wayground logo

Free Printable Worksheets

Font size

S
M
L
XL
Worksheets

hasaru

Total questions: 29

Worksheet time: 15mins

Name
Class
Date
1.

ಈ ಸಾಲನ್ನು ಪೂರ್ಣಗೊಳಿಸಿ : ಹಕ್ಕಿಯ ಕೊರಲಿಂಪು ಹಸುರು -----

a)

ಎಲರಿನ ತಂಪು ಹಸುರು

b)

ಹಸುರು ಹಸುರಿಳೆಯುಸಿರೂ !

c)

ಹಸುರು ಸಂಜೆಯೀ ಬಿಸಿಲು

d)

ಹೊಸ ಹೂವಿನ ಕಂಪು ಹಸುರು

2.

ಕುವೆಂಪು ಅವರಿಗೆ ಸೌಂದರ್ಯಾನುಭವ ಉಂಟಾಗಿ "ಹಸುರು" ಕವನ ರಚನೆಗೆ ಪ್ರೇರಕವಾದ ಸ್ಥಳ ಇದು.

a)

ಅಶ್ವೀಜದ ಶಾಲಿವನ

b)

ಧಾರವಾಡದ ಸಾಹಿತ್ಯ ಸಮ್ಮೇಳನ

c)

ಕುಪ್ಪಳ್ಳಿಯ ಕವಿಶೈಲ

d)

ಮೈಸೂರಿನ ವಿಶ್ವ ವಿದ್ಯಾನಿಲಯ

3.

ಕವಿ ಮತ್ತು ಪ್ರಕೃತಿ ಒಂದಾಗುವ ಕುವೆಂಪು ಅವರ ಕಾವ್ಯದ ಸ್ಥಿತಿ ಇದಾಗಿದೆ.

a)

ದ್ವೈತ

b)

ವಿಶಿಷ್ಟಾದ್ವೈತ

c)

ಶಕ್ತಿ ವಿಶಿಷ್ಟಾದ್ವೈತ

d)

ಅದ್ವೈತ

4.

ಆಶ್ವಯುಜ ಮಾಸದ ನವರಾತ್ರಿದಿನ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ ಹಸಿರನ್ನು ಕಂಡು ಪ್ರೇರಿತವಾದ ಕವನ

a)

ಸಂಕಲ್ಪ ಗೀತೆ

b)

ಹಕ್ಕಿಹಾರುತಿದೆ ನೋಡಿದಿರಾ !

c)

ಹಸುರು

d)

ಹೊಸ ಹಾಡು

5.
ಆಶ್ವಯುಜದ ಭತ್ತದ ಗದ್ದೆಯ ಬಣ್ಣ ಯಾವ ಹಸಿರಿನಂತಿದೆ ?
a)
ಗಿಳಿಯ ಹಸುರಿನಂತೆ
b)
ಮಕಮಲ್ಲಿನ ಹಸುರಿನಂತೆ
c)
ಹಕ್ಕಿಯ ಹಸಿರಿನಂತೆ
d)
ಹೂವಿನ ಹಸಿರಿನಂತೆ
6.

ಕವಿಯು ನೋಡಿದ ಅಡಕೆ ತೋಟ ಎಲ್ಲಿದೆ ?

a)

ಕಡಲಿನಲ್ಲಿ

b)

ಆಗಸದಲ್ಲಿ

c)

ಬನದಂಚಿನಲ್ಲಿ

d)

ಗದ್ದೆಯ ಬಯಲಲ್ಲಿ

7.
ಕವಿಗೆ 'ಮಕಮಲ್ಲಿನ ಹೊಸ ಪಚ್ಚೆಯ ಜಮಖಾನೆ' ರೀತಿಯಲ್ಲಿ ಕಂಡಿರುವುದು
a)
ಹುಲ್ಲಿನ ಹಾಸು
b)
ಹಸುರು ಗದ್ದೆಯ ಬಯಲು
c)
ಹಸಿರು ಮುಗಿಲು
d)
ಹಸುರಾಗಸ
8.

ಹಸುರು ಪದ್ಯದಲ್ಲಿ "ಜಮಖಾನೆ" ಆಗಿರುವುದು ಇದರಿಂದ.

a)

ಎಲರಿನ ತಂಪಿನಿಂದ

b)

ಸಂಜೆಯ ಬಿಸಿಲಿನಿಂದ

c)

ಗಿಳಿಯದೆಯ ಬಣ್ಣದಿಂದ

d)

ಮಕಮಲ್ಲಿನ ಪೊಸಪಚ್ಚೆಯಿಂದ

9.

