wayground logo

Free Printable Worksheets

NEW

Font size

S
M
L
XL
Worksheets

ಪ್ರಥಮ ಭಾಷೆ ಕನ್ನಡ, ೮ ಮತ್ತು ೯ನೇ ತರಗತಿಯ ವ್ಯಾಕರಣ

Total questions: 10

Worksheet time: 5mins

Name
Class
Date
1.

1. ಪೂರ್ವ ಪದದ ಅಂತ್ಯದಲ್ಲಿರುವ ವರ್ಗ ಪ್ರಥಮಾಕ್ಷರಗಳೊಡನೆ ( ಕ್ ಚ್ ಟ್ ತ್ ಪ್ )ಉತ್ತರ ಪದದ ಆದಿಯಲ್ಲಿರುವ ಅನುನಾಸಿಕ ಅಕ್ಷರಗಳು ಸೇರಿ ಸಂಧಿಯಾದಾಗ ಪೂರ್ವಪದದ ಅಂತ್ಯದಲ್ಲಿರುವ ವರ್ಗ ಪ್ರಥಮಾಕ್ಷರಗಳಿಗೆ (ಕ್ ಚ್ ಟ್ ತ್ ಪ್ ) ಕ್ರಮವಾಗಿ ಅದೇ ವರ್ಗದ ಅನುನಾಸಿಕ ಅಕ್ಷರಗಳು( ಙ್ ಞ್ ಣ್ ನ್ ಮ್) ಆದೇಶವಾಗಿ ಬಂದರೆ ಅದನ್ನು --------- ಸಂಧಿ ಎನ್ನುವರು.

a)

1. ಯಣ್

b)

2. ಶ್ಚುತ್ವ

c)

3. ಜಶ್ತ್ವ

d)

4. ಅನುನಾಸಿಕ

2.

2. ವಾಙ್ಮಯ, ದಿಙ್ಮೂಢ ಈ ಪದಗಳನ್ನು ಬಿಡಿಸಿ ಬರೆದಾಗ ಆಗುವ ರೂಪ ಕ್ರಮವಾಗಿ ----------

a)

1. ವಾಕ್ + ಮಯ, ದಿಕ್ + ಮೂಢ

b)

2. ವಾಙ್+ ಮಯ, ದಿಙ್ + ಮೂಢ

c)

3. ವಾ+ ಮಯ, ದಿ + ಮೂಢ

d)

4. ವಾಙ್ಮ + ಯ, ದಿಙ್ಮೂ + ಢ

3.

3. ಈ ಕೆಳಗಿನವುಗಳಲ್ಲಿ ಪೂರ್ವ ಪದಾಂತ್ಯದಲ್ಲಿ ರುವ 'ಕ್' ಗೆ ಅದೇ ವರ್ಗದ ಅನುನಾಸಿಕ ಅಕ್ಷರ 'ಙ್' ಆದೇಶವಾಗಿ ಬರುವುದಕ್ಕೆ ಉದಾಹರಣೆಯಾದ ಪದಗಳ ಸರಿಯಾದ ರೂಪ-----------

a)

1. ದಿನ್ನಾಗ, ವಾಕ್ಮೂಲ

b)

2. ದಿಙ್ನಾಗ, ವಾಙ್ಮೂಲ

c)

3. ದಿಕ್ಮೂಲ, ವಾಗ್ಮಾಧುರ್ಯ

d)

4. ದಿನ್ಮೂಲ, ವಾಕ್ಮಾಧುರ್ಯ

4.

4. ಷಣ್ಮುಖ, ಷಣ್ಮಾಸ‌ ಈ ಪದಗಳು ------- ಸಂಧಿಗೆ ಉದಾಹರಣೆಯಾಗಿವೆ.

a)

1. ಜಶ್ತ್ವ

b)

2. ಅನುನಾಸಿಕ

c)

3. ಶ್ಚುತ್ವ

d)

4. ಯಣ್

5.

5. ಷಣ್ಮುಖ , ಷಣ್ಮಾಸ ಪದಗಳನ್ನು ಬಿಡಿಸಿ ಬರೆಯುವ ಸರಿಯಾದ ಕ್ರಮ ಅನುಕ್ರಮವಾಗಿ--------

a)

1. ಷಣ್ + ಮುಖ, ಷಣ್ + ಮಾಸ

b)

2. ಷಣ್ಮು+ ಖ , ಷಣ್ಮಾ+ ಸ

c)

3. ಷಟ್ + ಮುಖ, ಷಟ್ + ಮಾಸ

d)

4. ಷ+ ಣ್ಮುಖ , ಷ + ಣ್ಮಾಸ

6.

6. ಉನ್ಮಾದ, ತನ್ಮಯ, ಚಿನ್ಮಯ ಈ ಪದಗಳು ------- ಸಂಧಿಗೆ ಉದಾಹರಣೆಯಾಗಿವೆ.

a)

1. ಜಶ್ತ್ವ ಸಂಧಿ

b)

2. ಶ್ಚುತ್ವ ಸಂಧಿ

c)

3. ಯಣ್ ಸಂಧಿ

d)

4. ಅನುನಾಸಿಕ ಸಂಧಿ

7.

7. ಉತ್+ ಮಾದ, ತತ್+ ಮಯ, ಚಿತ್ + ಮಯ ಈ ಪದಗಳನ್ನು ಕೂಡಿಸಿ ಬರೆದಾಗ ಆಗುವ ಸರಿಯಾದ ರೂಪ ಅನುಕ್ರಮವಾಗಿ --------

a)

1. ಉಮ್ಮಾದ, ತಮ್ಮಾದ, ಚಿಮ್ಮಯ

b)

2. ಉತ್ಮಾದ, ತದ್ಮಯ, ಚಿದ್ಮಯ

c)

3. ಉನ್ಮಾದ, ತನ್ಮಯ, ಚಿನ್ಮಯ

d)

ಉಮಾದ, ತಮಾದ, ಚಿಮಯ

8.

8. ಈ ಕೆಳಗಿನವುಗಳಲ್ಲಿ ಅನುನಾಸಿಕ ಸಂಧಿಗೆ ಉದಾಹರಣೆಯಾದ ಪದ -----------

a)

1. ಅಮ್ಮಯ

b)

2. ಚಿದಾನಂದ

c)

3. ಪಯಶ್ಯಯನ

d)

4. ಮೆಲ್ವಾತು

9.

9.ರಾಮ+ ಅನ್ನು= ರಾಮನನ್ನು - ಈ ಪದದಲ್ಲಿರುವ ನಾಮಪದದ ಮೂಲರೂಪ -----------

a)

1. ರಾಮನನ್ನು

b)

2. ರಾಮ

c)

3. ರಾಮನ

d)

4. ರಾಮ+ಅ

10.

10. ನಾಮಪದದ ಮೂಲರೂಪವನ್ನು ------ ಎನ್ನುವರು.

a)

1. ನಾಮಪದ

b)

2. ವಿಭಕ್ತಿ ಪ್ರತ್ಯಯ

c)

3. ನಾಮ ವಿಭಕ್ತಿ

d)

4. ನಾಮ ಪ್ರಕೃತಿ