Worksheetsಕನ್ನಡ ವ್ಯಾಕರಣಾಂಶ ರಸಪ್ರಶ್ನೆ ಸ್ಪರ್ಧೆ
Total questions: 50
Worksheet time: 21mins
ಕನ್ನಡ ವರ್ಣಮಾಲೆಯಲ್ಲಿರುವ ಸಂಧ್ಯಕ್ಷರಗಳು
ಅಂ, ಅಃ
ಐ, ಔ
ಶ,ಷ
ಎ, ಏ
'ಕೊರೋನಾ' ಪದವು ____________ ಗಣಕ್ಕೆ ಉದಾಹರಣೆ
ಮ ಗಣ
ನ ಗಣ
ಭ ಗಣ
ಯ ಗಣ
ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಾಕ್ಷರಗಳ ಸಂಖ್ಯೆ _______
2
9
13
34
'ಕಡುವೆಳ್ಪು' ಪದವು ಈ ಸಂಧಿಗೆ ಉದಾಹರಣೆ
ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಜಶ್ತ್ವ ಸಂಧಿ
ಈ ಕೆಳಗಿನ ಪದಗಳಲ್ಲಿ ದ್ವಿರುಕ್ತಿ ಪದ ________
ತುತ್ತತುದಿ
ತೀರ್ಥಪ್ರಸಾದ
ಫಳಫಳ
ಸರಸರ
ಒಂದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿದಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ ಈ ಚಿಹ್ನೆಯನ್ನು ಬಳಸಲಾಗುತ್ತದೆ.
ವಿವರಣಾತ್ಮಕ ಚಿಹ್ನೆ
ಆವರಣ ಚಿಹ್ನೆ
ವಾಕ್ಯವೇಷ್ಠನ ಚಿಹ್ನೆ
ಉದ್ಧರಣ ಚಿಹ್ನೆ
ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ ಅಂತಹ ವಾಕ್ಯವನ್ನು ಹೀಗೆನ್ನುವರು.
ಸರಳ ವಾಕ್ಯ
ಸಾಮಾನ್ಯ ವಾಕ್ಯ
ಸಂಯೋಜಿತ ವಾಕ್ಯ
ಮಿಶ್ರ ವಾಕ್ಯ
'ಹೊಸಗನ್ನಡ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ.
ತತ್ಪುರುಷ ಸಮಾಸ
ಕರ್ಮಧಾರೆಯ ಸಮಾಸ
ಕ್ರಿಯಾ ಸಮಾಸ
ಅಂಶೀ ಸಮಾಸ
'ಕನ್ನಡಿಗ' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ತದ್ಧಿತಾಂತಾವ್ಯಯ
ಕೃದಂತಾವ್ಯಯ
ತದ್ಧಿತಾಂತ ನಾಮ
ಕೃದಂತ ನಾಮ
ಕಂದ ಪದ್ಯದಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ ______
54
64
74
84
ಈ ಕೆಳಗಿನ ಪದಗಳಲ್ಲಿ ಅನ್ವರ್ಥನಾಮಕ್ಕೆ ಉದಾಹರಣೆಯಾದ ಪದ _______
ನದಿ
ವಿದ್ವಾಂಸ
ರಾಹಿಲ
ತೆಂಕಣ
'ಬರೆ' ಪದದ ವಿದ್ಯರ್ಥಕ ರೂಪ
ಬರೆದ
ಬರೆದಾನ
ಬರೆಯನು
ಬರೆಯಲಿ
ಚತುರ್ಥಿ ವಿಭಕ್ತಿಯ ಕಾರಕಾರ್ಥ _______
ಕರ್ತೃ
ಕರಣ
ಸಂಪ್ರದಾನ
ಅಪಾದಾನ
'ಸಂಶಯದೊಳ್' ಪದವು ಈ ವಿಭಕ್ತಿಗೆ ಉದಾಹರಣೆ.
ಪ್ರಥಮ ವಿಭಕ್ತಿ
ಚತುರ್ಥಿ ವಿಭಕ್ತಿ
ಪಂಚಮಿ ವಿಭಕ್ತಿ
ಸಪ್ತಮಿ ವಿಭಕ್ತಿ
'ಚೆನ್ನಾಗಿ' ಪದವು ಈ ಅವ್ಯಯಕ್ಕೆ ಉದಾಹರಣೆ.
