Worksheetslesson 4( geo) INDIAN SOILS
Total questions: 20
Worksheet time: 10mins
1) ನದಿಗಳ ಸಂಚಯನದಿಂದ ಉತ್ಪತ್ತಿಯಾದ ಮಣ್ಣು ಯಾವುದು?
A )ಮೆಕ್ಕಲು ಮಣ್ಣು.
B) ಕಪ್ಪು ಮಣ್ಣು
C) ಕೆಂಪು ಮಣ್ಣು
D) ಪರ್ವತ ಮಣ್ಣು
2. ಖದರ್ ಎಂದರೇನು?
A) ಗ್ರಾನೈಟ್, ನೀಸ್ ಮತ್ತು ಸ್ಫಟಿಕ ಶಿಲೆಗಳ ಶೀಥೀಲೀಕಣದಿಂದ ಉತ್ಪತ್ತಿಯಾದದ್ದು
B) ಜೇಡಿ ಮಿಶ್ರಣದ ಜೊತೆಗೆ ಇತ್ತೀಚೆಗೆ ಉತ್ಪತ್ತಿಯಾದ ಮಣ್ಣು
C) ಬಸಾಲ್ಟ್ ಶಿಲೆಗಳಿಂದ ರಚನೆಯಾದುದು.
D) ಸೂಕ್ಷ್ಮ ಕಣಗಳುಳ್ಳ ಮತ್ತು ಇತ್ತೀಚೆಗೆ ಉತ್ಪತ್ತಿಯಾದ ಮಣ್ಣು
3)ಭಾಂಗರ್ ಎಂದರೇನು?
A ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಪರಿಸ್ಥಿಯುಳ್ಳ ಉಷ್ಣವಲಯ ಭಾಗಗಳಲ್ಲಿ ಉತ್ಪತ್ತಿಯಾಗುತ್ತದೆ
B) ಜೇಡಿ ಮಿಶ್ರಣದ ಜೊತೆಗೆ ಬಸಾಲ್ಟ್ ಶಿಲೆಗಳಿಂದ ರಚನೆಯಾದುದು.
C) ಒರಟು ಕಣಗಳುಳ್ಳ ಮತ್ತು ಪುರಾತನ ಕಾಲದ ಮಣ್ಣು.
D) ಸೂಕ್ಷ್ಮ ಕಣಗಳುಳ್ಳ ಮತ್ತು ಇತ್ತೀಚೆಗೆ ಉತ್ಪತ್ತಿಯಾದ ಮಣ್ಣು
4) ರೀಗರ್ ಮಣ್ಣು ಯಾವುದು?
A )ಕಪ್ಪು ಮಣ್ಣು
B) ಮರುಭೂಮಿ ಮಣ್ಣು
C) ಕೆಂಪು ಮಣ್ಣು
D) ಪರ್ವತ ಮಣ್ಣು
5) . ಹತ್ತಿ ಬೆಳೆಗೆ ಸೂಕ್ತವಾದ ಮಣ್ಣು ಕಪ್ಪು ಮಣ್ಣು, ಏಕೆ?
A ) ಜೇಡಿಮಣ್ಣಿನ ಕಣಗಳು ಕಡಿಮೆ ಇದ್ದು, ದೀರ್ಘಕಾಲ ತೇವಾಂಶವನ್ನುಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಈ ಮಣ್ಣಿನಲ್ಲಿಲ್ಲ.
B) ಜೇಡಿಮಣ್ಣಿನ ಕಣಗಳು ಹೆಚ್ಚಾಗಿದ್ದು, ದೀರ್ಘಕಾಲ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಈ ಮಣ್ಣಿಗಿದೆ.
C) ಮಣ್ಣಿನಲ್ಲಿ ಸುಣ್ಣದಂಶ ಹೆಚ್ಚಾಗಿದ್ದು, ದೀರ್ಘಕಾಲ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಈ ಮಣ್ಣಿಗಿದೆ.
