Worksheetsಪ್ರಥಮ ಭಾಷೆ ಕನ್ನಡ, ೮ ಮತ್ತು ೯ನೇ ತರಗತಿಯ ವ್ಯಾಕರಣ.
Total questions: 10
Worksheet time: 5mins
1. ಈ ಕೆಳಗಿನವುಗಳಲ್ಲಿ ಅನ್ವರ್ಥ ನಾಮಕ್ಕೆ ಉದಾಹರಣೆಯಾದ ಪದಗಳ ಗುಂಪು ---------
1. ಲಕ್ಷ್ಮಣ, ಮೂಗ, ಭಾರತಿ
2. ನದಿ, ಹುಲಿ, ಮನೆ
3. ರಾಮ, ಸಹದೇವ, ಸಿರಸಿ
4. ಕುರುಡ, ಬಡಗಿ, ವಿದ್ಯಾರ್ಥಿ
2. ನಾಮವಾಚಕಗಳ ಗುಣ ಲಕ್ಷಣಗಳನ್ನು ವರ್ಣಿಸುವ ಪದಗಳನ್ನು ------------ ಎನ್ನುವರು.
1. ಗುಣವಾಚಕಗಳು
2. ಪ್ರಕಾರವಾಚಕಗಳು
3. ಸಂಖ್ಯಾವಾಚಕಗಳು
4. ಪರಿಮಾಣವಾಚಕಗಳು
3. ಈ ಕೆಳಗಿನವುಗಳಲ್ಲಿ ಗುಣವಾಚಕಕ್ಕೆ ಉದಾಹರಣೆಯಾದ ಪದಗಳ ಗುಂಪು ---------
1. ಒಂದು, ಹತ್ತು, ಲಕ್ಷ
2. ಒಳ್ಳೆಯ, ಕೆಟ್ಟ, ದೊಡ್ಡದು
3. ಐವರು, ನಾಲ್ಕನೆಯ, ಹತ್ತನೆಯ
4. ಪೂರ್ವ, ಬಡಗಣ, ತೆಂಕಣ
4. ಸಂಖ್ಯೆಯನ್ನು ಸೂಚಿಸುವ ಪದಗಳನ್ನು --------- ಎನ್ನುವರು.
1. ದಿಗ್ವಾಚಕ
2. ಸಂಖ್ಯೇಯ ವಾಚಕ
3. ಸಂಖ್ಯಾವಾಚಕ
4. ಗುಣವಾಚಕ
5. ಈ ಕೆಳಗಿನವುಗಳಲ್ಲಿ ಸಂಖ್ಯಾವಾಚಕಕ್ಕೆ ಉದಾಹರಣೆಯಲ್ಲದ ಪದಗಳ ಗುಂಪು ---------
1. ಹತ್ತನೆಯ , ನಾಲ್ವರು, ಮೂರನೆಯ
2. ಎಂಟು, ಹತ್ತು, ಏಳು
3. ನೂರು, ಲಕ್ಷ, ಕೋಟಿ
4. ಸಾವಿರ, ಐದು ನೂರು, ನೂರು
6. ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ಕುರಿತು ಹೇಳುವ ಪದಗಳನ್ನು --------- ಎನ್ನುವರು.
1. ದಿಗ್ವಾಚಕ
2. ಸಂಖ್ಯಾವಾಚಕ
3. ಸಂಖ್ಯೇಯ ವಾಚಕ
4. ಪ್ರಕಾರ ವಾಚಕ
7. ಮೂವರು, ಹನ್ನೆರಡನೆಯ, ಎಂಬತ್ತನೆಯ ಈ ಪದಗಳು ------- ವಾಚಕಗಳಿಗೆ ಉದಾಹರಣೆಯಾಗಿದೆ.
1. ಪ್ರಕಾರ ವಾಚಕ
2. ಪರಿಮಾಣ ವಾಚಕ
3. ಸಂಖ್ಯಾವಾಚಕ
4. ಸಂಖ್ಯೇಯ ವಾಚಕ
8. ಸಂಖ್ಯೇಯ ವಾಚಕವು ಸಂಖ್ಯೆಗಳ ಜೊತೆ ಸಾದಾರಣವಾಗಿ ಈ -------- ಪ್ರತ್ಯಯವನ್ನು ಸೇರಿಸಿಕೊಳ್ಳುತ್ತದೆ.
ಇ, ಉ
2. ಅನೆಯ, ಅರು
3. ಆ, ಇಯೆ
4. ಉ, ಅರು
9. ಪ್ರಮಾಣವನ್ನು ಸೂಚಿಸುವ ಪದಗಳನ್ನು ------- ಎನ್ನುವರು.
1. ಪರಿಮಾಣ ವಾಚಕ
2. ಪ್ರಕಾರ ವಾಚಕ
3. ಸಂಖ್ಯಾವಾಚಕ
4. ಸಂಖ್ಯೇಯ ವಾಚಕ
10. ಈ ಕೆಳಗಿನವುಗಳಲ್ಲಿ ಪರಿಮಾಣ ವಾಚಕಕ್ಕೆ ಉದಾಹರಣೆಯಾದ ಪದಗಳ ಗುಂಪು --------
1. ಬಡಗಣ, ಆಚೆ, ಕೆಳಗೆ
2. ಹತ್ತು, ಹತ್ತನೆಯ, ಮೂರು
3. ಕೆಟ್ಟ, ಹಳತು, ದೊಡ್ಡದು
4. ಅಷ್ಟು, ಕೆಲವು, ಇನಿತು
