NEW
Font size
Worksheetsಸಿರಿಕನ್ನಡ ನುಡಿ ಬಳಗ : ಕ್ವಿಜ್ . ಸರಣಿ - 30
Total questions: 52
Worksheet time: 26mins
ಕನ್ನಡ ವರ್ಣ ಮಾಲೆಯಲ್ಲಿ ಅಲ್ಪ ಪ್ರಾಣಾಕ್ಷರಗಳು -----
ಅ,ಇ,ಉ,ಋ,ಎ,ಒ
ಕ,ಚ,ಟ,ತ,ಪ
ಘ,ಝ,ಢ,ಧ,ಭ
ಙ,ಞ,ಣ,ನ,ಮ
ಕೆಳಗಿನವುಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರ ಪದ-----
ಅಣ್ಣ
ಕಲ್ಲು
ಸಪ್ತ
ಸಗ್ಗ
ವಕಾರಾಗಮ ಸಂಧಿಗೆ ಉದಾಹರಣೆ------
ಮಳೆಗಾಲ
ಮರವನ್ನು
ಮನೆಯಲ್ಲಿ
ಮನದಲ್ಲಿ
ವನ ಪದದ ತದ್ಬವ ರೂಪ----
ಕಾಡು
ಬನ
ಅರಣ್ಯ
ಅವನ
ಸಂಗೀತ ಪದದಲ್ಲಿರುವ ಮಾತ್ರೆಗಳ ಸಂಖ್ಯೆ----
ಮೂರು
ನಾಲ್ಕು
ಐದು
ಆರು
ವಾಸನೆ ಪದದ ವಿರುದ್ಧಾರ್ಥಕ ಪದ-----
ನಿರ್ವಾಸನೆ
ಸುವಾಸನೆ
ದುರ್ವಾಸನೆ
ಗಂಧ
ಮರಭನಯಯಯ ಗಣಗಳು ಬಂದರೆ------ವೃತ್ತ
ಚಂಪಕಮಾಲಾ
ಉತ್ಪಲಮಾಲಾ
ಮಹಾಸ್ರಗ್ಧರಾ
ಸ್ರಗ್ಧರಾ
ದ್ವಿಗು ಸಮಾಸದ ಲಕ್ಷಣ----–
ನಾಮಪದ+ನಾಮಪದ
ಸಂಖ್ಯಾವಾಚಕ+ನಾಮಪದ
ಸರ್ವನಾಮ+ನಾಮಪದ
ನಾಮಪದ+ಕ್ರಿಯಾಪದ
ಕೆಳಗಿನವುಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರ ಪದ-----
ಅಣ್ಣ
ಕಲ್ಲು
ಸಪ್ತ
ಸಗ್ಗ
ಅರ್ಥಾಂತರನ್ಯಾಸ ಅಲಂಕಾರದಲ್ಲಿ ಈ ಅಂಶಗಳಿರುತ್ತವೆ
ಬಿಂಬ-ಪ್ರತಿಬಿಂಬ
ವಿಶೇಷ ವಾಕ್ಯ-ಸಾಮಾನ್ಯವಾಕ್ಯ
ಒಂದೇ ವಾಕ್ಯ ಬೇರೆ ಬೇರೆ ಅರ್ಥ
ಅಭೇದ್ಯ ವರ್ಣನೆ
"ಹುಸಿಯದ ಬೇಹಾರಿಯೇ ಇಲ್ಲ" ಈ ಮಾತು ಬರುವ ಸಂದರ್ಭ
ಕಳ್ಳತನ ಮರೆಮಾಚಿಸುವಾಗ
ವೃಕ್ಷವೇ ಸಾಕ್ಷಿ ಎಂಬ ಬಗ್ಗೆ ಆಶ್ಚರ್ಯಗೊಂಡಾಗ
ಪ್ರಕೃತಿಯ ವಿರುದ್ಧದ ಸ್ಥಿತಿಯನ್ನು ತಿಳಿಸುವಾಗ
ಪೊಟರೆಯ ರಹಸ್ಯವನ್ನು ಭೇದಿಸುವಾಗ
1) ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
2) ಸಾರ್ವಭೌಮರ ನೆತ್ತಿಯ ಕುಕ್ಕಿ
3) ತೇಲಿಸಿ ಮುಳುಗಿಸಿ ಖಂಡ-ಖಂಡಗಳ
4) ಮಂಡಲ-ಗಿಂಡಲಗಳ ಗಡ ಮುಕ್ಕಿ
5) ಹಕ್ಕಿಹಾರುತಿದೆ ನೋಡಿದಿರಾ
ಮೇಲಿನ ಪದ್ಯದ ಸರಿಯಾದ ಕ್ರಮ
1 2 3 4 5
1 3 2 4 5
1 4 2 3 5
1 4 3 2 5
"ದಯವಿಟ್ಟು ಬಾಗಿಲು ತೆಗೆಯಿರಿ ನಾನು ಗಾಯಗೊಂಡಿದ್ದೇನೆ" ಈ ಮಾತನ್ನು ಯಾರು ಯಾರಿಗೆ ಹೇಳಿದರು?
