಲಿ ಅತಿ ಕ್ರಿಯಾಶೀಲ ಲೋಹ
ಕ್ಯಾಲ್ಸಿಯಂ
ಸತು
ಸೀಸ
ಸೋಡಿಯಂ
ಹೆಚ್ಚಿನ ತಾಪದಲ್ಲಿ ಹೆಚ್ಚಿನ ಗಾಳಿಯಲ್ಲಿ ಸಲ್ಫೈಡ್ ಅದುರನ್ನು ಆಕ್ಸೈಡ್ ಅದುರುಗಳನ್ನಾಗಿ ಪರಿವರ್ತಿಸುವ ಕ್ರಿಯೆ...
ಅಪಕರ್ಷಿಸುವಿಕೆ
ಕಾಸುವಿಕೆ
ವಿದ್ಯುದ್ವಿಭಜನೆ
ಹುರಿಯುವಿಕೆ
ಕೆಳಗಿನವುಗಳಲ್ಲಿ ತಣ್ಣೀರಿನೊಂದಿಗೆ ವೇಗವಾಗಿ ಪ್ರತಿವರ್ತಿಸುವ ಲೋಹಗಳ ಗುಂಪು
ಕ್ಯಾಲ್ಸಿಯಂ, ಸೋಡಿಯಂ, ಪೊಟಾಸಿಯಂ
ಸೋಡಿಯಂ,ಮೆಗ್ನೀಸಿಯಂ,ಲಿಥಿಯಂ
ಸೋಡಿಯಂ, ಪೊಟಾಸಿಯಂ, ಲಿಥಿಯಂ
ಕ್ಯಾಲ್ಸಿಯಂ, ಮೆಗ್ನೀಸಿಯಂ,ಅಲ್ಯುಮಿನಿಯಂ
ಅತ್ಯಂತ ಕಡಿಮೆ ಕ್ರಿಯಾಶೀಲ ಧಾತು....
ಸತು ಮತ್ತು ಸೀಸ
ಚಿನ್ನ ಮತ್ತು ಬೆಳ್ಳಿ
ಬೆಳ್ಳಿ ಮತ್ತು ಪಾದರಸ
ಕಬ್ಬಿಣ ಮತ್ತು ತಾಮ್ರ
ಕಬ್ಬಿಣದ ವಸ್ತುಗಳಿಗೆ ಕ್ರೋಮಿಯಂ ಲೇಪನ ಮಾಡಲು ಕಾರಣ...
ಆಕರ್ಷಕ ಹೊಳಪನ್ನು ನೀಡುತ್ತದೆ
ಕಬ್ಬಿಣ ನಶಿಸುವಿಕೆ ಯನ್ನು ತಡೆಯಲು ಸಹಾಯಕ
ಕಬ್ಬಿಣದ ವಾಣಿಜ್ಯಕ ಮೌಲ್ಯವನ್ನು ಹೆಚ್ಚಿಸುತ್ತದೆ
ಮೇಲಿನ ಎಲ್ಲವೂ
ನೀರಿನೊಂದಿಗೆ ಪ್ರತಿವರ್ತಿಸುವಾಗ ನೀರಿನ ಮೇಲೆ ತೇಲುವ ಲೋಹಗಳು...
ಸೋಡಿಯಂ ಮತ್ತು ಅಲ್ಯುಮಿನಿಯಂ
ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ
ಪೊಟಾಸಿಯಂ ಮತ್ತು ತಾಮ್ರ
ಅಲ್ಯುಮಿನಿಯಂ ಮತ್ತು ಸತು
ಕಾರ್ಬೋನೇಟ್ ಅದುರಿನಿಂದ ಲೋಹಗಳನ್ನು ಪಡೆಯುವ ಹಂತಗಳು
ಕಾಸುವಿಕೆ - - >ಅದುರಿನ ಸಾರವರ್ಧನೆ-->ಅಪಕರ್ಷಿಸುವಿಕೆ - - >ವಿದ್ಯುದ್ವಿಭಜನೆ
ಹುರಿಯುವಿಕೆ - - >ಕಾಸುವಿಕೆ - - >ವಿದ್ಯುದ್ವಿಭಜನೆ - - >ಅಪಕರ್ಷಿಸುವಿಕೆ
ಅದುರಿನ ಸಾರವರ್ಧನೆ-->ಕಾಸುವಿಕೆ - - >ಅಪಕರ್ಷಿಸುವಿಕೆ - - >ಶುದ್ಧೀಕರಣ
ಅದುರಿನ ಸಾರವರ್ಧನೆ-->ವಿದ್ಯುದ್ವಿಭಜನೆ - - >ಶುದ್ಧೀಕರಣ
ಕೆಳಗಿನವುಗಳಲ್ಲಿ ಪಾದರಸದ ಅದುರು
ಸತುವಿನ ಬ್ಲೆಂಡ್
ಬೊರಾಕ್ಸ್
ಸಿನ್ನೆಬಾರ್
ಕುಪ್ರೈಟ್
ಬಿಸಿ ನೀರಿನೊಂದಿಗೆ ಪ್ರತಿವರ್ತಿಸದ ಆದರೆ ಹಬೆ(ನೀರಾವಿ) ಯೊಂದಿಗೆ ಪ್ರತಿವರ್ತಿಸುವ ಲೋಹಗಳು...