ಕವಿಗೆ ಎಲ್ಲೆಲ್ಲಿ ಹಸುರು ಕಾಣುತ್ತಿದೆ ?

a)

ಆಗಸ, ಮುಗಿಲು, ಗದ್ದೆಯ ಬಯಲು, ಮಲೆ, ಕಣಿವೆ, ಸಂಜೆಯ ಬಿಸಿಲಿನಲ್ಲಿ

b)

ಹಕ್ಕಿಯ ಕೊರಳಿನ ಇಂಪಿನಲ್ಲಿ ಮತ್ತು ಇಳೆಯ ಉಸಿರಿನಲ್ಲಿ

c)

ಹೂವಿನ ಕಂಪಿನಲ್ಲಿ ಮತ್ತು ಎಲರಿನ ತಂಪಿನಲ್ಲಿ

d)

ಇಲ್ಲಿ ಹೇಳಿದ ಎಲ್ಲವುಗಳಲ್ಲಿ

10.
ಕುವೆಂಪುರವರು ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ ಹಸುರನ್ನು ಯಾವಾಗ ಕಂಡರು ?
a)
ಆಶ್ವಯುಜ ಮಾಸದ ನವರಾತ್ರಿ ದಿನ
b)
ಚೈತ್ರಮಾಸದ ಯುಗಾದಿ ದಿನ
c)
ರಾಮಲಕ್ಷ್ಮಣರನ್ನು ಶಬರಿ ನೋಡಿದ ದಿನ
d)
ಶಾನುಭೋಗರು ಹುಲಿಯನ್ನು ನೋಡಿದ ಸಮಯ
11.
ಕವಿ ಕುವೆಂಪು ಅವರ ಪ್ರಕಾರ "ಹಸುರ್ ನೆತ್ತರ್" ಇರುವುದು ಇಲ್ಲಿ.
a)
ಒಡಲು
b)
ಕಡಲು
c)
ಅಡಿಕೆಯ ತೋಟ
d)
ಬತ್ತದ ಗದ್ದೆ
12.

ಈ ಸಾಲನ್ನು ಪೂರ್ಣಗೊಳಿಸಿ : ಹಸುರಾದುದು ಕವಿಯಾತ್ಮ ------------

a)

ರಸಪಾನ ಸ್ನಾನದಲ್ಲಿ

b)

ಹಸುರ್ ನೆತ್ತರ್ ಒಡಲಿನಲ್ಲಿ

c)

ಹಸುರೆತ್ತಲ್ ಕಡಲಿನಲಿ

d)

ಈ ಶ್ಯಾಮಲ ವನಧಿಯಲಿ

13.

ಈ ಸಾಲನ್ನು ಪೂರ್ಣಗೊಳಿಸಿ : ನವರಾತ್ರಿಯ ನವಧಾತ್ರಿಯ ------------

a)

ರಸಪಾನ ಸ್ನಾನದಲ್ಲಿ

b)

ಹಸುರ್ ನೆತ್ತರ್ ಒಡಲಿನಲ್ಲಿ

c)

ಹಸುರೆತ್ತಲ್ ಕಡಲಿನಲಿ

d)

ಈ ಶ್ಯಾಮಲ ವನಧಿಯಲಿ

14.

ಈ ಸಾಲನ್ನು ಪೂರ್ಣಗೊಳಿಸಿ : ಹಸುರತ್ತಲ್ ಹಸುರಿತ್ತಲ್ : ------------

a)

ರಸಪಾನ ಸ್ನಾನದಲ್ಲಿ

b)

ಹಸುರ್ ನೆತ್ತರ್ ಒಡಲಿನಲ್ಲಿ

c)

ಹಸುರೆತ್ತಲ್ ಕಡಲಿನಲಿ

d)

ಈ ಶ್ಯಾಮಲ ವನಧಿಯಲಿ

15.

ಈ ಸಾಲನ್ನು ಪೂರ್ಣಗೊಳಿಸಿ : ಹಸುರ್ಗಟ್ಟಿತೊ ಕವಿಯಾತ್ಮಂ

a)

ರಸಪಾನ ಸ್ನಾನದಲ್ಲಿ

b)

ಹಸುರ್ ನೆತ್ತರ್ ಒಡಲಿನಲ್ಲಿ

c)

ಹಸುರೆತ್ತಲ್ ಕಡಲಿನಲಿ

d)

ಈ ಶ್ಯಾಮಲ ವನಧಿಯಲಿ

16.

ಚೈತ್ರ ಮಾಸದಿಂದ ಏಳನೆಯ ಮಾಸ ಇದು

a)

ವೈಶಾಖ

b)

ಶ್ರಾವಣ

c)

ಭಾದ್ರಪದ

d)

ಅಶ್ವೀಜ

17.
ಬಿಟ್ಟ ಸ್ಥಳ ತುಂಬಿರಿ : ಹೊಸ ಹೂವಿನ-------------ಹಸುರು
a)
ಕಂಪು
b)
ಶ್ಯಾಮಲ
c)
ತಂಪೂ
d)
ಇಂಪೂ
18.
ಬನದ ಅಂಚಲ್ಲಿ ಇರುವುದು
a)
ಗೊನೆ ಬಿಟ್ಟ ಅಡಕೆಯ ತೋಟ
b)
ಗೊನೆ ಬಿಟ್ಟ ಬಾಳೆಯ ತೋಟ
c)
ಗೊನೆ ಬಿಟ್ಟ ತೆಂಗಿನ ತೋಟ
d)
ಈ ಎಲ್ಲವೂ
19.

