wayground logo

Free Printable Worksheets

NEW

Font size

S
M
L
XL
Worksheets

10ನೇ ಸವಿ:ಇತಿಹಾಸ:ಅಧ್ಯಾಯ:04:ಭಾಗ 03:By Nataraj &Bhagwat

Total questions: 10

Worksheet time: 5mins

Name
Class
Date
1.

ಆತನ ಮರಣ ಬ್ರಿಟಿಷರಿಗೆ ಇಡೀ ಭಾರತವೇ ತಮ್ಮ ಕೈವಶವಾದ ಸಂತೋಷವನ್ನು ತಂದಿತು. ನಂತರ ಬ್ರಿಟಿಷರು ಆತನ ಹತೋಟಿಯಲ್ಲಿದ್ದ ಭೌಗೋಳಿಕ ಪ್ರದೇಶಗಳನ್ನು ಮರಾಠರು ಮತ್ತು ನಿಜಾಮನೊಂದಿಗೆ ಹಂಚಿಕೊಂಡರು.ಯಾರ ಮರಣವು ಬ್ರಿಟಿಷರಿಗೆ ಸಂತೋಷವುಂಟುಮಾಡಿತು?

a)

ಸಂಗೊಳ್ಳಿ ರಾಯಣ್ಣ

b)

ದೊಂಡಿಯವಾಘ

c)

ಟಿಪ್ಪು ಸುಲ್ತಾನ್

d)

ಕಲ್ಯಾಣಸ್ವಾಮಿ

2.

ದೊಂಡಿಯವಾಘನ ಕುರಿತಾಗಿ ಕೆಳಗಿನ ಯಾವ ಅಂಶಗಳು ಸರಿಯಾಗಿವೆ?

a)

ಕ್ರಿ.ಶ.1789ರ ಸುಮಾರಿಗೆ ಮೈಸೂರಿನ ಹೈದರಾಲಿಯ ಸೈನ್ಯದಲ್ಲಿ ಒಬ್ಬ ಅಶ್ವಾರೋಹಿ ಸೈನಿಕನಾಗಿ ಸೇರಿ ಕಾಲಾನಂತರ ಸೇನಾನಾಯಕನಾದನು.

b)

ಖಾಸಗಿಯಾಗಿ ಒಂದು ಸೈನ್ಯವನ್ನು ಸಜ್ಜುಗೊಳಿಸಿದ ಅವನು ಟಿಪ್ಪುವಿನ ಸೈನ್ಯದಲ್ಲಿ

ಸೇವೆ ಸಲ್ಲಿಸಿದನು. ಆತನೊಂದಿಗೆ ಮನಸ್ತಾಪದಿಂದಾಗಿ ಅವನು ಸೆರೆಮನೆ ಸೇರುವಂತಾಯಿತು.

c)

ನಾಲ್ಕನೆಯ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಶ್ರೀರಂಗಪಟ್ಟಣದ ಪತನಾನಂತರ ಬ್ರಿಟಿಷರು ಈತನನ್ನು ಸೆರೆಮನೆಯಿಂದ ಬಿಡುಗಡೆಗೊಳಿಸಿದರು. ತರುವಾಯ ಇವನು ಒಂದು ಸೈನ್ಯವನ್ನು ಸಂಘಟಿಸಿ ಸೈನಿಕ

ಕಾರ್ಯಾಚರಣೆಗಳನ್ನು ಪ್ರಾರಂಭಿಸಿದನು

d)

ಕೊಟ್ಟಿರುವ ಎಲ್ಲವೂ

3.

ಬ್ರಿಟಿಷರ ವಿರುದ್ಧ ದೋಂಡಿಯವಾಘ ನಡೆಸಿದ ಹೋರಾಟವನ್ನು ಗುರುತಿಸಿ

a)

ಶಿವಮೊಗ್ಗ ಮತ್ತು ಬಿದನೂರಿನ ಕೋಟೆಗಳನ್ನು ವಶಪಡಿಸಿಕೊಂಡನು.

b)

ಚಿತ್ರದುರ್ಗದ ಕೋಟೆಯನ್ನು ವಶಪಡಿಸಿಕೊಳ್ಳಲು ವಿಫಲ ಪ್ರಯತ್ನಗಳನ್ನು ನಡೆಸಿದನು.

c)