ಸತು, ಕಬ್ಬಿಣ
ಸತು, ಮೆಗ್ನೀಸಿಯಂ
ತಾಮ್ರ ಮತ್ತು ಬೆಳ್ಳಿ
ಮೇಲಿನ ಎಲ್ಲವೂ
ಈ ಲೋಹದ ಆಕ್ಸೈಡ್ ಗಳು ನೀರಿನೊಂದಿಗೆ ವರ್ತಿಸಿ ಕ್ಷಾರ(ಆಲ್ಕಲಿ) ಯನ್ನು ಉಂಟು ಮಾಡುತ್ತದೆ.
ಅಲ್ಯುಮಿನಿಯಂ, ಸೀಸ, ಸತು
ಸೋಡಿಯಂ, ಪೊಟಾಸಿಯಂ, ಲಿಥಿಯಂ
ಕ್ಯಾಲ್ಸಿಯಂ, ಮೆಗ್ನೀಸಿಯಂ, ಮೇಂಗನೀಸ್
ಮೇಲಿನ ಎಲ್ಲವೂ
ಸಾರರಿಕ್ತ ನೈಟ್ರಿಕ್ ಆಮ್ಲದೊಡನೆ ಈ ಲೋಹಗಳು ಪ್ರತಿವರ್ತಿಸುವಾಗ ಹೈಡ್ರೋಜನ್ ನ್ನು ಬಿಡುಗಡೆ ಮಾಡುತ್ತದೆ
ತಾಮ್ರ ಮತ್ತು ಕಬ್ಬಿಣ
ಸೋಡಿಯಂ ಮತ್ತು ಸತು
ಮೇಂಗನೀಸ್ ಮತ್ತು ಮೆಗ್ನೀಸಿಯಂ
ಬೆಳ್ಳಿ ಮತ್ತು ಚಿನ್ನ
ಕೆಳಗಿನವುಗಳಲ್ಲಿ ಲೋಹಗಳ ಕ್ರಿಯಾಶೀಲತೆಯ ಸರಿಯಾದ ಜೋಡಣೆ...
ಪಾದರಸ<ಸತು<ಮೆಗ್ನೀಸಿಯಂ <ಕಬ್ಬಿಣ
ಚಿನ್ನ <ಬೆಳ್ಳಿ<ಪೊಟಾಸಿಯಂ <ಸೋಡಿಯಂ
ತಾಮ್ರ >ಸತು>ಮೆಗ್ನೀಸಿಯಂ >ಸೋಡಿಯಂ
ಕ್ಯಾಲ್ಸಿಯಂ >ಅಲ್ಯುಮಿನಿಯಂ >ಸತು>ಪಾದರಸ
ಉಕ್ಕು ಎಂಬುದು ಮಿಶ್ರಲೋಹ.ಇದರಲ್ಲಿ ಇರುವ ಘಟಕ ಲೋಹ
ಕಾರ್ಬನ್ ಮತ್ತು ಸತು
ಕಬ್ಬಿಣ ಮತ್ತು ಕಾರ್ಬನ್
ಕಾರ್ಬನ್ ಮತ್ತು ಅಲ್ಯುಮಿನಿಯಂ
ಅಲ್ಯುಮಿನಿಯಂ ಮತ್ತು ನಿಕ್ಕೆಲ್
