wayground logo

Free Printable Worksheets

NEW

Font size

S
M
L
XL
Worksheets

10ನೇ ಸವಿ:ಇತಿಹಾಸ :ಅಧ್ಯಾಯ 03:ಭಾಗ-04-ಇಂದ: ನಟರಾಜ &ಭಾಗ್ವತ್

Total questions: 10

Worksheet time: 5mins

Name
Class
Date
1.

ಗವರ್ನರ್ ಜನರಲ್‍ನ ಕಾರ್ಯಾಂಗ ಸಭೆ ಯ ಕಾನೂನು ಸದಸ್ಯ ಹಾಗೂ ಸಾರ್ವಜನಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ನೇಮಕವಾದ ಸಮಿತಿಯ ಅಧ್ಯಕ್ಷ ನಾದ ಇವರ ವರದಿ ಅಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿ

a)

ಚಾರ್ಲ್ಸ್ ಗ್ರಾಂಟ್.

b)

ಮೆಕಾಲೆ

c)

ವಾರನ್ ಹೇಸ್ಟಿಂಗ್ಸ್

d)

ಜೊನಾಥನ್ ಡಂಕನ್

2.

ರಕ್ತ ಮಾಂಸಗಳಲ್ಲಿ ಭಾರತೀಯರಾಗಿಯೂ ಅಭಿರುಚಿ, ಅಭಿಪ್ರಾಯ, ನೀತಿ ಮತ್ತು ಬುದ್ಧಿವಂತಿಕೆಯಲ್ಲಿ ಇಂಗ್ಲಿಷರಾಗುವ” ಹೊಸ ಭಾರತೀಯ ವಿದ್ಯಾವಂತ ವರ್ಗವನ್ನು ಸೃಷ್ಟಿ ಮಾಡುವುದು ಈ ವರದಿಯ ಮುಖ್ಯಾಂಶವಾಗಿತ್ತು

a)

ಮೆಕಾಲೆ ವರದಿ

b)

ವುಡ್ ವರದಿ

c)

ಜೊನಾಥನ್ ಡಂಕನ್ ವರದಿ

d)

ಕೊಟ್ಟಿರುವ ಯಾವುದೂ ಅಲ್ಲ

3.

ಈ ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ಗವರ್ನರ್ ಜನರಲ್ ಆದ ಲಾರ್ಡ್ ಡಾಲ್‍ಹೌಸಿಯು ಕಲ್ಕತ್ತಾ, ಬಾಂಬೆ ಮತ್ತು ಮದರಾಸುಗಳಲ್ಲಿ ನೂತನ ವಿಶ್ವವಿದ್ಯಾನಿಲಯಗಳನ್ನು 1857ರಲ್ಲಿ ಸ್ಥಾಪಿಸಿದನು.

a)

ಮೆಕಾಲೆ ವರದಿ

b)

ಜೊನಾಥನ್ ಡಂಕನ್ ವರದಿ

c)

ಸರ್ ಚಾರ್ಲ್ಸ್ ವುಡ್ (1854) ಆಯೋಗ

d)

ಚಾರ್ಲ್ಸ್ ಗ್ರಾಂಟ್ ವರದಿ

4.

ಬ್ರಿಟಿಷ್ ಶಿಕ್ಷಣದ ಪರಿಣಾಮಗಳನ್ನು ಗುರುತಿಸಿ

a)

ಭಾರತೀಯರು ಆಧುನಿಕತೆ, ಜಾತ್ಯತೀತತೆ, ಪ್ರಜಾಪ್ರಭುತ್ವ, ವೈಜ್ಞಾನಿಕ ಆಲೋಚನಾ ಕ್ರಮದ ಜೊತೆಗೆ ರಾಷ್ಟ್ರೀಯವಾದಿ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು.

b)

ಸ್ಥಳೀಯ ಭಾಷೆಗಳು ಮತ್ತು ಸಾಹಿತ್ಯ ರಚನೆಗಳಿಗೆ ಪ್ರೋತ್ಸಾಹ ದೊರೆಯಿತು.

c)

ವೃತ್ತ ಪತ್ರಿಕೆಗಳು ಹುಟ್ಟಿ ಬೆಳೆಯತೊಡಗಿದವು. ವಿಶೇಷವಾಗಿ 19ನೇ ಶತಮಾನದ ಉತ್ತರಾರ್ಧದಲ್ಲಿ ಪತ್ರಿಕೆಗಳಲ್ಲಿ ಸರ್ಕಾರದ ನೀತಿಗಳನ್ನು ವಿಮರ್ಶಿಸುವ ಮೂಲಕ ಭಾರತೀಯರಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ವಿಮರ್ಶಾತ್ಮಕ ಅಭಿಪ್ರಾಯ ಬೆಳೆಯಲು ಸಾಧ್ಯವಾಯಿತು.

d)

ಕೊಟ್ಟಿರುವ ಎಲ್ಲವೂ

5.

