Font size
Worksheets8th ಸಸ್ಯಗಳ ಮತ್ತು ಪ್ರಾಣಿಗಳ ಸಂರಕ್ಷಣೆ
Total questions: 20
Worksheet time: 12mins
ಅರಣ್ಯ ನಾಶದಿಂದ ಈ ಅನಿಲದ ಪ್ರಮಾಣ ಹೆಚ್ಚಾಗುತ್ತದೆ ?
ಇಂಗಾಲದ ಡಯಾಕ್ಸೈಡ್ ( CO2 )
ಇಂಗಾಲದ ಮಾನಾಕ್ಸೈಡ್ (CO)
ಗಂಧಕದ ಡೈ ಆಕ್ಸೈಡ್ ( SO2 )
ನೈಟ್ರೋಜನ್ ಡಯಾಕ್ಸೈಡ್ (NO2 )
ಇಂಗಾಲದ ಡೈ ಆಕ್ಸೈಡ್ ಅನಿಲವು ಜಾಗತಿಕ ತಾಪಮಾನ ಏರಿಕೆಗೆ ಹೇಗೆ ಕಾರಣವಾಗುತ್ತದೆ ?
ವಾತಾವರಣದಲ್ಲಿ ಸಂಗ್ರಹವಾದ ಇಂಗಾಲದ ಡೈ ಆಕ್ಸೈಡ್ ಅನಿಲವು ಶಾಖವನ್ನು ಹೀರಿಕೊಳ್ಳುತ್ತದೆ
ಇಂಗಾಲದ ಡೈ ಆಕ್ಸೈಡ್ ಅನಿಲವು ಶಾಖವು ಒಳಬರದಂತೆ ತಡೆಯುತ್ತದೆ
ಇಂಗಾಲದ ಡೈ ಆಕ್ಸೈಡ್ ಅನಿಲವು ಶಾಖವನ್ನು ಹೊರಹೋಗುವಂತೆ ಮಾಡುತ್ತದೆ
ಇಂಗಾಲದ ಡೈಯಾಕ್ಸೈಡ್ ಪದರವು ಶಾಖವು ಭೂಮಿಯಿಂದ ಹೊರ ಹೋಗದಂತೆ ತಡೆಯುತ್ತದೆ
ಅರಣ್ಯ ನಾಶಕ್ಕೆ ನೈಸರ್ಗಿಕ ಕಾರಣ ಯಾವುದು?
ಕಾಡ್ಗಿಚ್ಚು
ಬರಗಾಲ
ಪ್ರವಾಹ
ಈ ಮೂರು ಕಾರಣಗಳು ಹೌದು
ಮಾನವನು ಈ ಕೆಳಗಿನ ಉದ್ದೇಶಕ್ಕಾಗಿ ಅರಣ್ಯದಲ್ಲಿರುವ ಮರಗಳನ್ನು ಕಡಿಯುತ್ತಾನೆ?
ವ್ಯವಸಾಯ ಭೂಮಿಯನ್ನಾಗಿ ಪರಿವರ್ತಿಸಲು
ಮನೆಗಳನ್ನು ಮತ್ತು ಕಾರ್ಖಾನೆಗಳನ್ನು ನಿರ್ಮಿಸಲು
ಪೀಠೋಪಕರಣಗಳನ್ನು ತಯಾರಿಸಲು ಮತ್ತು ಉರುವ ಲಾಗಿ ಉಪಯೋಗಿಸಲು
ಇಲ್ಲಿ ಸೂಚಿಸಿರುವ ಎಲ್ಲಾ ಕಾರಣಗಳಿಗಾಗಿ ಮರಗಳನ್ನು ಕಡಿಯುತ್ತಾನೆ
ಆಯಾ ಪ್ರದೇಶಗಳಲ್ಲಿರುವ ಸಸ್ಯಗಳು ಮತ್ತು ಪ್ರಾಣಿಗಳನ್ನು ಸಂರಕ್ಷಿಸುವುದಕ್ಕಾಗಿ ಇರುವ ಪ್ರದೇಶಗಳೆಂದರೆ
ವನ್ಯಜೀವಿಧಾಮಗಳು
ರಾಷ್ಟ್ರೀಯ ಉದ್ಯಾನಗಳು
ಮೀಸಲು ಜೀವಿಗೋಳ
ಈ ಮೂರು ಪ್ರದೇಶಗಳು ಸಂರಕ್ಷಣೆಗಾಗಿ ಇವೆ
ಪ್ರಾಣಿಗಳಿಗೆ ಮತ್ತು ಅವುಗಳ ನೈಸರ್ಗಿಕ ಆವಾಸಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ವನ್ಯಜೀವಿಗಳನ್ನು ಸಂರಕ್ಷಿಸುವ ಪ್ರದೇಶ ಯಾವುದು ?
