NEW
Font size
Worksheetsಪ್ರ. ಭಾಷೆ ಕನ್ನಡ, ೧೦ನೇ ತರಗತಿ, ಪದ್ಯ ಪಾಠ-೧, ಸಂಕಲ್ಪ ಗೀತೆ
Total questions: 15
Worksheet time: 8mins
1. ವಾಕ್ಯದಲ್ಲಿಯ ಕ್ರಿಯೆಯ ಅರ್ಥವನ್ನು ಪೂರ್ಣಗೊಳಿಸುವ ಅಥವಾ ಕ್ರಿಯೆಯು ಪೂರ್ಣವಾಗಿರುವುದನ್ನು ಸೂಚಿಸುವ ಪದಗಳೇ --------
1. ಕ್ರಿಯಾಪದಗಳು
2. ಕ್ರಿಯಾ ಪ್ರಕೃತಿ
3. ವಿಧ್ಯರ್ಥಕ ಕ್ರಿಯಾಪದ
4. ಸಂಭವನಾರ್ಥಕ ಕ್ರಿಯಾಪದ
2. ಅವಳು ಬರೆದಳು, ಅವಳು ಓಡುತ್ತಾಳೆ, ಅವನು ಹಾಡುವನು- ಈ ವಾಕ್ಯಗಳಲ್ಲಿರುವ ಬರೆದಳು, ಓಡುತ್ತಾಳೆ, ಹಾಡುವನು ಈ ಪದಗಳು -----------
1. ಅರ್ಥರೂಪ ಕ್ರಿಯಾಪದಗಳು
2. ಸಂಭವನಾರ್ಥಕ ಕ್ರಿಯಾಪದಗಳು
3. ವಿಧ್ಯರ್ಥಕ ಕ್ರಿಯಾಪದಗಳು
4. ಕ್ರಿಯಾಪದಗಳು
3. ಧಾತು + ಕಾಲಸೂಚಕ ಪ್ರತ್ಯಯ + ಆಖ್ಯಾತ ಪ್ರತ್ಯಯ= ?
1. ಸಕರ್ಮಕ ಧಾತು
2. ವರ್ತಮಾನ ಕಾಲ
3. ಭೂತ ಕಾಲ
4. ಕ್ರಿಯಾಪದ
4. ಧಾತು (ಕ್ರಿಯಾ ಪ್ರಕೃತಿ) ಎಂದರೆ;
1. ಕ್ರಿಯಾಪದದ ಮೂಲ ರೂಪ.
2. ನಾಮಪದದ ಮೂಲ ರೂಪ.
3. ವಿಭಕ್ತಿ ಪ್ರತ್ಯಯದ ಮೂಲ ರೂಪ..
4. ಪ್ರತ್ಯಯ
5. ಬರು +ವ + ಅನು= ಬರುವನು, ಓಡು + ದ + ಅನು= ಓಡಿದನು, ನೋಡು + ಉತ್ತ + ಆನೆ = ನೋಡುತ್ತಾನೆ- ಬಿಡಿಸಿ ಬರೆದ ಮೇಲಿನ ಕ್ರಿಯಾಪದಗಳಲ್ಲಿ ಬರು, ಓಡು, ನೋಡು ಎಂಬುದು ----------
1. ಕ್ರಿಯಾಪದ
2. ಧಾತು ( ಕ್ರಿಯಾ ಪ್ರಕೃತಿ)
3. ನಾಮ ಪ್ರಕೃತಿ
4. ವಿಭಕ್ತಿ
6. ಸಹಜ ಧಾತು ಮತ್ತು ಸಾಧಿತ ಧಾತು ಇವು -------- ವಿನ 2 ವಿಧಗಳು.
1. ನಾಮ ಪ್ರಕೃತಿ
2. ಅಕರ್ಮಕ ಧಾತು
3. ಧಾತು
4. ಸಕರ್ಮಕ ಧಾತು
7. ಸಹಜ ಧಾತುವೆಂದರೆ;
(ಉದಾ: ಬರೆ, ಓಡು, ತಿನ್ನು...ಇತ್ಯಾದಿ)
1. ಕ್ರಿಯಾಪದದ ಮೂಲರೂಪ.
2. ನಾಮಪದದ ಮೂಲರೂಪ.
3. ಧಾತುವಿಗೆ ಬೇರೊಂದು ನಾಮ ಪ್ರಕೃತಿಯನ್ನೋ, ಪ್ರತ್ಯಯವನ್ನೋ ಸೇರಿಸಿ ಹೊಸ ಧಾತುಗಳನ್ನು ರೂಪಿಸಿಕೊಳ್ಳುವುದು.
4. ಭಾಷೆಯಲ್ಲಿ ಸಹಜವಾಗಿರುವ ಮೂಲಧಾತುಗಳು.