ಕೊಟ್ಟಿರುವ ಯಾವುದು ಬ್ರಿಟಿಷ್ ಶಿಕ್ಷಣದ ಪರಿಣಾಮವಲ್ಲ? ಗುರುತಿಸಿ

a)

ಹೊಸ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು ಹುಟ್ಟಿಕೊಂಡವು.

b)

ಜೆ.ಎಸ್.ಮಿಲ್, ರೂಸೋ, ಮಾಂಟೆಸ್ಕ್ಯೊ ಮುಂತಾದವರ ಚಿಂತನೆಗಳು ಭಾರತೀಯ ವಿದ್ಯಾವಂತರ ಆಲೋಚನಾ ಕ್ರಮದಲ್ಲಿ ನಾವಿನ್ಯತೆಯನ್ನು ತಂದವು.

c)

ಜಗತ್ತಿನಾದ್ಯಂತ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಗಳ ಪ್ರಭಾವ ಭಾರತೀಯರ ಮೇಲೂ ಆಯಿತು.

d)

ಭಾರತೀಯರು ತಮ್ಮ ಸಮೃದ್ಧ ಸಾಂಸ್ಕøತಿಕ ಪರಂಪರೆಗಳನ್ನು ಮರೆತು ಹೋದರು

6.

ಇಂಗ್ಲೆಂಡಿನ ಶಾಸನ ಸಭೆಯ ಸದಸ್ಯನಾದ ಇವರು ವಾರ್ಷಿಕವಾಗಿ ಈಸ್ಟ್

ಇಂಡಿಯಾ ಕಂಪನಿಯಿಂದ ಬ್ರಿಟಿಷ್ ಸರಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು ‘ಅಪರಾಧ ತೆರಿಗೆ’ ಎಂದು ತೀಕ್ಷ್ಣವಾಗಿಯೇ ಟೀಕಿಸಿದರು.

a)

ಎಡ್ಮಂಡ್ ಬರ್ಕ್

b)

ಮೆಕಾಲೆ

c)

ವಿಲಿಯಂ ಬೆಂಟಿಕ್

d)

ಚಾರ್ಲ್ಸ್ ವುಡ್

7.

1773ರಲ್ಲಿ ಜಾರಿಗೊಂಡ ರೆಗುಲ್ಯೇಟಿಂಗ್ ಕಾಯ್ದೆಯ ಪ್ರಮುಖ ಲಕ್ಷಣಗಳು ಯಾವುವು?

a)

ಬಂಗಾಳದ ಪ್ರೆಸಿಡೆನ್ಸಿಯು ಉಳಿದ ಎರಡು ಪ್ರೆಸಿಡೆನ್ಸಿಗಳ ಮೇಲೆ

ಅಧಿಕಾರವನ್ನು ಪಡೆಯಿತು.

b)

ಬಂಗಾಳದ ಗವರ್ನರನು ಮೂರು ಪ್ರೆಸಿಡೆನ್ಸಿಗಳಿಗೆ ಗವರ್ನರ್ ಜನರಲ್ ಆದನು.

c)

ಗವರ್ನರ್ ಜನರಲ್ಲನಿಗೆ ಬಾಂಬೆ ಮತ್ತು ಮದರಾಸು ಪ್ರೆಸಿಡೆನ್ಸಿಗಳಿಗೆ ನಿರ್ದೇಶಿಸುವ, ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಈ ಕಾನೂನು ನೀಡಿತು.

d)

ಕೊಟ್ಟಿರುವ ಎಲ್ಲವೂ

8.

ಕೊಟ್ಟಿರುವ ಯಾವುದು ರೆಗುಲ್ಯೇಟಿಂಗ್ ಕಾಯ್ದೆಗೆ ಸಂಬಂಧಿಸಿಲ್ಲ ? ಗುರುತಿಸಿ

a)

ಬಂಗಾಳ ಸರ್ಕಾರದ ಮತ್ತು ಇಂಗ್ಲೆಂಡಿನ ನಿರ್ದೇಶಕ ಮಂಡಳಿಯ ಪೂರ್ವಾನುಮತಿಯಿಲ್ಲದೆ ಬಾಂಬೆ ಮತ್ತು ಮದರಾಸು ಸರ್ಕಾರಗಳು ಯಾರ ಮೇಲೂ

ಯುದ್ಧ ಘೋಷಿಸುವಂತಿಲ್ಲ ಅಥವಾ ಶಾಂತಿ ಸಂಧಾನವನ್ನು ನಡೆಸುವಂತಿಲ್ಲ. ತೀರ ತುರ್ತಾದ ಸಂದರ್ಭಗಳಲ್ಲಿ ಮಾತ್ರ ಇಂತಹ ನಿಬಂಧನೆಗಳಿಂದ ವಿನಾಯಿತಿ ಇತ್ತು.