(D) ) ಗ್ರಾನೈಟ್, ನೀಸ್ ಮತ್ತು ಸ್ಫಟಿಕ ಶಿಲೆಗಳ ಶೀಥೀಲೀಕಣದಿಂದ ಉತ್ಪತ್ತಿಯಾದದ್ದು ದರಿಂದ ಈ ಮಣ್ಣು ಸೂಕ್ತ.
6. ಕೆಂಪು ಮಣ್ಣಿನಲ್ಲಿ ತೇವಾಂಶ ಸಂಗ್ರಹ ಸಾಮರ್ಥ್ಯ ಕಡಿಮೆ, ಏಕೆ?
A ) ಮರಳಿನಾಂಶ ಹೆಚ್ಚಾಗಿದ್ದು, ಜೇಡಿಯ ಪ್ರಮಾಣ ಹೆಚ್ಚುಇದೆ.
B) ಸ್ಫಟಿಕ ಶಿಲೆಗಳ ಶೀಥೀಲೀಕಣದಿಂದ ಉತ್ಪತ್ತಿಯಾದದ್ದು
C) ಮರಳಿನಾಂಶ ಹೆಚ್ಚಾಗಿದ್ದು, ಜೇಡಿಯ ಪ್ರಮಾಣ ಕಡಿಮೆ ಇದೆ.
(D)ಉಪ್ಪಿನಂಶ ಹೆಚ್ಚಿರುವದರಿಂದ
7) ಅಧಿಕ ಮಳೆ ಮತ್ತು ಉಷ್ಣಾಂಶವಿರುವ ಪ್ರದೇಶದಲ್ಲಿ ಕಂಡುಬರುವ
ಮಣ್ಣು ಯಾವುದು?
A) ಪರ್ವತ ಮಣ್ಣು
B) ಮೆಕ್ಕಲು ಮಣ್ಣು
C) ಮರುಭೂಮಿ ಮಣ್ಣು
D) ಲ್ಯಾಟರೈಟ್ / ಜಂಬಿಟ್ಟಿಗೆ ಮಣ್ಣು.
8) ನೆಡುತೋಪು ಬೆಳೆಗಳಿಗೆ ಸೂಕ್ತ ಮಣ್ಣು ಯಾವುದು?
A) ಲ್ಯಾಟರೈಟ್ ಮಣ್ಣು
B) ಮೆಕ್ಕಲು ಮಣ್ಣು
C) ಪರ್ವತ ಮಣ್ಣು
D) ಕಪ್ಪು ಮಣ್ಣು
ಲ್ಯಾಟರೈಟ್ ಮಣ್ಣು ಕೃಷಿಗೆ ಉಪಯುಕ್ತವಲ್ಲ. ಏಕೆ?
A ) ಇದು ಜಲವಿಲೀನಿಕರಣಕ್ಕೊಳಪಡುವುದ ರಿ೦ದ ಫಲವತ್ತಾಗಿರುವುದಿಲ್ಲ.
B) ಉಪ್ಪಿನಂಶ ಹೆಚ್ಚಿರುವದರಿಂದ
C)ಜೈವಿಕ ವಸ್ತುಗಳು ಕೊಳೆಯುವದರಿಂದ
D) ಬಸಾಲ್ಟ್ ಶಿಲಾ ರಚನೆ ಹೊಂದಿರುವದರಿಂದ
10) ಮಣ್ಣಿನ ಸವೆತವು ಕೃಷಿ ಉತ್ಪಾದನಾ ಸಾಮರ್ಥ್ಯವನ್ನು
- ಕಡಿಮೆಗೊಳಿಸುತ್ತದೆ. ಹೇಗೆ?
A ) ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುವುದರಿಂದ.