ರಾಹಿಲನು ಮನೆಯವರಿಗೆ
ರಾಹಿಲನು ಮುದುಕಿಗೆ
ಮುದುಕಿಯು ತನಗೆ ತಾನೇ
ಮುದುಕಿಯು ಸೈನಿಕರಿಗೆ
ಡಿ ಎಸ್ ಜಯಪ್ಪಗೌಡ ರ ಜನನ ----
1905
1936
1947
1949
ಕೆಳಗಿನವುಗಳಲ್ಲಿ ಶ್ಚುತ್ವ ಸಂಧಿಗೆ ಉದಾಹರಣೆಯಾದ ಪದ
ಅತ್ಯಾದರ
ಪಯಶ್ಶಯನ
ವಾಗ್ದೇವಿ
ತನ್ಮಯ
ಅವನು ತನಗೆ ತಿಳಿದಂತೆ ಹೇಳಿದರೆ ನಾನು -ನೀನು ಕೇಳಬೇಕೇ? ಈ ವಾಕ್ಯದಲ್ಲಿ ಬಂದಿರುವ ಪ್ರಥಮ ಪುರುಷ ಸರ್ವನಾಮ ಪದ
ತನಗೆ
ಅವನು
ನಾನು
ನೀನು
ಖಳ ನೊಳವಿಂಗೆ ಕುಪ್ಪೆ ವರಂ ಈ ಮಾತನ್ನು ಹೇಳಿದ ಕವಿ
ಲಕ್ಷ್ಮೀಶ
ಕುಮಾರವ್ಯಾಸ
ರನ್ನ
ಪಂಪ
ಇವುಗಳಲ್ಲಿ ಪ್ರಾರ್ಥನಾ ಮಂದಿರ-------
ವೆಸ್ಟ್ ಮಿನಿಸ್ಟರ್ ಅಬೆ
ಚೇರಿಂಗ್ ಕ್ರಾಸ್
ಟ್ರಾಫಲ್ಗಾರ್ ಸ್ಕ್ವೇರ್
ವೂಲವರ್ತ್
ಒಂದೇ ಭಾಷೆಯ ಅನ್ಯದೇಶಿ ಪದಗಳ ಜೋಡಿ
ದಮಡಿ ಪೆನ್ನು
ಸರಕಾರ ಹುಕುಂ
ನಕಲಿ ದಾಖಲೆ
ಚಹಾ ಚೊಂಬು
ಇದು ಸಂಬಂಧಾರ್ಥಕಾವ್ಯಯ
ಅಲ್ಲದೆ
ಸಾಕು
ಅದುವೇ
ಮೆಲ್ಲನೆ
ದೇವನೂರು ಮಹಾದೇವ ರವರ ಎದೆಗೆ ಬಿದ್ದ ಅಕ್ಷರ ಕೃತಿಯು
ಕಥಾ ಸಂಕಲನ
ಪ್ರವಾಸ ಕಥನ
ವ್ಯಕ್ತಿಚಿತ್ರ
ವೈಚಾರಿಕ ಲೇಖನ
ಇದೊಂದು ನಿಷೇಧ ಕೃದಂತ ಪದ
ಮಾಡಿದ
ಮಾಡದ
ಮಾಡುವ
ಮಾಡಲಿ
ಲಘು ದ್ವಯ ತ್ರಿಗುರುವಿಂದಕ್ಕುಂ
ಸ್ರಗ್ಧರೆ
ಮತ್ತೇಭ ವಿಕ್ರೀಡಿತ
ಮಹಾಸ್ರಗ್ಧರಾ
ಚಂಪಕ
ತತ್ಪುರುಷ ಸಮಾಸ ಪದಕ್ಕೆ ಉದಾಹರಣೆ
ನಾಕಾಳು
ದಿನಪಸುತ
ದಿವ್ಯಶರಾಳಿ
ಸ್ವಾಮಿದ್ರೋಹ
ಇದೊಂದು ನಿಷೇಧ ಕೃದಂತ ಪದ
ಮಾಡಿದ
ಮಾಡದ
ಮಾಡುವ
ಮಾಡಲಿ
ಜನಪದರು ಒಗಟಿನಲ್ಲಿ ಹೇಳಿದಂತೆ ರಾಯ ರಾಯರಿಗೆಲ್ಲ ಪ್ರಚಂಡ ಯಾರು?