ಕವಿ ಕುವೆಂಪು ಅವರಿಗೆ ಸಂಜೆಯ ಬಿಸಿಲು ಹೇಗೆ ಕಂಡಿದೆ?

a)

ಹಳದಿಯಾಗಿ

b)

ಕೆಂಪಾಗಿ

c)

ಹಸುರಾಗಿ

d)

ಕರಿನರೆ ಬಣ್ಣವಾಗಿ

20.

ಪಸರಿಸಿ ತಿರೆ ಮೈ ಮುಚ್ಚಿರೆ_ ಈ ಸಾಲಿನಲ್ಲಿ 'ತಿರೆ' ಪದದರ್ಥ ಇದು.

a)

ಗೊನೆ

b)

ಭೂಮಿ

c)

ಕಪ್ಪು

d)

ಕತ್ತಲು

21.
ಕುವೆಂಪುರವರಿಗೆ ಹಕ್ಕಿಯ ಕೊರಳಿನ ಇಂಪಾದ ಧ್ವನಿ ಹೇಗೆ ಕಂಡಿದೆ ?
a)
ಹಸುರಾಗಿ
b)
ಉಸಿರಾಗಿ
c)
ಹೆಸರಾಗಿ
d)
ಮೃಧುವಾಗಿ
22.
ಕವಿಯ ಆತ್ಮ ಎಲ್ಲಿ ಹಸುರ್ಗಟ್ಟಿದೆ ?
a)
ಒಡಲಿನ ನೆತ್ತರಿನಲ್ಲಿ
b)
ಕಡಲಿನ ಅಲೆಗಳಲ್ಲಿ
c)
ಸುರಿಯುವ ಮಳೆಯಲ್ಲಿ
d)
ಸುಡುವ ಬಿಸಿಲಿನಲ್ಲಿ
23.

'ಎಲರ್ ' - ' ವನಧಿ ' : ಕ್ರಮವಾಗಿ ಈ ಪದಗಳ ಅರ್ಥ.

a)

ತಂಪು - ಸಮುದ್ರ

b)

ಗಾಳಿ - ಸಮುದ್ರ

c)

ಹೂವು - ಶಾಲೀವನ

d)

ಗಾಳಿ - ಇಳೆ

24.
ಈ ಸಾಲನ್ನು ಪೂರ್ಣಗೊಳಿಸಿ : ಪಸರಿಸಿ ತಿರೆ ಮೈ ಮುಚ್ಚಿರೆ ------------
a)
ಬೇರೆ ಬಣ್ಣವನೆ ಕಾಣೆ !
b)
ಹೊಸಪಚ್ಚೆಯ ಜಮಖಾನೆ
c)
ಕೊನೆವೆತ್ತಡಕೆಯ ತೋಟ
d)
ಗಿಳಿಯದೆ ಬಣ್ಣದ ನೋಟ
25.

ಪೊಸ ಪಚ್ಚೆಯ ಜಮಖಾನೆ ಪಸರಿಸಿದಾಗ

a)

ಭೂಮಿಯು ಪ್ರಜ್ವಲಿಸಿದೆ

b)

ಭೂಮಿಯ ಮೈ ಮುಚ್ಚಿದೆ

c)

ಭೂಮಿಯ ಮೈ ತೆರೆದಿದೆ

d)

ಭೂಮಿಯು ಕಂಪಿಸಿದೆ

26.

ಕುವೆಂಪುರವರ ಪ್ರಕಾರ ಹಸುರಾಗಿರುವುದು

a)

ಆಗಸ

b)

ಮುಗಿಲು

c)

ಕಣಿವೆ

d)

ಇಲ್ಲಿನ ಎಲ್ಲವೂ

27.

ಹಸುರು ಎಲ್ಲೆಲ್ಲಿ ವ್ಯಾಪಿಸಿದೆ ಎಂದು ಕವಿ ಹೇಳಿದ್ದಾರೆ

a)

ನೋಡುವ ಕಣ್ಣು

b)

ಕೇಳುವ ಕಿವಿ

c)

ಮುಟ್ಟುವ ಕೈ

d)

ಸಕಲೇಂದ್ರಿಯ ಗಳಲ್ಲೂ

28.

ಹೊಸ ಪಚ್ಚೆಯ ಜಮಖಾನ ದಂತೆ ಕವಿಗೆ ಕಂಡಿದ್ದು ಇದು

a)

ಭತ್ತದ ಗದ್ದೆ

b)

ಹುಲ್ಲಿನ ಹಾಸು

c)

ಅಡಿಕೆಯ ತೋಟ

d)

ಬಟ್ಟಬಯಲು

29.

ಹಸುರು ಪದ್ಯವನ್ನು ------ಸಂಕಲನದಿಂದ ಆರಿಸಲಾಗಿದೆ.

a)

ಯಮನ ಸೋಲು

b)

ಕಾನೂರು ಹೆಗ್ಗಡತಿ

c)

ಪಕ್ಷಿಕಾಶಿ

d)

ಕೊಳಲು