8. ಧಾತುಗಳಿಗೆ ಬೇರೊಂದು ನಾಮ ಪ್ರಕೃತಿಯನ್ನೋ, ಪ್ರತ್ಯಯವನ್ನೋ ಸೇರಿಸಿ ಹೊಸ ಧಾತುಗಳನ್ನು ರೂಪಿಸಿಕೊಂಡರೇ ಅಂತಹ ಧಾತುವಿಗೆ --------- ಎನ್ನುವರು.
1. ಸಹಜ ಧಾತು
2. ಸಾಧಿತ ಧಾತು
3. ಕ್ರಿಯಾ ಪ್ರಕೃತಿ
4. ಧಾತು
9. ಬಾಯಿಯನ್ನು + ಬಿಡು = ಬಾಯಿಬಿಡು, ಕಾಲನ್ನು + ಎಳೆ = ಕಾಲೆಳೆ ಇಲ್ಲಿ ಈ ಧಾತುಗಳು ---------
1. ಸಾಧಿತ ಧಾತು
2. ಸಹಜ ಧಾತು
3. ಧಾತು
4. ಸಕರ್ಮಕ ಧಾತು
10. ಎದ್ದು + ಏಳು= ಎದ್ದೇಳು, ಬಿಟ್ಟು + ಬಿಡು = ಬಿಟ್ಟುಬಿಡು ಈ ಸಾಧಿತ ಧಾತುಗಳ ವಿಶೇಷತೆ;
1. ನಾಮ ಪ್ರಕೃತಿಗೆ ಧಾತುವನ್ನು ಸೇರಿಸಿದೆ.
2. ಧಾತುವಿಗೆ ಇನ್ನೊಂದು ಧಾತು ಸೇರಿಸಿದೆ.
3. ಕೃದಂತ ರೂಪಗಳಿಗೆ ಧಾತು ಸೇರಿಸಿ ಹೊಸ ಧಾತು ಸೃಷ್ಟಿಸಲಾಗಿದೆ.
4. ನಾಮ ಪ್ರಕೃತಿಗೆ 'ಇಸು' ಪ್ರತ್ಯಯ ಸೇರಿಸಿದೆ.
11. ಧಾತುವಿಗೆ ಇನ್ನೊಂದು ಧಾತು ಸೇರಿ ಸಂಯುಕ್ತ ಧಾತುವಾಗಿ ಸಾಧಿತ ಧಾತು ಆಗಿರುವ ರೂಪ;
1.ತೇಲಾಡು, ಕೂಗಾಡು, ಓಡಾಡು
2. ಚಿಂತಿಸು, ಮನ್ನಿಸು, ಗೌರವಿಸು
3. ಕಾಲೆಳೆ, ಕಣ್ತೆರೆ, ಬಾಯಿಬಿಡು
4. ಮಾಡಿಸು, ನಗಿಸು, ಬರೆಯಿಸು
12. ಮನ್ನಿಸು, ಪ್ರಾರ್ಥಿಸು, ನಿಶ್ಚಯಿಸು ಇಲ್ಲಿ ನಾಮ ಪ್ರಕೃತಿಗೆ ------- ಪ್ರತ್ಯಯವು ಸೇರಿ ಸಾಧಿತ ಧಾತುವಾಗಿದೆ.
1.ಯಿಸು
2. ಸು
3. ಇಸು
4. ಈಸು
13. ಧಾತುಗಳ 2 ರೂಪಗಳಿವು;
1. ಅಕರ್ಮಕ ಧಾತು, ಸಾಧಿತ ಧಾತು
2. ಸಹಜ ಧಾತು, ಸಕರ್ಮಕ ಧಾತು
3. ಸಹಜ ಧಾತು, ಧಾತು
4. ಅಕರ್ಮಕ ಧಾತು, ಸಕರ್ಮಕ ಧಾತು
14. ಕರ್ಮಪದವನ್ನು ಬಯಸುವ ಧಾತುಗಳು -------
1. ಅಕರ್ಮಕ ಧಾತುಗಳು
2. ಸಕರ್ಮಕ ಧಾತುಗಳು
3. ಸಾಧಿತ ಧಾತುಗಳು
4. ಸಹಜ ಧಾತುಗಳು
15. ಧಾತುವಿಗೆ ಹಿಂಭಾಗದಲ್ಲಿ' ಏನನ್ನು' ಎಂದು ಪ್ರಶ್ನಿಸಿದಾಗ ಉತ್ತರ ಬರುವಂತಿದ್ದರೆ ಆ ಧಾತುವು ----------
1. ಸಕರ್ಮಕ ಧಾತು
2. ಕ್ರಿಯಾ ಪ್ರಕೃತಿ
3. ಅಕರ್ಮಕ ಧಾತು
4. ಸಹಜ ಧಾತು