ಉತ್ತರಾಣಿ ಗಿಡ
ಗರಕೆಯ ಹುಲ್ಲು
ತಾವರೆ
ಅಂಗಿ
ಮೃಗ ಮತ್ತು ಸುಂದರಿ ಪಾಠದ ಲೇಖಕರು
ಡಾ. ವಿಜಯಶ್ರೀ ಸಬರದ
ಡಾ.ಜಿ. ರಾಮಕೃಷ್ಣ
ಪಿ. ಲಂಕೇಶ್
ಜನಪದರು
1) ಮೊಱೆಯಂ -ಬಾಂಧವ್ಯವನ್ನು
2) ಮರುಕಂ -ವಕ್ರ ಚೇಷ್ಟೆ ಯು
3) ಬೆಱಗಿಂಗೆ - ಉತ್ಸಾಹಕ್ಕೆ
4) ಚಟ್ಟರಿಂ - ಶಿಷ್ಯರಿಂದ
ಇಲ್ಲಿ ಬಂದಿರುವ ವಿಭಕ್ತಿಗಳ ಕ್ರಮ
ಪ್ರಥಮ, ದ್ವಿತೀಯ, ತೃತೀಯ, ಚತುರ್ಥಿ
ದ್ವಿತೀಯ, ಪ್ರಥಮ, ಚತುರ್ಥಿ, ತೃತೀಯ
ದ್ವಿತೀಯ, ಚತುರ್ಥಿ, ಪ್ರಥಮ, ತೃತೀಯ
ಚತುರ್ಥಿ, ತೃತೀಯ, ದ್ವಿತೀಯ, ಪ್ರಥಮ
ಪರೀಕ್ಷೆಯು ಹತ್ತಿರ ಬಂದಿತು;ಆದ್ದರಿಂದ ವಿದ್ಯಾರ್ಥಿಗಳು ಬಹಳ ಓದುತ್ತಾರೆ. ಇದೊಂದು
ಸಾಮಾನ್ಯ ವಾಕ್ಯ
ಸಂಯೋಜಿತ ವಾಕ್ಯ
ಮಿಶ್ರ ವಾಕ್ಯ
ವಿವರಣಾತ್ಮಕ ವಾಕ್ಯ
ಒಂದು ಪದವನ್ನೋ ವಾಕ್ಯವನ್ನೋ ಹೇಳಿ ಅದಕ್ಕೆ ಸಮನಾರ್ಥಕ ಪದವನ್ನೋ ವಾಕ್ಯವನ್ನೋ ಹೇಳುವಾಗ ಈ ಚಿಹ್ನೆ ಬಳಸಲಾಗುತ್ತದೆ
ಆವರಣ
ವಿವರಣಾತ್ಮಕ
ಉದ್ಧರಣ
ವಾಕ್ಯವೇಷ್ಠನ
ಇದು ಸರಿಯಾದ ತತ್ಸಮ ತದ್ಭವಗಳ ಜೋಡಿಪದವಲ್ಲ
ವ್ಯಾಪಾರಿ -ಬೇಹಾರಿ
ವಿದ್ಯಾಧರ -ಬಿಜ್ಜೋದರ
ವೈಶಾಖ -ಬೇಸಗೆ
ವಿಜ್ಞಾನ -ಬಿನ್ನಹ
ಇವುಗಳಲ್ಲಿ ಸಂಖ್ಯೇಯವಾಚಕ ಪದ
ಎಂಬತ್ತು
ದೊಡ್ಡದು
ಹತ್ತನೆಯ
ಆಗ್ನೇಯ
ಬರಡಾಗಿರುವಿ ಕಾಡುಮೇಡುಗಳ ವಸಂತವಾಗುತ ಮುಟ್ಟೋಣ
ಈ ಚರಣದಲ್ಲಿ ಮುಟ್ಟೋಣ ಎಂಬುದು
ನಿಷೇಧಾರ್ಥಕ ರೂಪ
ಸಂಭಾವನಾರ್ಥಕ ರೂಪ
ಅವಧಾರಣಾರ್ಥಕ ರೂಪ
ವಿಧ್ಯರ್ಥಕ ರೂಪ
