wayground logo

Free Printable Worksheets

NEW

Font size

S
M
L
XL
Worksheets

ಜೀವಕ್ರಿಯೆಗಳು ಭಾಗ ೨

Total questions: 22

Worksheet time: 11mins

Name
Class
Date
1.

ಸಸ್ಯಗಳಲ್ಲಿ ನೀರಿನ ಸಾಗಾಣಿಕೆಗೆ ಕಾರಣವಾಗುವ ಅಂಶ.

a)

ಅಯಾನುಗಳ ಸಾರತೆಯ ವ್ಯತ್ಯಾಸ.

b)

ಬೇರಿನ ಒತ್ತಡದ ಪರಿಣಾಮ

c)

ಭಾಷ್ಪವಿಸರ್ಜನೆಯಿಂದಾದ ಸೆಳೆತ

d)

ಗುರುತ್ವಾಕರ್ಷಣ ಬಲ.

2.

ವಿಲೀನಗೊಳ್ಳಬಲ್ಲ ದ್ಯುತಿಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆಯನ್ನು ಹೀಗೆನ್ನುವರು.

a)

ವಿಸರಣೆ

b)

ಭಾಷ್ಪವಿಸರ್ಜನೆ

c)

ವಸ್ತು ಸ್ಥಾನಾಂತರಣ

d)

ಜಲ ಸಾಗಾಣಿಕೆ

3.

ಈ ಕೆಳಗಿನವುಗಳಲ್ಲಿ ದುಗ್ಧರಸ ಕಾರ್ಯ

a)

ಕರುಳಿನಿಂದ ಹೀರಲ್ಪಟ್ಟ ಕೊಬ್ಬಿನ ಸಾಗಾಣಿಕೆ

b)

ರೋಗಕಾರಕ ಸೂಕ್ಷ್ಮ ಜೀವಿಗಳ ನಾಶ

c)

ಜೀವಕೋಶದ ಹೊರಗಿರುವ ಹೆಚ್ಚಿನ ದ್ರವವನ್ನು ಮತ್ತೆ ರಕ್ತಕ್ಕೆ ಹರಿಯುವಂತೆ ಮಾಡುತ್ತದೆ.

d)

ಮೇಲಿನ ಎಲ್ಲವೂ

4.

ಪಕ್ಷಿಗಳಲ್ಲಿ ಆಕ್ಸಿಜನ್ ಯುಕ್ತ ಮತ್ತು ಆಕ್ಸಿಜನ್ ರಿಕ್ತ ರಕ್ತವನ್ನು ಪ್ರತ್ಯೇಕಿಸುವುದು ಅಗತ್ಯ ಏಕೆಂದರೆ,

a)

ದೇಹದ ಉಷ್ಣತೆಯ ವಾತಾವರಣಕ್ಕೆ ತಕ್ಕಂತೆ ಬದಲಾಗುತ್ತದೆ.

b)

ಶಕ್ತಿ ಅವಶ್ಯಕತೆ ಕಡಿಮೆ

c)

ಶೀತರಕ್ತ ಪ್ರಾಣಿಗಳು

d)

ದೇಹದ ಉಷ್ಣತೆ ಕಾಪಾಡಲು ನಿರಂತರ ಶಕ್ತಿ ಬೇಕು

5.

ಆಮ್ಲಜನಕವಿರುವ ರಕ್ತದ ಹರಿಯುವಿಕೆ

a)

ಶ್ವಾಸಕೋಶ -> ಹೃದಯ -> ಜೀವಕೋಶ

b)

ಹೃದಯ -> ಶ್ವಾಸಕೋಶ ->ಜೀವಕೋಶ

c)

ಶ್ವಾಸಕೋಶ-> ಜೀವಕೋಶ-> ಹೃದಯ

d)

ಹೃದಯ -> ಜೀವಕೋಶ -> ಶ್ವಾಸಕೋಶ

6.

ಸಸ್ಯಗಳಲ್ಲಿ ತ್ಯಾಜ್ಯಗಳು ವಿಸರ್ಜಿಸಲ್ಪಡುವ ವಿಧಾನಗಳು

a)

ಎಲೆಗಳನ್ನು ಉದರಿಸುವ ಮೂಲಕ

b)

ಅಂಟು ಮತ್ತು ರಾಗಗಳ ರೂಪದಲ್ಲಿ

c)

ಗಿಡದ ತೊಗಟೆಯ ಮೂಲಕ

d)

ಮೇಲಿನ ಎಲ್ಲವೂ

7.

