NEW
Font size
Worksheetsನಾಮಪದ
Total questions: 20
Worksheet time: 10mins
ಸ್ಪಷ್ಟ ಅರ್ಥಕೊಡುವ ಅಕ್ಷರ ಅಥವಾ ಅಕ್ಷರಗಳ ಸಮೂಹವೇ?
ವರ್ಣಮಾಲೆ
ಪದ
ಪ್ರತ್ಯಯ
ಪ್ರಕೃತಿ
ಪದಗಳ ಮೂಲ ರೂಪ?
ಅರ್ಥ
ಪ್ರತ್ಯಯ
ಪ್ರಕೃತಿ
ವಿಭಕ್ತಿ
ಪ್ರಕೃತಿ + ಪ್ರತ್ಯಯ = ?
ಪದ
ನಾಮ
ಸರ್ವನಾಮ
ವಿಭಕ್ತಿ
ವ್ಯಕ್ತಿ, ಸ್ಥಳ, ವಸ್ತುಗಳ ಹೆಸರು ಸೂಚಿಸುವ ಪದಗಳು?
ಕ್ರಿಯಾಪದ
ನಾಮಪದ
ಅವ್ಯಯ
ವಿಶೇಷಣ
ನಾಮಪದಗಳ ಮೂಲ ರೂಪ?
ನಾಮಪ್ರಕೃತಿ
ಧಾತು
ವಿಭಕ್ತಿ ಪ್ರತ್ಯಯ
ಅಖ್ಯಾತ ಪ್ರತ್ಯಯ
ಇದು ರೂಢ ನಾಮಕ್ಕೆ ಉದಾಹರಣೆ.
ಶಾಲೆ
ಮನುಷ್ಯ
ನದಿ
ಮೇಲಿನ ಎಲ್ಲವೂ
ವಿದ್ಯಾರ್ಥಿ, ಶಿಕ್ಷಕ ಪದಗಳು ಈ ನಾಮಪದಕ್ಕೆ ಉದಾಹರಣೆ.
ರೂಢನಾಮ
ಅಂಕಿತನಾಮ
ಅನ್ವರ್ಥಕನಾಮ
ಭಾವನಾಮ
ಇದು ಗುಣವಾಚಕ ಪದಗಳಿಗೆ ಉದಾಹರಣೆ.
ಶೂರ
ರಾಮ
ವಿಜ್ಞಾನಿ
ಶಾಲೆ
ಒಬ್ಬ, ಮುಮ್ಮಡಿ ಇತ್ಯಾದಿ ಪದಗಳು ಈ ವಾಚಕಕ್ಕೆ ಉದಾಹರಣೆ.
ವಸ್ತುವಾಚಕ
ಗುಣವಾಚಕ
ಸಂಖ್ಯಾವಾಚಕ
ಸಂಖ್ಯೇಯವಾಚಕ
"ಅಲ್ಲಿ ಹಲವು ಜನರಿದ್ದಾರೆ" ಈ ವಾಕ್ಯದಲ್ಲಿರುವ ಪರಿಮಾಣವಾಚಕ ಪದ ಯಾವುದು?
ಅಲ್ಲಿ
ಹಲವು
ಜನ
ಇದ್ದಾರೆ
ಗುಂಪಿಗೆ ಸೇರದ ಪದ ಗುರುತಿಸಿ.
ಪೂರ್ವ
ಮೇಲೆ
ಬಲ
ಅಲ್ಲಿ
ಕಪ್ಪು, ನೋಟ, ಹಿರಿಮೆ ಇತ್ಯಾದಿ ಪದಗಳು ಈ ನಾಮಕ್ಕೆ ಉದಾಹರಣೆ.
ಭಾವನಾಮ
ಸರ್ವನಾಮ
ರೂಢನಾಮ
ಅನ್ವರ್ಥಕನಾಮ
ನಾಮಪದಗಳ ಬದಲಿಗೆ ಬಳಸುವ ಪದಗಳು.
ರೂಢನಾಮ
ಭಾವನಾಮ
ಸರ್ವನಾಮ
ಅಂಕಿತನಾಮ
ರಾಮ ಜಾಣ ವಿದ್ಯಾರ್ಥಿ. ಅವನು ತುಂಬ ಬಡವನಾಗಿದ್ದಾನೆ. ಈ ವಾಕ್ಯದಲ್ಲಿರುವ ಸರ್ವನಾಮ ಯಾವುದು?
ಬಡವ
ಜಾಣ
ರಾಮ
ಅವನು
ನಾವು,ನಾನು ಇವುಗಳು ಈ ಸರ್ವನಾಮಕ್ಕೆ ಉದಾಹರಣೆ.
ಪ್ರಥಮ ಪುರುಷ
ಮಧ್ಯಮ ಪುರುಷ
ಉತ್ತಮ ಪುರುಷ
ಅಧಮ ಪುರುಷ
ಇದು ಪ್ರಥಮ ಪುರುಷ ಸರ್ವನಾಮಕ್ಕೆ ಉದಾಹರಣೆ.
ಅವನು
ಅದು
ಇವಳು
ಎಲ್ಲವೂ
"ನೀನು ನಾಳೆ ಶಾಲೆಗೆ ಬರಬೇಕು" ಈ ವಾಕ್ಯದಲ್ಲಿರುವ ಮಧ್ಯಮ ಪುರುಷ ಸರ್ವನಾಮ ಯಾವುದು?
ನೀನು
ನಾಳೆ
ಶಾಲೆ
ಬೇಕು
"ನಿನ್ನ ಹೆಸರೇನು?" ಈ ವಾಕ್ಯದಲ್ಲಿನ ಹೆಸರೇನು ಎಂಬ ಪದವೂ -----
ಪುರುಷಾರ್ಥಕ ಸರ್ವನಾಮ
ಆತ್ಮಾರ್ಥಕ ಸರ್ವನಾಮ
ಪ್ರಶ್ನಾರ್ಥಕ ಸರ್ವನಾಮ
ನಿರ್ದೇಶಾತ್ಮಕ ಸರ್ವನಾಮ
ಇದು ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ.
ನಾನು
ತಾನು
ನೀನು
ನೀವು
ಇದು ಅಂಕಿತನಾಮಕ್ಕೆ ಉದಾಹರಣೆ.
ತನ್ಮಯಿ
ತಾನು
ತವರು
ತಂಗಿ