ಸಾಮಾನ್ಯಾವ್ಯಯ
ಅವಧಾರಣಾರ್ಥಕಾವ್ಯಯ
ಕ್ರಿಯಾರ್ಥಕಾವ್ಯಯ
ಭಾವಸೂಚಕಾವ್ಯಯ
'ಸಾಬೂನು' ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ.
ಗ್ರೀಕ್
ಫಾರ್ಸಿ
ಹಿಂದೂಸ್ಥಾನಿ
ಪೋರ್ಚುಗೀಸ್
'ಹೊಗೆದೋರು' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ.
ಕರ್ಮಧಾರೆಯ ಸಮಾಸ
ಕ್ರಿಯಾ ಸಮಾಸ
ತತ್ಪುರುಷ ಸಮಾಸ
ಅಂಶೀ ಸಮಾಸ
'ಕಾರ್ಖಾನೆ' ಪದವು ________ ಭಾಷೆಯ ಪದವಾಗಿದೆ.
ಹಿಂದೂಸ್ಥಾನೀ
ಪೋರ್ಚುಗೀಸ್
ಉರ್ದು
ಫಾರ್ಸಿ
'ಮಾರಿಗೌತಣವಾಯ್ತು ನಾಳಿನ ಭಾರತವು' ಈ ವಾಕ್ಯದಲ್ಲಿರುವ ಅಲಂಕಾರ:
ಉಪಮಾಲಂಕಾರ
ರೂಪಕಾಲಂಕಾರ
ಉತ್ಪ್ರೇಕ್ಷಾಲಂಕಾರ
ಶ್ಲೇಷಾಲಂಕಾರ
'ವನಧಿ' ಪದದ ಅರ್ಥ _______
ಸಮುದ್ರ
ವಾನರ
ಅಡವಿ
ವನ
ಗುರು-ಲಘು ಕೊನೆಯಲ್ಲಿ ಬರಲು __________ ಗಣ.
ಮ-ನ ಗಣ
ಭ-ಯ ಗಣ
ಜ-ರ ಗಣ
ಸ-ತ ಗಣ
'ನ,ಜ,ಭ,ಜ,ಜ,ಜ,ರ' ಈ ಗಣವಿನ್ಯಾಸವು ವರ್ಣವೃತ್ತದ ಈ ವೃತ್ತಕ್ಕೆ ಸೇರಿದೆ.
ಚಂಪಕಮಾಲಾವೃತ್ತ
ಉತ್ಪಲಮಾಲಾವೃತ್ತ
ಸ್ರಗ್ಧರಾ ವೃತ್ತ
ಶಾರ್ದೂಲವಿಕ್ರೀಡಿತ ವೃತ್ತ
'ಪಾರ್ಥಭೀಮರು' ಪದವು ಈ ಸಮಾಸಕ್ಕೆ ಉದಾಹರಣೆ.
ದ್ವಿಗು ಸಮಾಸ
ದ್ವಂದ್ವ ಸಮಾಸ
ಅಂಶೀ ಸಮಾಸ
ಕ್ರಿಯಾ ಸಮಾಸ
ಈ ಕೆಳಗಿನ ಪದಗಳಲ್ಲಿ ಅಕರ್ಮಕ ಕ್ರಿಯಾಪದಕ್ಕೆ ಉದಾಹರಣೆಯಾದ ಪದ.
ಕೊಡು
ಬಿಡು
ಮುಚ್ಚು
ಮಲಗು
'ಕಸವರ' ಪದದ ಅರ್ಥ ________
ಚಿನ್ನ
ಬೆಳ್ಳಿ
ತಾಮ್ರ
ಹಿತ್ತಾಳೆ
'ಮೇದಿನಿ' ಪದದ ಅರ್ಥ:
ಮೋಡ
ಆಕಾಶ
ಭೂಮಿ
ಸಾಗರ
'ರೀಜೆಂಟ್' ಪದವು ಈ ಭಾಷೆಯ ಪದವಾಗಿದೆ.
