wayground logo

Free Printable Worksheets

NEW

Font size

S
M
L
XL
Worksheets

Science SSLC Kannada medium

Total questions: 15

Worksheet time: 10mins

Name
Class
Date
1.

ಒಂದು ಪ್ರನಾಳದಲ್ಲಿ 5ml ದುರ್ಬಲ HCl ಗೆ ಸತುವಿನ ಚೂರುಗಳನ್ನು ಸೇರಿದಾಗ ಬಿಡುಗಡೆಯಾಗುವ ಅನಿಲ

a)

ಕ್ಲೋರಿನ್

b)

ಹೈಡ್ರೋಜನ್

c)

Hcl

d)

ನೈಟ್ರೋಜನ್

2.

ಈ ಕೆಳಗಿನ ಯಾವ ರಾಸಾಯನಿಕವನ್ನು ಅಜೀರ್ಣತೆಗೆ ಔಷಧವಾಗಿ ಬಳಸುತ್ತಾರೆ?

a)

ಮೆಗ್ನೇಶಿಯಂ ಹೈಡ್ರೋಕ್ಸೈಡ್

b)

ಕಾಲ್ಸಿಯಮ್ ಕಾರ್ಬೊನೇಟ್

c)

ಸೋಡಿಯಂ ಕಾರ್ಬೊನೇಟ್

d)

ಕಾಲ್ಸಿಯಂ ಹೈಡ್ರೋಕ್ಸೈಡ್

3.

ಸಿನ್ನಬಾರ್ ಅದಿರನ್ನು ಉದ್ಧರಿಸುವ ವಿಧಾನ

a)

ಹುರಿಯುವಿಕೆ

b)

ಕಾಸುವಿಕೆ

c)

ವಿದ್ಯುತ್ ವಿಶ್ಲೇಷಣೆ

d)

ಗ್ಯಾಲ್ವನೀಕರಣ

4.

ಮರುಬಳಕೆ ವಿಧಾನವು ನಿಜವಾಗಿಯೂ ಮರುಚಕ್ರೀಕರಣಕ್ಕಿಂತ ಉತ್ತಮ, ಏಕೆಂದರೆ

a)

ಮರುಚಕ್ರೀಕರಣ ವಿಧಾನವು ಸ್ವಲ್ಪ ಶಕ್ತಿ ಬಳಸಿಕೊಳ್ಳುತ್ತದೆ

b)

ಮರುಬಳಕೆ ವಿಧಾನದಿಂದ ಹಣ ಮತ್ತು ಶಕ್ತಿ ಉಳಿತಾಯವಾಗುತ್ತದೆ

c)

ಮರುಬಳಕೆ ವಿಧಾನದಿಂದ ಶಕ್ತಿ ಮತ್ತು ಹಣ ಉಳಿತಾಯವಾಗುವುದಿಲ್ಲ

d)

ಮೇಲಿನ ಯಾವುದೂ ಅಲ್ಲ

5.

ಸತ್ಯ ಮತ್ತು ವಸ್ತುವಿನ ಗಾತ್ರದಷ್ಟು ಪ್ರತಿಬಿಂಬವನ್ನು ಪಡೆಯಲು ವಸ್ತುವನ್ನು ಪೀನ ಮಸೂರದ ಮುಂಭಾಗದಲ್ಲಿ ಯಾವ ಸ್ಥಾನದಲ್ಲಿ ಇರಿಸಬೇಕು?

a)

ಮಸೂರದ ಪ್ರಧಾನ ಸಂಗಮ ಬಿಂದುವಿನಲ್ಲಿ

b)

ಸಂಗಮ ದೂರದ ಎರಡರಷ್ಟು ದೂರದಲ್ಲಿ

c)

ಅನಂತ ದೂರದಲ್ಲಿ

d)

ಮಸೂರದ ದೃಕ್ ಕೇಂದ್ರ ಮತ್ತು ಪ್ರಧಾನ ಸಂಗಮದ ನಡುವೆ

6.

ಭ್ರೂಣವು ಗರ್ಭಕೋಶದಲ್ಲಿ ಪೋಷಕಾಂಶಗಳನ್ನು ಒದಗಿಸುವ ಭಾಗ

a)

ಅಂಡನಾಳ

b)

ಜರಾಯು

c)

ಗರ್ಭಕೋಶ

d)

ಅಂಡಾಶಯ

7.

ದ್ವಿತಳೀಕರಣದಲ್ಲಿ ಕಂಡು ಬರುವ ಅನುಪಾತ

a)

3:1

b)

1:2:1

c)

3:1:3:9

d)

9:3:3:1

8.

ಸಮುದ್ರ ತೀರದಲ್ಲಿ ವಾಸಿಸುವ ಜನರಲ್ಲಿ ಈ ನ್ಯೂನುತೆ ಕಂಡುಬರುವುದಿಲ್ಲ

a)

ಮಧುಮೇಹ

b)

ಮಿಕ್ಸೇಡಿಮ

c)

ಸರಳ ಗಾಯಿಟರ್

d)

ಯಾವುದೂ ಅಲ್ಲ

9.

