Wayground logo

Free Printable Worksheets

Font size

S
M
L
XL
Worksheets

ಜಾಗತಿಕ ಸಮಸ್ಯೆಗಳು ಹಾಗೂ ಭಾರತದ ಪಾತ್ರ

Total questions: 10

Worksheet time: 5mins

Name
Class
Date
1.

1789 ರಲ್ಲಿ ನಡೆದ ಕ್ರಾಂತಿ ಯಾವುದು ?

a)

ಅಮೆರಿಕ ಕ್ರಾಂತಿ

b)

ರಷ್ಯಾ ಕ್ರಾಂತಿ

c)

ಫ್ರಾನ್ಸ್ ಕ್ರಾಂತಿ

d)

ಇಟಲಿ ಕ್ರಾಂತಿ

2.

ಮಾನವ ಹಕ್ಕುಗಳ ದಿನಾಚರಣೆಯನ್ನು ಡಿಸೆಂಬರ್‍ 10 ರಂದೇ ಆಚರಿಸಲು ಕಾರಣವೇನು ?

a)

ಮಾನವ ಹಕ್ಕುಗಳ ಹೋರಾಟಕ್ಕೆ ಪುಷ್ಟಿ ತಂದುಕೊಟ್ಟ ದಿನ

b)

ಮಾನವ ಹಕ್ಕುಗಳ ಬಗ್ಗೆ ಎಲ್ಲ ರಾಷ್ಟ್ರಗಳು ಹೋರಾಡಿದ ದಿನ

c)

ಮಾನವ ಹಕ್ಕುಗಳ ರಕ್ಷಣೆಯ ಇತಿಹಾಸ ಹೊಂದಿದ ದಿನ

d)

ಅಂತಾರಾಷ್ಟ್ರೀಯ ತಜ್ಞರುಗಳಿಂದ ವಿಶ್ವ ಸಂಸ್ಥೆ ಸಾಮಾನ್ಯ ಸಭೆ ಅಂಗೀಕರಿಸಿದ ದಿನ

3.

ಭಾರತದ ಸಂವಿಧಾನದ ಯಾವ ವಿಧಿಗಳ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ನಮೂದಿಸಲಾಗಿದೆ ?

a)

10 ರಿಂದ 32 ನೇ ವಿಧಿ

b)

12 ರಿಂದ 32 ನೇ ವಿಧಿ

c)

10 ರಿಂದ 35 ನೇ ವಿಧಿ

d)

12 ರಿಂದ 35 ನೇ ವಿಧಿ

4.

ವಿಶ್ವ ಮಟ್ಟದಲ್ಲಿ ಭಾರತವು ಯಾವುದರ ಬಗ್ಗೆ ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದೆ ?

a)

ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ

b)

ಮಹಿಳಾ ಹಕ್ಕುಗಳ ಬಗ್ಗೆ

c)

ಸಾರ್ವತ್ರಿಕ ಮಾನವ ಹಕ್ಕುಗಳ ಬಗ್ಗೆ

d)

ಆರ್ಥಿಕ ಅಸಮಾನತೆಯ ಬಗ್ಗೆ

5.

ಒಂದು ಪ್ರಸಿದ್ಧ ಮಾತಿದೆ "ಅಣ್ವಸ್ತ್ರ ಯುಗದಲ್ಲಿ ನಾವು ಯುದ್ಧವನ್ನು ಕೊನೆಗೊಳಿಸಬೇಕು ಇಲ್ಲವಾದರೆ ಇದು ನಮ್ಮನ್ನು ಕೊನೆ ಗಾಣಿಸುತ್ತದೆ

a)

ಅಣ್ವಸ್ತ್ರ

b)

ಭಯೋತ್ಪಾದನೆ

c)

ಶಸ್ತ್ರಾಸ್ತ್ರ

d)

ಯುದ್ಧ

6.

ಇದರಿಂದ ವಿಶ್ವದಾದ್ಯಂತ ಭಯ ಅಸ್ಥಿರತೆ ಚಡಪಡಿಕೆ ಹಾಗೂ ಯುದ್ಧದ ಸಂಭವ ತಲೆದೋರುತ್ತದೆ

a)

ನಿಶ್ಶಸ್ತ್ರೀಕರಣದಿಂದ

b)

ಶಸ್ತ್ರಾಸ್ತ್ರಗಳ ಸ್ಪರ್ಧೆ ಯಿಂದ

c)

ಭಯೋತ್ಪಾದನೆಯಿಂದ

d)

ಆರ್ಥಿಕ ಅಸಮಾನತೆಯಿಂದ

7.

ಭಾರತವೂ ಸೇರಿ ಎಲ್ಲ ರಾಷ್ಟ್ರಗಳು ಯಾವುದರ ವಿರುದ್ಧ ಪ್ರಯತ್ನಿಸುವ ಅವಶ್ಯಕತೆಯಿದೆ ?

a)

ಭಯೋತ್ಪಾದನೆಯ ವಿರುದ್ಧ

b)

ಪರಸ್ಪರ ನಿಶ್ಚಿತ ನಾಶದ ವಿರುದ್ಧ

c)

ಆರ್ಥಿಕ ಅಸಮಾನತೆಯ ವಿರುದ್ಧ

d)

ಜಾಗತೀಕರಣದ ವಿರುದ್ಧ

8.

ಶಸ್ತ್ರಗಳನ್ನು ಹೊಂದಿದ್ದ ಈ ಜಗತ್ತು ಕೇವಲ ಹಣವನ್ನು ಮಾತ್ರ ಪೋಲು ಮಾಡುವುದಿಲ್ಲ ಬದಲಾಗಿ ಕಾರ್ಮಿಕರ ಬೆವರನ್ನು ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಗಳನ್ನು ವ್ಯಯಿಸುತ್ತದೆ ಎಂದು ಹೇಳಿದವರು ಯಾರು ?

a)

ವಿನ್ಸ್ಟನ್ ಚರ್ಚಿಲ್

b)

ಜೋಸೆಫ್ ಸ್ಟಾಲಿನ್

c)

ಐಸೆನ್ ಹೋವರ್

d)

ಫ್ರಾಂಕ್ಲಿನ್ ಡಿ ರೂಸ್ವೆಲ್ಟ್

9.

ತೃತೀಯ ಜಗತ್ತಿನ ರಾಷ್ಟ್ರಗಳು ಈ ಕೆಳಗಿನ ಕೊರತೆಗಳಿಂದ ಹೊರಬರಲು ಪ್ರಯತ್ನಿಸುತ್ತಿದೆ

a)

ಉನ್ನತ ವ್ಯಾಸಂಗದ ಅವಕಾಶ

b)

ಅನಗತ್ಯ ವೆಚ್ಚ

c)

ಮುಕ್ತ ವ್ಯಾಪಾರ

d)

ಜಾಗತೀಕರಣ

10.

ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದವರು ಯಾರು ?

a)

ಅಬ್ರಹಾಂ ಲಿಂಕನ್

b)

ಜಾನ್ ಎಫ್ ಕೆನಡಿ

c)

ನೆಲ್ಸನ್ ಮಂಡೇಲಾ

d)

ಐಸೆನ್ ಹೋವರ್