ವೃದ್ಧಿ ಸಂಧಿಗೆ ಉದಾಹರಣೆಯಾದ ಪದವಿದು
ಅಷ್ಟೈಶ್ವರ್ಯ
ಕೋಟ್ಯಧೀಶ್ವರ
ಮಂಡಳೇಶ್ವರ
ಸಕಳಾಚಾರ್ಯ
ಹಕ್ಕಿಹಾರುತಿದೆ ನೋಡಿದಿರಾ ಪದ್ಯದ ಆಕರ ಕೃತಿ
ಪಕ್ಷಿಕಾಶಿ
ಗರಿ
ಎದೆ ತುಂಬಿ ಹಾಡಿದೆನು
ಕನ್ನಡ ಜನಪದ ಗೀತೆಗಳು
ಕರಮ್ ಹಳಗನ್ನಡ ಪದದ ಅರ್ಥ
ಕರ್ಮ
ಕೈ
ಹಸ್ತ
ತುಂಬಾ
ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯವಾಗಿ ಹೇಳುವ ಸಂದರ್ಭದಲ್ಲಿ ಈ ಅವ್ಯಯವನ್ನು ಬಳಸಲಾಗುತ್ತದೆ
ಅನುಕರಣಾವ್ಯಯ
ಕ್ರಿಯಾರ್ಥಕಾವ್ಯಯ
ಸಂಬಂಧಾರ್ಥಕಾವ್ಯಯ
ಅವಧಾರಣಾರ್ಥಕಾವ್ಯಯ
ನರಳಾಟದ ಬೆನ್ನಲ್ಲೇ ಹಿರಿಯ ಹೆಂಗಸೊಬ್ಬಳ ------------ಕೇಳಿ ಬಂತು
ಆರ್ತನಾದ
ಚೀರಾಟ
ಸಾಂತ್ವನ
ಅಳು
ಮೈಸೂರು ಸಂಸ್ಥಾನದ ಒಡೆಯರ್ ರಾಜ ಸಂತತಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ----ನೆಯ ರಾಜರು
18
20
22
24
ಲಾವಣಿಕಾರ ಹಲಗಲಿ ಬೇಡರು ಲಾವಣಿಯಲ್ಲಿ ಅಂಕಿತ ಗೊಳಿಸಿರುವ ದೈವ-------
ಕಲ್ಮೇಶ
ಹನುಮ
ರಾಮ
ಲಕ್ಷ್ಮೀಶ
ಖಳ ನೊಳವಿಂಗೆ ಕುಪ್ಪೆ ವರಂ ಈ ಮಾತನ್ನು ಹೇಳಿದ ಕವಿ
ಲಕ್ಷ್ಮೀಶ
ಕುಮಾರವ್ಯಾಸ
ರನ್ನ
ಪಂಪ
ಅಮಳ್ಗಳ್ ನಯ ವಿಕ್ರಮ ಗುಣ /
ದಮಳ್ಗಳ್ ನೃಪ ಶಾಸ್ತ್ರ ಪರಿಣತರ ವರಂ //
ಸಮರದೊಳಗ್ರ ಶೌರ್ಯಂ/
ಸಮರಸ ಸಂಪನ್ನನಾವನುದಾರನಪ್ಪನ್//
ಈ ಪದ್ಯವು --------ಶಬ್ದಾಲಂಕಾರ
ವೃತ್ತ್ಯನುಪ್ರಾಸ
ಛೇಕಾನುಪ್ರಾಸ
ಯಮಕ
ಚಿತ್ರಕವಿತ್ವ