ಗವರ್ನರ್ಜ ನರಲ್‍ನಾಗಿದ್ದ ಲಾರ್ಡ್ ವೆಲ್ಲೆಸ್ಲಿ ಬಂಡಾಯವನ್ನು ಹತ್ತಿಕ್ಕಲು ಪ್ರಾರಂಭಿಸಿದನು. ದೋಂಡಿಯಾನ ನಿಯಂತ್ರಣದಲ್ಲಿದ್ದ ಶಿವಮೊಗ್ಗ, ಹೊನ್ನಾಳಿ, ಹರಿಹರ ಮೊದಲಾದವುಗಳ ಮೇಲೆ ಆಕ್ರಮಣ ನಡೆಸಿತು. ದೋಂಡಿಯಾ ತನ್ನ ನೆಲೆಯನ್ನು ಕಳೆದುಕೊಂಡನು. ಶಿಕಾರಿಪುರವನ್ನು ಬ್ರಿಟಿಷರು

ವಶಪಡಿಸಿಕೊಂಡ ತರುವಾಯ ದೋಂಡಿಯಾ ನಿಜಾಮನ ಹತೋಟಿಯಲ್ಲಿದ್ದ ಗುತ್ತಿಯ ಕಡೆಗೆ ಪಲಾಯನಗೈದನು.

d)

ಕೊಟ್ಟಿರುವ ಎಲ್ಲವೂ ದೋಂಡಿಯವಾಘ ನಡೆಸಿದ ಹೋರಾಟವಾಗಿದೆ.

4.

ದೋಂಡಿಯಾನ ನೇತೃತ್ವದಲ್ಲಿನ ಸೈನ್ಯದ ಮೇಲೆ ಬ್ರಿಟಿಷರು ಯಾಪಲಪೆರವಿ ಎಂಬ

ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ ಈ ಸ್ಥಳದಲ್ಲಿ ಆತನನ್ನು ಹತ್ಯೆಗೈದರು

a)

ಕೋನ್‍ಗಲ್

b)

ಶಿಕಾರಿಪುರ

c)

ಶಿವಮೊಗ್ಗ

d)

ಕೊಟ್ಟಿರುವು ಯಾವುದೂ ಅಲ್ಲ

5.

ಬ್ರಿಟಿಷರು ಹಾಗೂ ಕಿತ್ತೂರಿನ ನಡುವೆ ಒಪ್ಪಂದ ಇವರ ಕಾಲದಲ್ಲಿ ನಡೆದಿತ್ತು

a)

ವೆಲ್ಲೆಸ್ಲಿ

b)

ಥಾಮಸ್ ಮನ್ರೋ

c)

ಕಾರ್ನವಾಲೀಸ್

d)

ಥ್ಯಾಕರೆ

6.

ಧಾರವಾಡದ ಕಲೆಕ್ಟರ್ ನಾಗಿದ್ದ ಇವನು ಬಾಂಬೆಯ ಗವರ್ನರನಿಗೆ ದತ್ತಕದ ಬಗ್ಗೆ ವರದಿಯನ್ನು ಸಲ್ಲಿಸಿ ದತ್ತು ಮಕ್ಕಳಿಗೆ ಹಕ್ಕನ್ನು ನೀಡುವುದನ್ನು ನಿರಾಕರಿಸಿ ಕಿತ್ತೂರಿನ ಆಡಳಿತವನ್ನು ವಶಪಡಿಸಿಕೊಳ್ಳಲು ಯತ್ನಿಸಿದನು.

a)

ಥಾಮಸ್ ಮನ್ರೊ

b)

ಥ್ಯಾಕರೆ

c)

ಲಾರ್ಡ್ ವೆಲ್ಲೆಸ್ಲಿ

d)

ಕಾರ್ನವಾಲಿಸ್

7.

ಬ್ರಿಟಿಷರ ವಿರುದ್ಧ ಸಂಗೊಳ್ಳಿ ರಾಯಣ್ಣನು ನಡೆಸಿದ ಹೋರಾಟವನ್ನು ಸೂಕ್ತವಾಗಿ ಗುರುತಿಸಿ

a)

ಅವನು ಸೈನಿಕರನ್ನು ಸಂಘಟಿಸುತ್ತಾ ಸ್ವಾತಂತ್ರ್ಯದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡನು.

b)