B) ಮಣ್ಣಿನಲ್ಲಿ ಜೈವಿಕಾಂಶ ಇಲ್ಲದಿರುವುದರಿಂದ
C) ಮಣ್ಣು ಜಲಾಂಶವನ್ನು ಕಳೆದುಕೊಳ್ಳುವದರಿಂದ
D) ಮಣ್ಣು ಸದಾ ಸವೆತಕ್ಕೆ ಒಳಗಾಗುವದರಿಂದ
11) ಗ್ರಾನೈಟ್, ನೀಸ್ ಮತ್ತು ಇತರೆ ಸ್ಪಟಿಕ ಶಿಲೆಗಳ ಶಿಥಿಲೀಕರಣದಿಂದ
ಉಂಟಾದ ಮಣ್ಣು ಯಾವುದು?
A ) ಕಪ್ಪು ಮಣ್ಣು
B) ಕೆಂಪು ಮಣ್ಣು.
C) ಮೆಕ್ಕಲು ಮಣ್ಣು
D) ಮರುಭೂಮಿ ಮಣ್ಣು
12) ಸಾಮಾನ್ಯವಾಗಿ ಕಪ್ಪು ಮಣ್ಣಿನ ರಚನೆಗೆ ಕಾರಣವೇನು?
A ) ಬಸಾಲ್ಟ್ ಶಿಲಾಕಣಗಳಿಂದ ಉತ್ಪತ್ತಿಯಾಗಿರುವುದರಿಂದ,
B) ) ಗ್ರಾನೈಟ್, ನೀಸ್ ಮತ್ತು ಸ್ಫಟಿಕ ಶಿಲೆಗಳ ಶೀಥೀಲೀಕಣದಿಂದ ಉತ್ಪತ್ತಿಯಾದದ್ದು ದರಿಂದ.
C ) ಸ್ಫಟಿಕ ಶಿಲೆಗಳ ಶೀಥೀಲೀಕಣದಿಂದ ಉತ್ಪತ್ತಿಯಾದದ್ದು
D) ಮೆಕ್ಕಲು ಮಣ್ಣು ಸಂಚಯನದಿಂದ ಉತ್ಪತ್ತಿಆಗಿದ್ದು
13) . ಮೆಕ್ಕಲು ಮಣ್ಣು ಹೇಗೆ ಉತ್ಪತ್ತಿಯಾಗುತ್ತದೆ?
A ) ಬಸಾಲ್ಟ್ ಶಿಲಾಕಣಗಳಿಂದ ಉತ್ಪತ್ತಿಯಾಗಿರುವುದರಿಂದ,
B) ) ಗ್ರಾನೈಟ್, ನೀಸ್ ಮತ್ತು ಸ್ಫಟಿಕ ಶಿಲೆಗಳ ಶೀಥೀಲೀಕಣದಿಂದ ಉತ್ಪತ್ತಿಯಾದದ್ದು ದರಿಂದ.
C) ಸ್ಫಟಿಕ ಶಿಲೆಗಳ ಶೀಥೀಲೀಕಣದಿಂದ ಉತ್ಪತ್ತಿಯಾದದ್ದು
D) ನದಿಗಳು ಮೆಕ್ಕಲು ಕಣಗಳನ್ನು ಸಂಚಯನ ಮಾಡುವುದರಿಂದ
14) ಯಾವ ಮಣ್ಣು ಪಶ್ಚಿಮ ಘಟ್ಟ & ಪೂರ್ವ ಘಟ್ಟಗಳಲ್ಲಿ
ಕಂಡುಬರುತ್ತದೆ?
A)ಲ್ಯಾಟರೈಟ್ ಮಣ್ಣು ಅಥವಾ ಜಂಬಿಟ್ಟಿಗೆ ಮಣ್ಣು
B) ಜೇಡಿ ಮಣ್ಣು
C) ಪರ್ವತ ಮಣ್ಣು
D)ಕಪ್ಪು ಮಣ್ಣು
15) ನಿವೂ ಕಾಫಿ, ತೆಂಗು ಚಹಾದಂತಹ ನೆಡು ತೋಟದ ಬೆಳೆಗಳನ್ನು ಬೆಳೆಯಲು ಯಾವ ಮಣ್ಣು ಸೂಕ್ತವಾಗಿದೆ?