ಇಂಗ್ಲೀಷ್
ಪರ್ಷಿಯನ್
ಹಿಂದೂಸ್ಥಾನಿ
ಅರಬ್ಬೀ
ಕೆಳಗಿನ ಪದಗಳಲ್ಲಿ ಅನುಕರಣಾವ್ಯಯಕ್ಕೆ ಉದಾಹರಣೆ:
ನಮೋ ನಮೋ
ಧೀರ ಶೂರ
ಕಟ್ಟಕಡೆ
ಸರ ಸರ
'ಯಜ್ಞ' ಪದದ ತದ್ಭವ ರೂಪ:
ಜನ್ನ
ಯಜನ
ಜನನ
ಬನ್ನ
'ಮಕ್ಕಳು ಹಾಲನ್ನು ಕುಡಿಯುತ್ತಾರೆ; ಆದರೆ ಅವರಿಗೆ ಕೊಡಲು ಸಾಕಷ್ಟು ಹಾಲಿಲ್ಲ' ಇಲ್ಲಿರುವ ವಾಕ್ಯವು ಈ ವಾಕ್ಯಪ್ರಭೇದಕ್ಕೆ ಸೇರಿದೆ.
ಸರಳ ವಾಕ್ಯ
ಸಾಮಾನ್ಯ ವಾಕ್ಯ
ಸಂಯೋಜಿತ ವಾಕ್ಯ
ಮಿಶ್ರ ವಾಕ್ಯ
ಈ ಕೆಳಗಿನ ಪದಗಳಲ್ಲಿ ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ:
ತಾವು
ನೀವು
ಅವರು
ಯಾರು
ಕೊಟ್ಟಿರುವ ಪದಗಳಲ್ಲಿ ಯಣ್ ಸಂಧಿಗೆ ಉದಾಹರಣೆಯಾದ ಪದ:
ವಾಚನಾಲಯ
ಮಹೇಂದ್ರ
ಸೂರ್ಯೋದಯ
ಅತ್ಯವಸರ
ಕೆಳಗಿನ ಪದಗಳಲ್ಲಿ ಕೃದಂತಾವ್ಯಯಕ್ಕೆ ಉದಾಹರಣೆಯಾದ ಪದ:
ತೊಡುಗೆ
ತಿನ್ನುವಿಕೆ
ನಡೆಯುವ
ಮಾಡಲಿಕ್ಕೆ
ತೀರ್ಥ ಪ್ರಸಾದ ; ಜೋಡುನುಡಿ : : ಬೇಗ ಬೇಗ ; _________
ಜೋಡಿಪದ
ದ್ವಿರುಕ್ತಿ
ಅನುಕರಣಾವ್ಯಯ
ನಾಮಪದ
ಗುರು ಮೂರಿರೆ ; ಮಗಣ : : ಲಘು ಮೂರಿರೆ ; ________
ನಗಣ
ಭಗಣ
ಸಗಣ
ರಗಣ
ಪ್ರಸಾದ ; ಹಸಾದ : : ತಪಸ್ವಿ ; ________
ತಾಪಸಿ
ತವಸಿ
ತಪಸ್ವಿನಿ
ತಪ
ಆರ್ತತೆ ; ಬಯಕೆ : : ದೃಗುಜಲ ; ________
ಗಂಗಾಜಲ
ದುಷ್ಟಜಲ
ಬಿಸಿನೀರು
ಕಣ್ಣೀರು
ಸಿರಿತನ ; ತದ್ಧಿತಾಂತ ಭಾವನಾಮ : : ಮಾಟ ; _________
ತದ್ಧಿತಾಂತ ನಾಮ
ಕೃದಂತ ನಾಮ
ಕೃದಂತಾವ್ಯಯ
ಕೃದಂತ ಭಾವನಾಮ
ಇಸವಾಸ ; ವಿಶ್ವಾಸ : : ಇಲ್ಲದ್ಹಂಗ ; _______
ಇಲ್ಲದಾಗೆ
ಇಲ್ಲದ ಹಾಗೆ
ಇಲ್ಲದೆ
ಇಲ್ಲದಮೇಲೆ
ಶ್ರಮಣಿ ; ತಪಸ್ವಿನಿ : : ಅಬ್ಧಿಪ ; _______
ಇಂದ್ರ
ಅಗ್ನಿ
ವಾಯು
ವರುಣ
ಕ್ರಿಯಾರ್ಥಕಾವ್ಯಯಕ್ಕೆ ಉದಾಹರಣೆಯಾದ ಪದ:
ಸುಮ್ಮನೆ
ಸಾಕು
ಮೆಲ್ಲನೆ
ಮತ್ತು
ಎರಡು ಬೇರೆ ಬೇರೆ ವಾಕ್ಯಗಳಲ್ಲಿ ಅರ್ಥಸಾದೃಶ್ಯದಿಂದ ಬಿಂಬ ಪ್ರತಿಬಿಂಬ ಭಾವವು ತೋರಿಬಂದರೆ ಅದು _____________ ಅಲಂಕಾರವಾಗುತ್ತದೆ.
ಉತ್ಪ್ರೇಕ್ಷಾಲಂಕಾರ
ದೃಷ್ಟಾಂತಾಲಂಕಾರ
ಶ್ಲೇಷಾಲಂಕಾರ
ಅರ್ಥಾಂತರನ್ಯಾಸಲಂಕಾರ
ಕಣ್ದೆರೆ ; ಕ್ರಿಯಾ ಸಮಾಸ : : ಕಡೆಗಣ್ನು ; __________
ಅಂಶೀ ಸಮಾಸ
ದ್ವಂದ್ವ ಸಮಾಸ
ಕರ್ಮಧಾರೆಯ ಸಮಾಸ
ಗಮಕ ಸಮಾಸ
ಮಾಡಲಿ ; ವಿದ್ಯರ್ಥಕ ಕ್ರಿಯಾಪದ : : ಮಾಡಿಯಾನು ; _________
ನಿಷೇಧಾರ್ಥಕ ಕ್ರಿಯಾಪದ
ಸಂಭವನಾರ್ಥಕ ಕ್ರಿಯಾಪದ
ಕ್ರಿಯಾರ್ಥಕಾವ್ಯಯ
ಯಾವುದೂ ಅಲ್ಲ
ಕಂದ ಪದ್ಯ ; 4 ಸಾಲು : : ಷಟ್ಪದಿ ; __________
3 ಸಾಲು
5 ಸಾಲು
6 ಸಾಲು
8 ಸಾಲು
'ಶಾನುಭೋಗರ ವದನಾರವಿಂದದಲ್ಲಿ ಮುಗುಳುನಗೆ ಮೂಡಿತು' ಗೆರೆ ಎಳೆದ ಪದದಲ್ಲಿರುವ ಅಲಂಕಾರ:
ಯಮಕಾಲಂಕಾರ
ಉಪಮಾಲಂಕಾರ
ರೂಪಕಾಲಂಕಾರ
ಉತ್ಪ್ರೇಕ್ಷಾಲಂಕಾರ
ಊರೂರು ; ಲೋಪಸಂಧಿ : : ಮಹೇಶ್ವರ ; _______
ಆಗಮ ಸಂಧಿ
ಆದೇಶ ಸಂಧಿ
ಯಣ್ ಸಂಧಿ
ಗುಣ ಸಂಧಿ
ಲವನು ; ಪ್ರಥಮ ವಿಭಕ್ತಿ : : ಉತ್ತರೀಯದಿಂದ ; ___________
ದ್ವಿತೀಯ ವಿಭಕ್ತಿ
ತೃತೀಯ ವಿಭಕ್ತಿ
ಚತುರ್ಥೀ ವಿಭಕ್ತಿ
ಪಂಚಮಿ ವಿಭಕ್ತಿ
ಬರವಣಿಗೆಯಲ್ಲಿ ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಬರೆಯುವಾಗ ಬಳಸುವ ಲೇಖನ ಚಿಹ್ನೆ :
ಉದ್ಧರಣ ಚಿಹ್ನೆ
ವಿವರಣಾತ್ಮಕ ಚಿಹ್ನೆ
ಆವರಣ ಚಿಹ್ನೆ
ಭಾವಸೂಚಕ ಚಿಹ್ನೆ
ಎರಡು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದರೆ ಅದು:
ಸಾಮಾನ್ಯ ವಾಕ್ಯ
ಸರಳ ವಾಕ್ಯ
ಸಂಯೋಜಿತ ವಾಕ್ಯ
ಮಿಶ್ರ ವಾಕ್ಯ
