Worksheetsಜೀವಕ್ರಿಯೆಗಳು
Total questions: 10
Worksheet time: 5mins
ಮಾನವನಲ್ಲಿ ರಕ್ತವು ಒಂದು ಸಂಪೂರ್ಣ ಪರಿಚಲನೆಗೆ ಹೃದಯವನ್ನು 2 ಬಾರಿ ಹಾದು ಹೋಗುವುದಕ್ಕೆ ಹೀಗೆನ್ನುವರು.
ದೈಹಿಕ ರಕ್ತ ಪರಿಚಲನೆ
ಇಮ್ಮಡಿ ರಕ್ತ ಪರಿಚಲನೆ
ಪುಪ್ಪಸಕ ರಕ್ತಪರಿಚಲನೆ
ಯಾವುದು ಅಲ್ಲ
ಶ್ವಾಸಕೋಶಗಳಿಂದ ಬರುವ ಆಮ್ಲಜನಕಸಹಿತ ರಕ್ತವು ಹೃದಯದ ಯಾವ ಭಾಗವನ್ನು ಪ್ರವೇಶಿಸುತ್ತದೆ?
ಎಡ ಹೃತ್ಕರ್ಣ
ಎರಡು ಹೃತ್ಕುಕ್ಷಿ
ಬಲ ಹೃತ್ಕರ್ಣ
ಬಲ ಹೃತ್ಕುಕ್ಷಿ
ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ರಕ್ತದ ಘಟಕ.
ಬಿಳಿ ರಕ್ತ ಕಣಗಳು
ಕೆಂಪು ರಕ್ತ ಕಣಗಳು
ಪ್ಲಾಸ್ಮಾ
ಕಿರುತಟ್ಟೆಗಳು
ಹೃದಯದಿಂದ ಆಕ್ಸಿಜನ್ ಸಹಿತ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ಸಾಗಿಸುವ ರಕ್ತನಾಳ
ಮಹಾಪಧಮನಿ
ಪುಪ್ಪಸಕ ಅಪಧಮನಿ
ಪುಪ್ಪಸಕ ಅಭಿಧಮನಿ
ಉಚ್ಚ ಅಭಿಧಮನಿ
5. ಸಸ್ಯಗಳಲ್ಲಿ ಆಹಾರ ಸಾಗಿಸುವ ಅಂಗಾಂಶ
ಕ್ಸೈಲಂ
ಪತ್ರರಂದ್ರ
ಫ್ಲೋಯಂ
ಎಪಿಡರ್ಮಿಸ್
ಸಸ್ಯಗಳಿಂದ ನೀರು ಆವಿಯ ರೂಪದಲ್ಲಿ ನಷ್ಟವಾಗುವ ಕ್ರಿಯೆ
ದ್ಯುತಿ ಸಂಶ್ಲೇಷಣೆ
ಆಹಾರ ಸಾಗಾಣಿಕೆ
ಭಾಷ್ಪವಿಸರ್ಜನೆ
ಶ್ವಾಸಕ್ರಿಯೆ
ರಕ್ತವನ್ನು ಹೋಲುವ ಬಣ್ಣರಹಿತ ದ್ರವ.
ನೀರು
ಯೂರಿಯಾ
ದುಗ್ಧರಸ
ಪೆರಿಕಾರ್ಡಿಯಲ್ ದ್ರವ
ರಕ್ತದಲ್ಲಿ ಆಕ್ಸಿಜನ್ ಮತ್ತು ಕಾರ್ಬನ್ ಡೈಆಕ್ಸೈಡ್ ಸಾಗಾಣಿಕೆ ಮಾಡುವುದು ಇವುಗಳ ಕಾರ್ಯ
ಕಿರುತಟ್ಟೆ
ಹಿಮೋಗ್ಲೋಬಿನ್
ಬಿಳಿ ರಕ್ತಕಣಗಳು
ಮೇಲಿನ ಯಾವುದೂ ಅಲ್ಲ.
ಮೂತ್ರಕೋಶದ ರಚನಾತ್ಮಕ ಮತ್ತು ಕಾರ್ಯಾತ್ಮಕ ಮೂಲ ಘಟಕ.
ಗಾಳಿ ಕೋಶ
ಅನುಲೇಪಕ ಅಂಗಾಂಶ
ನೆಫ್ರಾನ್
ನ್ಯೂರಾನ್ (ನರಕೋಶ)
ಮಾನವನ ಮೂತ್ರಪಿಂಡಗಳಲ್ಲಿ ರಕ್ತದಲ್ಲಿನ ಈ ನೈಟ್ರೋಜನ್ ಯುಕ್ತ ತ್ಯಾಜ್ಯವನ್ನು ವಿಸರ್ಜಿಸಲಾಗುತ್ತದೆ.
ಸಲ್ಪೂರಿಕ್ ಆಮ್ಲ
ಅಮೋನಿಯಂ ಸಲ್ಫೇಟ್
ಯೂರಿಯಾ ಮತ್ತು ಯೂರಿಕ್ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ
