Font size
Worksheets೧೦ನೇ ತರಗತಿ, ಪ್ರಥಮ ಭಾಷೆ ಕನ್ನಡ, ಗದ್ಯ ಪಾಠ -೪ ಎದೆಗೆ ಬಿದ್ದ ಅಕ್ಷರ
Total questions: 22
Worksheet time: 11mins
1. ಸಮಾಸವಂದರೆ;
1. ಎರಡು ಅಕ್ಷರಗಳು ಕಾಲವಿಳಂಬವಿಲ್ಲದೇ ಸೇರುವುದು.
2. ಎರಡು ಪದಗಳು ಒಟ್ಟು ಸೇರುವುದು.
3. ಎರಡು ವಾಕ್ಯಗಳು ಒಟ್ಟು ಸೇರುವುದು.
4. ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಅರ್ಥಕ್ಕೆ ಲೋಪ ಬಾರದ ರೀತಿಯಲ್ಲಿ ಒಟ್ಟು ಸೇರಿ ಒಂದು ಪದವಾಗುವುದು.
2. ಸಮಾಸ ಪದವನ್ನು ಬಿಡಿಸಿ ಬರೆಯುವುದಕ್ಕೆ ಹೀಗೆನ್ನುವರು;
1. ಸಂಧಿ ವಿಗ್ರಹ
2. ವಿಗ್ರಹ ವಾಕ್ಯ
3. ವಾಕ್ಯ ವಿಗ್ರಹ
4. ವಿಗ್ರಹ ಕಾಲ
3. ಅರಿ ಸಮಾಸವು ಈ ಪದಗಳ ಸೇರುವಿಕೆಯಿಂದ ಉಂಟಾಗುತ್ತದೆ;
1. ಕನ್ನಡ ಪದ ಮತ್ತು ಸಂಸ್ಕೃತ ಪದಗಳು ಸೇರಿ ಆಗುವುದು.
2. ಸಂಸ್ಕೃತ, ಸಂಸ್ಕೃತ ಪದಗಳು ಸೇರಿ ಆಗುವುದು.
3. ಕನ್ನಡ, ಕನ್ನಡ ಪದಗಳು ಸೇರಿ ಆಗುವುದು.
4. ಕನ್ನಡ ಪದ , ಕನ್ನಡ ಪದ, ಕನ್ನಡ ಪದಗಳು ಸೇರಿ ಆಗುವುದು.
4. ಸಮಾಸದ ರಚನೆಯಲ್ಲಿ ಬಿರುದುಗಳಿಗೆ, ಪೂರ್ವ ಕವಿಗಳ ಪ್ರಯೋಗಗಳಿಗೆ, ಕ್ರಿಯಾ, ಗಮಕ ಸಮಾಸಗಳಿಗೆ ಈ ಸಮಾಸದ ನಿಯಮ ಅನ್ವಯಿಸುವುದಿಲ್ಲ;
1. ಕರ್ಮಧಾರಯ ಸಮಾಸದ ನಿಯಮ
2. ಅರಿ ಸಮಾಸದ ನಿಯಮ
3. ದ್ವಿಗು ಸಮಾಸದ ನಿಯಮ
4. ದ್ವಂದ್ವ ಸಮಾಸದ ನಿಯಮ
5. ಈ ಸಮಾಸದಲ್ಲಿ ಪೂರ್ವ ಮತ್ತು ಉತ್ತರ ಪದಗಳು ನಾಮಪದಗಳಾಗಿದ್ದು, ಉತ್ತರ ಪದದ ಅರ್ಥ ಪ್ರಧಾನವಾಗಿರುತ್ತದೆ;
1. ಕರ್ಮಧಾರಯ ಸಮಾಸ
2. ದ್ವಂದ್ವ ಸಮಾಸ
3. ತತ್ಪುರುಷ ಸಮಾಸ
4. ಗಮಕ ಸಮಾಸ
6. ಈ ಕೆಳಗಿನವುಗಳಲ್ಲಿ ತತ್ಪುರುಷ ಸಮಾಸಕ್ಕೆ ಉದಾಹರಣೆಯಾದ ಪದ;
1. ಧನಹರಣ
2. ಕಟ್ಟೇಕಾಂತ
3. ಇನತನೂಜ
4. ನಡುರಾತ್ರಿ
7.ಪೂರ್ವ ಪದವು ಗುಣವಾಚಕ/ ವಿಶೇಷಣವಾಗಿದ್ದು, ಉತ್ತರ ಪದವು ನಾಮಪದ/ ವಿಶೇಷ್ಯವಾಗಿದ್ದು ಅವರಡು ಸೇರಿ ಆಗುವ ಸಮಾಸವು;
1. ಅಂಶಿ
2. ಗಮಕ
3. ತತ್ಪುರುಷ
4. ಕರ್ಮಧಾರಯ
8. ನಲ್ಗುದುರೆ- ಈ ಪದವು ಈ ಸಮಾಸಕ್ಕೆ ಉದಾ: ;
1. ತತ್ಪುರುಷ
2. ಕರ್ಮಧಾರಯ
3. ಗಮಕ
4. ಕ್ರಿಯಾ
9. ದ್ವಿಗು ಸಮಾಸವೆಂದರೆ;
1. ಸಂಖ್ಯಾವಾಚಕ+ ನಾಮಪದಗಳು ಸೇರಿ ಆಗುವ ಸಮಾಸ.
2. ನಾಮಪದ+ ನಾಮಪದಗಳು ಸೇರಿ ಆಗುವ ಸಮಾಸ.
3. ನಾಮಪದ+ ಕ್ರಿಯಾಪದ ಗಳು ಸೇರಿ ಆಗುವ ಸಮಾಸ.
4. ಅಂಶ+ ಅಂಶಿ ಸೇರಿ ಆಗುವ ಸಮಾಸ.
10. ಮೂಗಾವುದ- ಈ ಪದವು ಈ ಸಮಾಸಕ್ಕೆ ಉದಾ: ;
1. ಗಮಕ
2. ಕ್ರಿಯಾ
3. ದ್ವಿಗು
4. ಕರ್ಮಧಾರಯ
11. ಅಂಶಾಂಶಿ ಭಾವ ಸಂಬಂಧದಿಂದ ಸೇರಿ ಆಗುವ ಸಮಾಸವು;
1. ಕ್ರಿಯಾ
2. ದ್ವಿಗು
3. ದ್ವಂದ್ವ
4. ಅಂಶಿ
ಈ ಪದವು ಅಂಶಿ ಸಮಾಸಕ್ಕೆ ಉದಾಹರಣೆಯಾಗಿದೆ;
1. ಒಗ್ಗಟ್ಟು
2. ಇಮ್ಮಾವು
3. ಕೈಮುಗಿ
4. ನಟ್ಟಡವಿ
13. ನಾಮಪದ+ ಕ್ರಿಯಾಪದ= --------ಸಮಾಸ;
1. ದ್ವಿಗು
2. ಗಮಕ
3. ಕ್ರಿಯಾ
4. ಕರ್ಮಧಾರಯ
14. ಸೊಲ್ಗೇಳಿ- ಈ ಪದವು ಈ ಸಮಾಸಕ್ಕೆ ಉದಾ: ;
1. ಕ್ರಿಯಾ
2. ಅಂಶಿ
3. ದ್ವಂದ್ವ
4.ಗಮಕ
15. ಹೀಗ ದ್ವಂದ್ವ ಸಮಾಸವು ರಚನೆಯಾಗುತ್ತದೆ;
1. ನಾಮಪದ+ ನಾಮಪದ ಸೇರಿ
2. ನಾಮಪದ+ ಕ್ರಿಯಾಪದ ಸೇರಿ
3. ಎರಡು ಅಥವಾ ಹೆಚ್ಚು ನಾಮಪದಗಳು ಸೇರಿ ಸಮಾಸವಾದಾಗ ಉಭಯ ಪದಗಳ ಅರ್ಥ ಪ್ರಧಾನವಾದರೆ ;
4. ಸರ್ವನಾಮ/ ಕೃದಂತ+ ನಾಮಪದ ಸೇರಿ
16. ಸೂರ್ಯಚಂದ್ರರು- ಈ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ;
1. ತತ್ಪುರುಷ
2. ದ್ವಂದ್ವ
3. ಗಮಕ
4. ದ್ವಿಗು
17. ಇದು ಪೂರ್ವೋತ್ತರ ಪದಗಳನ್ನು ಹೊರತುಪಡಿಸಿ ಅನ್ಯ ಪದದ ಅರ್ಥವು ಪ್ರಧಾನವಾಗುಳ್ಳ ಸಮಾಸವಾಗಿದೆ;
1. ಗಮಕ
2. ದ್ವಂದ್ವ
3. ಗಮಕ
4. ಬಹುವ್ರೀಹಿ
18. ಇವುಗಳಲ್ಲಿ ಬಹುವ್ರೀಹಿ ಸಮಾಸಕ್ಕೆ ಉದಾಹರಣೆಯಾದ ಪದ;
1. ದಿವ್ಯಶರಾಳಿ
2. ರಾಮಲಕ್ಷ್ಮಣರು
3. ಅಬ್ಜೋದಪ
4. ನಾಲ್ವಡಿ
19. ಸರ್ವನಾಮ/ ಕೃದಂತ+ ನಾಮಪದ= --------ಸಮಾಸ
1. ಕರ್ಮಧಾರಯ
2. ತತ್ಪುರುಷ
3. ದ್ವಿಗು
4. ಗಮಕ
20. ಈ ಕೆಳಗಿನವುಗಳಲ್ಲಿ ಗಮಕ ಸಮಾಸಕ್ಕೆ ಉದಾಹರಣೆಯಾದ ಪದ;
1. ಮಾಡಿದಡುಗೆ
2. ಹೆದ್ದೊರೆ
3. ನಾಣಿಲಿ
4. ನಟ್ಟಡವಿ
21. ಅಕ್ಷರ - ಈ ಪದದ ತತ್ಸಮ ರೂಪ;
1. ಅಕ್ಷರಾ
2. ಅಕ್ಕಿರಾ
3. ಅಕ್ಕರ
4. ಅಕ್ಕರೆ
22. ದುಃಖ ದುಮ್ಮಾನ - ಈ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ;
1. ಜೋಡುನುಡಿ
2. ದ್ವಿರುಕ್ತಿ
3. ಅನುಕರಣಾವ್ಯಯ
4. ಅವ್ಯಯ