ವನ್ಯಜೀವಿಧಾಮ
ರಾಷ್ಟ್ರೀಯ ಉದ್ಯಾನ
ಮೀಸಲು ಜೀವಿಗೊಳ ಅಥವಾ ರಕ್ಷಿತಾ ಜೀವಿಗೋಳ
ಇವುಗಳಲ್ಲಿ ಯಾವುದು ಅಲ್ಲ
ವನ್ಯಜೀವಿಗಳು ತಮ್ಮ ಆವಾಸ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸ್ವತಂತ್ರವಾಗಿ ಬಳಸಿಕೊಂಡು ಬದುಕಲೆಂದೇ ಮೀಸಲಿರಿಸಿದ ಪ್ರದೇಶ ಯಾವುದು ?
ವನ್ಯಜೀವಿಧಾಮ
ರಾಷ್ಟ್ರೀಯ ಉದ್ಯಾನ
ಮೀಸಲು ಜೀವಿಗೊಳ ಅಥವಾ ರಕ್ಷಿತಾ ಜೀವಿಗೋಳ
ಇವುಗಳಲ್ಲಿ ಯಾವುದು ಅಲ್ಲ
ಸಸ್ಯ ಮತ್ತು ಪ್ರಾಣಿ ಸಂಪನ್ಮೂಲಗಳು ಮತ್ತು ಈ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರ ಸಾಂಪ್ರದಾಯಿಕ ಜೀವನವನ್ನು ಸಂರಕ್ಷಿಸುವುದಕ್ಕಾಗಿ ಗುರುತಿಸಲಾಗಿರುವ ಬೃಹತ್ತಾದ ಸಂರಕ್ಷಿತ ಪ್ರದೇಶ ಯಾವುದು ?
ವನ್ಯಜೀವಿಧಾಮ
ರಾಷ್ಟ್ರೀಯ ಉದ್ಯಾನ
ಮೀಸಲು ಜೀವಿಗೊಳ ಅಥವಾ ರಕ್ಷಿತಾ ಜೀವಿಗೋಳ
ಇವುಗಳಲ್ಲಿ ಯಾವುದು ಅಲ್ಲ
ಪಚ್ ಮಡಿ ಮೀಸಲು ಜೀವಿಗಳ ದಲ್ಲಿ ಕಂಡುಬರುವ ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ಧಾಮಗಳು ಯಾವುವು ?
ಸಾತ್ಪುರ ರಾಷ್ಟ್ರೀಯ ಉದ್ಯಾನ
ಬೋರಿ ವನ್ಯಜೀವಿಧಾಮ
ಪಚ್ ಮಡಿ ವನ್ಯಜೀವಿ ಧಾಮ
ಈ ಮೂರು ಪ್ರದೇಶಗಳನ್ನು ಕಾಣಬಹುದು
ಪಚ್ ಮಡಿ ಮೀಸಲು ಜೀವಗೋಳದಲ್ಲಿ ಕಂಡುಬರುವ ಸ್ಥಳೀಯ ಪ್ರಭೇದಗಳೆಂದರೆ
ಸಾಲ್ ಮತ್ತು ಕಾಡು ಮಾವು
ಕಾಡೆಮ್ಮೆ, ಕೆಂದಳಿಲು ಮತ್ತು ಹಾರುವ ಅಳಿಲು
ಜಿಂಕೆ ಮತ್ತು ತೋಳ
ಚಿರತೆ ಮತ್ತು ಕಾಡು ನಾಯಿ
ತಮ್ಮ ತಮ್ಮೊಳಗೆ ಸಂತಾನೋತ್ಪತ್ತಿ ಮಾಡಿಕೊಳ್ಳಬಲ್ಲ ಜೀವಿಗಳ ಗುಂಪಿಗೆ....................... ಎನ್ನುತ್ತಾರೆ
ಪ್ರಭೇದ
ಜಾತಿ
ಗಣ
ವರ್ಗ
ಯಾವ ಪ್ರಾಣಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು ಮುಂದೆ ಸಂಪೂರ್ಣವಾಗಿ ನಿರ್ವಂಶವಾಗುವ ಸಾಧ್ಯತೆ ಇದೆಯೋ ಅಂತ ಪ್ರಾಣಿಗಳಿಗೆ -----------==-===== ಎನ್ನುತ್ತಾರೆ
ಅಪಾಯದ ಅಂಚಿನಲ್ಲಿರುವ ಪ್ರಾಣಿಗಳು