ಕಾಲ್ಶಿಯಂ ಆಕ್ಸೈಡ್ ನೀರಿನೊಂದಿಗೆ ವರ್ತಿಸುವುದು, ಈ ಕ್ರಿಯೆಗೆ ಉದಾಹರಣೆಯಾಗಿದೆ

a)

ವಿಭಜನೆ ಕ್ರಿಯೆ

b)

ಸಂಯೋಗ ಕ್ರಿಯೆ

c)

ಸ್ಥಾನಪಲ್ಲಟ ಕ್ರಿಯೆ

d)

ದ್ವಿ ಸ್ಥಾನ ಪಲ್ಲಟ ಕ್ರಿಯೆ

10.

ಸಸ್ಯವೊಂದರ ಬೇರುಗಳು ಮಣ್ಣಿನಲ್ಲಿರುವ ನೈಟ್ರೇಟ್ ಸಾಂದ್ರತೆಯ ಪ್ರದೇಶದತ್ತ ಬೆಳೆಯುತ್ತಿದ್ದರೆ ಅದು

a)

ದ್ಯುತಿ ಅನುವರ್ತನೆ

b)

ಜಲಾನುವರ್ತನೆ

c)

ಸ್ಪರ್ಶಾನುವರ್ತನೆ

d)

ರಾಸಾಯನಿಕ ಅನುವರ್ತನೆ

11.

ಗೋಳೀಯ ಮಸೂರದ ಸಂಗಮ ದೂರ ಎಂದರೆ

a)

ಮಸೂರದ ದೃಕ್ ಕೇಂದ್ರ ಮತ್ತು ಪ್ರಧಾನ ಸಂಗಮಗಳಿಗಿರುವ ದೂರ

b)

ಮಸೂರದ ವಕ್ರತಾ ಕೇಂದ್ರ ಮತ್ತು ದೃಕ್ ಕೇಂದ್ರಗಳಿಗಿರುವ ದೂರ

c)

ಮಸೂರದ ವೃತ್ತಾಕಾರದ ಸೀಮಾರೇಖೆಯ ವ್ಯಾಸ

d)

ಮಸೂರದ ವೃತ್ತಾಕಾರದ ಸೀಮಾರೇಖೆಯ ತ್ರಿಜ್ಯ

12.

ಆಮ್ಲೀಯತೆ ಜಾಸ್ತಿಯಾದಾಗ ಹಲ್ಲಿನ ತೊಂದರೆಯಾಗುತ್ತದೆ. ಇದನ್ನು ತಡೆಗಟ್ಟಲು ಹಲ್ಲುಜ್ಜಲು ಬಳಸುವ ಟೂತ್ ಪೇಸ್ಟ್ ನ pH ಮಟ್ಟ ಇದಾಗಿರಬೇಕು

a)

6.5 ಕ್ಕಿಂತ ಕಡಿಮೆ

b)

7.5 ಕ್ಕಿಂತ ಹೆಚ್ಚು

c)

1.5 - 4.0

d)

4.0 - 6.5

13.

ಇವುಗಳಲ್ಲಿ ಮಾನವ ನಿರ್ಮಿತ ಪರಿಸರ ವ್ಯವಸ್ಥೆಯನ್ನು ಪ್ರತಿನಿಧಿಸುವ ಗುಂಪು

a)

ನದಿಗಳು ಮತ್ತು ಭತ್ತದ ಹೊಲ

b)

ಪ್ರಾಣಿ ಸಂಗ್ರಹಾಲಯ ಮತ್ತು ಮತ್ಸ್ಯಾಲಯ

c)

ಸಾಗರ ಮತ್ತು ಕೈತೋಟ

d)

ಹುಲ್ಲುಗಾವಲು ಮತ್ತು ಮರುಭೂಮಿ

14.

ವ್ಯಕ್ತಿ ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಲ್ಲ, ಆದರೆ ಹತ್ತಿರದ ವಸ್ತುಗಳನ್ನು ಸ್ಪಷ್ಟವಾಗಿ ನೊಡಲಾರ. ಇದು ಯಾವ ಕಾಯಿಲೆಯ ಲಕ್ಷಣವಾಗಿದೆ?

a)

ಮಯೋಪಿಯ

b)

ಪ್ರೆಸ್ ಬಯೋಪಿಯ

c)

ಹೈಪರ್ ಮೆಟ್ರೋಪಿಯ

d)

ಡಯಾಬಿಟಿಕ್ ರೆಟಿನೋಪತಿ

15.

ಕ್ಯಾಲ್ಸಿಯಂ ನೀರಿನೊಂದಿಗೆ ವರ್ತಿಸಿ ಉಷ್ಣವನ್ನು ಬಿಡುಗಡೆ ಮಾಡುವ ಕ್ರಿಯೆ

a)

ಅಂತರುಷ್ಣಕ ಕ್ರಿಯೆ

b)

ಬಹಿರುಷ್ಣಕ ಕ್ರಿಯೆ

c)

ರೆಡಾಕ್ಸ್ ಕ್ರಿಯೆ

d)

ಪರಾವರ್ತಿತ ಕ್ರಿಯೆ