NEW
Font size
Worksheetsಕನ್ನಡ ಸಂಧಿಗಳು
Total questions: 20
Worksheet time: 10mins
ಎರಡು ಅಕ್ಷರಗಳು ಪರಸ್ಪರ ಕಾಲ ವಿಳಂಬವಿಲ್ಲದಂತೆ ಅರ್ಥಕ್ಕನುಸಾರವಾಗಿ ಸೇರುವದೇ?
ಸಂಧಿಗಳು
ಲೋಪಸಂಧಿ
ಆಗಮ ಸಂಧಿ
ಸ್ವರಸಂಧಿ
ಸಂಧಿ ಮಾಡುವಾಗ ಮೊದಲ ಪದವನ್ನು ------------- ಎನ್ನುವರು.
ಉತ್ತರಪದ
ಸಮಸ್ತಪದ
ಸಂಧಿಪದ
ಪೂರ್ವಪದ
ಕನ್ನಡ ಸಂಧಿ ಎಂದರೇ?
ಕನ್ನಡ + ಕನ್ನಡ ಪದ / ಕನ್ನಡ + ಸಂಸ್ಕೃತಿ
ಸಂಸ್ಕೃತ + ಸಂಸ್ಕೃತ
ಕನ್ನಡ + ಕನ್ನಡ
ಸಂಸ್ಕೃತ + ಸಂಸ್ಕೃತ / ಸಂಸ್ಕೃತ + ಕನ್ನಡ
ಸ್ವರಕ್ಕೆ ಸ್ವರವೂ ಪರವಾದರೆ ---------- ಎನ್ನುವರು.
ಸ್ವರಸಂಧಿ
ವ್ಯಂಜನಸಂಧಿ
ಆದೇಶ ಸಂಧಿ
ಎಲ್ಲವೂ
ʼಊರೂರುʼ ಈ ಪದದಲ್ಲಿ ನಡೆದಿರುವ ಸಂಧಿಕಾರ್ಯ?
ಆಗಮ
ಆದೇಶ
ಲೋಪ
ಮೇಲಿನ ಎಲ್ಲವೂ
ʼಬಲ್ಲೆನೆಂದುʼ ಈ ಪದ ಬಿಡಿಸಿ ಬರೆದಾಗ?
ಬಲ್ಲೆ + ನೆಂದು
ಬಲ್ಲೆನು + ಎಂದು
ಬಲ್ಲೆ+ ಎಂದು
ಬಲ್ಲ + ಎಂದು
ಸ್ವರದ ಮುಂದೆ ಸ್ವರವು ಬಂದು ಸಂಧಿಕಾರ್ಯ ನಡೆಯುವಾಗ ಆ ಎರಡು ಸ್ವರಗಳ ನಡುವೆ ಹೊಸದೊಂದು ಅಕ್ಷರ ಬರುವದು?
ಲೋಪಸಂಧಿ
ಆಗಮಸಂಧಿ
ಆದೇಶಸಂಧಿ
ವಕಾರಾದೇಶಸಂಧಿ
ಆ, ಇ, ಈ, ಎ, ಏ, ಐ ಈ ಸ್ವರಗಳ ಮುಂದೆ ಸ್ವರ ಪರವಾದ ______ ಅಕ್ಷರ ಆಗಮವಾಗುವದು?
ವ್ ಕಾರ ಆಗಮ
ಯ್ ಕಾರ ಆಗಮ
ಐ ಕಾರ ಆಗಮ
ಮೇಲಿನ ಎಲ್ಲವೂ
ಗುಂಪಿಗೆ ಸೇರದ ಪದವನ್ನು ಗುರುತಿಸಿ.
ಮಗುವಿಗೆ
ಮರವನ್ನು
ಕೆನೆವಾಲು
ಶಾಲೆಯನ್ನು
ಉ, ಊ, ಋ, ಓ ಈ ಅಕ್ಷರಗಳಿಗೆ ಸ್ವರವು ಪರವಾದರೆ ------- ಅಕ್ಷರ ಆಗಮವಾಗುವದು?
ವ್
ಯ್
ವ್ ಅಥವಾ ಯ್
ವ್ ಮತ್ತು ಯ್
ʼ ಮರವನ್ನುʼ ಪದ ಈ ಸಂಧಿಗೆ ಉದಾಹರಣೆಯಾಗಿದೆ?