b)

ಕಲ್ಕತ್ತಾದಲ್ಲಿ ಈ ಕಾಯ್ದೆಯ ಮೇರೆಗೆ “ಸುಪ್ರೀಂಕೋರ್ಟ್” ಅನ್ನು ಸ್ಥಾಪಿಸಲಾಯಿತು.

c)

ಭಾರತದಲ್ಲಿನ ಬ್ರಿಟಿಷ್ ಆಡಳಿತ ವ್ಯವಸ್ಥೆಯನ್ನು ಇಂಗ್ಲೆಂಡಿನ ಸರ್ಕಾರದ ಅಧೀನಕ್ಕೆ ತರುವ ಬಹುದೊಡ್ಡ ನಿರ್ಣಯವಾಗಿತ್ತು.

d)

ಭಾರತೀಯರು ತಮ್ಮ ಸಾರ್ವಭೌಮತ್ವವನ್ನು ಬಿಟಿಷ್ ಜಸತ್ತೆಯ ಹೆಸರಿನಲ್ಲಿ ಪಡೆದಿದ್ದಾರೆಯೇ ವಿನಃ ಅವರದೇ ಸ್ವಂತ ಹಕ್ಕಲ್ಲ” ಎಂದು ಈ ಕಾಯ್ದೆಯಲ್ಲಿ ಹೇಳುವ ಮೂಲಕ ಭಾರತೀಯರ ರಾಜಕೀಯ ಹಕ್ಕುಗಳನ್ನು ನಿರ್ಣಾಯಕವಾಗಿ ಮೊಟಕುಗೊಳಿಸಿತು

9.

ಈ ಕೆಳಗಿನ ಯಾವ ಕಾಯ್ದೆಯು ಹೊಸ ನಿಬಂಧನೆಗಳನ್ನು ಹೇರುವುದರ ಮೂಲಕ ಭಾರತದಲ್ಲಿ ಕಂಪನಿ ಸರ್ಕಾರವನ್ನು ನಿರ್ಣಾಯಕವಾಗಿ ನಿಯಂತ್ರಿಸಿತು?

a)

1773ರ ರೆಗುಲ್ಯೇಟಿಂಗ್ ಕಾಯ್ದೆ

b)

1784ರ ಪಿಟ್ಸ್ ಇಂಡಿಯಾ ಕಾಯ್ದೆ

c)

1813ರ ಚಾರ್ಟರ್ ಕಾಯ್ದೆ

d)

1858ರ ಭಾರತ ಸರ್ಕಾರದ ಕಾಯ್ದೆ

10.

ಭಾರತೀಯರು ತಮ್ಮ ಸಾರ್ವಭೌಮತ್ವವನ್ನು ಬಿಟಿಷ್ ರಾಜಸತ್ತೆಯ ಹೆಸರಿನಲ್ಲಿ ಪಡೆದಿದ್ದಾರೆಯೇ ವಿನಃ ಅವರದೇ ಸ್ವಂತ ಹಕ್ಕಲ್ಲ” ಎಂದು ಈ ಕಾಯ್ದೆಯಲ್ಲಿ ಹೇಳುವ ಮೂಲಕ ಭಾರತೀಯರ ರಾಜಕೀಯ ಹಕ್ಕುಗಳನ್ನು ನಿರ್ಣಾಯಕವಾಗಿ ಮೊಟಕುಗೊಳಿಸಿತು. ಹಾಗೂ ಈ ಕಾಯ್ದೆಯು ಭಾರತದಲ್ಲಿದ್ದ ಕಂಪನಿಯ ಅಧೀನದ

ಪ್ರದೇಶ (The British Possessions)ಗಳಿಗೆ ಇಂಗ್ಲೆಂಡಿನ ಸರ್ಕಾರವೇ ಅಂತಿಮ ಸಾರ್ವಭೌಮನೆಂದು ಘೋಷಿಸಿತು.ಹಾಗಾದರೆ ಕೆಳಗೆಡ ಕೊಟ್ಟಿರುವ ಯಾವುದು ಆ ಕಾಯ್ದೆ?

a)

1773ರ ರೆಗುಲ್ಯೇಟಿಂಗ್ ಕಾಯ್ದೆ

b)

1784ರ ಪಿಟ್ಸ್ ಇಂಡಿಯಾ ಕಾಯ್ದೆ

c)

1813ರ ಚಾರ್ಟರ್ ಕಾಯ್ದೆ

d)

1909ರ ಭಾರತೀಯ ಪರಿಷತ್ ಕಾಯ್ದೆ