ಉಚ್ಚ ಮತ್ತು ನೀಚ ಅಭಿಧಮನಿಗಳು ರಕ್ತ ಸರಬರಾಜು ಮಾಡುವುದು.

a)

ಹೃದಯದಿಂದ ಜೀವಕೋಶಗಳಿಗೆ

b)

ಜೀವಕೋಶಗಳಿಂದ ಹೃದಯಕ್ಕೆ

c)

ಹೃದಯದಿಂದ ಶ್ವಾಸಕೋಶಗಳಿಗೆ

d)

ಶ್ವಾಸಕೋಶಗಳಿಂದ ಹೃದಯಕ್ಕೆ

8.

ಜೀವಿಗಳ ದೇಹದಲ್ಲಿ ಉತ್ಪತ್ತಿಯಾದ ತ್ಯಾಜ್ಯ ವಸ್ತುಗಳನ್ನು ಹೊರ ಹಾಕುವ ಕ್ರಿಯೆಗೆ ಹೀಗೆನ್ನುವರು.

a)

ವಿಸರ್ಜನೆ

b)

ಜೀರ್ಣಕ್ರಿಯೆ

c)

ರಕ್ತ ಪರಿಚಲನೆ

d)

ಉಸಿರಾಟ

9.

ಪರಪೋಷಕ ಜೀವಿಗಳು ಇವುಗಳ ಸಹಾಯದಿಂದ ಆಹಾರದಲ್ಲಿನ ಸಂಕೀರ್ಣ ಘಟಕಗಳನ್ನು ಸರಳ ಘಟಕಗಳನ್ನಾಗಿ ಪರಿವರ್ತಿಸುತ್ತವೆ.

a)

ವೈರಸ್

b)

ಬ್ಯಾಕ್ಟೀರಿಯ

c)

ಕಿಣ್ವಗಳು

d)

ಶೀಲಿಂದ್ರ

10.

ಇವುಗಳಲ್ಲಿ ಯಾವ ಜೀವಿ ತನ್ನ ಆಹಾರವನ್ನು ತಾನೇ ತಯಾರಿಸಿಕೊಳ್ಳುತ್ತದೆ.

a)

ಕಪ್ಪೆ

b)

ಮಿಡತೆ

c)

ಹುಲ್ಲು

d)

ಇರುವೆ

11.

ಸಸ್ಯದ ಎಲೆಗಳಲ್ಲಿರುವ ಅನಿಲಗಳ ವಿನಿಮಯ ಮತ್ತು ನೀರಿನ ವಿಸರ್ಜನೆ ಮಾಡುವ ಭಾಗಗಳು

a)

ಪತ್ರಹರಿತ್ತು

b)

ಪತ್ರರಂದ್ರ

c)

ಪತ್ರಶೀಲತ್ವ

d)

ಕೋಶಭಿತ್ತಿ

12.

ಲಾಲಾರಸದಲ್ಲಿರುವ ಕಿಣ್ವ

a)

ಅಮೈಲೇಸ್

b)

ಮಾಲ್ಟೋಸ್

c)

ಪೆಪ್ಸಿನ್

d)

ರೆನಿನ್

13.

ಮಾನವರ ಶ್ವಾಸಕೋಶದಲ್ಲಿ ಕಂಡುಬರುವ ಗಾಳಿಚೀಲಗಳು

a)

ಕವಾಟಗಳು

b)

ಅಲ್ವಿಯೋಲೈಗಳು

c)

ಬ್ರಾಂಕೈಗಳು

d)

ಹೃತ್ಕರ್ಣಗಳು

14.

ಆಮ್ಲಜನಕದ ಕೊರತೆಯಿಂದ ಸ್ನಾಯುಗಳಲ್ಲಿ ಸ್ನಾಯು ಸೆಡೆತಕ್ಕೆ ಕಾರಣವಾದ ಆಮ್ಲ ಯಾವುದು?

a)

ಲ್ಯಾಕ್ಟಿಕ್ ಆಮ್ಲ

b)

ಸಿಟ್ರಿಕ್ ಆಮ್ಲ

c)

ಟಾರ್ಟಾರಿಕ್ ಆಮ್ಲ

d)

ಫಾರ್ಮಿಕ್ ಆಮ್ಲ

15.

ಸಣ್ಣ ಕರುಳಿನಲ್ಲಿ ಕಂಡುಬರುವ ಜೀರ್ಣಿಸಿದ ಆಹಾರವನ್ನು ಹೀರಿಕೊಳ್ಳುವ ರಚನೆಗಳು.

a)

ಅಲ್ವಿಯೋಲೈಗಳು

b)

ವಿಲ್ಲೈಗಳು

c)

ಪತ್ರರಂದ್ರಗಳು

d)

ದೊಡ್ಡ ಕರುಳು

16.

ಮಾನವನ ರಕ್ತ ಸಾಗಾಣಿಕ ವ್ಯೂಹದ ಭಾಗವಲ್ಲ.

a)

ರಕ್ತ

b)

ರಕ್ತನಾಳಗಳು

c)

ಹೃದಯ

d)

ನೆಫ್ರಾನ್

17.

ಕೆಂಪು ರಕ್ತಕಣಗಳು ಉತ್ಪತ್ತಿಯಾಗುವುದು.

a)

ಅಸ್ಥಿ ಮಜ್ಜೆಯಲ್ಲಿ

b)

ಮೃದ್ವಸ್ಥಿ ಯಲ್ಲಿ

c)

ಪಿತ್ತಜನಕಾಂಗದಲ್ಲಿ

d)

ಹೃದಯದಲ್ಲಿ

18.

ಕೆಂಪು ರಕ್ತ ಕಣಗಳ ಆಯುಷ್ಯ ಸುಮಾರು ----------- ದಿನಗಳು.

a)

365

b)

28

c)

120

d)

420

19.

ಆರೋಗ್ಯವಂತ ಮನುಷ್ಯನಲ್ಲಿ ಒಂದು ನಿಮಿಷಕ್ಕೆ

--------- ಸಲ ಹೃದಯಬಡಿತವಾಗುತ್ತದೆ.

a)

90

b)

100

c)

1500

d)

72

20.

ಹೃದಯ ಬಡಿತವನ್ನು ಅಳೆಯಲು ಬಳಸುವ ಉಪಕರಣ --------------.

a)

ಸ್ಟೆತೋಸ್ಕೋಪ್

b)

ಸ್ಫಿಗ್ಮೋಮನೋಮೀಟರ್

c)

ಥರ್ಮೋಮೀಟರ್

d)

ಅಮ್ಮೀಟರ್

21.

ರಕ್ತದ ಒತ್ತಡವನ್ನು ಅಳೆಯಲು ಬಳಸುವ ಉಪಕರಣ -----------------.

a)

ಸ್ಫಿಗ್ಮೋಮನೋಮೀಟರ್

b)

ಮೈಕ್ರೋಸ್ಕೋಪ್

c)

ಸ್ಟೆತೋಸ್ಕೋಪ್

d)

ಥರ್ಮೋಮೀಟರ್

22.

ಶಿಥಿಲವಾದ ಕೆಂಪು ರಕ್ತ ಕಣಗಳು ಪಿತ್ತಜನಕಾಂಗ ಮತ್ತು ಗುಲ್ಮ ದಲ್ಲಿ ವಿಭಜಿಸಲ್ಪಟ್ಟಾಗ ಹಿಮೋಗ್ಲೋಬಿನ್ ನಿಂದ ಉತ್ಪತ್ತಿಯಾದ ------------ ಎಂಬ ಬಣ್ಣದ ವಸ್ತು ಮೂತ್ರಕ್ಕೆ ಒಣಹುಲ್ಲಿನ ಬಣ್ಣವನ್ನು ಕೊಡುತ್ತದೆ.

a)

ಹಿಮೋಗ್ಲೋಬಿನ್

b)

ಕ್ಲೋರೋಪ್ಲಾಸ್ಟ್

c)

ಯುರೋಕ್ರೋಮ್

d)

ಕೆರಟಿನ್