ಭೌಗೋಳಿಕವಾಗಿ ಆಯಕಟ್ಟಿನ ಸ್ಥಳಗಳಲ್ಲಿ ಗುಪ್ತ ಸಭೆಗಳನ್ನು ನಡೆಸುವ

ಮೂಲಕ ತನ್ನ ಮುಂದಿನ ಯೋಜನೆಗಳನ್ನು ರೂಪಿಸಿಕೊಂಡನು. ಬ್ರಿಟಿಷರ ಆಡಳಿತ ಯಂತ್ರದ ಪ್ರಮುಖ ಅಂಗವಾಗಿದ್ದ ತಾಲ್ಲೂಕು ಕಛೇರಿಗಳು ಮತ್ತು ಖಜಾನೆಗಳನ್ನು ಲೂಟಿ ಮಾಡುವುದು. ಮೊದಲು ನಂದಗಡ ಮತ್ತು ಖಾನಾಪುರ ತರುವಾಯ ಸಂಪಗಾವಿ ಆತನ ಕಾರ್ಯಾಚರಣೆಗಳ ಸ್ಥಳಗಳಾದವು

c)

ಆತನ ಸೈನ್ಯ ಐನೂರಷ್ಟಿತ್ತು. ಬ್ರಿಟಿಷರ ಸೈನ್ಯಕ್ಕೆ ಸಹಾಯವನ್ನು ನೀಡುತ್ತಿದ್ದ ಹಳ್ಳಿಗರು ಅವನ ಆಕ್ರೋಶಕ್ಕೆ ತುತ್ತಾದರು.

d)

ಕೊಟ್ಟಿರುವ ಎಲ್ಲವೂ ಸಂಗೊಳ್ಳಿ ರಾಯಣ್ಣನು ನಡೆಸಿದ ಹೋರಾಟವಾಗಿದೆ.

8.

ಬ್ರಿಟಿಷರು ಚೆನ್ನಮ್ಮಳನ್ನು ಬೈಲಹೊಂಗಲದಿಂದ ಕುಸುಗಲ್ಲಿನ ಸೆರೆಮನೆಗೆ ಸ್ಥಳಾಂತರಿಸಿದರು.ಕಾರಣ

a)

ಬ್ರಿಟಿಷರು ರಾಯಣ್ಣನು ರಾಣಿ ಚೆನ್ನಮ್ಮನ ಕುಮ್ಮಕ್ಕಿನಿಂದ ಸೈನಿಕ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾನೆ ಎಂದು ಭಾವಿಸಿದ್ದರು

b)

ಬ್ರಿಟಿಷರು ರಾಣಿ ಚೆನ್ನಮ್ಮನ ಕುಮ್ಮಕ್ಕಿನಿಂದ ಕಿತ್ತೂರಿನಲ್ಲಿ ದಂಗೆಯಾಗಬಹುದೆಂದು ಭಾವಿಸಿದ್ದರು

c)

ರಾಣಿ ಚೆನ್ನಮ್ಮನ ತಪ್ಪಿಸಿಕೊಳ್ಳಬಹುದೆಂದು

d)

ಕೊಟ್ಟಿರುವ ಯಾವುದೂ ಅಲ್ಲ

9.

ಕೊಡಗಿನಲ್ಲಿ ಆಳ್ವಿಕೆಯನ್ನು ನಡೆಸುತ್ತಿದ್ದ ಹಾಲೇರಿ ರಾಜವಂಶದ ಇವನನ್ನು ಬ್ರಿಟಿಷರು 1834ರಲ್ಲಿ ಪದಚ್ಯುತಗೊಳಿಸಿದರು

a)

ಸ್ವಾಮಿ ಅಪರಂಪರ

b)

ಚಿಕ್ಕವೀರರಾಜೇಂದ್ರ

c)

ಕಲ್ಯಾಣಸ್ವಾಮಿ

d)

ಪುಟ್ಟಬಸಪ್ಪ

10.

‘ಅಮರ ಸುಳ್ಯ’ ಬಂಡಾಯದ ಕೇಂದ್ರ ಸ್ಥಾನಗಳಾಗಿದ್ದ ಪ್ರದೇಶಗಳು

a)

ಕೆನರಾ ಪ್ರಾಂತ್ಯದ ಸುಳ್ಯ, ಬೆಳ್ಳಾರೆ ಮತ್ತು ಪುತ್ತೂರು ಮೊದಲಾದ ಸ್ಥಳಗಳು

b)

ಕೊಡಗು, ಶಿಕಾರಿಪುರ, ಶಿವಮೊಗ್ಗ

c)

ಸುರಪುರ, ರಾಯಚೂರು, ಕಿತ್ತೂರು

d)

ಕೊಟ್ಟಿರುವ ಯಾವುದೂ ಅಲ್ಲ