A ) ಲ್ಯಾಟರೈಟ್ ಮಣ್ಣು
B) ಪರ್ವತ ಮಣ್ಣು
C) ಮೆಕ್ಕಲು ಮಣ್ಣು
D) ಮರುಭೂಮಿ ಮಣ್ಣು
16) ಒತ್ತೊತ್ತಾದ ಕಣಗಳಿಂದ ರಚನೆಯಾಗಿದ್ದು ದೀರ್ಘಕಾಲ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವ ಮಣ್ಣು ಯಾವುದು?
A ) ಕೆಂಪು ಮಣ್ಣು
B) ಪರ್ವತ ಮಣ್ಣು
C) ರೆಗೂರ್ ಮಣ್ಣು
D)ಜೇಡಿ ಮಣ್ಣು
17) ಕಪ್ಪು ಮಣ್ಣು ವ್ಯಾಪಕವಾಗಿ ಹಂಚಿಕೆಯಾಗಿರುವುದು ಎಲ್ಲಿ?
A ) ದಖನ್ ಪ್ರಸ್ಥಭೂಮಿಯ ಬಾಸಾಲ್ಟ್ ಶಿಲಾವಲಯ.
B) ಮಹರಾಷ್ಟ್ರ, ಮಧ್ಯಪ್ರದೇಶ,ತೇಲಂಗಾಣ,ಉತ್ತರ ಕರ್ನಾಟಕ,ಗುಜರಾತ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳು
C) ಸಟ್ಲೇಜ್,ಗಂಗಾ ಮತ್ತು ಬ್ರಹ್ಮಪುತ್ರಾ ಹಾಗೂ ತಾಪಿ,ಮಹಾನದಿ,ಗೋದಾವರಿ ನದಿಗಳ ಬಯಲುಗಳಲ್ಲಿ
ಡಿ) ಉತ್ತರದ ಹಿಮಾಲಯ ಪರ್ವತಗಳಲ್ಲಿ
18)ಭಾರತದ ನಕಾಶಯಲ್ಲಿ ಈ ಪ್ರದೇಶದಲ್ಲಿ ಕಂಡುಬರುವ ಮಣ್ಣು
A) ಕೆಂಪು ಮಣ್ಣು
B) ಪರ್ವತ ಮಣ್ಣು
C) ರೆಗೂರ್ ಮಣ್ಣು)
D)ಜೇಡಿ ಮಣ್ಣು
19) ಭಾರತದ ನಕಾಶಯಲ್ಲಿ ಈ ಪ್ರದೇಶದಲ್ಲಿ ಕಂಡುಬರುವ ಮಣ್ಣು
A)ಮರಭೂಮಿ ಮಣ್ಣು
B)ಕೆಂಪುಮಣ್ಣು
C)ಮೆಕ್ಕಲು ಮಣ್ಣು
D) ಜಂಬಿಟ್ಟಿಗೆ ಮಣ್ನು
20) ಸಟ್ಲೇಜ್,ಗಂಗಾ ಮತ್ತು ಬ್ರಹ್ಮಪುತ್ರಾ ಹಾಗೂ ತಾಪಿ,ಮಹಾನದಿ,ಗೋದಾವರಿ ನದಿಗಳ ಬಯಲುಗಳಲ್ಲಿ ಪ್ರದೇಶದಲ್ಲಿ ಕಂಡುಬರುವ ಮಣ್ಣು.
A) ಲ್ಯಾಟರೈಟ್ ಮಣ್ಣು
B) ಪರ್ವತ ಮಣ್ಣು
C) ಮೆಕ್ಕಲು ಮಣ್ಣು
D) ಮರುಭೂಮಿ ಮಣ್ಣು