ಆಗಮ
ಲೋಪ
ಆದೇಶ
ಗುಣಸಂಧಿ
ಇದು ಆಗಮ ಸಂಧಿಗೆ ಉದಾಹರಣೆಯಾದ ಪದ?
ಕೈಯನ್ನು
ಮಳೆಯಿಂದ
ಮೇಲಿನ ಎಲ್ಲವೂ
ಶಾಲೆಯನ್ನು
ಓ ಕಾರದ ಮುಂದೆ ಸ್ವರ ಪರವಾದರೇ?
ಯ್ ಕಾರಾಗಮ
ವ್ ಕಾರಾಗಮ
ಯ್ ಅಥವಾ ವ್ ಕಾರಗಳು
ಮೇಲಿನ ಯಾವುದು ಅಲ್ಲ
ಕನ್ನಡ ವ್ಯಂಜನ ಸಂಧಿ ಎಂದರೇ?
ಸ್ವರ + ಸ್ವರ / ಸ್ವರ + ವ್ಯಂಜನ
ವ್ಯಂಜನ + ವ್ಯಂಜನ
ವ್ಯಂಜನ + ಸ್ವರ
ಸ್ವರ + ವ್ಯಂಜನ / ವ್ಯಂಜನ + ವ್ಯಂಜನ
ಪೂರ್ವೋತ್ತರ ಪದಗಳ ಮಧ್ಯದಲ್ಲಿ ಸಂಧಿ ಕಾರ್ಯ ನಡೆಯುವಾಗ ಒಂದು ಅಕ್ಷರದ ಸ್ಥಾನದಲ್ಲಿ ಮತ್ತೊಂದು ಅಕ್ಷರ ಬರುವದು?
ಲೋಪಸಂಧಿ
ಆಗಮ ಸಂಧಿ
ಆದೇಶ ಸಂಧಿ
ಎಲ್ಲವೂ
ಈ ಕೆಳಗಿನ ಪದಗಳಲ್ಲಿ ಗುಂಪಿಗೆ ಸೇರದ ಪದ ಗುರುತಿಸಿ.
ಮಳೆಗಾಲ
ಬೆಟ್ಟದಾವರೆ
ಕಂಬನಿ
ಕೆನೆವಾಲು
ಉತ್ತರ ಪದದ ಆದಿಯಲ್ಲಿರುವ ಕ್,ತ್,ಪ್ ಗಳಿಗೆ ಕ್ರಮವಾಗಿ ಗ್, ದ್,ಬ್,ಗಳು ಆದೇಶವಾಗಿ ಬರುವದೇ?
ಗದಬಾದೇಶ ಸಂಧಿ
ವಕಾರಾದೇಶ ಸಂಧಿ
ವಕಾರಾಗಮ ಸಂಧಿ
ಯಕಾರಾಗಮ ಸಂಧಿ
ಉತ್ತರ ಪದದ ಆದಿಯಲ್ಲಿರುವ ಪ್,ಬ್, ಮ್ ಗಳಿಗೆ ವ್ ಕಾರ ಆದೇಶವಾಗಿ ಬರುವ ಸಂಧಿ?
ವ್ ಕಾರ ಆದೇಶ ಸಂಧಿ
ವ್ ಕಾರ ಆಗಮಸಂಧಿ
ಯ್ ಕಾರ ಆಗಮಸಂಧಿ
ಮೇಲಿನ ಎಲ್ಲವೂ
"ಬೆಂಬತ್ತು" ಈ ಪದ ________ ಸಂಧಿಗೆ ಉದಾಹರಣೆ.
ಲೋಪಸಂಧಿ
ಆಗಮಸಂಧಿ
ಆದೇಶಸಂಧಿ
ಗುಣಸಂಧಿ
ಸಂಧಿಕಾರ್ಯಗಳು ಆಗಬೇಕಾದ ಕಡೆ ಆಗದೆ ಇದ್ದ ಹಾಗೆಯೇ ಇರುವದನ್ನು _______ ಎನ್ನುವರು.
ಲೋಪಸಂಧಿ
ಪ್ರಕೃತಿಭಾವ
ಆದೇಶಸಂಧಿ
ಆಗಮಸಂಧಿ