ಮುಕ್ಕಣ್ಣನ ಮುಂಗೈಯೇಟಿಗೆ ಮೈನೋವಿನಿಂದ ಕಣ್ಣುಮುಚ್ಚಿದೆನು
ಈ ವಾಕ್ಯದಲ್ಲಿ ತತ್ಪುರುಷ ಸಮಾಸ ಪದ
ಮುಕ್ಕಣ್ಣ
ಮುಂಗೈ
ಮೈನೋವು
ಕಣ್ಣುಮುಚ್ಚು
ಪ್ರಾಸಾಕ್ಷರದ ಹಿಂದಿನ ಅಕ್ಷರ ಅನುಸ್ವಾರ ವಾಗಿದ್ದರೆ ಅದು
ಸಿಂಹ ಪ್ರಾಸ
ಗಜ ಪ್ರಾಸ
ವೃಷಭ ಪ್ರಾಸ
ಅಜಪ್ರಾಸ
ಇವುಗಳಲ್ಲಿ ಅಕರ್ಮಕ ಧಾತು
ಕೊಡು
ತಿದ್ದು
ಉಣ್ಣು
ಹೋಗು
ಕೃದಂತ ಭಾವನಾಮ ವಾಗಲು ಧಾತುಗಳ ಮೇಲೆ ಈ ಪ್ರತ್ಯಯಗಳು ಸೇರುತ್ತವೆ
ವ, ಉವ, ದ, ಅದ
ಟ, ಪು, ತ, ಇಕೆ, ಗೆ
ಉತ್ತ, ಅದೆ, ದರೆ, ಅಲು,
ಅಲಿಕ್ಕೆ, ಅ, ಇ, ದು
ಕೆಳಗಿನವುಗಳಲ್ಲಿ ತದ್ದಿತಾಂತ ನಾಮದ ಪ್ರತ್ಯಯಗಳು
ತನ, ಇಕೆ, ಪು, ಮೆ
ಗಾರ, ಕಾರ್ತಿ, ಇಗ, ವಂತೆ
ಅಂತೆ, ವೊಲು, ತನಕ, ಮಟ್ಟಿಗೆ
ಓಸ್ಕರ, ಸಲುವಾಗಿ, ಇಂತ, ಆಗಿ
ಇದು ಸಂಯುಕ್ತಾಕ್ಷರ ವಲ್ಲ
ಕಜ್ಜ
ಉಷ್ಣ
ಹದಿನೈದು
ಒತ್ತಕ್ಷರ
1) ಏನು ಹೇಳೈ ಕರ್ಣ ಚಿತ್ತ
2) ಪುಟ್ಟಿದ ನೂರ್ವರುಮೆನ್ನೊಡ
3) ಉರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮ
4) ಖಳ ನೊಳವಿಂಗೆ ಕುಪ್ಪೆ ವರಮೆಂಬವೊಲಾಂರಮುಂಟೆ ನಿನ್ನದೊಂ
ಮೇಲಿನ ಎಷ್ಟನೆಯ ಸಾಲು ವಾರ್ಧಕ ಷಟ್ಪದಿಯ ಸಾಲು
1ನೆಯ
3ನೆಯ
2ನೆಯ
4ನೆಯ
ಇವುಗಳಲ್ಲಿ ಗ್ರಾಮ್ಯ ವಲ್ಲದ ಪದ
ಹೀಗೆ
ಮ್ಯಾಗ
ಇಲ್ಲದ್ಹಂಗ
ಇಸವಾಸ
ಇದು ಸಂಬಂಧಾರ್ಥಕಾವ್ಯಯ
ಅಲ್ಲದೆ
ಸಾಕು
ಅದುವೇ
ಮೆಲ್ಲನೆ
ಇವುಗಳಲ್ಲಿ ಆದೇಶ ಸಂಧಿಯಲ್ಲದ ಪದ
ಮೈದೊಳೆ
ಕೋಟಿಗೊಬ್ಬ
ಕಡುವೆಳ್ಪು
ಮೆಲ್ವಾತು