Endangered animals ಎನ್ಡೇಂಜರ್ಡ್ ಅನಿಮಲ್ಸ್
ಬದುಕಲು ಹವಣಿಸುತ್ತಿರುವ ಪ್ರಾಣಿಗಳು
ಅಳಿದು ಹೋಗಿರುವ ಪ್ರಾಣಿಗಳು
ಅಪಾಯಕ್ಕೆ ಒಳಗಾದ ಎಲ್ಲಾ ಪ್ರಾಣಿಗಳ ಮತ್ತು ಸಸ್ಯಗಳ ದಾಖಲೆಯನ್ನು ಒಳಗೊಂಡಿರುವ ಪುಸ್ತಕ
ಕೆಂಪು ಪುಸ್ತಕ
ಕೆಂಪು ದತ್ತಾಂಶ ಪುಸ್ತಕ
RED DATA BOOK
RED BOOK
ಪಕ್ಷಿಗಳು ವಲಸೆ ಹೋಗಲು ಕಾರಣಗಳು
ಅತಿಯಾದ ಚಳಿ
ನೀರು ಮತ್ತು ಆಹಾರದ ಕೊರತೆ
ಹವಾಮಾನದಲ್ಲಿನ ಬದಲಾವಣೆಗಳು
ಈ ಎಲ್ಲಾ ಕಾರಣಗಳಿಗಾಗಿ ಪಕ್ಷಿಗಳು ವಲಸೆ ಹೋಗುತ್ತವೆ
ನಾಶವಾದ ಅರಣ್ಯ ಪ್ರದೇಶಗಳಲ್ಲಿ ಹೊಸ ಸಸ್ಯಗಳನ್ನು ನೆಟ್ಟು ಬೆಳೆಸುವುದಕ್ಕೆ...................... ಎನ್ನುತ್ತಾರೆ
ಅರಣ್ಯೀಕರಣ
ಮರು ಅರಣ್ಯೀಕರಣ
Reforestation
Deforestation
ನಿರ್ದಿಷ್ಟ ಪ್ರದೇಶದಲ್ಲಿರುವ ವಿವಿಧ ರೀತಿಯ ಜೀವಿಗಳನ್ನು ಒಟ್ಟಾಗಿ...................... ಎನ್ನುತ್ತಾರೆ
ಜೀವ ವೈವಿಧ್ಯತೆ
Biodiversity
ಜೀವಿಗೋಳ
ಪರಿಸರ ವ್ಯವಸ್ಥೆ
ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಕಂಡುಬರುವ ಜೀವಿ ಪ್ರಭೇದಗಳಿಗೆ........................ ಎನ್ನುತ್ತಾರೆ
ಸ್ಥಳೀಯ ಪ್ರಭೇದ
Endemic species
ಅಳಿದು ಹೋದ ಪ್ರಭೇದ
ಅಪಾಯಕ್ಕೆ ಒಳಗಾದ ಪ್ರಭೇದ
ಮರಗಳು, ಶಕ್ತಿ ಮತ್ತು ನೀರನ್ನು ಉಳಿಸಲು ನಾವು ಈ ಕೆಳಕಂಡ ಕ್ರಮಗಳನ್ನು ಅನುಸರಿಸಬೇಕು
ಕಾಗದದ ಉಳಿತಾಯ ಮಾಡಬೇಕು
ಕಾಗದದ ಮರುಬಳಕೆ ಮಾಡಬೇಕು
ಕಾಗದದ ಮರುಚಕ್ರೀಕರಣ ಮಾಡಬೇಕು
ಈ ಎಲ್ಲಾ ಕ್ರಮಗಳಿಂದ ಶಕ್ತಿ ನೀರು ಮತ್ತು ಮರಗಳನ್ನು ಉಳಿಸಬಹುದು
ಮಂಡ್ಯ ಜಿಲ್ಲೆಯಲ್ಲಿರುವ ಪ್ರಸಿದ್ಧ ಪಕ್ಷಿ ಧಾಮ ಯಾವುದು?
ರಂಗನತಿಟ್ಟು
ರಾಮದೇವರ ಬೆಟ್ಟ
ನಂದಿ ಬೆಟ್ಟ
ಮಹದೇಶ್ವರ ಬೆಟ್ಟ
ಪ್ರಸಿದ್ಧ ನವಿಲುಧಾಮ ಮಂಡ್ಯ ಜಿಲ್ಲೆಯ ಯಾವ ಸ್ಥಳದಲ್ಲಿ ಕಂಡು ಬರುತ್ತದೆ?
ರಂಗನತಿಟ್ಟು
ಆದಿಚುಂಚನಗಿರಿ
ಕೊಕ್ಕರೆಬೆಳ್ಳೂರು
ಗೆಂಡೆ ಹೊಸಹಳ್ಳಿ
